• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Rebel Star Ambareesh: ರೆಬಲ್ ಸ್ಟಾರ್ ಅಂಬಿ ಕಂಡು "ನಮಸ್ಕಾರ ಅಂಬರೀಶ್" ಎಂದಿದ್ರು ರಾಜ್​ಕುಮಾರ್? ಇಲ್ಲಿದೆ ಅಸಲಿ ಕಾರಣ

Rebel Star Ambareesh: ರೆಬಲ್ ಸ್ಟಾರ್ ಅಂಬಿ ಕಂಡು "ನಮಸ್ಕಾರ ಅಂಬರೀಶ್" ಎಂದಿದ್ರು ರಾಜ್​ಕುಮಾರ್? ಇಲ್ಲಿದೆ ಅಸಲಿ ಕಾರಣ

ದೇವರ ಕಣ್ಣು ಚಿತ್ರದ ವಿಲನ್ ಪಾತ್ರಕ್ಕೆ ಅಂಬಿಗೆ ಪ್ರಶಸ್ತಿ!

ದೇವರ ಕಣ್ಣು ಚಿತ್ರದ ವಿಲನ್ ಪಾತ್ರಕ್ಕೆ ಅಂಬಿಗೆ ಪ್ರಶಸ್ತಿ!

ಲಾವಣ್ಯ ಹೆಸರಿನ ಪತ್ರಿಕೆ ಅಂದು ಅತ್ಯುತ್ತಮ ಖಳನಟ ಪ್ರಶಸ್ತಿ ಕೊಟ್ಟಿತ್ತು. ಆ ಪ್ರಶಸ್ತಿ ಸಮಾರಂಭ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಆಯೋಜನೆ ಆಗಿತ್ತು. ಅದೇ ಲಾವಣ್ಯ ಪತ್ರಿಕೆ ರಾಜ್ ಅವರಿಗೂ ಪ್ರಶಸ್ತಿ ಕೊಡ್ತಾ ಇತ್ತು. ಹಾಗಾಗಿ ರಾಜ್ ಅವರೂ ಈ ಒಂದು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದಿದ್ದರು.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ರೆಬಲ್ ಸ್ಟಾರ್ ಅಂಬರೀಶ್ ಎಲ್ಲರ ಪ್ರಿಯವಾದ (Actor Rebel Star Ambareesh) ನಾಯಕ ನಟ ಆಗಿದ್ದರು. ಅಂಬಿ ಇದ್ದಲ್ಲಿ ಬೇಸರ ಮತ್ತು ಗದ್ದಲ ಇರ್ತಾನೇ ಇರಲಿಲ್ಲ. ಅಲ್ಲಿ ಆಗ ಇರ್ತಾ ಇದ್ದದ್ದು ಕೇವಲ (Ambareesh Untold Story) ನಗು ಮತ್ತು ನಗು. ಆದರೆ ಅಂಬರೀಶ್ ಚಿತ್ರ ಜೀವನದಲ್ಲಿ ವಿಲನ್ ಪಾತ್ರದ ಮೂಲಕ ಬಂದರು. ಅದು ನಾಗರಹಾವು ಅಂತ ಬಹುತೇಕರಿಗೆ ಗೊತ್ತೇ ಇದೆ. ಅದಾದ್ಮೇಲೆ ರೆಬಲ್ ಸ್ಟಾರ್ ಅಂಬರೀಶ್ ಅವರು ಇನ್ನೂ ಒಂದು ಸಿನಿಮಾದಲ್ಲೂ ವಿಲನ್ ಪಾತ್ರ ಮಾಡಿದ್ದರು. ಆ ಚಿತ್ರದ (Sandalwood Rebel Star Ambareesh) ಅಭಿನಯಕ್ಕೆ ಅಂಬಿಗೆ ಪ್ರಶಸ್ತಿ ಕೂಡ ಬಂತು. ಆಗಲೇ ನೋಡಿ ಒಂದು ಘಟನೆ ನಡೆದು ಹೋಯಿತು.


ಅಂಬಿ ಕಂಡ ಕೂಡಲೇ ವೇದಿಕೆ ಮೇಲಿದ್ದ ರಾಜ್‌ ಕುಮಾರ್, ಕೆಳಗೆ ಬಂದು (Rebel Star Ambareesh) ಅಂಬರೀಶ್ ನಮಸ್ಕಾರ ಹೇಗಿದ್ದೀರಿ ಅಂತ ಕೇಳಿಯೇ ಬಿಡ್ತಾರೆ. ಆದರೆ ಇದಾದ ಮೇಲೆ ಮುಂದೆ ಆಗಿದ್ದು ಬೇರೆನೆ. ಅದೇನೂ ಅನ್ನೋದು ಇಲ್ಲಿದೆ ಓದಿ.


Kannada Actor Rebel Star Ambareesh Untold Story
ಯಾವ ಚಿತ್ರದ ವಿಲನ್ ಪಾತ್ರಕ್ಕೆ ಅಂಬಿಗೆ ಪ್ರಶಸ್ತಿ ಬಂದಿತ್ತು?


ಯಾವ ಚಿತ್ರದ ವಿಲನ್ ಪಾತ್ರಕ್ಕೆ ಅಂಬಿಗೆ ಪ್ರಶಸ್ತಿ ಬಂದಿತ್ತು?


ಅಂಬರೀಶ್ ಅವರು ನಾಗರಹಾವು ಚಿತ್ರದಲ್ಲಿ ವಿಲನ್ ಆಗಿ ಬಂದ್ರು. ಈ ಚಿತ್ರ ಆದ್ಮೇಲೆ ಮಹದೇಶ್ವರ ಪೂಜಾಫಲ ಚಿತ್ರ ಮಾಡಿದರು. ಈ ಚಿತ್ರದಲ್ಲಿ ಅಂಬರೀಶ್ ವಿಲನ್ ಪಾತ್ರ ಮಾಡಿದರು. ಈ ಚಿತ್ರದ ಬಳಿಕ ರಾಜೇಂದ್ರ ಸಿಂಗ್ ಬಾಬು ಅವರು ನಾಗರಹೊಳೆ ಚಿತ್ರ ಮಾಡಿದರು.
ಮಕ್ಕಳ ಚಿತ್ರದಲ್ಲಿ ಅಂಬರೀಶ್ ಸೂಪರ್ ರೋಲ್


ಈ ಚಿತ್ರದಲ್ಲಿ ಅಂಬರೀಶ್ ಅವರಿಗೆ ಒಂದು ಒಳ್ಳೆ ಪಾತ್ರ ಇತ್ತು. ಹಾಗಾಗಿಯೇ ಅಂಬಿಯನ್ನ ಈ ಪಾತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ಒಪ್ಪಿಸಿದ್ದರು. ಆಗ ಅಂಬಿ ಒಂದು ಮಾತು ಹೇಳಿದರು. ಪಾತ್ರ ಚೆನ್ನಾಗಿ ಬರಬೇಕು. ಇದಕ್ಕೆ ಇರೋ ಒಂದು ಹಾಡಿಗೆ ಜಿಮ್ಮಿ ಬಳಸಿ ಮೊದಲ ದೃಶ್ಯ ತೆಗೆಯಬೇಕು ಅಂತ ಹೇಳಿದ್ದರು.


ಅಂಬಿ ಈ ಒಂದು ಬೇಡಿಕೆಯನ್ನ ಅಷ್ಟೇ ಪ್ರೀತಿಯಿಂದಲೇ ಬಾಬು ಮಾಡಿದ್ದರು. ಆ ಪಾತ್ರಕ್ಕೆ ಇದ್ದ ಹಾಡು ಯಾವುದು ಗೊತ್ತೇ? ಇಲ್ಲೆ ಸ್ವರ್ಗ ಇಲ್ಲೆ ನರಕ ಅನ್ನುವ ಹಾಡು ಅದಾಗಿತ್ತು. ನಾಗರಹೊಳೆ ಸಿನಿಮಾದಲ್ಲಿ ಈ ಹಾಡು ತುಂಬಾ ಚೆನ್ನಾಗಿಯೇ ಬಂದಿತ್ತು. ಅಂಬಿ ಎಲ್ಲೇ ಹೋದ್ರೂ ಈ ಹಾಡಿನ ಬಗ್ಗೆ ಮಾತು ಇರ್ತಾಯಿತ್ತು. ಹಾಡಲು ಬೇಡಿಕೆ ಕೂಡ ಇರ್ತಿತ್ತು.


ನಾಗರಹೊಳೆ ಚಿತ್ರದಲ್ಲಿ ಅಂಬಿ ಸ್ಪೆಷಲ್ ರೋಲ್-ಸ್ಪೆಷಲ್ ಹಾಡು!


ಮಕ್ಕಳ ನಾಗರಹೊಳೆ ಚಿತ್ರ ಬಳಿಕ ಅಂಬಿ ಇನ್ನೂ ಒಂದು ಚಿತ್ರ ಒಪ್ಪಿದರು. ಈ ಚಿತ್ರಕ್ಕೆ ದೇವರ ಕಣ್ಣು ಅಂತ ಹೆಸರಿತ್ತು. ಈ ಚಿತ್ರದಲ್ಲೂ ಅಂಬರೀಶ್ ಅವರು ವಿಲನ್ ಪಾತ್ರವನ್ನ ಮಾಡಿದ್ದರು. ಈ ಪಾತ್ರಕ್ಕೇನೆ ಆಗ ಪ್ರಶಸ್ತಿ ಕೂಡ ಬಂದಿತ್ತು.


ಹೌದು, ಲಾವಣ್ಯ ಹೆಸರಿನ ಪತ್ರಿಕೆ ಅಂದು ಅತ್ಯುತ್ತಮ ಖಳನಟ ಪ್ರಶಸ್ತಿ ಕೊಟ್ಟಿತ್ತು. ಆ ಪ್ರಶಸ್ತಿ ಸಮಾರಂಭ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಆಯೋಜನೆ ಆಗಿತ್ತು. ಅದೇ ಲಾವಣ್ಯ ಪತ್ರಿಕೆ ರಾಜ್ ಅವರಿಗೂ ಪ್ರಶಸ್ತಿ ಕೊಡ್ತಾ ಇತ್ತು. ಹಾಗಾಗಿ ರಾಜ್ ಅವರೂ ಈ ಒಂದು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಂದಿದ್ದರು.


ದೇವರ ಕಣ್ಣು ಚಿತ್ರದ ವಿಲನ್ ಪಾತ್ರಕ್ಕೆ ಅಂಬಿಗೆ ಪ್ರಶಸ್ತಿ


ಅಂಬರೀಶ್ ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಪ್ರಶಸ್ತಿ ಸ್ವೀಕರಿಸಲು ಮೈಸೂರಿಗೆ ಹೋಗಿ ಅಮ್ಮನನ್ನ ಕರೆದುಕೊಂಡು ಬಂದಿದ್ದರು. ಆಗ ವೇದಿಕೆ ಮೇಲೆ ರಾಜ್‌ಕುಮಾರ್ ಇದ್ದರು. ಕೆಳಗಡೆ ಚೇರ್ ಮೇಲೆ ಅಮ್ಮ ಪದ್ಮಮ್ಮ ಜೊತೆಗೆ ಅಂಬರೀಶ್ ಕುಳಿತಿದ್ದರು. ಆಗಲೇ ಪದ್ಮಮ್ಮನವರು ಅಂಬಿಗೆ ಹೇಳಿದರು. ಹೋಗೋ ರಾಜ್‌ ಕುಮಾರ್ ಅಲ್ಲಿ ಕುಳಿತಿದ್ದಾರೆ. ಅವರನ್ನ ಹೋಗಿ ಮಾತನಾಡಿಸು. ನಮಸ್ಕಾರ ಅಂತ ಹೇಳು ಹೋಗು ಅಂತ ದುಂಬಾಲು ಬಿದ್ದರು.


Kannada Actor Rebel Star Ambareesh Untold Story
"ನಮಸ್ಕಾರ ಅಂಬರೀಶ್" ಅಂತ ರಾಜ್ ಹೇಳಿದ್ಯಾಕೆ?


ಆದರೆ ಅಂಬರೀಶ್ ಅಮ್ಮನ ಮಾತನ್ನ ತಳ್ಳಿ ಹಾಕಿದರು. ಆ ಕೂಡಲೇ ಅಂಬರೀಶ್ ಅವರನ್ನ ಕಂಡಿದ್ದ ರಾಜ್‌ಕುಮಾರ್ ಅವರು ಹೇಗಿದ್ದೀರಾ ಅಂಬರೀಶ್ ನಮಸ್ಕಾರ ಅಂದೇ ಬಿಟ್ಟರು. ಇದರಿಂದ ಅಂಬರೀಶ್ ಅವರಿಗೆ ಏನ್ ಆಯ್ತೋ ಏನೋ, ಆದರೆ ಅಂಬರೀಶ್ ಅಮ್ಮ ಪದ್ಮಮ್ಮ ಸಿಕ್ಕಾಪಟ್ಟೆ ಬೇಜಾರಾದರು.


ಅಂಬಿ ಅಮ್ಮ ಪದ್ಮಮ್ಮನವರ ಸಿಟ್ಟಿಗೆ ಕಾರಣ ಏನು?


ಬೆಂಗೂರಿನಿಂದ ಮೈಸೂರಿಗೆ ಹೋಗೋವರೆಗೂ ಅಂಬಿಯನ್ನ ಪದ್ಮಮ್ಮನವರು ಬೈದರು. ಅವರು ದೊಡ್ಡವರು ನೀನು ಚಿಕ್ಕವನು ಅವರೇ ನಿನಗೆ ಬಂದು ನಮಸ್ಕಾರ ಹೇಳಬೇಕೇನೋ ಅಂತಲೇ ಬೈದು ಹಾಕಿದ್ದರು. ಇದರಿಂದ ಅಂಬರೀಶ್ ಬೇಸರಪಟ್ಟುಕೊಂಡಿದ್ದರು. ಯಾಕಾದ್ರೂ ಅಮ್ಮನನ್ನ ಕರೆದು ಕೊಂಡು ಹೋದ್ನೋ ಅಂತಲೂ ಅಂದುಕೊಂಡರು.


ಇದನ್ನೂ ಓದಿ:  Rocking Star Yash: ಗೆಳೆಯನ ಮದುವೆಗೆ ಸಿಂಡ್ರೇಲಾ ಜೊತೆಗೆ ಬಂದ ರಾಕಿ ಭಾಯ್- ಸುಂದರ ಫೋಟೋಗಳು ಇಲ್ಲಿದೆ ನೋಡಿ


ಈ ಒಂದು ಘಟನೆಯನ್ನಅಂಬಿ ಆಗಾಗ ನೆನಪಿಸಿಕೊಳ್ತಿದ್ದರು. ಹಾಗೇನೆ ಮುಂದೆ ರಾಜ್‌ಕುಮಾರ್ ಅವರ ಜೊತೆಗೆ ಸಿನಿಮಾ ಮಾಡಿದರು. ರಾಜ್‌ ಅವರ ಆತ್ಮೀಯ ಕೂಡ ಆದರು. ಇದೀಗ ಈ ದಿಗ್ಗಜ ಕಲಾವಿದರು ಇಬ್ಬರೂ ಇಲ್ಲ. ಆದರೆ ಇವರ ಈ ಮಾತು ಪುಸ್ತಕಗಳಲ್ಲಿ ದಾಖಲಾಗಿ ಆ ಕಥೆಯನ್ನ ಇನ್ನೂ ಜೀವಂತವಾಗಿಟ್ಟಿವೆ.

First published: