• Home
  • »
  • News
  • »
  • entertainment
  • »
  • Rishab Shetty Dubai Tour: ದುಬೈನಲ್ಲಿ ಕಾಂತಾರ ಶಿವನ ಗಮತ್ತು, ಸಿನಿಮಾದ ಲೇ ಲೇ ಹಾಡಿನ ಹಿನ್ನೆಲೆಯಲ್ಲಿ ಫುಲ್ ಎಂಜಾಯ್‌ಮೆಂಟು!

Rishab Shetty Dubai Tour: ದುಬೈನಲ್ಲಿ ಕಾಂತಾರ ಶಿವನ ಗಮತ್ತು, ಸಿನಿಮಾದ ಲೇ ಲೇ ಹಾಡಿನ ಹಿನ್ನೆಲೆಯಲ್ಲಿ ಫುಲ್ ಎಂಜಾಯ್‌ಮೆಂಟು!

ದುಬೈ ನಲ್ಲಿ ಕಾಂತಾರ ಶಿವನ ಲೇ..ಲೇ ಹಾಡಿನ ಗಮ್ಮತ್ತು!

ದುಬೈ ನಲ್ಲಿ ಕಾಂತಾರ ಶಿವನ ಲೇ..ಲೇ ಹಾಡಿನ ಗಮ್ಮತ್ತು!

ದುಬೈ ಪ್ರವಾಸದಲ್ಲಿ ರಿಷಬ್ ಜೊತೆಗೆ ಫ್ಯಾಮಿಲಿ ಕೂಡ ಇದೆ. ಫ್ಯಾಮಿಲಿ ಜೊತೆಗೆ ದುಬೈ ಪ್ರವಾಸ ಮಾಡ್ತಾ ಇದ್ದೇನೆ. ಶೀಘ್ರದಲ್ಲಿಯೇ ವಾಪಾಸ್ ಬರುತ್ತೇನೆ. ಬಂದ್ಮೇಲೆ ಮತ್ತೆ ಮಾತನಾಡುವೆ ಅಂತಲೂ ನ್ಯೂಸ್-18 ಕನ್ನಡ ಡಿಜಿಟಲ್​ಗೆ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

    ಕನ್ನಡದ ಕಾಂತಾರ (Kannada Kantara) ಚಿತ್ರ ಕನ್ನಡದ ಹೆಮ್ಮೆಯ ಸಿನಿಮಾ. ಈ ಸಿನಿಮಾದ ಗುಂಗು ಜನರಲ್ಲಿ ಇನ್ನೂ ಇದೆ. ಸಿನಿಮಾ (Cinema Team) ತಂಡವೂ ಇದೇ ಮೂಡ್​ ನಲ್ಲಿಯೆ ಚಿತ್ರದ ಪ್ರಚಾರವನ್ನ ಭರ್ಜರಿಯಾಗಿಯೇ ಮಾಡಿದೆ. ಇದರಿಂದ ಚಿತ್ರ ಜನರಿಗೆ ರೀಚ್ ಆಗಲು ಅನುಕೂಲ ಕೂಡ ಆಗಿದೆ. ಹೆಚ್ಚು ಕಡಿಮೆ ಒಂದೂವರೆ ಎರಡು ತಿಂಗಳು ಪ್ರಚಾರದ ಕೆಲಸದಲ್ಲಿಯೆ ಚಿತ್ರದ ಕಲಾವಿದರು ಬ್ಯುಸಿ ಆಗಿದ್ದರು. ಈಗ ಈ ಚಿತ್ರದ ನಾಯಕ ನಟ ಮತ್ತು ನಿರ್ದೇಶಕ (Rishab Shetty) ರಿಷಬ್ ಶೆಟ್ಟಿ ಜಾಲಿ ಮೂಡ್​ ನಲ್ಲಿಯೇ ಇದ್ದಾರೆ. ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಹಿಂದೇನೆ ಪ್ರಚಾರದ ಕೆಲಸ ಮುಗಿಸಿಕೊಂಡು (Relax) ರಿಲ್ಯಾಕ್ಸ್ ಆಗುತ್ತೇನೆ ಎಂದಿದ್ದರು. ಅದರಂತೆ ರಿಷಬ್ ಶೆಟ್ಟಿ ಫ್ಯಾಮಿಲಿ ಜೊತೆಗೆ ದುಬೈ​ ಪ್ರವಾಸಕ್ಕೆ ತೆರಳಿದ್ದಾರೆ.


    ಕಾಂತಾರದ ಶಿವನ ಜಾಲಿ ಜಾಲಿ ಮೂಡ್ ಸೂಪರ್
    ಕಾಂತಾರ ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ ಲಕ್ಕಿ ಇದ್ದಾರೆ. ಸಿನಿಮಾ ಜರ್ನಿಯಲ್ಲಿ ಅಸಿಸ್ಟಂಟ್​ ಡೈರೆಕ್ಟರ್ ಆಗಿ, ಸಣ್ಣ-ಪುಟ್ಟ ಪಾತ್ರಗಳನ್ನ ಮಾಡುತ್ತಲೇ, ಒಂದು ಹಂತಕ್ಕೆ ಬಂದು ಹೀರೋ ಆದೋರು, ಆದರೆ ಕಾಂತಾರ ಸಿನಿಮಾ ಈ ಪ್ರತಿಭಾವಂತ ನಟ-ನಿರ್ದೇಶಕನನ್ನ ಸೂಪರ್ ಸ್ಟಾರ್ ಮಾಡಿ ಬಿಟ್ಟಿದೆ.


    Kannada Actor Rishab Shetty Now in Dubai tour
    ಫ್ಯಾಮಿಲಿ ಜೊತೆಗೆ ರಿಷಬ್ ಶೆಟ್ಟಿ ದುಬೈ ಪ್ರವಾಸ


    ಕಾಂತಾರ ಸಿನಿಮಾದ ಸಕ್ಸಸ್​ಗಾಗಿ ರಿಷಬ್ ಆ್ಯಂಡ್ ಟೀಮ್ ಸಾಕಷ್ಟು ಶ್ರಮ ಪಟ್ಟಿದೆ. ಅದಕ್ಕೆ ತಕ್ಕನಾದ ಫಲ ಸಿಗುತ್ತದೆ ಎಂಬ ನಂಬಿಕೆ ಕೂಡ ಇತ್ತು. ಆದರೆ ಕಾಂತಾರ ದೈವದ ಕೃಪೆಯಿಂದ ನಿರೀಕ್ಷೆಗಿಂತಲೂ ಹೆಚ್ಚಿನ ಸಕ್ಸಸ್ ಬಂದು ಬಿಟ್ಟಿದೆ.


    ಸೂಪರ್ ಸ್ಟಾರ್ ಆದ್ರೂ ಸರಳ, ತಲೆಗೆ ಏರಿಲ್ಲ ಕಾಂತಾರ ಸಕ್ಸಸ್
    ಕನ್ನಡದ ನಯಾ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ಸಿಂಪಲ್ ಆಗಿಯೇ ಇದ್ದಾರೆ. ದಕ್ಷಿಣದ ಉಡುಗೆ ತೊಡುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ. ಕಾಂತಾರ ಚಿತ್ರ ಅತಿ ದೊಡ್ಡ ಸಕ್ಸಸ್ ಕಂಡ್ರೂ ಆ ಯಶಸ್ಸನ್ನ ತಲೆಗೆ ಏರಿಸಿಕೊಂಡೇ ಇಲ್ಲ. ಈ ಹಿಂದೆ ಹೇಗಿದ್ದರೋ ಅದೇ ರೀತಿನೇ ರಿಷಬ್ ಈಗಲು ಇದ್ದಾರೆ.




    ದೂರದ ದುಬೈ ನಲ್ಲಿ ಕಾಂತಾರ ಶಿವನ ಲೇ..ಲೇ ಹಾಡಿನ ಗಮ್ಮತ್ತು!
    ರಿಷಬ್ ಶೆಟ್ಟಿ ಸದ್ಯ ದುಬೈ ಪ್ರವಾಸಲ್ಲಿಯೇ ಇದ್ದಾರೆ. ಇಲ್ಲಿಯ ಪ್ರತಿ ಕ್ಷಣವನ್ನೂ ಅಷ್ಟೇ ಚಂದಗೆ ಎಂಜಾಯ್ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿರೋ ಲೇ ಲೇ ಹಾಡು ಕೂಡ ರಿಷಬ್ ಕುಳಿತ ಬೋಟ್​ ನಲ್ಲಿ ಕೇಳಿ ಬರುತ್ತದೆ.


    ಫ್ಯಾಮಿಲಿ ಜೊತೆಗೆ ರಿಷಬ್ ಶೆಟ್ಟಿ ದುಬೈ ಪ್ರವಾಸ
    ರಿಷಬ್ ಶೆಟ್ಟಿ ಸದ್ಯ ದುಬೈ ಪ್ರವಾಸದಲ್ಲಿದ್ದಾರೆ. ಇಲ್ಲಿಯ ಸುಂದರ ತಾಣಗಳನ್ನೂ ನೋಡಿ ಖುಷಿ ಪಡ್ತಿದ್ದಾರೆ. ಈ ಒಂದು ಕ್ಷಣದ ಒಂದು ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಸಖತ್ ವೈರಲ್ ಆಗುತ್ತಿದೆ.




    ದುಬೈ ಪ್ರವಾಸದಲ್ಲಿ ರಿಷಬ್ ಜೊತೆಗೆ ಫ್ಯಾಮಿಲಿ ಕೂಡ ಇದೆ. ಫ್ಯಾಮಿಲಿ ಜೊತೆಗೆ ದುಬೈ ಪ್ರವಾಸ ಮಾಡ್ತಾ ಇದ್ದೇನೆ. ಶೀಘ್ರದಲ್ಲಿಯೇ ವಾಪಾಸ್ ಬರುತ್ತೇನೆ. ಬಂದ್ಮೇಲೆ ಮತ್ತೆ ಮಾತನಾಡುವೆ ಅಂತಲೂ ನ್ಯೂಸ್-18 ಕನ್ನಡ ಡಿಜಿಟಲ್​ಗೆ ರಿಷಬ್ ಶೆಟ್ಟಿ ತಿಳಿಸಿದ್ದಾರೆ.


    ದುಬೈ ಪ್ರವಾಸದಲ್ಲಿರೋ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾದ ಎಲ್ಲ ಕೆಲಸ ಮುಗಿಸಿಕೊಂಡು ಇಲ್ಲಿಗೆ ಬಂದಿದ್ದಾರೆ. ಸಿನಿಮಾದ ಕೆಲಸ ಮುಗಿದ ಮೇಲೆ ಒಂದೂವರೆ ತಿಂಗಳು ರಿಲ್ಯಾಕ್ಸ್ ಆಗುತ್ತೇನೆ. ಆ ಮೇಲೆ ಮತ್ತೆ ಕೆಲಸ ಮಾಡುತ್ತೇನೆ ಅಂತಲೇ ಈ ಹಿಂದೇನೆ ಹೇಳಿದ್ದರು.


    ಇದನ್ನೂ ಓದಿ: Nikhil Family Pic Viral: ಹೆಂಡತಿ-ಮಗನ ಜೊತೆ ಹೊಸ ಫೋಟೋಶೂಟ್​​​ಗೆ ಪೋಸ್ ಕೊಟ್ಟ ಜಾಗ್ವಾರ್ ನಿಖಿಲ್


    ಅದರಂತೆ ರಿಷಬ್ ಶೆಟ್ಟಿ ಈಗ ಜಾಲಿ ಮೂಡ್​ ನಲ್ಲಿಯೇ ಇದ್ದಾರೆ. ದುಬೈ ಪ್ರವಾಸವನ್ನೂ ಅಷ್ಟೆ ಎಂಜಾಯ್ ಮಾಡುತ್ತಿದ್ದಾರೆ. ಈ ಪ್ರವಾಸದ ವೀಡಿಯೋಗಳನ್ನ ಕಂಡ ಅಭಿಮಾನಿಗಳು ಕೂಡ ಫುಲ್ ಖುಷಿ ಆಗಿದ್ದಾರೆ. ವೀಡಿಯೋ ಕೂಡ ಫುಲ್ ವೈರಲ್ ಆಗುತ್ತಿದೆ.

    First published: