• Home
  • »
  • News
  • »
  • entertainment
  • »
  • Rishab-Rajnikanth: ಕಾಂತಾರ ಸಿನಿಮಾಗೆ 'ತಲೈವಾ' ಫುಲ್ ಫಿದಾ, ರಜನಿಕಾಂತ್​ ತೋರಿದ ಪ್ರೀತಿಗೆ ಕಾಲಿಗೆ ಬಿದ್ದ ರಿಷಬ್​ ಶೆಟ್ಟಿ

Rishab-Rajnikanth: ಕಾಂತಾರ ಸಿನಿಮಾಗೆ 'ತಲೈವಾ' ಫುಲ್ ಫಿದಾ, ರಜನಿಕಾಂತ್​ ತೋರಿದ ಪ್ರೀತಿಗೆ ಕಾಲಿಗೆ ಬಿದ್ದ ರಿಷಬ್​ ಶೆಟ್ಟಿ

ನೀವು ಒಂದು ಸರಿ ಹೊಗಳಿದ್ರೆ ಅದು ನೂರು ಸಲ ಹೊಗಳಿದಂತೆ

ನೀವು ಒಂದು ಸರಿ ಹೊಗಳಿದ್ರೆ ಅದು ನೂರು ಸಲ ಹೊಗಳಿದಂತೆ

"ನೀವು ಒಂದ್ ಸಲ ಹೊಗಳಿದ್ರೆ. ನೂರು ಸಲ ಹೊಗಳ್ದ೦ಗೆ ನಮಗೆ. ಧನ್ಯವಾದಗಳು sir ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ" ಎಂದು ರಿಷಬ್ ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಸೂಪರ್ ಸ್ಟಾರ್ (Super Star Rajinikanth) ರಜನಿಕಾಂತ್ ಕಾಂತಾರ ಸಿನಿಮಾ ನೋಡಿದ್ದಾರೆ. ಕನ್ನಡದ (Kannada Kantar) ಕಾಂತಾರ ಚಿತ್ರ ವೀಕ್ಷಿಸಿ ತುಂಬಾ ಖುಷಿಪಟ್ಟಿದ್ದಾರೆ. ಕಾಂತಾರ ನನಗೆ ತುಂಬಾ ಖುಷಿ ತಂದಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೇ ಹೋದ ಸೂಪರ್ ಸ್ಟಾರ್ ರಜನಿಕಾಂತ್, ಕನ್ನಡದ ನಟ-ನಿರ್ದೇಶಕ ರಿಷಬ್ (Rishab Shetty) ಶೆಟ್ಟಿ ಅವರನ್ನ ತಮ್ಮ ಬಳಿಗೆ ಕರೆಸಿಕೊಂಡಿದ್ದಾರೆ. ಸುಮಾರು ಹೊತ್ತು ಮನಬಿಚ್ಚಿ ಮಾತನಾಡಿದ್ದಾರೆ. ಸಿನಿಮಾದ ಬಗೆಗಿನ ತಮ್ಮ ಅಭಿಪ್ರಾಯವನ್ನ ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ಆ ಕ್ಷಣ ನಿಜಕ್ಕೂ ರಿಷಬ್​ (Great Feeling) ಶೆಟ್ಟಿಗೆ ಗ್ರೇಟ್ ಫೀಲಿಂಗ್ ಕೊಟ್ಟಿದೆ. ಸೂಪರ್ ಸ್ಟಾರ್ ಆದರೂ ಯೋಗಿ ರೀತಿನೇ ಬದುಕುತ್ತಿರೋ ರಜನಿಕಾಂತ್ ಅವರಿಂದ ರಿಷಬ್ ಶೆಟ್ಟಿ ಆಶೀರ್ವಾದವನ್ನೂ ಪಡೆದುಕೊಂಡಿದ್ದಾರೆ. ಕಾಲಿಗೆ ಬಿದ್ದು ರಜಿನಿಗೆ ಗೌರವ ಕೂಡ ಸಲ್ಲಿಸಿದ್ದಾರೆ. ಈಗ ಇದುವೇ ಟಾಕ್ ಆಫ್ ದಿ ಟೌನ್ ಆಗಿದೆ.


ರಿಷಬ್ ಮೀಟ್ಸ್ ರಜನಿ -ಇದು ದೈವ ಬಲವೇ?
ಕಾಂತಾರ ಸಿನಿಮಾ ನಿಜಕ್ಕೂ ರಿಷಬ್ ಶೆಟ್ಟಿ ಜೀವನದ ಹಾದಿಯನ್ನೇ ಬದಲಿಸಿದೆ. ಒಂದೇ ಒಂದು ಸಿನಿಮಾ ಇಡೀ ದೇಶ-ವಿದೇಶಕ್ಕೆ ರಿಷಬ್ ಶೆಟ್ಟಿಯನ್ನ ಪರಿಚಯಸಿದೆ.


ಕಾಂತಾರ ಸಿನಿಮಾದ ಖ್ಯಾತಿಗೆ ಅದೆಷ್ಟೋ ಜನ ಸಿನಿಮಾ ಮಂದಿ ಮರುಳಾಗಿದ್ದಾರೆ. ರಿಷಬ್ ಶೆಟ್ಟಿಯನ್ನ ಅದೆಷ್ಟೊ ಜನ ಹೊಗಳುತ್ತಲೇ ಇದ್ದಾರೆ. ಆದರೆ ರಿಷಬ್ ಶೆಟ್ಟಿಯನ್ನ ಮನಸಾರೆ ಮೆಚ್ಚಿಕೊಂಡ ರಜನಿಕಾಂತ್ ಚೆನ್ನೈನ ಮನೆಗೂ ಕರೆಸಿಕೊಂಡಿದ್ದಾರೆ.


ರಜನಿಕಾಂತ್ ಒಂದು ಸಿನಿಮಾ ಮೆಚ್ಚೋದು ಅಷ್ಟು ಸುಲಭವಲ್ಲ
ರಜನಿಕಾಂತ್ ಸಿನಿಮಾ ಮೆಚ್ಚುತ್ತಾರೆ ಅಂದ್ರೆ ಸುಮ್ನೆ ಏನೂ ಅಲ್ಲ. ಸಾಕಷ್ಟು ಸಿನಿಮಾ ಮಾಡಿದ್ದಾರೆ. ಸಾಕಷ್ಟು ಕತೆಗಳಿಂದ ಅನುಭವ ಇದೆ. ಇತರ ಸಿನಿಮಾ ನೋಡಿದ ಅನುಭವ ಕೂಡ ಇದೆ.


ರಜನಿಕಾಂತ್ ಹೃದಯ ಗೆದ್ದ ಕಾಂತಾರ ಸಿನಿಮಾ
ಕಾಂತಾರ ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಗೂ ಇಷ್ಟ ಆಗಿದೆ. ಇದನ್ನ ನೋಡಿದ ರಜನಿಕಾಂತ್, ಕಾಂತಾರ ಚಿತ್ರ ನೋಡಿ ರೋಮಾಂಚನಗೊಂಡೆ. ಭಾರತೀಯ ಸಿನಿಮಾರಂಗದಲ್ಲಿ ಈ ಸಿನಿಮಾ ಒಂದು ಮಾಸ್ಟರ್ ಪೀಸ್ ಅಂತಲೇ ಹೇಳಿದ್ದರು. ರಿಷಬ್ ಶೆಟ್ಟಿ ಸೇರಿ ಇಡೀ ಟೀಮ್​ಗೆ ಶುಭ ಕೋರಿದ್ದಾರೆ.


Kannada Actor Rishab Shetty Meets Rajanikanth
ರಜನಿಕಾಂತ್ ಹೃದಯ ಗೆದ್ದ ಕಾಂತಾರ ಸಿನಿಮಾ


ಕಾಂತಾರ ಸಿನಿಮಾ ಗುಂಗಿನಲ್ಲಿಯೇ ಇರೋ ರಜನಿಕಾಂತ್ ಈಗ ರಿಷಬ್ ಶೆಟ್ರನ್ನ ತಮ್ಮ ಮನೆಗೂ ಕರೆಸಿಕೊಂಡಿದ್ದಾರೆ. ಕರೆಸಿಕೊಂಡು ಸುಮಾರು ಹೊತ್ತು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.


ಇದನ್ನೂ ಓದಿ: Puneeth Rajkumar: 'ರಾಜರತ್ನ' ಮರೆಯಾಗಿ ಕಳೆದೇ ಹೋಯ್ತು 1 ವರ್ಷ! ಇಂದು ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ


ರಿಷಬ್ ಶೆಟ್ಟಿಯವರನ್ನ ಹಾಗೆ ಕಳಿಸದೇ ಇರೋ ರಜನಿಕಾಂತ್ ಗೌರವಿಸಿದ್ದಾರೆ. ಶಾಲ್ ಹೊದಿಸಿ ಸನ್ಮಾನಿಸಿದ್ದಾರೆ. ಇದರಿಂದ ತುಂಬಾ ಖುಷಿಯಾಗಿರೋ ರಿಷಬ್ ಶೆಟ್ಟಿ, ತಮಗನಿಸಿದ್ದನ್ನ ಬರೆದುಕೊಂಡಿದ್ದಾರೆ. ಹೀಗೆ



"ನೀವು ಒಂದ್ ಸಲ ಹೊಗಳಿದ್ರೆ.. ನೂರು ಸಲ ಹೊಗಳ್ದ೦ಗೆ ನಮಗೆ. ಧನ್ಯವಾದಗಳು sir ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ" ಎಂದು ರಿಷಬ್ ಹೇಳಿಕೊಂಡಿದ್ದಾರೆ.


Kannada Actor Rishab Shetty Meets Rajanikanth
ಈಗ ಇದುವೇ ಟಾಕ್ ಆಫ್ ದಿ ಟೌನ್


ಸೂಪರ್ ಸ್ಟಾರ್ ರಜನಿಕಾಂತ್ ಒಂದು ಸಿನಿಮಾ ಮೆಚ್ಚೋದೇನು, ಮೆಚ್ಚಿ ತಮ್ಮ ಮನೆಗೂ ಕರೆಸಿಕೊಂಡು ರಿಷಬ್ ಶೆಟ್ಟಿ ಅವರನ್ನ ಮಾತನಾಡಿಸೋದು ಅಂದ್ರೆ ಸುಮ್ನೆನಾ?
ಇದು ನಿಜಕ್ಕೂ ರಿಷಬ್ ಶೆಟ್ಟಿ ಅದೃಷ್ಟವೇ ಅಂತಲೇ ಹೇಳಬಹುದು.


ಸಿನಿಮಾ ಗೆಲುವು ಒಂದು ಕಡೆಯಾದ್ರೆ, ರಜನಿಕಾಂತ್ ಮೆಚ್ಚುಗೆ ಇನ್ನೊಂದು ಕಡೆ ಇದೆ. ಎರಡೂ ಇರೋದ್ರಿಂದ ಇಡೀ ಟೀಮ್ ಸಂತೋಷ ಡಬಲ್ ಟ್ರಿಪಲ್ ಆಗಿದೆ.


ಇದನ್ನೂ ಓದಿ: Puneeth Rajkumar: ನಾನು ಪುನೀತ್​ ವ್ಯಕ್ತಿತ್ವದ ಅಭಿಮಾನಿ, ಅಪ್ಪು ವಿಶ್ವಮಾನವ- ಜೇಮ್ಸ್ ಡೈರೆಕ್ಟರ್ ಚೇತನ್


ರಜನಿಕಾಂತ್ ಮತ್ತು ರಿಷಬ್ ಶೆಟ್ಟಿ ಮೀಟ್ ಆಗಿರೋ ವಿಷಯದ ಫೋಟೋಗಳನ್ನ ನಿರ್ಮಾಪಕ ವಿಜಯ್​ ಕಿರಗಂದೂರು ತಮ್ಮ ಅಧಿಕೃತ ಪೇಜ್ ನಲ್ಲೂ ಹಂಚಿಕೊಂಡು ಸಂತೋಷ ಪಟ್ಟಿದ್ದಾರೆ.

First published: