ಕಾಂತಾರ ಸಿನಿಮಾದ ನಟ-ನಿರ್ದೇಶಕ (Rishab Shetty) ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು? ಈ ಒಂದು ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಆ ಚಿತ್ರದ ಈಗ ರಿಲೀಸ್ಗೂ (Director Rishab Shetty Movie) ರೆಡಿ ಇದೆ. ಆ ಚಿತ್ರದಲ್ಲಿ ರಿಷಬ್ ಶೆಟ್ರಿಗೆ ಲೂಸಿಯಾ ಪವನ್ ಕೂಡ ಸಾಥ್ ಕೊಟ್ಟಿದ್ದಾರೆ. ಇವರ ಈ ಸಿನಿಮಾದ ಒಂದು (Director Pawan Kumar) ಹಾಡು ಭರ್ಜರಿಯಾಗಿದೆ. ಈಗಾಗಲೇ ಅದು ಭಾರೀ ಸೌಂಡ್ ಕೂಡ ಮಾಡುತ್ತಿದೆ. ಇದೇ ಒಂದು ಹಾಡಲ್ಲಿಯೇ (Newcomer Kannada Cinema) ರಿಷಬ್ ಶೆಟ್ರು ಮತ್ತು ಪವನ್ ಕುಮಾರ್ ಅಭಿನಯಿಸಿದ್ದಾರೆ. ಈ ಚಿತ್ರ ಯಾವುದು? ಯಾರ್ ಈ ಚಿತ್ರದ ಡೈರೆಕ್ಟರ್? ಇದರ ಇತರ ವಿಷಯಗಳು ಇಲ್ಲಿವೆ ಓದಿ.
ಕಾಂತಾರ ರಿಷಬ್ ಶೆಟ್ರು ಅಭಿನಯದ ಆ ಚಿತ್ರ ಯಾವುದು?
ಕನ್ನಡದ ಕಾಂತಾರ ಚಿತ್ರದ ಡೈರೆಕ್ಟರ್ ರಿಷಬ್ ಶೆಟ್ರ ಅಭಿನಯದ ಈ ಚಿತ್ರ ಈಗ ರಿಲೀಸ್ಗೂ ರೆಡಿ ಇದೆ. ಚಿತ್ರದ ಒಂದು ಹಾಡು ಹೆಚ್ಚು ಸೆಳೆಯುತ್ತಿದೆ. ಇದರಲ್ಲಿಯೇ ರಿಷಬ್ ಶೆಟ್ರು ಅಭಿನಯಸಿದ್ದಾರೆ. ಜೊತೆಗೆ ಲೂಸಿಯಾ ಪವನ್ ಕೂಡ ಈ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಲೂಸಿಯಾ ಪವನ್ ಮತ್ತು ರಿಷಬ್ ಅಭಿನಯದ ಈ ಚಿತ್ರ ವಿಶೇಷವಾಗಿಯೇ ಇದೆ. ಇದರಲ್ಲಿ ಒಂದು ಹಾಸ್ಟೆಲ್ ಕೂಡ ಇದೆ. ಆ ಹಾಸ್ಟೆಲ್ಗೆ ಹುಡುಗರು ಕೂಡ ಬೇಕಾಗಿದ್ದಾರೆ. ಹಾಗೆ ಈ ಹಾಸ್ಟೆಲ್ ಹುಡುಗರ ಜೊತೆಗೆ ರಿಷಬ್ ಮತ್ತು ಲೂಸಿಯಾ ಪವನ್ ಅಭಿನಯಿಸಿದ್ದಾರೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ರಿಷಬ್ ಶೆಟ್ಟಿ
ಕಂಪ್ಲೀಟ್ ಹೊಸಬರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿಯೇ ಕಾಣಿಸಿಕೊಂಡಿರೋದು ವಿಶೇಷವೇ ಆಗಿದೆ.
ಈ ಚಿತ್ರದಲ್ಲಿ ಲೂಸಿಯಾ ಪವನ್ ಕೂಡ ಅಭಿನಯಿಸಿರೋದು ವಿಶೇಷವೇ ಆಗಿದೆ. ಸಿನಿಮಾದ ಹೊಸಬರ ಜೊತೆಗೇನೆ ಈ ಸ್ಟಾರ್ ಡೈರೆಕ್ಟರ್ಸ್ ನಟಿಸಿರೋದು ಸ್ಪೆಷಲ್ ಕೂಡ ಆಗಿದೆ.
ಪವನ್-ರಿಷಬ್ ಎಣ್ಣೆ ಏಟಿನ ಸಖತ್ ತೂರಾಟ!
ಈ ಚಿತ್ರದ ಒಂದು ಪ್ರೋಟೆಸ್ಟ್ ಸಾಂಗ್ ರಿಲೀಸ್ ಆಗಿದೆ. ಇದರಲ್ಲಿಯೇ ರಿಷಬ್ ಶೆಟ್ಟಿ ಮತ್ತು ಲೂಸಿಯಾ ಪವನ್ ಒಂದೇ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತದ ಸಿನಿಮಾ
ಆದರೆ ಎಣ್ಣೆ ಏಟಿನಲ್ಲಿಯೇ ತೂರಾಡುವ ದೃಶ್ಯವನ್ನೆ ಅಭಿನಯಸಿ ತೋರಿದ್ದಾರೆ. ಹಾಗೇ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ. ಒಳ್ಳೆ ಹಾಡುಗಳೇ ಇಲ್ಲೂ ಮೂಡಿ ಬಂದಿರೋದು ಕೂಡ ಸ್ಪೆಷಲ್ ಅಂತಲೇ ಹೇಳಬಹುದು.
ಕನ್ನಡದ ಸ್ಟಾರ್ ನಟರೆಲ್ಲ ಈ ಒಂದು ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಸಿನಿಮಾ ಪ್ರಚಾರದಲ್ಲೂ ಸಪೋರ್ಟ್ ಮಾಡಿದ್ದಾರೆ. ಅದೇ ರೀತಿ ನಟಿ ರಮ್ಯಾ ಕೂಡ ಈ ಒಂದು ಚಿತ್ರದ ಪ್ರಮೊಷನ್ ವೀಡಿಯೋದಲ್ಲೂ ಅಭಿನಯಿಸಿದ್ದಾರೆ.
ರಿಷಬ್ ಶೆಟ್ಟಿ ಮತ್ತು ಡೈರೆಕ್ಟರ್ ಪವನ್ ಕುಮಾರ್, ಈ ಚಿತ್ರದಲ್ಲಿ ಗೆಸ್ಟ್ ರೋಲ್ ಅನ್ನೆ ಮಾಡಿದ್ದಾರೆ. ನಿತಿನ್ ಕೃಷ್ಣಮೂರ್ತಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಚಿತ್ರ ಭರ್ಜರಿ ಸೌಂಡ್ ಅಂತಲೂ ಮಾಡ್ತಾನೇ ಇದೆ.
ಇದನ್ನೂ ಓದಿ: Shiva Rajkumar: ಶ್ರೀ ಸಿದ್ಧಾರೂಢರನ್ನು ಶಿವಣ್ಣ ಮತ್ತೆ ನೆನಪಿಸಿಕೊಂಡಿದ್ದೇಕೆ? ಹುಬ್ಬಳ್ಳಿಗೆ ಬಂದಿದ್ದ ಜೋಗಿ ಮಾಡಿದ್ದೇನು?
ಚಿತ್ರವನ್ನ ಶೀಘ್ರದಲ್ಲಿಯೇ ರಿಲೀಸ್ ಮಾಡೋ ಪ್ಲಾನ್ ಕೂಡ ಇದೆ. ಮುಂಬರೋ ಬೇಸಿಗೆಯಲ್ಲಿಯೇ ಈ ಚಿತ್ರವನ್ನ ರಿಲೀಸ್ ಮಾಡೋ ಪ್ಲಾನ್ ಕೂಡ ಇದೆ. ಇನ್ನುಳಿದಂತೆ ಈಗ ವಿಭಿನ್ನ ಕ್ರಿಯೇಟಿವ್ ಪ್ರಚಾರದ ಮೂಲಕ ಸಿನಿಮಾ ಒಂದು ನಿರೀಕ್ಷೆಯನ್ನೂ ಹುಟ್ಟುಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ