ಕನ್ನಡನಾಡಿನಲ್ಲಿ ಕಾಂತಾರದ (Kantara Movie) ಅಲೆ ಶಾಶ್ವತವಾಗಿಯೇ ಉಳಿದು ಬಿಟ್ಟಿದೆ. ಸಿನಿಮಾದ ಗುಂಗು ಇನ್ನೂ ಹೋಗಿಯೇ ಇಲ್ಲ. ಕಾಂತಾರದ ಬಳಿಕ ಕನ್ನಡದಲ್ಲಿ ಅನೇಕ (Kantara Trailer) ಸಿನಿಮಾಗಳು ಬಂದಿವೆ. ಆದರೂ ಕಾಂತಾರದ ಪಂಜುರ್ಲಿ ದೈವದ ಕೂಗು ಇನ್ನೂ ಇದೆ. ಇದರ ಬೆನ್ನಲ್ಲಿಯೇ ಕಾಂತಾರದ ನಟ-ನಿರ್ದೇಶಕ ರಿಷಬ್ ಶೆಟ್ರು ಬದಲಾಗುತ್ತಾರೆ ಅನ್ನೋ ಅಂದಾಜಿತ್ತು. (Kantara Movie Collection) ಆದರೆ ಅದೆಲ್ಲವೂ ಸುಳ್ಳಾಗಿದೆ. ತುಳುನಾಡಿನ ಶೆಟ್ರು ಸ್ಟಾರ್ ಇಮೇಜಿಗೆ ಅಂಟಿಕೊಂಡಿಲ್ಲ. ತಮ್ಮ ಎಂದಿನ "ಕಾಯಕವೇ ಕೈಲಾಸ" (kantara movie rishab shetty) ಅನ್ನೋ ಥಿಯೇರಿಯಲ್ಲಿಯೇ ಸಾಗುತ್ತಿದ್ದಾರೆ. ಕಾಂತಾರ-2 ಚಿತ್ರದ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ ಅನ್ನೊ ಮಾತು ಕೂಡ ಈಗ ಕೇಳಿ ಬರ್ತಿದೆ. ಇದರ ಸುತ್ತ ಒಂದು ಸುದ್ದಿ ಇಲ್ಲಿದೆ ಓದಿ.
ಕಾಂತಾರ ಡೈರೆಕ್ಟರ್ ರಿಷಬ್ ಶೆಟ್ರು ಯಾಕ್ ಬದಲಾಗಲೇ ಇಲ್ಲ!
ಕಾಂತಾರ ಸಿನಿಮಾದ ನಟ-ನಿರ್ದೇಶಕ ರಿಷಬ್ ಶೆಟ್ರು ಯಾಕೆ ಬದಲಾಗಲೇ ಇಲ್ಲ. ಹೌದು, ಈ ಒಂದು ಪ್ರಶ್ನೆ ಇದ್ದೇ ಇದೆ. ರಿಷಬ್ ರಾತ್ರೋ ರಾತ್ರಿ ಕಾಂತಾರದ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ.
ಆದರೆ ಈ ಇಮೇಜ್ ಅನ್ನ ತಲೆ ಮೇಲೆ ಹೊತ್ತುಕೊಂಡು ತಿರುಗುತ್ತಾರೆ ಅನ್ನೋ ಅಂದಾಜು ಕೂಡ ಅನೇಕರಲ್ಲಿತ್ತು. ಆದರೆ ಅವರ ಲೆಕ್ಕಾಚಾರ ಎಲ್ಲವೂ ಉಲ್ಟಾ ಹೊಡೆದಿದೆ.
ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಒಂಚೂರು ಬದಲಾಗಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಕೊಟ್ಟ ಖುಷಿಯಲ್ಲಿದ್ರೂ ಏನಂದರೆ ಏನೂ ಚೇಂಜಸ್ ಕಾಣೋದಿಲ್ಲ. ರಿಷಬ್ ಶೆಟ್ರು ಈ ಹಿಂದೆ ಹೇಗಿದ್ದರೋ ಹಾಗೇ ಇದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಕೊಟ್ಟ ರಿಷಬ್ ಯಾಕೆ ಬದಲಾಗಲಿಲ್ಲ.?
ಈ ಒಂದು ಪ್ರಶ್ನೆ ಇದ್ದೇ ಇದೆ. ಆದರೆ, ರಿಷಬ್ ಶೆಟ್ರಿಗೆ ಒಂದು ಸತ್ಯ ಗೊತ್ತಿದೆ. ಈ ಸಿನಿಮಾರಂಗದಲ್ಲಿ ಸಕ್ಸಸ್ ತಲೆಗೆ ಏರಿಸಿಕೊಂಡ್ರೆ ಕಷ್ಟ ಗ್ಯಾರಂಟಿ ಅನ್ನೋದು ತಿಳಿದಿದೆ. ಅದಕ್ಕೇನೆ ಸಕ್ಸಸ್ ತುಂಬಾ ಡೇಂಜರಸ್ ಅಂತಲೇ ರಿಷಬ್ ಹೇಳುತ್ತಾರೆ.
ರಿಷಬ್ ಶೆಟ್ರಿಗೆ ಈ ಸತ್ಯ ತಿಳಿಯೋಕೆ ಕಾರಣವೂ ಇದೆ. ಸಿನಿಮಾರಂಗದಲ್ಲಿ ಸಾಕಷ್ಟು ಏರಿಳಿತಕಂಡ ರಿಷಬ್ ಶೆಟ್ರು, ಸಣ್ಣ-ಪುಟ್ಟ ಪಾತ್ರಗಳನ್ನೂ ಮಾಡಿದ್ದಾರೆ. ಅಸಿಸ್ಟಂಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಡೈರೆಕ್ಟರ್ ಜಯತೀರ್ಥ ಅವರ ಒತ್ತಾಯದ ಮೇಲೆ ಬೆಲ್ ಬಾಟಮ್ ಮೂಲಕ ಹೀರೋ ಕೂಡ ಆಗಿ ಗೆದ್ದೇ ಬಿಟ್ಟರು. ಇನ್ನೇನು ಮತ್ತೊಮ್ಮೆ ಪಾರ್ಟ್-2 ಸಿನಿಮಾಕ್ಕೂ ಸಜ್ಜಾಗುತ್ತಾರೆ.
ನಾನು ಬದಲಾಗಿಯೇ ಇಲ್ಲ-ಬದಲಾಗೋದೂ ಇಲ್ಲ
ಕಾಂತಾರ ಚಿತ್ರದ ಮುಂಚೆ ಯಾವ ಮನಸ್ಥಿತಿ ಇತ್ತೋ, ಅದೇ ಮನಸ್ಥಿತಿಯಲ್ಲಿಯೇ ಮುಂದಿನ ಸಿನಿಮಾ ಮಾಡುತ್ತೇನೆ ಅಂತಲೇ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ಹೀಗೆ ಹೇಳುವ ಮೂಲಕ ನಾನು ಎಂದೂ ಬದಲಾಗೋದಿಲ್ಲ ಅನ್ನೋದನ್ನ ಈಗಾಗಲೇ ಹೇಳಿದ್ದಾರೆ. ಅಂದ್ರೆ, ಪ್ಯಾನ್ ಇಂಡಿಯಾ ಚಿತ್ರ ಕೊಟ್ಟ ಗುಂಗು ಏರಿಲ್ಲ ಅನ್ನೋದನ್ನ ಆಗಾಗ ಹೇಳ್ತಾನೇ ಇದ್ದಾರೆ.
ರಿಷಬ್ ಶೆಟ್ರು ಚಿತ್ರಕ್ಕೆ ಎಷ್ಟು ಬೇಕೋ ಅಷ್ಟೇ ಖರ್ಚು ಮಾಡ್ತಾರೆ
ರಿಷಬ್ ಸುಖಾಸುಮ್ನೆ ದುಡ್ಡು ಖರ್ಚು ಮಾಡೋದಿಲ್ಲ. ಕಥೆಗೆ ಎಷ್ಟು ದುಡ್ಡು ಬೇಕೋ ಅಷ್ಟೇ ವೆಚ್ಚ ಮಾಡ್ತಾರೆ. ಪ್ಯಾನ್ ಇಂಡಿಯಾಮಟ್ಟಕ್ಕೆ ಹೋಗಿರೋ ಕಾಂತಾರ ಚಿತ್ರವನ್ನೂ ಲೆಕ್ಕಾಚಾರ ಮಾಡಿಯೇ ಮಾಡಿದ್ದಾರೆ. ಹಾಗಾಗಿಯೇ ರಿಷಬ್ ತಮ್ಮ ಪತ್ನಿಗೆ ಹೇಳಿದ್ರಂತೆ, ನಾನು ದೊಡ್ಡ ಸಿನಿಮಾ ಮಾಡಿದೆ. ಅದು ಕೂಡ ಬಿಗ್ ಬಜೆಟ್ ಸಿನಿಮಾ ಅಲ್ಲ ನೋಡು ಅಂತಲೇ ಹೇಳಿದ್ರಂತೆ.
ಇದನ್ನೂ ಓದಿ: Darling Krishna: ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ನಟಿಸಲು ಅವಕಾಶ! ಕಂಡೀಷನ್ಸ್ ಹೀಗಿವೆ
ರಿಷಬ್ ಶೆಟ್ರು ತಮ್ಮ ಕಾಂತಾರದ ಮೂಲಕ ಇಡೀ ನಾಡಿನ ಹೆಮ್ಮೆಯನ್ನ ಹೆಚ್ಚಿಸಿದ್ದಾರೆ. ಕಾಂತಾರ-2 ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದರೂ ಆಶ್ಚರ್ಯವೇ ಇಲ್ಲ. ಈಗಾಗಲೇ ಕಾಂತಾರದಂತಹ ಕಥೆ ಹೇಗೆ ಹೇಳಬೇಕು ಅನ್ನೋದು ತಿಳಿದುಕೊಂಡಿದ್ದಾರೆ.
ಈ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ. ಒಟ್ಟಾರೆ, ಶೆಟ್ರು ಬದಲಾಗೇ ಇಲ್ಲ. ಅದೇ ಮನಸ್ಥಿತಿಯಲ್ಲಿಯೇ ಮತ್ತೊಂದು ಸಿನಿಮಾ ಮಾಡುತ್ತೇನೆ ಎಂದು ಹೇಳಿ ಎಲ್ಲರಿಗೂ ಸ್ಪೂರ್ತಿ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ