• Home
  • »
  • News
  • »
  • entertainment
  • »
  • Rishab Shetty Dubai Friend: ದುಬೈನಲ್ಲಿ ರಿಷಬ್ ಶೆಟ್ಟಿ ಯಾರನ್ನ ಮೀಟ್ ಆದ್ರು ಗೊತ್ತೇ? ಆ ವೀಡಿಯೋ ಈಗ ವೈರಲ್!

Rishab Shetty Dubai Friend: ದುಬೈನಲ್ಲಿ ರಿಷಬ್ ಶೆಟ್ಟಿ ಯಾರನ್ನ ಮೀಟ್ ಆದ್ರು ಗೊತ್ತೇ? ಆ ವೀಡಿಯೋ ಈಗ ವೈರಲ್!

ಕಾಂತಾರ ಸಿನಿಮಾದ ಗುಂಗು ಮತ್ತು ಹಳೆ ರಂಗು

ಕಾಂತಾರ ಸಿನಿಮಾದ ಗುಂಗು ಮತ್ತು ಹಳೆ ರಂಗು

ರಿಷಬ್ ಶೆಟ್ಟಿ ಸದ್ಯ ದುಬೈ ಪ್ರವಾಸದಲ್ಲಿಯೇ ಇದ್ದಾರೆ. ಫ್ಯಾಮಿಲಿ ಜೊತೆಗೆ ಇಲ್ಲಿಗೆ ಬಂದಿರೋ ರಿಷಬ್ ಶೆಟ್ಟಿ ತಮ್ಮ ಹಳೆ ಗೆಳೆಯನನ್ನ ಇಲ್ಲಿ ಮೀಟ್ ಆಗಿದ್ದಾರೆ. ಹೌದು, ಆ ಗೆಳೆಯ ಬೇರೆ ಯಾರೋ ಅಲ್ಲ. ಒಂದು ಕಾಲದಲ್ಲಿ ರಿಷಬ್​​ ಶೆಟ್ಟಿಗೆ ತುಂಬಾ ಹೆಲ್ಪ್ ಮಾಡಿದೆ ಅದೇ ಆರ್​ಜೆ ಎರೋಲ್, ಅವರು ಇಲ್ಲಿದ್ದಾರೆ ನೋಡಿ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಕಾಂತಾರ (Kantara Cinema) ಸಿನಿಮಾ ಸೆಪ್ಟೆಂಬರ್​​-30 ರಂದು ರಿಲೀಸ್ ಆಯಿತು. ಪ್ರಿಮಿಯರ್ ಶೋನಲ್ಲಿಯೇ ಚಿತ್ರಕ್ಕೆ ಪಾಸಿಟಿವ್ ರಿವ್ಯೂ ಬಂತು. ನೆಕ್ಸ್ಟ್​ ಡೇ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಿದ್ದೇ ತಡ, ಸಿನಿಮಾಕ್ಕೆ ಒಳ್ಳೆ ರೆಸ್ಪಾನ್ಸ್ ಬಂತು. ಅಲ್ಲಿಂದ ಸಿನಿಮಾದ ಓಟ ನಿಲ್ಲಲೇ ಇಲ್ಲ. ಅದು ಓಡ್ತಾ ಹೋಯಿತು. ಮಂಗಳೂರಲ್ಲೂ ಈ ಸಿನಿಮಾ 80ಕ್ಕೂ ಹೆಚ್ಚು (Theater) ಥಿಯೇಟರ್​​ನಲ್ಲಿ ರಿಲೀಸ್ ಆಗಿತ್ತು. ಅತಿ ದೊಡ್ಡಮಟ್ಟದಲ್ಲಿಯೇ ಹೈಪ್​ ತೆಗೆದುಕೊಂಡಿತ್ತು. ಆಗಲೇ ಒಂದು ವಿಚಾರ ಚರ್ಚೆಗೆ ಬಂತು. ಹೌದು, ರಿಷಬ್ ಶೆಟ್ಟಿ (Rishab Shetty) ಕಷ್ಟಪಟ್ಟು ಮಾಡಿದ್ದ ಚಿತ್ರವೊಂದಕ್ಕೆ ಅಂದು ಥಿಯೇಟರ್​​​ ಕೂಡ ಸಿಕ್ಕಿರಲಿಲ್ಲ. ಆಗ ಆ ಒಬ್ಬ ವ್ಯಕ್ತಿ ತುಂಬಾ ಹೆಲ್ಪ್ ಮಾಡಿದ್ದರು. ಅದೇ ವ್ಯಕ್ತಿಯನ್ನ ರಿಷಬ್ ಶೆಟ್ಟಿ ಈಗ (Dubai) ದುಬೈನಲ್ಲಿ ಮೀಟ್ ಆಗಿದ್ದಾರೆ. ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ. ಅದರ ವಿವರ ಇಲ್ಲಿದೆ ಓದಿ.


ಕಾಂತಾರ ಸಿನಿಮಾದ ಗುಂಗು ಮತ್ತು ಹಳೆ ರಂಗು


ಕಾಂತಾರ ರಂಗು ಎಂದು ಮುಗಿಯೋದಿಲ್ಲ. ಗುಂಗು ಎಂದೂ ಹೋಗೋದಿಲ್ಲ. ಕನ್ನಡದ ಕಾಂತಾರ ಸೃಷ್ಟಿಸಿದ ಇತಿಹಾಸ ಇದಾಗಿದೆ. ಕಾಂತಾರ ಸಿನಿಮಾ ಪ್ರೇಮಿಗಳು ದೇಶ ಮತ್ತು ವಿದೇಶದಲ್ಲೂ ಹುಟ್ಟಿಕೊಂಡಿದ್ದಾರೆ.


ಅಷ್ಟು ಪರಿಣಾಮ ಬೀರಿದೆ ಕಾಂತಾರ ಸಿನಿಮಾ. ಕಾಂತಾರ ಸಿನಿಮಾ ಗೆದ್ದಿದೆ. ಜನರ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನ ಬೇರೆ ಲೆವಲ್​​ಗೆ ತೆಗೆದುಕೊಂಡಿದೆ. ಸೂಪರ್ ಸ್ಟಾರ್ ಅನ್ನಾಗಿಯೂ ಮಾಡಿಸಿದೆ.


Kannada Actor Rishab Shetty Meet His Old Friend in Dubai tour
ಮಂಗಳೂರಿನಿಂದ ದುಬೈಗೆ ಹಾರಿದ RJ ಎರೋಲ್


ಸತತ ಪ್ರಚಾರ ಅಲ್ಲಿ, ಇಲ್ಲಿ ಎಲ್ಲೆಡೆ ಕಾಂತಾರದ ಕೆಲಸ


ಕಾಂತಾರ ಸಿನಿಮಾವನ್ನ ಜನ ಸ್ವೀಕರಿಸಿದರು. ಬೇರೆ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಯಿತು. ಇದರಿಂದ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡರಿಗೆ ಭಾರೀ ಕೆಲಸ ಶುರು ಆಗಿತ್ತು. ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಪ್ರಚಾರವನ್ನೂ ಮಾಡಬೇಕಿತ್ತು. ಅದೇ ಕೆಲಸದಲ್ಲಿಯೇ ರಿಷಬ್ ಬ್ಯುಸಿಯಾದರು.




ಪ್ರಚಾರದ ಬ್ಯುಸಿ ಕೆಲಸದಲ್ಲಿ ನಿರತರಾಗಿದ್ದ ರಿಷಬ್ ಶೆಟ್ಟಿ ಈಗ ಒಂದಷ್ಟು ಫ್ರಿಯಾಗಿದ್ದಾರೆ. ರಿಲ್ಯಾಕ್ಸ್ ಮೂಡ್​​ನಲ್ಲೂ ಇದ್ದಾರೆ. ಅದೇ ಖುಷಿಯಲ್ಲಿಯೇ ರಿಷಬ್ ಶೆಟ್ಟಿ ದುಬೈ ಪ್ರವಾಸ ಮಾಡುತ್ತಿದ್ದಾರೆ.


ದುಬೈ ಆ ಹಳೆ ಗೆಳೆಯನ ಮೀಟ್ ಆದ ರಿಷಬ್ ಶೆಟ್ಟಿ


ರಿಷಬ್ ಶೆಟ್ಟಿ ಸದ್ಯ ದುಬೈ ಪ್ರವಾಸದಲ್ಲಿಯೇ ಇದ್ದಾರೆ. ಫ್ಯಾಮಿಲಿ ಜೊತೆಗೆ ಇಲ್ಲಿಗೆ ಬಂದಿರೋ ರಿಷಬ್ ಶೆಟ್ಟಿ ತಮ್ಮ ಹಳೆ ಗೆಳೆಯನನ್ನ ಇಲ್ಲಿ ಮೀಟ್ ಆಗಿದ್ದಾರೆ. ಹೌದು, ಆ ಗೆಳೆಯ ಬೇರೆ ಯಾರೋ ಅಲ್ಲ. ಒಂದು ಕಾಲದಲ್ಲಿ ರಿಷಬ್​​ ಶೆಟ್ಟಿಗೆ ತುಂಬಾ ಹೆಲ್ಪ್ ಮಾಡಿದೆ ಅದೇ RJ ಎರೋಲ್, ಅವರು ಇಲ್ಲಿದ್ದಾರೆ ನೋಡಿ.


ಮಂಗಳೂರಿನಿಂದ ದುಬೈಗೆ ಹಾರಿದ RJ ಎರೋಲ್


RJ ಎರೋಲ್ ಸದ್ಯ ದುಬೈನ ಎಫ್​.​ಎಂ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಯೇ ಎರೋಲ್ ಮತ್ತು ರಿಷಬ್ ಶೆಟ್ಟಿ ಮೀಟ್ ಆಗಿದ್ದಾರೆ. ಹಳೆ ದಿನಗಳನ್ನ ತಮಾಷೆಯಾಗಿಯೇ ನೆನಪಿಸಿಕೊಂಡಿದ್ದಾರೆ.



ಸ್ವತಃ ರಿಷಬ್ ಶೆಟ್ಟಿ ತಮ್ಮ ಈ ವಿಶೇಷ ಗೆಳೆಯನ ಬಗ್ಗೆ ಹೇಳಿಕೊಂಡರು. ಶೋ ಸಿಗದೇ ಇದ್ದಾಗ, ಇದೇ ಎರೋಲ್ ಸಂಬಂಧಿಸಿದವ್ರ ಜೊತೆಗೆ ಮಾತನಾಡಿ ನನ್ನ ಚಿತ್ರಕ್ಕೆ ಒಂದು ಶೋ ಕೊಡಿಸಿದ್ದರು. ನಾನು ಇವತ್ತು ಇವರಿಗೆ ಒಂದು ಶೋ ಕೊಡ್ತಿದ್ದೀನಿ ಎಂದು ತಮಾಷೆಯಾಗಿಯೆ ಹೇಳಿ ನಕ್ಕು ಬಿಟ್ಟರು.


ಹೀಗೆ ಇಬ್ಬರು ತಮ್ಮ ಹಳೆ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದ 400 ಕೋಟಿ ಕಲೆಕ್ಷನ್ ಬಗ್ಗೆನೂ ಎರೋಲ್ ಹೇಳಿದ್ರು. ಆಗ ರಿಷಬ್ ಲೆಕ್ಕ ಇಟ್ಟಿದ್ದೀರಾ? ಅಂತ ಹೇಳಿ ನಕ್ಕು ಬಿಟ್ಟರು.


ಇದನ್ನೂ ಓದಿ: Rakshit Shetty-Rishab Shetty: ರಕ್ಷಿತ್​​ಗೆ ರಿಷಬ್ ಕೈಕೊಡೋಕೆ ಕಾರಣ ಇದೇನಾ? ಅಭಿಮಾನಿಗಳಿಗೆ ಶಾಕ್!


ಹೀಗೆ ಒಬ್ಬರಿಗೊಬ್ಬರು ಮಾತನಾಡುತ್ತಾ ಆ ದಿನಗಳನ್ನ ಮೆಲುಕು ಹಾಕಿದರು. ರಿಷಬ್ ಶೆಟ್ಟಿ ಮತ್ತು ಎರೋಲ್ ಅವರ ಈ ಮಾತಿನ ಪುಟ್ಟ ವೀಡಿಯೋ ಈಗ ವೈರಲ್ ಆಗಿದೆ. ಎಲ್ಲರ ಗಮನವನ್ನೂ ಸೆಳೆಯುತ್ತಲೇ ಇದೆ.

First published: