ಅಂಬರೀಶ್ ಅವರಿಗೆ (Bikes) ಬೈಕ್ಗಳನ್ನ, ಕಾರ್ಗಳನ್ನ (Car) ಸ್ಪೀಡ್ ಆಗಿ ಓಡಿಸೋದು ಅಂದ್ರೆ ತುಂಬಾ ಇಷ್ಟ. ಆದರೆ ಅಪ್ಪ ಬೈಕ್ ಬೇಕು ಅಂದ್ರೆ ಆ ಟೈಮ್ ನಲ್ಲಿ ಬೇಡ ಅಂದಿದ್ರು. ಅದರಿಂದ ಬೇಸರಗೊಂಡಿದ್ದ ಅಂಬರೀಶ್ (Ambareesh) ಅವ್ರು ಮನೆಯಿಂದ ಹೊರಗೆ ಬಂದೇ ಬಿಟ್ರು. ಸರಿ ಮನೆಯಿಂದ ಹೊರಗೆ ಬಂದ್ರು. ಆದರೆ ಮುಂದೇನು? ಈ ಪ್ರಶ್ನೆಗೆ ಉತ್ತರ ಸಿಂಪಲ್ ಆಗಿಯೇ ಇತ್ತು. ಅಂಬರೀಶ್ ಅವರು ನೇರವಾಗಿ ಗೆಳೆಯ ರಾಜೇಂದ್ರ ಸಿಂಗ್ (Rajendra Singh Babu) ಬಾಬು ಅವರ ಮನೆಗೆ ಬಂದ್ರು. ಅಲ್ಲೊಂದು ಬ್ಯಾಚುಲರ್ ರೂಮ್ ಇತ್ತು. ಅಲ್ಲಿಯೇ ಸುಮಾರ ದಿನ ಇದ್ರು. ಹೀಗೆ ಸಾಗಿದ ಆ (Old Days) ದಿನಗಳಲ್ಲಿ ಸೂರ್ಯ ನೆತ್ತಿ ಮೇಲೆ ಬಂದ್ಮೇಲೆನೆ ಅಂಬರೀಶ್ ಅವರಿಗೆ ಬೆಳಗು ಹರಿಯುತ್ತಿತ್ತು.
ಅಂಬರೀಶ್ ಅವರಿಗೆ ಬಿರಿಯಾನಿ ಇಷ್ಟ? ಯಾಕ್ ಗೊತ್ತೇ?
ಬೈಕ್ ಆಸೆಯಿಂದಲೇ ಮನೆ ಬಿಟ್ಟು ಹೊರ ಬಂದಿದ್ದ ಅಂಬರೀಶ್ ಅವ್ರಿಗೆ ಬಿರಿಯಾನಿ ಅಂದ್ರೆ ಬಲು ಇಷ್ಟ ಆಗುತ್ತಿತ್ತು. ಅದನ್ನ ಅಷ್ಟೇ ಎಂಜಾಯ್ ಮಾಡಿಕೊಂಡೇ ಸವಿಯುತ್ತಿದ್ದರು. ಅಂಬರೀಶ್ ಅವರಿಗೆ ಅದ್ಯಾರ್ ಹೇಳಿದ್ರೋ ಏನೋ. ಮೈಸೂರಿನ ಶ್ರೀ ಹೋಟಲ್ ನಲ್ಲಿ ಒಳ್ಳೆ ಮಟನ್ ಬಿರಿಯಾನಿ ಸಿಗುತ್ತದೆ ಅಂತ.
ಮೈಸೂರಿನ ಶ್ರೀ ಹೋಟೆಲ್ ಬಿರಿಯಾನಿ ಅಂದ್ರೆ ಅಂಬಿಗೆ ಪಂಚ ಪ್ರಾಣ
ಆದರೆ ಇಲ್ಲಿ ಬೇಗ ಹೋದ್ರೆ ಮಟನ್ ಬಿರಿಯಾನಿ ಸಿಗುತ್ತಿತ್ತು. ಲೇಟ್ ಆಗಿ ಹೋದ್ರೆ ಮಟನ್ ಬಿರಿಯಾನಿ ಸಿಗ್ತಾನೇ ಇರಲಿಲ್ಲ. ಅಷ್ಟು ಫೇಮಸ್ ಆಗಿದ್ದ ಈ ಶ್ರೀ ಹೋಟಲ್ನ ಮಟನ್ ಬಿರಿಯಾನಿ ಸವಿಯೋಕೆ ಅಂತಲೇ ಒಮ್ಮೆ ಅಂಬರೀಶ್ ಅವರು ಬೇಗ ಎದ್ದು ಹೋಟೆಲ್ಗೆ ಹೋದ್ರು. ಅಷ್ಟೇ ನೋಡಿ, ಅಂದಿನಿಂದ ಅಂಬರೀಶ್ ಈ ಬಿರಿಯಾನಿಗೆ ಫಿದಾ ಆಗಿಬಿಟ್ಟರು.
ಬಿರಿಯಾನಿಗೋಸ್ಕರ ಬೇಗ ಏಳುತ್ತಿದ್ದರು ಅಂಬರೀಶ್
ಲೇಟ್ ಆಗಿಯೇ ಏಳುತ್ತಿದ್ದ ಅಂಬರೀಶ್, ಬಿರಿಯಾನಿಗೋಸ್ಕರವೇ ಬೇಗ ಎದ್ದೇಳುತ್ತಿದ್ದರು. ಮಜವಾದ ಸಂಗತಿ ಅಂದ್ರೆ, ಬಿರಿಯಾನಿ ಸಖತ್ ಆಗಿಯೇ ತಿಂದು ಬ್ಯಾಚುಲರ್ ರೂಮ್ಗೆ ಹೋಗಿ ಮಲಗಿ ಬಿಡುತ್ತಿದ್ದರು. ಹೀಗೆ ಅಂಬರೀಶ್ ಅವರ ಆರಂಭದ ಜೀವನದಲ್ಲಿ ಬಿರಿಯಾನಿ ಕೂಡ ಒಂದು ಕಥೆಯಾಗಿ ಹೋಯಿತು.
ಜಾವಾ ಬೈಕು-ಅಂಬರೀಶ್ ಸ್ಪೀಡು-ಎರಡೂ ಜೋರು!
ಅಂಬರೀಶ್ ಅವರಿಗೆ ಬೈಕ್ ಓಡಿಸೋದು ಅಂದ್ರೆ ಪ್ರಾಣ. ಅದರಲ್ಲೂ ಸ್ಪೀಡ್ ಆಗಿ ಓಡಿಸಿದ್ರೇನೆ ಖುಷಿ. ಹಾಗೆ ರಾಜೇಂದ್ರ ಸಿಂಗ್ ಬಾಬು ಅವರ ಬೈಕ್ ಓಡಿಸಿಯೇ ಬಿಟ್ಟರು. ಒಳ್ಳೆ ಕಂಡಿಷನ್ನಲ್ಲಿಯೇ ಬಾಬು ಅವರು ತಮ್ಮ ಜಾವಾ ಬೈಕ್ ಇಟ್ಟಿದ್ದರು. ಅದನ್ನ ತೆಗೆದುಕೊಂಡು ಅಂಬಿ ಹೊರಟೇ ಬಿಟ್ಟರು. ಬಾಬು ಸಹೋದರ ಸಂಗ್ರಾಮ್ ಸಿಂಗ್ ಕೂಡ ಆಗ ಅಂಬಿಗೆ ಸಾಥ್ ಕೊಟ್ಟರು.
ಬೈಕ್ ಸೈಲೆನ್ಸರ್ ತೆಗೆದು ಮೈಸೂರು ತುಂಬಾ ಓಡಿಸಿದ್ದರು ಅಂಬಿ
ಬೈಕ್ ಸೈಲೆನ್ಸರ್ ತೆಗೆದು ಇಡೀ ಮೈಸೂರಿನಲ್ಲಿ ಜಾವಾ ಬೈಕ್ ಓಡಿಸಿದ್ದರು ಅಂಬರೀಶ್. ಆಗ ರಸ್ತೆಯಲ್ಲಿ ಓಡಾಡುತ್ತಿದ್ದ ಜನ ಅಂಬಿಯನ್ನ ಮತ್ತು ಸಂಗ್ರಾಮ್ ಸಿಂಗ್ ಅವರನ್ನ ಒಮ್ಮೆ ಶಾಕ್ ಆಗಿಯೇ ನೋಡಿದ್ದರು.
ಜಾವಾ ಬೈಕ್ ಸೈಲೆನ್ಸರ್ ಅನ್ನ ಅಂಬಿ ಯಾಕ್ ತೆಗೆದಿದ್ದ್ದರು?
ಹಾಗೆ ಜಾವಾ ಬೈಕ್ ಸೈಲೆನ್ಸರ್ ತೆಗೆದಿದ್ದ ಅಂಬರೀಶ್ ಅವರು, ಅದನ್ನ ಹೇಗೆ ತಂದಿದ್ರು ಹಾಗೆ ಸುಮ್ಮನೆ ಇಟ್ಟು ಬಿಟ್ಟರು. ಇದನ್ನ ಗಮನಿಸಿದ ಬಾಬು ಅವರು ಏನೂ ಹೇಳದೇ ತಮ್ಮ ಜಾವಾ ಬೈಕ್ ಅನ್ನ ಸರಿ ಮಾಡಿಸಿಕೊಂಡಿದ್ದರು.
ಇದನ್ನೂ ಓದಿ: Bond Ravi Film Review: ರವಿ ಬಾಂಡ್ ಸಿನಿಮಾ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ರಿವ್ಯೂ!
ಬಾಬು ಬೈಕು-ಅಂಬಿ ರೈಡಿಂಗ್-ಸಖತ್ ಜಾಲಿ !
ಇದಾದ್ಮೇಲೆ ಅದೇಷ್ಟೋ ಬಾರಿ ಬಾಬು ಮತ್ತು ಅಂಬರೀಶ್ ಬೈಕ್ ಮೇಲೆ ಸಿಕ್ಕಾಪಟ್ಟೆ ಓಡಾಡಿದ್ರು. ಅಂಬರೀಶ್ ಬೈಕ್ ರೈಡ್ ಮಾಡಿದ್ರೆ, ಬಾಬು ಅವರು ಹಿಂದೆ ಕುಳಿತುಕೊಳ್ಳುತ್ತಿದ್ದರು. ಹೀಗೆ ಅಂಬರೀಶ್ ಜೀವನದಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ವಿಷಯಗಳಿವೆ. ಅವುಗಳನ್ನ ಒಂದೊಂದಾಗಿ ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಲೇ ಇರುತ್ತೇವೆ. ಓದುತ್ತಾ ಇರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ