• Home
 • »
 • News
 • »
 • entertainment
 • »
 • Rocking Star Yash: ರಾಕಿಂಗ್ ಸ್ಟಾರ್ ಯಶ್ ಪೂರ್ಣ ಪ್ರಮಾಣ ಹೀರೋ ಆದ ಸಿನಿಮಾ ಯಾವುದು?

Rocking Star Yash: ರಾಕಿಂಗ್ ಸ್ಟಾರ್ ಯಶ್ ಪೂರ್ಣ ಪ್ರಮಾಣ ಹೀರೋ ಆದ ಸಿನಿಮಾ ಯಾವುದು?

"Rocky" ಚಿತ್ರಕ್ಕೆ ಯಶ್ ಮೊದಲ ಆಯ್ಕೆ ಆಗಿರಲಿಲ್ಲ.!

"Rocky" ಚಿತ್ರಕ್ಕೆ ಯಶ್ ಮೊದಲ ಆಯ್ಕೆ ಆಗಿರಲಿಲ್ಲ.!

Rocky ಸಿನಿಮಾ ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಈಗಲೂ ಇರೋ ತ್ರಿವೇಣಿ ಥಿಯೇಟರ್​​ನಲ್ಲಿಯೇ ರಿಲೀಸ್ ಆಗಿತ್ತು ಇಲ್ಲಿ ಈ ಚಿತ್ರದಲ್ಲಿ ಒಂದು ಹಂತಕ್ಕೆ ಓಪನಿಂಗ್ ಕೂಡ ಇತ್ತು ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ರಾಕಿ ಆಗಿ ಮಿಂಚಿದ್ದರು

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಕನ್ನಡದ ನಾಯಕ ನಟ ರಾಕಿಂಗ್ (Rocking star yash next film updates) ಸ್ಟಾರ್ ಯಶ್ ಬೆಳೆದು ಬಂದ ಚಿತ್ರ ಜೀವನ ತುಂಬಾ ಸ್ಪೂರ್ತಿದಾಯಕವಾಗಿಯೇ ಇದೆ. ಸಿನಿಮಾ ಪ್ರೀತಿಯಿಂದಲೇ ಚಿತ್ರವನ್ನೂ ಪ್ರಮೋಟ್ ಮಾಡ್ತಾನೇ ಬಂದಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರಕ್ಕೆ ನಾಯಕರಾಗೋದಲ್ಲದೇ, ನಿರ್ಮಾಪಕರಾಗೋ (KGF Hero Rocking Star Yash) ಹಂತಕ್ಕೂ ಬಂದಿದ್ದಾರೆ. ಅಷ್ಟು ಬೆಳೆದ ರಾಕಿಂಗ್ ಸ್ಟಾರ್, ನ್ಯಾಷನಲ್ ಸ್ಟಾರ್ ಅನ್ನೋದು ಎಲ್ಲರಿಗೂ ತಿಳಿದಿದೆ. ಅದೇ ರಾಕಿಂಗ್ ಸ್ಟಾರ್ ಯಶ್ 14 ವರ್ಷದ ಹಿಂದೆ ಒಂದು (Yash Movies) ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿದ್ದರು. ಆ ಚಿತ್ರ ಕ್ರಿಸ್ಮಸ್ ಹಬ್ಬದಂದು ರಿಲೀಸ್ ಆಗಿದೆ. ಆ ದಿನಗಳನ್ನ ಚಿತ್ರದ ನಿರ್ದೇಶಕ (Director Nagendra Urs) ನಾಗೇಂದ್ರ ಅರಸ್, ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಹಂಚಿಕೊಂಡಿದ್ದಾರೆ.


"ರಾಕಿ" ಅಂತ ರಾಕಿ ಭಾಯ್​ಗೆ ಹೆಸರಿಟ್ಟವರು ಯಾರು ಗೊತ್ತೇ?
ರಾಕಿಂಗ್ ಸ್ಟಾರ್ ಯಶ್ ಈಗ ಕನ್ನಡನಾಡಲ್ಲದೇ ಇಡೀ ದೇಶ-ವಿದೇಶದಲ್ಲೂ ರಾಕಿ ಭಾಯ್ ಅಂತಲೇ ಚಿರಪರಿಚಿತರು. ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ ಮಂದಿಗಂತೂ ತುಂಬಾ ಇಷ್ಟ ಆಗಿದ್ದಾರೆ.


Kannada Actor Rocking Star Yash Acted Rocky Film Complete 14 Years
ರಾಕಿ ಚಿತ್ರಕ್ಕೆ ನಿರ್ಮಾಪಕರೂ ಚೇಂಜ್ ಹೀರೋನೂ ಚೇಂಜ್!


ನಾವೇ ಎಲ್ಲ ನಮ್ಮ ಮುಂದೇ ಏನೂ ಇಲ್ಲ ಅಂತಲೇ ಬೀಗುತ್ತಿದ್ದ ಬಾಲಿವುಡ್​ ಸ್ಟಾರ್​ಗಳಿಗೆ ಕೆಜಿಎಫ್ ಮೂಲಕ ರಾಕಿ ಭಾಯ್ ಸರಿಯಾಗಿಯೇ ಟಕ್ಕರ್ ಕೊಟ್ಟಿದ್ದಾರೆ.


ರಾಕಿಂಗ್ ಸ್ಟಾರ್ "Rocky" ಆದ ಕಥೆ ತುಂಬಾ ಇಂಟ್ರಸ್ಟಿಂಗ್
ರಾಕಿಂಗ್ ಸ್ಟಾರ್ ಯಶ್ ಪೂರ್ಣ ಪ್ರಮಾಣದ ನಾಯಕನಾದ ಆ ಚಿತ್ರಕ್ಕೆ ಈಗ 14 ವರ್ಷ ಪೂರ್ಣ ಆಗಿದೆ. ಕ್ರಿಸ್ಮಸ್ ಹಬ್ಬದಂದು ಈ ಚಿತ್ರ ರಿಲೀಸ್ ಆಗಿತ್ತು. ಈ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್​ಗೆ ಬಿಯಾಂಕಾ ದೇಸಾಯಿ ಅನ್ನೋ ಯುವ ನಾಯಕಿನೂ ಸಾಥ್ ಕೊಟ್ಟಿದ್ದರು.
ಹೌದು, ಈ ಚಿತ್ರದ ಹೆಸರು "Rocky" ಈ ಮೂಲಕ ಯಶ್ ರಾಕಿ ಅನ್ನೋ ಪಾತ್ರದಲ್ಲಿ ಅಭಿನಯಿಸಿದ್ದರು. ಸಿನಿಮಾ ಬಗ್ಗೆ ಆಗ ನೆಗೆಟೀವ್ ಮತ್ತು ಪಾಸಿಟಿವ್ ಓಪಿನಿಯನ್ ಕೂಡ ಬಂದಿತ್ತು. ಆದರೆ ಈ "Rocky"ಗೆ ಅಂದು ಇದರಿಂದ ಅಂತಹ ಏನೂ ಎಫೆಕ್ಟ್ ಆಗಲಿಲ್ಲ. ಬದಲಾಗಿ ರಾಕಿ ಫುಲ್ ರಾಕ್ ಮಾಡಿರೋದು ಅಷ್ಟೇ ಸತ್ಯ.


"Rocky" ಚಿತ್ರಕ್ಕೆ ಯಶ್ ಮೊದಲ ಆಯ್ಕೆ ಆಗಿರಲಿಲ್ಲ.!
ಇದಂತೂ ನಿಜ ಬಿಡಿ, ಚಿತ್ರದ ನಿರ್ದೇಶಕ ನಾಗೇಂದ್ರ ಅರಸ್ ಒಂದು ಕಥೆ ಮಾಡಿಕೊಂಡಿದ್ದರು. ವಿಜಯ್ ಸಂಡೂರು ಬರವಣಿಗೆ ಕೆಲಸ ಮಾಡಿದ್ದರು. ಅದಕ್ಕೆ ರಾಕಿ ಅಂತಲೂ ಹೆಸರಿಟ್ಟಿದ್ದರು. ಎಸ್.ಆರ್.ಸುಧಾಕರ್ ಈ ಚಿತ್ರಕ್ಕೆ ಕ್ಯಾಮರಾಮನ್ ಅಂತಲೂ ಫಿಕ್ಸ್ ಆಗಿದ್ದರು.


ಚಿತ್ರಕ್ಕೆ ನಿರ್ಮಾಪಕರೂ ಓಕೆ ಅಂದಿದ್ದರು. ರಾಕಿ ಮೂಲಕ ಈ ಚಿತ್ರದ ನಿರ್ಮಾಪಕರ ಮಗನೇ ಹೀರೋ ಆಗೋರಿದ್ದರು. ಆದರೆ ನಿರ್ಮಾಪಕರು ಒಂದು ಪಟ್ಟು ಹಿಡಿದರು. ಚಿತ್ರದ ಕ್ಯಾಮರಾಮನ್ ಸುಧಾಕರ್ ಅವರು ನಮ್ಮ ಚಿತ್ರಕ್ಕೆ ಬೇಡ್ವೇ ಬೇಡ ಅಂತಲೇ ಹೇಳಿ ಬಿಟ್ಟರು.


Kannada Actor Rocking Star Yash Acted Rocky Film Complete 14 Years
ರಾಕಿಂಗ್ ಸ್ಟಾರ್ "Rocky" ಆದ ಕಥೆ ತುಂಬಾ ಇಂಟ್ರಸ್ಟಿಂಗ್


ರಾಕಿ ಚಿತ್ರಕ್ಕೆ ನಿರ್ಮಾಪಕರೂ ಚೇಂಜ್ ಹೀರೋನೂ ಚೇಂಜ್!
ರಾಕಿ ಚಿತ್ರಕ್ಕೆ ಕ್ಯಾಮರಾಮನ್ ಸುಧಾಕರ್ ಅವರೇ ಮುಂದುವರೆದರು. ಕಾರಣ, ನಿರ್ದೇಶಕ ನಾಗೇಂದ್ರ ಅರಸ್ ಅಂತಲೇ ಹೇಳಬಹುದು. ಕ್ಯಾಮರಾಮನ್ ಬದಲು ಮಾಡೋದಿಲ್ಲ ಅಂತಲೇ ಹೇಳಿದರು. ಅಲ್ಲಿಗೆ ರಾಕಿ ಚಿತ್ರಕ್ಕೆ ಈಗೀನ ರಾಕಿ ಭಾಯ್ ಆಯ್ಕೆ ಆದರು.
ರಾಕಿಂಗ್ ಸ್ಟಾರ್ ಯಶ್ ಹೀಗೆ ಈ ಚಿತ್ರಕ್ಕೆ ರಾಕಿ ಆದರು. ಸಿನಿಮಾ ಕೂಡ ಶುರು ಆಯಿತು. ಎಂ.ಕೆ.ಆನಂದ್​ಕುಮಾರ್ ಸೇರಿ ಮೂವರು ಈ ಚಿತ್ರಕ್ಕೆ ದುಡ್ಡು ಹಾಕಿದರು. ಅಲ್ಲಿಗೆ ಕನ್ನಡ ರಾಕಿ ಚಿತ್ರ ಆಯಿತು. ನಟ ಯಶ್ ಈ ಮೂಲಕ ರಾಕಿ ಆಗದರು.


ಬೆಂಗಳೂರಿನ ತ್ರಿವೇಣಿ ಥಿಯೇಟರ್​​ನಲ್ಲಿ "Rocky" ರಿಲೀಸ್
ಬೆಂಗಳೂರಿನ ತ್ರಿವೇಣಿ ಥಿಯೇಟರ್​​ನಲ್ಲಿ "Rocky" ಚಿತ್ರ ರಿಲೀಸ್ "Rocky" ಸಿನಿಮಾ ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಈಗಲೂ ಇರೋ ತ್ರಿವೇಣಿ ಥಿಯೇಟರ್​​ನಲ್ಲಿಯೇ ರಿಲೀಸ್ ಆಗಿತ್ತು. ಇಲ್ಲಿ ಈ ಚಿತ್ರದಲ್ಲಿ ಒಂದು ಹಂತಕ್ಕೆ ಓಪನಿಂಗ್ ಕೂಡ ಇತ್ತು. ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ರಾಕಿ ಆಗಿ ಮಿಂಚಿದ್ದರು.


ಇದನ್ನೂ ಓದಿ: BBK Grand Finale: ಶನಿವಾರ-ಭಾನುವಾರ ಅಲ್ಲ, ಶುಕ್ರವಾರ-ಶನಿವಾರ ಬಿಗ್​​​​ಬಾಸ್ ಗ್ರ್ಯಾಂಡ್ ಫಿನಾಲೆ!


ಇದಾದ್ಮೇಲೆ ಮತ್ತೊಂದು ಲಕ್ಕಿ ಹೆಸರಿನ ಸಿನಿಮಾವನ್ನ ಡೈರೆಕ್ಟರ್ ನಾಗೇಂದ್ರ ಪ್ರಸಾದ್ ಪ್ಲಾನ್ ಮಾಡಿದ್ದರು. ಆದರೆ ಅದು ಕಾರಣಾಂತರದಿಂದಲೇ ಕಾರ್ಯರೂಪಕ್ಕೆ ಬರಲೇ ಇಲ್ಲ. ರಾಕಿ ಚಿತ್ರ ಕನ್ನಡಕ್ಕೆ ಒಬ್ಬ ರಾಕಿ ಹೆಸರಿನ ಪಾತ್ರವನ್ನ ಹೀರೋನನ್ನ ಪರಿಚಯಿಸಿತು. ಅದೇ ಹೀರೊ ಈಗ ರಾಕಿ ಭಾಯ್ ಆಗಿದ್ದಾರೆ. ನ್ಯಾಷನಲ್ ಸ್ಟಾರ್ ಆಗಿ ಹೊಳೆಯುತ್ತಿದ್ದಾರೆ.

First published: