ರಿಯಲ್ ಸ್ಟಾರ್ ಉಪೇಂದ್ರ (Real Star Uppendra) ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಜೋಡಿಯ ಒಂದು ಸಿನಿಮಾ ಕಳೆದ ವರ್ಷ ಸೆಟ್ಟೇರಿತ್ತು. ಓಂ ಪ್ರಕಾಶ್ ರಾವ್ ಈ ಚಿತ್ರವನ್ನ ಡೈರೆಕ್ಷನ್ (Director Om Prakash Rao) ಮಾಡಲು ಒಪ್ಪಿದ್ದರು. ಸಾನ್ವಿ ಶ್ರೀವಾತ್ಸವ್ ಮತ್ತು ನಿಮಿಕಾ ರತ್ನಾಕರ್ ಈ ಚಿತ್ರದಲ್ಲಿ ಅಭಿನಯಿಸೋಕೆ ಒಪ್ಪಿದ್ದರು. ಆದರೆ ಈ ಚಿತ್ರದ ಚಿತ್ರೀಕರಣ ಎಲ್ಲಿಗೆ ಬಂದಿದೆ. ಈಗ ಯಾವ ಹಂತಕ್ಕಿದೆ. ಇದೇ ವರ್ಷ 26 ರಂದು ಈ ಚಿತ್ರ ರಿಲೀಸ್ ಆಗುತ್ತದೆ ಅನ್ನೋ ಸುದ್ದಿನೂ ಇತ್ತು. ಇಷ್ಟೆಲ್ಲ ಇದ್ಮೇಲೆ ಈ ಚಿತ್ರ ಅಂದುಕೊಂಡ ಡೇಟ್ಗೆ ರಿಲೀಸ್ ಆಗುತ್ತದೆಯೇ? ಈ ಎಲ್ಲ ಪ್ರಶ್ನೆಗೆ ಇಲ್ಲೊಂದಷ್ಟು ಉತ್ತರ ಇದೆ. ಅದನ್ನ ಇಲ್ಲಿ ವಿವರವಾಗಿಯೇ ಕೊಟ್ಟಿದ್ದೇವೆ.
ಕ್ರೇಜಿ ಸ್ಟಾರ್-ರಿಯಲ್ ಸ್ಟಾರ್ ಸಿನಿಮಾ ಏನ್ ಆಯಿತು?
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಕಳೆದ ವರ್ಷ ಒಂದು ಸಿನಿಮಾ ಒಪ್ಪಿದ್ದರು. ಈ ಚಿತ್ರ ವಿಶೇಷ ಕಥೆಯನ್ನೆ ಹೊಂದಿತ್ತು. ರೋಮ್ಯಾನ್ಸ್ ಇತ್ತು, ಆ್ಯಕ್ಷನ್ ಕೂಡ ಈ ಚಿತ್ರದ ಮತ್ತೊಂದು ಎಂಟರ್ಟೈನಿಂಗ್ ಕಂಟೆಂಟ್ ಆಗಿತ್ತು.
ಡೈರೆಕ್ಟರ್ ಓಂ ಪ್ರಕಾಶ್ ರಾವ್ ಈ ಚಿತ್ರವನ್ನ ಆರಂಭಿಸಿದ್ದರು. ಅದೇ ರೀತಿ ಚಿತ್ರ ಶುರು ಕೂಡ ಆಗಿತ್ತು. ಜನವರಿ 26, 2023 ರಂದು ಈ ಸಿನಿಮಾ ರಿಲೀಸ್ ಆಗುತ್ತದೆ ಅನ್ನೋ ಮಾಹಿತಿ ಈಗಲೂ ಇದೆ.
ತ್ರಿಶೂಲಂ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಯಿತಾ?
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಸಿನಿಮಾ ಹೆಸರು ತ್ರಿಶೂಲಂ ಅಂತಲೇ ಇಡಲಾಗಿತ್ತು. ಈ ಚಿತ್ರದ ಚಿತ್ರೀಕರಣ ಕೂಡ ಆರಂಭಗೊಂಡಿತ್ತು. ಅದೇ ಚಿತ್ರದ ಒಂದು ಟೀಸರ್ ಕೂಡ ಸುಮಾರು ಹಿಂದೆ ರಿಲೀಸ್ ಆಗಿತ್ತು.
ಆದರೆ ಈ ಚಿತ್ರದ ಈಗೀನ ಸ್ಟೇಟಸ್ ಏನು? ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆಯೇ? ಈಗ ನಿಜಕ್ಕೂ ಈ ಚಿತ್ರ ಯಾವ ಹಂತಕ್ಕೆ ಬಂದಿದೆ. ಈ ಕುರಿತು ಈಗ ಮತ್ತಷ್ಟು ಮಾಹಿತಿ ಹರಿದಾಡುತ್ತಿವೆ.
- ತ್ರಿಶೂಲಂ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣ
- ಇನ್ನು ಮೂರು ದಿನದ ಪ್ಯಾಚ್ ವರ್ಕ್ ಮಾತ್ರ ಬಾಕಿ
- ತೆಲುಗು ಬಲುಪು ಕತೆ ಇಲ್ಲಿ ಸಂಪೂರ್ಣ ಬದಲು
- ರಿಯಲ್ ಸ್ಟಾರ್ ಉಪ್ಪಿ-ಕ್ರೇಜಿ ಸ್ಟಾರ್ ರವಿ ಇನ್ವಾಲ್ವ್
- ಇದೇ 2023ಕ್ಕೆ ತ್ರಿಶೂಲಂ ಸಿನಿಮಾ ರಿಲೀಸ್
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಜೋಡಿನೇ ಇಲ್ಲಿ ಪ್ರಮುಖ ಆಕರ್ಷಣೆ ಆಗಿದೆ. ಈ ಚಿತ್ರದ ಕಥೆಯನ್ನ ತುಂಬಾ ಚೆನ್ನಾಗಿಯೇ ಅರ್ಥ ಮಾಡಿಕೊಂಡ ಈ ಸ್ಟಾರ್ಸ್, ತೆಲುಗುದಿಂದ ಕನ್ನಡಕ್ಕೆ ತರುವಲ್ಲಿ ಸ್ಕ್ರಿಪ್ಟ್ ಹಂತದಲ್ಲಿ ಭಾಗಿಯಾಗಿದ್ದಾರೆ.
ಅಲ್ಲಿಗೆ ಟಾಲಿವುಡ್ನ ಈ ಸಿನಿಮಾ ಈಗ ಕಂಪ್ಲೀಟ್ ಕನ್ನಡ ಸಿನಿಮಾನೇ ಆಗಿದೆ ಅಂತಲೇ ಹೇಳಬಹುದು. ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಸಿನಿಮಾ ಮಾಡೋದ್ರಲ್ಲಿ ನಿಸ್ಸೀಮರಾಗಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ರೀಮೇಕ್ ಮಾಸ್ಟರ್ ಅಂದ್ರೆ ಯಾರೂ ಬೇಸರ ಮಾಡಿಕೊಳ್ಳೋದಿಲ್ಲ. ಹಾಗಾಗಿಯೇ ಕನ್ನಡದ ತ್ರಿಶೂಲಂ ಸಿನಿಮಾ ಸ್ಪೆಷಲ್ ಚಿತ್ರವೇ ಆದಂತಿದೆ.
ಇದನ್ನೂ ಓದಿ: Puneeth Rajkumar: ಅಪ್ಪನ ನೆನಪಲ್ಲಿ ಕೊಡಗಿನಲ್ಲಿ ಹುಣಸೆ ಗಿಡ ನೆಟ್ಟಿದ್ಯಾಕೆ ಅಪ್ಪು?
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಸಾನ್ವಿ ಶ್ರೀವಾತ್ಸವ್ ಹಾಗೂ ನಿಮಿಕಾ ರತ್ನಾಕರ್ ಅಭಿನಯಿಸಿದ್ದಾರೆ. ಸಾಧು ಕೋಕಿಲ, ಸುಧಾ ಬೆಳವಾಡಿ ಹಾಗೂ ರಂಗಾಯಣ ರಘು ಕೂಡ ಅಭಿನಯಿಸಿದ್ದಾರೆ. ಸದ್ಯಕ್ಕೆ ಈ ಚಿತ್ರದ ಬಗ್ಗೆ ಇಷ್ಟು ಮಾಹಿತಿ ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ