ಸ್ಯಾಂಡಲ್ವುಡ್ ನಲ್ಲಿ ಕಾಂತಾರ (Kantara Film) ಸಿನಿಮಾ ಡಿವೈನ್ ಹಿಟ್ ಆಗಿದೆ. ಈ ಚಿತ್ರದ ಸಕ್ಸಸ್ಗೆ ಎಂತವರ ತಲೆನೂ ನಿಲ್ಲೋದಿಲ್ಲ. ಸಕ್ಸಸ್ ಅನ್ನೋದು ಸಡನ್ ಆಗಿಯೇ ತಲೆಗೆ ಏರಿ ಬಿಡುತ್ತದೆ. ಅಂತಹ ಸಕ್ಸಸ್ ಫುಲ್ ಆಗಿಯೇ ಇರೋ ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ (Rishab Shetty) ಶೆಟ್ಟಿ ಅವರಿಗೆ ಸಕ್ಸಸ್ (Success) ತಲೆಗೆ ಏರಿದಿಯಾ? ಈ ಒಂದು ಪ್ರಶ್ನೆ ಇದೆ. ಇದನ್ನ ಗಮನಿಸುತ್ತಲೇ ಹೋದ್ರೆ, ಅಲ್ಲಿ ನಿಮಗೆ ಸಿಗೋ ಉತ್ತರ ಬೇರೆನೆ ಇದೆ. ಅದು ನೆಗೆಟಿವಾ? ಪಾಸಿಟಿವಾ? ಅನ್ನೋದನ್ನ ತಿಳಿಯೋಕೆ ನೀವು ಈ ಸ್ಟೋರಿ ಓದಿ. ರಿಷಬ್ ಶೆಟ್ರ ಈಗೀನ ಬಿಹೇವಿಯರ್ ಬಗ್ಗೆ ಒಂದು ಸಣ್ಣ ಚಿತ್ರಣ ಕೂಡ ಸಿಗುತ್ತದೆ.
ರಿಷಬ್ ಶೆಟ್ರಿಗೆ ಕಾಂತಾರ ಸಕ್ಸಸ್ ತಲೆಗೆ ಏರಿಯೇ ಬಿಡ್ತಾ?
ರಿಷಬ್ ಶೆಟ್ಟಿ ಚಿತ್ರ ಬದುಕಿನಲ್ಲಿ ಏರಿಳಿತಗಳನ್ನ ಕಂಡಿದ್ದಾರೆ. ಹೀರೋ ಆಗಿ ಸಕ್ಸಸ್ ಕಂಡು ಜನರ ಹೃದಯವನ್ನೂ ಕಂಡಿದ್ದಾರೆ. ಆದರೆ ಸಕ್ಸಸ್ ರೇಟ್ ಅಲ್ಲಿ ಕಾಂತಾರ ಸಿನಿಮಾ ಕೊಟ್ಟ ಖ್ಯಾತಿ ನಿಜಕ್ಕೂ ಯಾರು ನಿರೀಕ್ಷೆ ಮಾಡಿರಲಿಲ್ಲ. ಆದರೆ ರಿಷಬ್ ಶೆಟ್ರಿಗೆ ನಿರೀಕ್ಷೆ ಮಾಡದೇ ಇರೋ ಒಂದು ಸಕ್ಸಸ್ ಸಿಕ್ಕಿದೆ.
ಇದರಿಂದ ರಿಷಬ್ ಬದಲಾಗಿ ಬಿಟ್ರೇ? ಕಾಂತಾರ ಸಕ್ಸಸ್ ತಲೆಗೇರಿ ಬಿಟ್ಟಿದಿಯೇ? ಈ ಒಂದು ಪ್ರಶ್ನೆಗೆ ಉತ್ತರ Yes ಅಂತಲೂ ಹೇಳೋಕೆ ಆಗೋದಿಲ್ಲ. ಇಲ್ಲ ಅಂತಲೂ ಹೇಳೋಕೆ ಆಗೋದಿಲ್ಲ. ಕಾರಣ, ರಿಷಬ್ ಶೆಟ್ಟ ತಲೆಗೆ ಏನಂದ್ರೆ ಏನು ಏರಿಯೇ ಇಲ್ಲ.
ರಿಷಬ್ ಶೆಟ್ರು ಕಾಂತಾರ ಸಕ್ಸಸ್ ಅನ್ನ ತಲೆಗೆ ಹಚ್ಚಿಕೊಂಡೇ ಇಲ್ಲ!
ಹೌದು, ರಿಷಬ್ ಶೆಟ್ರು ಯಾವುದನ್ನೂ ತಲೆಗೆ ಹಚ್ಚಿಕೊಂಡಿಲ್ಲ. ಸ್ಟಾರ್ ಅನ್ನೋ ಫೀಲ್ ಕೂಡ ಇಲ್ಲ. ಕಾಂತಾರ ಭರ್ಜರಿ ರೆಸ್ಪಾನ್ಸ್ ಪಡೆದಾಗಿನಿಂದ ಹಿಡಿದು, ಇಲ್ಲಿವರೆಗೂ ಹಾಗೆ ಇದ್ದಾರೆ.
ಭಾಷೆಯ ತೊಂದರೆ ಇದೇ ಅನ್ನೋದು ಗೊತ್ತಿದ್ರೂ, ಇರೋ ಅರೆ-ಬರೆ ಹಿಂದಿ ಭಾಷೆಯಲ್ಲೂ ಬಾಲಿವುಡ್ನಲ್ಲಿ ತಮ್ಮ ಅನಿಸಿಕೆಗಳನ್ನ ಹೇಳ್ತಾನೇ ಬಂದಿದ್ದಾರೆ. ಅದೇ ರೀತಿ ತಮ್ಮ ಬಲವಾದ ಅಭಿಪ್ರಾಯವನ್ನ ಅದೇ ವಿಶ್ವಾಸದಲ್ಲಿಯೇ ಹೇಳುತ್ತಲೇ ಬಂದಿದ್ದಾರೆ.
ಸಕ್ಸಸ್ ಅನ್ನೋದು ಡೇಂಜರಸ್ ಎಂದ ರಿಷಬ್ ಶೆಟ್ಟಿ
ಸಕ್ಸಸ್ ಅನ್ನೋದು ಮನಸ್ಸಿನಲ್ಲಿದ್ರೇನೆ ಒಳ್ಳೆಯದು. ಅದು ತಲೆಗೆ ಏರಿದ್ರೆ ಮುಗಿದೇ ಹೋಯಿತು. ಎಲ್ಲವೂ ಪ್ರಾಬ್ಲಂ ಆಗಿ ಬಿಡುತ್ತದೆ. ಸಕ್ಸಸ್ ಅನ್ನೋದು ಮನಸ್ಸಿನಲ್ಲಿ ಮಾತ್ರ ಇರಬೇಕು. ಕಾಂತಾರ ಸಕ್ಸಸ್ ಮನಸ್ಸಿನಲ್ಲಿ ಮಾತ್ರ ಇದೆ ಅಂತಲೇ ರಿಷಬ್ ಹೇಳಿಕೊಂಡಿದ್ದಾರೆ. ಸಕ್ಸಸ್ ಅನ್ನೋದು ತುಂಬಾ ಡೇಂಜರಸ್. ಅದು ತಲೆಗೆ ಏರಬಾರದು ಅಷ್ಟೆ ಅಂತಲೂ ಹೇಳಿಕೊಂಡಿದ್ದಾರೆ.
ಸಕ್ಸಸ್ಗಾಗಿ ನಾನು ಕೆಲಸ ಮಾಡಿಲ್ಲ, ಕೆಲಸಕ್ಕಾಗಿ ಕೆಲಸ ಮಾಡಿದ್ದೇನೆ!
ರಿಷಬ್ ಶೆಟ್ಟಿ ತುಂಬಾ ಓಪನ್ ಹಾರ್ಟೆಡ್ ಆಗಿದ್ದಾರೆ. ಎಂದು ಯಾವುದನ್ನೂ ಬಚ್ಚಿಟ್ಟ ಹಾಗೆ ಕಾಣೋದೇ ಇಲ್ಲ. ಇರೋದನ್ನ ಇರೋ ಹಾಗೆ ಹೇಳೋದೇ ಹೆಚ್ಚು. ಅದು ನಗ್ತಾ ನಗ್ತಾ ಅನ್ನೋದೇ ವಿಶೇಷ.
ರಿಷಬ್ ಶೆಟ್ಟಿ ಕೆಲಸ ಮಾಡುತ್ತಲೇ ಬಂದಿದ್ದಾರೆ. ಅದೇ ರೀತಿ ಕಾಂತಾರ ಸಿನಿಮಾಕ್ಕಾಗಿಯೇ ದುಡಿದ್ದಾರೆ. ಆದರೆ ಸಕ್ಸಸ್ಗಾಗಿಯೇ ಕೆಲಸ ಮಾಡಿದ್ದಾರೆ. ಕಾಂತಾರ ಆ ಶ್ರಮಕ್ಕೆ ಬೆಲೆ ತಂದು ಕೊಟ್ಟಿದೆ. ಹಾಗಾಗಿಯೇ ಯಾವುದನ್ನೂ ಹೆಚ್ಚಿಕೊಂಡಿಲ್ಲ ಅಂತಲೇ ರಿಷಬ್ ಹೇಳಿಕೊಂಡಿದ್ದಾರೆ.
ಕಾಂತಾರ-2 ಸಿನಿಮಾ ಯಾವಾಗ ಬರುತ್ತದೆ?
ಕಾಂತಾರ ಸಿನಿಮಾದ ಕೆಲಸ ಇನ್ನೂ ಇದೆ. ಡಿಸೆಂಬರ್-02 ರಂದು ತುಳು ಭಾಷೆಯಲ್ಲಿ ಕಾಂತಾರ ರಿಲೀಸ್ ಆಗುತ್ತಿದೆ. ಅದರ ಹೊರತಾಗಿ ಕಾಂತಾರ-2 ಸಿನಿಮಾದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಅನ್ನೋ ಅರ್ಥದಲ್ಲಿಯೇ ರಿಷಬ್ ರಿಯಾಕ್ಟ್ ಮಾಡಿದ್ದಾರೆ.
#RishabhShetty sir on #Kantara Part2pic.twitter.com/SOGADZMuyh
— MNV Gowda (@MNVGowda) November 25, 2022
ಹೀಗೆ ಮಾತು ಮತ್ತು ಕಥೆಯಲ್ಲಿ ಹತ್ತು ಹಲವು ವಿಷಯಗಳು ಚರ್ಚೆ ಆಗಿವೆ. ಅದರಲ್ಲಿಯೇ ಆಯ್ದ ಭಾಗವನ್ನ ಇಲ್ಲಿ ನಿಮಗೆ ಕೊಟ್ಟಿದ್ದೇವೆ ಅಷ್ಟೆ. ಇನ್ನು "End of Bollywood Monopoly" ಅನ್ನೋ ವಿಷಯದ ಮೇಲೇನೆ ಇಲ್ಲಿ ಚರ್ಚೆ ಆಗುತ್ತಿತ್ತು. ಅದರಲ್ಲಿಯೇ ರಿಷಬ್ ತಮ್ಮ ಮನದ ಮಾತುಗಳನ್ನ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ