ಕನ್ನಡ ಚಿತ್ರರಂಗದಲ್ಲಿ ಅದ್ಭುತ (Bandhana Film Secrets) ಸಿನಿಮಾಗಳು ಬಂದಿವೆ. ಆ ಸಿನಿಮಾಗಳಲ್ಲಿ ಕ್ಲಾಸಿಕ್ ಚಿತ್ರಗಳೂ ಇವೆ. ಆ ಸಾಲಿನಲ್ಲಿ ಬಂಧನ ಸೂಪರ್ ಹಿಟ್ ಸಿನಿಮಾನೇ ಆಗಿದೆ. ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಈ ಚಿತ್ರ (Vishnuvardhan Bandhan Film Secret) ಕನ್ನಡದ ಸೂಪರ್ ಹಿಟ್ ಸಿನಿಮಾನೇ ಆಗಿದೆ. ಈ ಚಿತ್ರದ ಪ್ರತಿ ಸೀನ್ ಈಗಲೂ ತಾಜಾತನವನ್ನ (Ambareesh First Choice for Bandhana Film) ಹೊಮ್ಮಿಸುತ್ತದೆ. ಅಷ್ಟು ವಿಶೇಷವಾದ ಕನ್ನಡದ ಬಂಧನ ಸಿನಿಮಾದ ಹಿಂದೆನೂ ಒಂದು ಕಥೆ ಇದೆ. ಈ ಕಥೆಯನ್ನ ರೆಬಲ್ ಸ್ಟಾರ್ ಅಂಬರೀಶ್ ಆಗಾಗ ನೆನಪಿಸಿಕೊಳ್ಳುತ್ತಿದ್ದರು. ರೆಬಲ್ ಸ್ಟಾರ್ (Rebel Star Ambareesh) ಅಂಬರೀಶ್ ಅವರಿಗೂ ಬಂಧನ ಚಿತ್ರಕ್ಕೂ ಎಲ್ಲಿಂದ ಎಲ್ಲಿ ಸಂಬಂಧ ಅಂತಲೇ ಅನಿಸಬಹುದು.
ಆದರೆ ಅದಕ್ಕೆ ಇಲ್ಲಿ ಒಂದು ಅದ್ಭುತ ಕಥೆ ಇದೆ. ಅದು ಇಲ್ಲಿದೆ ಓದಿ.
ಬಂಧನ ಕ್ಲಾಸಿಕ್ ಕನ್ನಡದ ಬಂಧನ
ಸಾಹಸ ಸಿಂಹ ವಿಷ್ಣುವರ್ಧನ್ ಚಿತ್ರ ಜೀವನದಲ್ಲಿ ಬಂಧನ ವಿಶೇಷ ಸಿನಿಮಾ. 1984 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ವಿಷ್ಣುವರ್ಧನ್ ಚಿತ್ರ ಪಯಣದಲ್ಲಿ ಮೈಲಿಗಲ್ಲು ಸಿನಿಮಾನೇ ಇದಾಗಿದೆ.
ವಿಷ್ಣುವರ್ಧನ್ ತಮ್ಮ ಈ ಚಿತ್ರದಲ್ಲಿ ಅದ್ಭುತವಾಗಿಯೇ ಅಭಿನಯಿಸಿದ್ದರು. ಪ್ರೇಮ ನಿವೇದನೆ ಸೀನ್ ಅಂತ ಈಗಲೂ ಈಗಿನ ಜನರಿಗೂ ಬಲು ಇಷ್ಟ ಆಗುತ್ತದೆ. ಅಂತಹ ಈ ಚಿತ್ರದ ಹಾಡುಗಳೂ ಕೂಡ ಸೂಪರ್ ಹಿಟ್ ಆಗಿದ್ದವು.
ಬಂಧನ ಚಿತ್ರದ ಮೊದಲ ಆಯ್ಕೆ ವಿಷ್ಣು ಅಲ್ವೇ ಅಲ್ಲ
ಹೌದು, ಈ ಮಾತು ಸತ್ಯವೇ. ವಿಷ್ಣುವರ್ಧನ್ ಅವರನ್ನ ಈ ಚಿತ್ರದ ಕಥೆ ಆ ಬಳಿಕ ಹುಡುಕಿಕೊಂಡು ಬಂದಿದೆ. ಅಷ್ಟೇ, ಆದರೆ ಬಂಧನ ಚಿತ್ರದ ನಾಯಕನ ಪಾತ್ರಕ್ಕೆ ಮೊದಲ ಆಯ್ಕೆ ಬೇರೆ ಆಗಿತ್ತು. ಹಾಗೆ ಆಯ್ಕೆ ಆಗಿದ್ದ ಹೀರೋ ಬೇರೆ ಯಾರೋ ಅಲ್ಲ. ಅದು ರೆಬಲ್ ಸ್ಟಾರ್ ಅಂಬರೀಶ್.
ಬಂಧನ ಚಿತ್ರದ ಕಥೆ ರೆಬಲ್ ಸ್ಟಾರ್ ಅಂಬರೀಶ್ ಅವ್ರೇ ಮೊದಲ ಆಯ್ಕೆ ಆಗಿದ್ದರು. ಚಿತ್ರದ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಬಂಧನ ಚಿತ್ರ ಮಾಡೋಕೆ ರೆಡಿ ಆದ್ರು. ಆ ಕಥೆಯನ್ನ ಸ್ನೇಹಿತ ಮತ್ತು ಸ್ಟಾರ್ ನಟ ಅಂಬರೀಶ್ ಅವರಿಗೂ ಹೇಳಿದ್ರು. ಮುಂದೇನ್ ಆಯಿತು ಗೊತ್ತೇ? ಹೇಳ್ತಿವಿ ನೋಡಿ.
ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಅಂಬರೀಶ್ ಬಳಿ ಬಂಧನ ಕಥೆ ಹೇಳಿದ್ರು. ಆ ಬಳಿಕ ಅಂಬರೀಶ್ ಅವರಿಗೆ ಹೇಳಿಯೇ ಬಿಟ್ಟರು. ಈ ಚಿತ್ರದ ನಾಯಕ ನೀವೆ. ಈ ಸಿನಿಮಾ ನೀವೇ ಮಾಡಬೇಕು ಅಂತಲೂ ತಿಳಿಸಿದರು.
ಬಂಧನ ಚಿತ್ರದ ಆಫರ್ ಅನ್ನ ಅಂಬಿ ಯಾಕೆ ಒಪ್ಪಲಿಲ್ಲ
ರೆಬಲ್ ಸ್ಟಾರ್ ಅಂಬರೀಶ್ ಸ್ನೇಹಿತ ಬಾಬು ಅವರು ಹೇಳಿದ ಕಥೆಯನ್ನ ಕೇಳಿದ್ರು. ಆದರೆ ಅವರಿಗೆ ಅದ್ಯಾಕೋ ಏನೋ, ಈ ಪಾತ್ರಕ್ಕೆ ತಾವು ಸೂಟೇಬಲ್ ಅಲ್ವೇ ಅಲ್ಲ ಅನಿಸಿಬಿಡ್ತು. ಅದನ್ನ ಗೆಳೆಯ ಬಾಬು ಅವರಿಗೂ ಹೇಳಿದರು.
ಇಂತಹ ಸಾಫ್ಟ್ ಕ್ಯಾರೆಕ್ಟರ್ಗೆ ನಾನು ಸೂಟೇಬಲ್ ಅಲ್ವೇ ಅಲ್ಲ. ನಾನು ಈ ಚಿತ್ರ ಮಾಡೋದಿಲ್ಲ. ವಿಷ್ಣುವರ್ಧನ್ ಇದ್ದಾರೆ. ಅವರಿಂದಲೇ ಈ ಒಂದು ಸಿನಿಮಾ ಮಾಡಿಸಿಬಿಡಿ ಅಂತಲೂ ಸಲಹೆ ಕೊಟ್ಟರು. ಮುಂದೆ ಆಗಿದ್ದು ಇತಿಹಾಸವೇ ಬಿಡಿ.
ವಿಷ್ಣುವರ್ಧನ್ ಬಂಧನ ಕಥೆ ಕೇಳಿ ಓಕೆ ಅಂದೇ ಬಿಟ್ಟರು
ರೆಬಲ್ ಸ್ಟಾರ್ ಸಲಹೆ ಮೇರೆ ಬಂಧನ ಚಿತ್ರದ ಕಥೆಯನ್ನ ವಿಷ್ಣುವರ್ಧನ್ ಅವರಿಗೆ ಡೈರೆಕ್ಟರ್ ಬಾಬು ಹೇಳಿದರು. ಕಥೆ ಕೇಳಿ ಇಷ್ಟಪಟ್ಟ ವಿಷ್ಣುವರ್ಧನ್ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟರು. ಹಾಗೆ ಬಂಧನ ಚಿತ್ರದ ನಾಯಕರಾಗಿ ವಿಷ್ಣು ಆಯ್ಕೆ ಆದರು.
ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅಭಿನಯ ಅದ್ಭುತವಾಗಿಯೇ ಇತ್ತು. ಇಡೀ ಕಥೆ ವಿಷ್ಣುವರ್ಧನ್ ಅವರಿಗೆ ಸೂಕ್ತ ಅನ್ನೋಮಟ್ಟಿಗೆ ವಿಷ್ಣುಜೀ ಅಭಿನಯಿಸಿದ್ದರು. ಬಂಧನ ಸಿನಿಮಾದ ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯ ಕಂಡ ಜನ ವಾರೇ ವ್ಹಾ ಅಂದು ಬಿಟ್ಟರು.
ಇದನ್ನೂ ಓದಿ:Anupam Kher: ಈ ವಿಷಯದಲ್ಲಿ ಅನುಪಮ್ ಖೇರ್ ನಿಜಕ್ಕೂ ಗ್ರೇಟ್ ಅಲ್ಲವಾ?
ಕನ್ನಡದ ಬಂಧನ ಹೀಗೆ ಎಲ್ಲರ ಮನದಲ್ಲಿ ಉಳಿದು ಬಿಟ್ಟಿದೆ. ಬಂಧನ ಚಿತ್ರವನ್ನ ರೆಬಲ್ ಸ್ಟಾರ್ ಅಂಬರೀಶ್ ಮಾಡಿದ್ದರೇ ಹೇಗಿರ್ತಿತ್ತೋ ಏನೋ ಗೊತ್ತಿಲ್ಲ. ಆದರೆ ಬಂಧನ ಅಂದ್ರೆ ಅದು ವಿಷ್ಣುವರ್ಧನ್ ಅನ್ನೋ ಮಟ್ಟಿಗೆ ಸಿನಿಮಾ ಈಗಲೂ ನಮ್ಮನ್ನ ಕಾಡುತ್ತದೆ.
ಹಳೆ ಕಥೆಗಳಲ್ಲಿ ಸತ್ವ ಇರ್ತಾಯಿತ್ತು. ಅಂತಹ ಕಥೆಗಳನ್ನ ಅಭಿನಯಿಸಿದ್ದ ಕಲಾವಿದರ ಸುತ್ತವು ಇಂತಹ ಅನೇಕ ಕಥೆಗಳು ಇವೆ. ಆ ಸ್ಪೂರ್ತಿದಾಯಕ ಕಥೆಗಳಲ್ಲಿ ಇದೂ ಒಂದು ಅಂತಲೇ ಹೇಳಬಹುದು ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ