• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Shaitan Interview: ಡೈರೆಕ್ಟರ್ ನನಗೆ ಫ್ರೀಡಂ ಕೊಟ್ರು ಅದಕ್ಕೆ ನಾನ್ 'ಶೈತಾನ್' ಆದೆ, ನಟ ರಿಷಿ ಮಾತು

Shaitan Interview: ಡೈರೆಕ್ಟರ್ ನನಗೆ ಫ್ರೀಡಂ ಕೊಟ್ರು ಅದಕ್ಕೆ ನಾನ್ 'ಶೈತಾನ್' ಆದೆ, ನಟ ರಿಷಿ ಮಾತು

ಶೈತಾನ್ ವೆಬ್ ಸಿರೀಸ್ ಚಿತ್ರೀಕರಣದ ಅನುಭವ ಹಂಚಿಕೊಂಡ ರಿಷಿ

ಶೈತಾನ್ ವೆಬ್ ಸಿರೀಸ್ ಚಿತ್ರೀಕರಣದ ಅನುಭವ ಹಂಚಿಕೊಂಡ ರಿಷಿ

ಕನ್ನಡದ ಕವಲುದಾರಿ ನಾಯಕ ನಟ ರಿಷಿ ಫಸ್ಟ್ ಟೈಮ್ ಶೈತಾನ್ ಪಾತ್ರ ಮಾಡಿದ್ದಾರೆ. ಮನುಷ್ಯ ರೂಪದ ರಾಕ್ಷಸನನ್ನ ನೋಡಿದ ಅನುಭವ ಆಗುತ್ತದೆ. ಈ ಪಾತ್ರದ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್‌ Exclusive ಸಂದರ್ಶನದಲ್ಲಿ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಸ್ಯಾಂಡಲ್‌ವುಡ್ ಕವಲುದಾರಿಯ ನಾಯಕ ನಟ ರಿಷಿ (Rishi Special Interview) ಮಾತಾಡ್ತಾ ಹೋದ್ರು. ಅವರ ಮಾತಲ್ಲಿ ಒಂದು ಸ್ಪಷ್ಟತೆ ಇತ್ತು. ಶೈತಾನ್ ವೆಬ್‌ ಸೀರಿಸ್ ಒಪ್ಪಿದ್ದರ ಬಗ್ಗೆ ಹೆಮ್ಮೆ ಇತ್ತು. ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರ ಮಾಡ್ತಿರೋ ಖುಷಿ ಇಡೀ ಮಾತಿನಲ್ಲಿ (First Telug web Series) ಹೊಳೆಯುತ್ತಿತ್ತು. ಸಿನಿಮಾ ಜೀವನದಲ್ಲಿ ನಟ ರಿಷಿ ಸ್ಪೆಷಲ್ ಕಥೆಗಳ ಪಾತ್ರಗಳಿಗೆ ಜೀವ ತುಂಬುತ್ತಲೇ ಬಂದಿದ್ದಾರೆ. ಆದರೆ ತೆಲುಗುವಿನ ಶೈತಾನ್ ಅಷ್ಟು ಸಹಜ ಪಾತ್ರವೇನೂ ಅಲ್ಲ ಬಿಡಿ. ಆದರೆ ಈ ಒಂದು ಅಸಹಜ (Shaitan Web series Hero) ಪಾತ್ರವನ್ನ ನಿರ್ವಹಿಸಿದ ಸಂತೋಷ ರಿಷಿ ಮಾತಿನಲ್ಲಿ ತುಂಬಿ ತುಳುಕುತ್ತಿತ್ತು. ಶೈತಾನ್ ಸಿರೀಸ್‌ನಲ್ಲಿ ರುಂಡ ಚಂಡಾಡೋ ಸೀನ್‌ಗಳೇ ಜಾಸ್ತಿ ಇವೆ.


ಟ್ರೈಲರ್‌ನಲ್ಲಿ ಇದನ್ನೆಲ್ಲ ನೋಡಿದ ಜನರು (Rishi First Web Series Secret) ಇದರಲ್ಲಿ ಕ್ರೌರ್ಯವೇ ಹೆಚ್ಚಿದೆ ಅಂತ ಗೆಸ್ ಮಾಡುತ್ತಿದ್ದಾರೆ.


Kannada Actor Rishi Special Interview about his First Telugu web Series Shaitan
ಶೈತಾನ್ ವೆಬ್ ಸಿರೀಸ್‌ಗೆ ನಟ ರಿಷಿ ಆಯ್ಕೆ ಆಗಿದ್ದು ಹೇಗೆ ಗೊತ್ತೆ ?


ಶೈತಾನ್ ವೆಬ್ ಸಿರೀಸ್ ಬಗ್ಗೆ ರಿಷಿ ಸ್ಪೆಷಲ್ ಮನದ ಮಾತು


ಆದರೆ ವೆಬ್‌ ಸಿರೀಸ್‌ನ ಪ್ರಮುಖ ಪಾತ್ರಧಾರಿ ರಿಷಿ ಮಾತು ಎಲ್ಲ ಗೆಸ್ಸಿಂಗ್ ಅನ್ನ ಬದಲಿಸುತ್ತದೆ. ಇಡೀ ಸಿರೀಸ್‌ನಲ್ಲಿ ಹಾಗೇನು ಇಲ್ಲ. ಆದರೆ ಇರೋ ವಿಷಯವನ್ನ ಟ್ರೈಲರ್‌ನಲ್ಲಿ ತೋರಿಸಿದ್ದೇವೆ. ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸೋದು ಎಷ್ಟು ಸರಿ ಅಂತಲೂ ರಿಷಿ ಕೇಳ್ತಾರೆ.
ಅಸಲಿಗೆ ಒಟ್ಟು ವೆಬ್‌ ಸಿರೀಸ್ ನಾಲ್ಕು ಗಂಟೆಗಳ ಮೇಲೆ ಇದೆ. ಆ ನಾಲ್ಕು ಗಂಟೆಯ ಕಥೆಯನ್ನ 9 ಸಂಚಿಕೆಯಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಆದರೆ ವೆಬ್ ಸಿರೀಸ್‌ನ ಟ್ರೈಲರ್‌ನಲ್ಲಿ ಕೇವಲ ಎರಡು ನಿಮಿಷದಲ್ಲಿ ಎಲ್ಲವನ್ನೂ ಹೇಳಿಲ್ಲ. ನಿಜ ಹೇಳಬೇಕು ಅಂದ್ರೆ, ಇಡೀ ವೆಬ್ ಸಿರೀಸ್‌ ರುಂಡ ಚಂಡಾಡೋ ರೀತಿ ಇರೋದಿಲ್ಲ.
ಟಾಲಿವುಡ್ ಶೈತಾನ್ ವೆಬ್ ಸಿರೀಸ್‌ನಲ್ಲಿ ಕ್ರೌರ್ಯ ಜಾಸ್ತಿ ಇಲ್ಲ !


ಇಲ್ಲೊಂದು ಕಥೆ ಇದೆ. ಈ ಕಥೆಗೆಯ ಜನ ಹೇಗಿದ್ದಾರೆ. ಅವರ ಲೋಕ ಏನೂ ಅನ್ನೋದನ್ನ ತೋರಿಸಲಿಕ್ಕೆ ಕ್ರೌರ್ಯದ ರೀತಿ ಕಾಣೋ ಟ್ರೈಲರ್‌ ಕಟ್ ಮಾಡಿದ್ದೇವೆ. ಈ ದೃಶ್ಯಗಳು ವೆಬ್‌ ಸಿರೀಸ್‌ನಲ್ಲಿ ಬರೋ ದೃಶ್ಯಗಳೇ ಆಗಿವೆ. ಹಾಗಂತ ಇಡೀ ಸಿರೀಸ್ ಆ ರೀತಿ ಇರೋದಿಲ್ಲ ಬಿಡಿ. ಇಡೀ ಸಿರೀಸ್ ನೋಡಿದಾಗ ನಿಮ್ಮ ಅಭಿಪ್ರಾಯ ಬದಲಾಗುತ್ತದೆ.


ಬಾಲಿ ಅನ್ನೋ ಪಾತ್ರವನ್ನ ನಿರ್ವಹಿಸಲು ನನಗೆ ಹೆಚ್ಚು ಟೈಮ್ ಏನೂ ಸಿಕ್ಕಿರಲಿಲ್ಲ. ಕೇವಲ 10 ದಿನಗಳಲ್ಲಿಯೇ ಅದಕ್ಕಾಗಿ ತಯಾರಿ ಮಾಡಿಕೊಳ್ಳಬೇಕಾಯಿತು. ನಾನು ಒಬ್ಬ ಕನ್ನಡಿಗ ತೆಲುಗ ಭಾಷೆ ಮೇಲೆ ಅಷ್ಟೇನೂ ಹಿಡಿತ ಇಲ್ಲ. ಆ ಭಾಷೆಯನ್ನ ಅರ್ಥ ಮಾಡಿಕೊಂಡು ಪಾತ್ರದ ಜೀವಂತಿಕೆಯನ್ನ ತಿಳಿದುಕೊಂಡು ಅಭಿನಯಿಸಿದ್ದೇನೆ. ಇದು ನಿಜಕ್ಕೂ ಸವಾಲಿನ ಕೆಲಸವೇ ಆಗಿತ್ತು.


Kannada Actor Rishi Special Interview about his First Telugu web Series Shaitan
ಟಾಲಿವುಡ್ ಶೈತಾನ್ ವೆಬ್ ಸಿರೀಸ್‌ನಲ್ಲಿ ಕ್ರೌರ್ಯ ಜಾಸ್ತಿ ಇಲ್ಲ !


ಶೈತಾನ್ ವೆಬ್ ಸಿರೀಸ್‌ಗೆ ನಟ ರಿಷಿ ಆಯ್ಕೆ ಆಗಿದ್ದು ಹೇಗೆ ಗೊತ್ತೆ ?


ವೆಬ್ ಸಿರೀಸ್‌ನ ಡೈರೆಕ್ಟರ್ ಮಾಹಿ ವಿ ರಾಘವ್ ನನ್ನ ಅಭಿನಯವನ್ನ ಕಂಡು ನಾನೇ ಬೇಕು ಅಂತಲೇ ತೆಗೆದುಕೊಂಡ್ರು. ವೆಬ್ ಸಿರೀಸ್‌ನಲ್ಲಿ ಇನ್ನೂ ಒಳ್ಳೆ ಒಳ್ಳೆ ಕಲಾವಿದರಿದ್ದಾರೆ. ತೆಲುಗು, ತಮಿಳು, ಮಲೆಯಾಳಂ ಹೀಗೆ ಎಲ್ಲ ಕಡೆಯ ಕಲಾವಿದರು ಈ ಒಂದು ವೆಬ್ ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ.


ಶೈತಾನ್ ವೆಬ್ ಸಿರೀಸ್ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರೆಡಿ ಆಗಿದೆ. ಎಲ್ಲೆಡೆ ಈ ವೆಬ್ ಸಿರೀಸ್ ಸ್ಟ್ರೀಮಿಂಗ್ ಆಗುತ್ತದೆ. ಅಂತಹ ಈ ವೆಬ್ ಸಿರೀಸ್‌ನಲ್ಲಿ ಅಭಿನಯಿಸೋವಾಗ ಖುಷಿ ಆಗಿದೆ. ಅಷ್ಟೇ ಸವಾಲು ಕೂಡ ಅನಿಸಿದ್ದು ಇದೆ. ವೆಬ್ ಸಿರೀಸ್‌ನ ಬಹುತೇಕ ಭಾಗವನ್ನ ರಿಯಲ್ ಲೋಕೇಷನ್‌ನಲ್ಲಿಯೇ ತೆಗೆಯಲಾಗಿದೆ.


ಶೈತಾನ್ ವೆಬ್ ಸಿರೀಸ್ ಚಿತ್ರೀಕರಣದ ಅನುಭವ ಹಂಚಿಕೊಂಡ ರಿಷಿ


ಮದನಪಲ್ಲಿಯಲ್ಲಿಯೇ ಹೆಚ್ಚು ಚಿತ್ರೀಕರಣ ಮಾಡಲಾಗಿದೆ. ಬೇಸಿಗೆಯ ಬಿರುಬಿಸಿನಲ್ಲಿ ಇಡೀ ವೆಬ್ ಸಿರೀಸ್ ಚಿತ್ರೀಕರಣ ಮಾಡಲಾಗಿದೆ. ನೈಜ ಘಟನೆ ಸ್ಪೂರ್ತಿ ಈ ವೆಬ್ ಸಿರೀಸ್‌ನ ಪಾತ್ರಗಳಿಗೆ ಇದ್ದೆ ಇದೆ. ಆ ಹಿನ್ನೆಲೆಯಲ್ಲಿ ಎಲ್ಲವೂ ಇಲ್ಲಿ ರಿಯಲಿಸ್ಟಿಕ್ ಆಗಿದೆ.


ಇದನ್ನೂ ಓದಿ: Namratha Gowda: ನಟಿ ನಮ್ರತಾ ಗೌಡ ಗ್ಲಾಮರಸ್ ಫೋಟೋಶೂಟ್, ಪ್ಯಾಂಟ್ ಹಾಕೋದೆ ಮರೆತು ಹೋದ್ರಾ 'ನಾಗಿಣಿ' ಎಂದ ನೆಟ್ಟಿಗರು


ಅದು ಬಿಟ್ರೆ, ಕೆಳವರ್ಗದ ವ್ಯಕ್ತಿ ಜೀವನದ ಮೇಲೆ ಆಗೋ ಅಟ್ಟಹಾಸ ಮತ್ತು ಅದರಿಂದ ಸಿಡಿದೇಳೋ ಪರಿ ಇಲ್ಲಿ ಕ್ರೌರ್ಯದ ರೂಪದಂತೆ ಕಾಣುತ್ತದೆ ಎಂದು ಹೇಳೋ ನಟ ರಿಷಿ ತಮ್ಮ ಮಾತು ಮುಗಿಸ್ತಾರೆ. ಹಾಗೆ ಇದೇ ತಿಂಗಳ 15 ರಂದು ಶೈತಾನ್ ವೆಬ್ ಸಿರೀಸ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

First published: