ರೋರಿಂಗ್ ಸ್ಟಾರ್ ಶ್ರೀಮುರಳಿ (Roaring Star Sri Murali) ಸೇಫ್ ಆಗಿ ಮನೆಗೆ ಬಂದಿದ್ದಾರೆ. ಬೆಂಗಳೂರಿನ ಮಣಿಪಾಲ್ ವಿಕ್ರಮ್ ಆಸ್ಪತ್ರೆಯಲ್ಲಿ ಶ್ರೀಮುರಳಿ (Sri Murali Left Leg Knee Surgery) ಎಡಗಾಲಿನ ಶಸ್ತ್ರ ಚಿಕಿತ್ಸೆಗಾಗಿಯೇ ದಾಖಲಾಗಿದ್ದರು. ನುರಿತ ವೈದ್ಯರ ತಂಡ ಎಡಗಾಲಿನ ಮೊಣಕಾಲ (Sri Murali Knee Surgery) ಶಸ್ತ್ರ ಚಿಕಿತ್ಸೆ ಮಾಡಿತ್ತು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಮಣಿಪಾಲ್ ವಿಕ್ರಮ್ ಆಸ್ಪತ್ರೆಯಿಂದ (Sri Murali Discharge) ಡಿಸ್ಚಾರ್ಜ್ ಆಗಿದ್ದು ವೈದ್ಯರು 3 ತಿಂಗಳು ವಿಶ್ರಾಂತಿ ಪಡೆಯುವಂತೆನೂ ಶ್ರೀಮುರಳಿ ಅವರಿಗೆ ಸಲಹೆ ನೀಡಿದ್ದಾರೆ. ಇನ್ನು ಇಲ್ಲಿಂದ ಶ್ರೀಮುರಳಿ ಮನೆಗೆ ತೆರಳುವಾಗ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಸೆಲ್ಫಿ ಕೂಡ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ಮೊಣಕಾಲು ಶಸ್ತ್ರ ಚಿಕಿತ್ಸೆ ಯಶಸ್ವಿ
ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಮೊನ್ನೆ ಎಡಗಾಲಿಗೆ ಪೆಟ್ಟು ಬಿದ್ದಿತ್ತು. ಬಘೀರ ಚಿತ್ರದ ಚಿತ್ರೀಕರಣದ ವೇಳೆನೇ ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು.
ಬೆಂಗಳೂರಿನ ರಾಕ್ಲೈನ್ ಸ್ಟುಡಿಯೋದಲ್ಲಿ ಬಘೀರ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸಾಹಸ ದೃಶ್ಯವನ್ನ ಮಂಗಳೂರಿನ ಫೈಟ್ ಮಾಸ್ಟರ್ ಇಲ್ಲಿ ಕಂಪೋಸ್ ಮಾಡಿದ್ದರು.
ಈ ಒಂದು ದೃಶ್ಯದ ಚಿತ್ರೀಕರಣದಲ್ಲಿ ಶ್ರೀಮುರಳಿ ಅಂದು ಭಾಗಿ ಆಗಿದ್ದರು. ಮೇಲೆ ಎಗರಿ, ನೆಲಕ್ಕೆ ಮಂಡಿಯೂರೋ ಸೀನ್ ಅದಾಗಿತ್ತು. ಈ ಒಂದು ದೃಶ್ಯಕ್ಕೆ ಶ್ರೀಮುರಳಿ ಫುಲ್ ರೆಡಿ ಆಗಿದ್ದರು.
ಆದರೆ ಈ ಮೊದಲೇ ಪೆಟ್ಟು ಬಿದ್ದಿದ್ದ ಎಡಗಾಲಿನ ಮಂಡಿಯೂರಿದ್ದರಿಂದಲೋ ಏನೋ, ತೀವ್ರ ಪೆಟ್ಟು ಬಿತ್ತು. ನಡೆಯಲೂ ಅಸಾಧ್ಯವಾದ ನೋವು ಆ ಕೂಡಲೇ ಕಾಣಿಸಿಕೊಂಡೇ ಬಿಡ್ತು.
ಇದರಿಂದ ಅಂದು ಶ್ರೀಮುರಳಿ ಅವರು ನಡೆಯೋದಕ್ಕೂ ಕಷ್ಟಪಟ್ಟಿದ್ದರು. ಪೆಟ್ಟು ಬಿದ್ದ ಜಾಗದಲ್ಲಿ ತೀವ್ರ ನೋವು ಕೂಡ ಕಾಣಿಸಿಕೊಂಡಿತ್ತು. ಇದರಿಂದ ಅಂದು ಶೂಟಿಂಗ್ನಲ್ಲೂ ಶ್ರೀಮುರಳಿ ಭಾಗಿಯಾಗಲು ಆಗಲೇ ಇಲ್ಲ. ಹಾಗಾಗಿಯೇ ಅಂದು ಶೂಟಿಂಗ್ ಸ್ಪಾಟ್ನಿಂದ ಶ್ರೀಮುರಳಿ ನೇರವಾಗಿ ಆಸ್ಪತ್ರೆಗೂ ತೆರಳಿದ್ದರು.
ಶ್ರೀಮುರಳಿ ಅವರಿಗೆ ಶಸ್ತ್ರ ಚಿಕಿತ್ಸೆಗೆ ವೈದರ ಸಲಹೆ
ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಎಡಗಾಲಿನ ಮೊಣಕಾಲಿಗೆ ಮದಗಜ ಚಿತ್ರದ ಚಿತ್ರೀಕರಣದ ವೇಳೆ ತೀವ್ರವಾಗಿಯೇ ಪೆಟ್ಟು ಬಿದ್ದಿತ್ತು. ಇದೇ ಕಾಲಿಗೇನೆ ಬಘೀರ ಚಿತ್ರದ ಶೂಟಿಂಗ್ ವೇಳೆ ಮತ್ತೆ ಪೆಟ್ಟು ಬಿದ್ದೇ ಬಿಡ್ತು. ಹಾಗಾಗಿಯೇ ಶ್ರೀಮುರಳಿ ಅವರ ಮೊಣಕಾಲಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು.
ಶ್ರೀಮುರಳಿ ಅವರ ಕಾಲನ್ನ ಪರೀಕ್ಷಿಸಿದ್ದ ವೈದ್ಯರು ಶಸ್ತ್ರ ಚಿಕಿತ್ಸೆಗೂ ಸಲಹೆ ನೀಡಿದ್ದರು. ಆದರೆ ಶ್ರೀಮುರಳಿ ಪೆಟ್ಟು ಬಿದ್ದ ಮರು ದಿನವೇ ಮತ್ತೆ ಶೂಟಿಂಗ್ ಹೋಗೋಕೆ ಯೋಚನೆ ಮಾಡಿದ್ದರು.
ನನಗೆ ನಿರ್ಮಾಪಕರ ಕಷ್ಟ ಗೊತ್ತು ಎಂದಿದ್ದ ಶ್ರೀಮುರಳಿ!
ಶ್ರೀಮುರಳಿ ಅವರಿಗೆ ನಿರ್ಮಾಪಕರ ಕಷ್ಟ ಗೊತ್ತಿದೆ. ಅವರ ತಂದೆ ಕೂಡ ನಿರ್ಮಾಪಕರೇ ಅಲ್ವೇ. ಹಾಗಾಗಿಯೇ ತಮ್ಮಿಂದಲೇ ಅಂದು ಶೂಟಿಂಗ್ ಸ್ಟಾಪ್ ಆಗಿದ್ದಕ್ಕೆ ಬೇಸರ ಮಾಡಿಕೊಂಡಿದ್ದರು. ಹೀಗಾದ್ರೆ ನಿರ್ಮಾಪಕರಿಗೆ ತೊಂದರೆ ಆಗುತ್ತದೆ ಎಂದು ಮರು ದಿನವೇ ಚಿತ್ರೀಕರಣಕ್ಕೂ ತೆರಳಬೇಕು ಅಂತಲೇ ಅಂದುಕೊಂಡಿದ್ದರು.
ಆದರೆ ಅಂದುಕೊಂಡಂತೇನೆ ಮರು ದಿನ ಅದು ಸಾಧ್ಯವೇ ಆಗಲಿಲ್ಲ. ಶ್ರೀಮುರಳಿ ನಡೆಯೋದಕ್ಕೂ ಆ ದಿನ ಕಷ್ಟ ಪಟ್ಟಿದ್ದರು. ಹಾಗಾಗಿಯೇ ಶೂಟಿಂಗ್ ಕೂಡ ಹೋಗಲು ಅವರಿಗೆ ಆಗಲೇ ಇಲ್ಲ ನೋಡಿ.
ವೈದ್ಯರ ಸಲಹೆಯಂತೆ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ
ಬಘೀರ ಚಿತ್ರೀಕರಣದ ಸ್ಥಳದಿಂದಲೇ ನೇರವಾಗಿ ಆಸ್ಪತ್ರೆಗೆ ಬಂದಿದ್ದ ನಟ ಶ್ರೀಮುರಳಿ ಅವರ ಕಾಲನ್ನ ಪರೀಕ್ಷಿಸಿದ ವೈದ್ಯರು, ನಿಮ್ಮ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಿದೆ. ಆದಷ್ಟು ಬೇಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬಿಡಿ ಅಂತಲೇ ಸಲಹೆ ಕೊಟ್ಟಿದ್ದರು.
ಮೊಣಕಾಲಿನ ಯಶಸ್ವಿ ಶಸ್ತ್ರ ಚಿಕಿತ್ಸೆ-ಮೂರು ತಿಂಗಳು ರೆಸ್ಟ್!
ಈ ಸಲಹೆಯಂತೆ ಶ್ರೀಮುರಳಿ ಬೆಂಗಳೂರಿನ ಮಣಿಪಾಲ್ ವಿಕ್ರಮ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾದರು. ಅಂತೆಯೇ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಎಡಗಾಲಿನ ಮೊಣಕಾಲ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಡಾಕ್ಟರ್ ಶಂಕರ್ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದೆ.
ಇದನ್ನೂ ಓದಿ: Shwetha R Prasad: ಸಾಮಾಜಿಕ ಕೆಲಸದಲ್ಲೂ ಸೈ ಎನಿಸಿಕೊಂಡ 'ರಾಧಾ ಟೀಚರ್'! NGO ಮೂಲಕ ಸಮಾಜ ಸೇವೆಗಿಳಿದ ನಟಿ ಶ್ವೇತಾ
ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆಯಲ್ಲಿಯೇ ಇದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ, ಇಂದು (17.01.2023) ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಡಿಸ್ಚಾರ್ಜ್ ಆಗೋ ವೇಳೆ ವ್ಹೀಲ್ ಚೇರ್ ನಲ್ಲಿಯೇ ಕುಳಿತಿದ್ದ ಶ್ರೀಮುರಳಿ ಎಂದಿನಂತೆ ತಮ್ಮ ಶೈಲಿಯಲ್ಲಿಯೇ ಎಲ್ಲರಿಗೂ ಧನ್ಯವಾದ ಕೂಡ ಹೇಳಿದರು.
ಆಸ್ಪತ್ರೆಯಿಂದ ಮನೆಗೆ ಬಂದ ಶ್ರೀಮುರಳಿ ಸದ್ಯ ಮನೆಯಲ್ಲಿಯೇ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ