ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ (Kabzaa Movie) ಸಿನಿಮಾದ ಬಗ್ಗೆ ದಿನವೂ ನಿರೀಕ್ಷೆ ಜಾಸ್ತಿ ಆಗುತ್ತಲೇ ಇದೆ. ಕನ್ನಡದ ಕಬ್ಜ ದೊಡ್ಡಮಟ್ಟದಲ್ಲಿ (Real Star Uppi Movie) ರಿಲೀಸ್ ಆಗುತ್ತಿರುವುದರಿಂದ ಈ ಚಿತ್ರದ ನಿರೀಕ್ಷೆ ಈಗ ಎಲ್ಲೆಡೆ ಹೆಚ್ಚಾಗುತ್ತಿದೆ. ಮಾರ್ಚ್-3 ಮತ್ತು ಫೆಬ್ರವರಿ-4 ರಂದು ಈ ಚಿತ್ರದ ಬಿಗ್ ಇವೆಂಟ್ (Big Event Plan) ನಡೆಯುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಈಗ ಹೊರ ಬಿದ್ದಿದೆ. ಈ ಮೂಲಕ ಉಪ್ಪಿಯ ಕಬ್ಜ ಸಿನಿಮಾ ಎಲ್ಲೆಡೆ ಬೇಜಾನ್ (Kabzaa Craze) ಕ್ರೇಜ್ ಕ್ರಿಯೇಟ್ ಮಾಡುತ್ತಿದೆ. ದೊಡ್ಡ ಇವೆಂಟ್ ಮುಖಾಂತರ ಚಿತ್ರದ ಪ್ರಚಾರವನ್ನು ಕೂಡ ಪ್ಲಾನ್ ಮಾಡಲಾಗಿದೆ. ಇದರ ಒಟ್ಟು ಮಾಹಿತಿ ಇಲ್ಲಿದೆ.
ಹೈದರಾಬಾದ್ನಲ್ಲಿ ಕನ್ನಡದ ಕಬ್ಜ ಚಿತ್ರದ ಬಿಗ್ ಇವೆಂಟ್
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಹವಾ ಜೋರಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರೋ ಕನ್ನಡದ ಈ ಚಿತ್ರ ಎಲ್ಲೆಡೆ ದೊಡ್ಡ ಭರವಸೆಯನ್ನ ಕೂಡ ಮೂಡಿಸುತ್ತಿದೆ.
ದೊಡ್ಡಮಟ್ಟದಲ್ಲಿ ರಿಲೀಸ್ ಆದ ಕನ್ನಡದ ಕೆಜಿಎಫ್, ಕನ್ನಡದ ಕಾಂತಾರ, ಕನ್ನಡದ ಟ್ರಿಪಲ್ 7 ಚಾರ್ಲಿ ಹೀಗೆ ಸಾಕಷ್ಟು ಸಿನಿಮಾಗಳು ಇವೆ. ಅವುಗಳ ಲಿಸ್ಟ್ನಲ್ಲಿ ಈಗ ಉಪ್ಪಿಯ ಕಬ್ಜ ಸಿನಿಮಾ ಕೂಡ ಸೇರಲಿದೆ.
ಕನ್ನಡದ ಕಬ್ಜ ಚಿತ್ರದ ಪಕ್ಕಾ ಪ್ರಚಾರದ ಪ್ಲಾನಿಂಗ್
ಕಬ್ಜ ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇತರ ಭಾಷೆಯಲ್ಲೂ ಕನ್ನಡದ ಕಬ್ಜ ಚಿತ್ರ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಆಯಾ ಭಾಷೆಯಲ್ಲಿ ಈಗ ಚಿತ್ರದ ಪ್ರಚಾರದ ಇವೆಂಟ್ಗಳು ಪ್ಲಾನ್ ಆಗಿವೆ.
ಅದರಂತೆ ಹೈದರಾಬಾದ್ನಲ್ಲಿ ಒಂದು ಬಿಗ್ ಇವೆಂಟ್ ಪ್ಲಾನ್ ಆಗಿದೆ. ಈ ಕುರಿತು ಅಧಿಕೃತ ಮಾಹಿತಿಯನ್ನು ಕೂಡ ಆನಂದ್ ಆಡಿಯೋ ಕೊಟ್ಟಿದ್ದು, ಫೆಬ್ರವರಿ 4 ರಂದು ನಡೆಯೋ ಈ ಇವೆಂಟ್ನಲ್ಲಿ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದೆ.
ಫೆಬ್ರವರಿ-4 ರಂದು ಕಬ್ಜ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್
ಕಬ್ಜ ಚಿತ್ರದ ಟೀಸರ್ ಒಂದೇ ರಿಲೀಸ್ ಆಗಿದೆ. ಪೋಸ್ಟರ್ಗಳು ದೊಡ್ಡಮಟ್ಟದಲ್ಲಿಯೇ ವೈರಲ್ ಆಗುತ್ತಿವೆ. ಆದರೆ ಸಿನಿಮಾ ಹಾಡುಗಳು ಇನ್ನೂ ರಿಲೀಸ್ ಆಗಿಲ್ಲ. ಆದರೆ ಈಗ ಆಡಿಯೋ ಕಂಪೆನಿ ಈ ಹಾಡುಗಳನ್ನ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ಹೈದರಾಬಾದ್ನಲ್ಲಿ ಸಂಜೆ 7 ಗಂಟೆಗೆ ನಡೆಯೋ ಬಿಗ್ ಇವೆಂಟ್ನಲ್ಲಿ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಆಗುತ್ತಿದ್ದು, ಈ ಮೂಲಕ ಹೈದರಾಬಾದ್ನಲ್ಲೂ ಕಬ್ಜ ದೊಡ್ಡಮಟ್ಟದಲ್ಲಿಯೇ ಹವಾ ಮಾಡಲಿದೆ ಅನ್ನೋದು ಈಗೀನ ಒಟ್ಟು ಅಂದಾಜು ಅಂತಲೇ ಹೇಳಬಹುದು.
ಬಾಲಿವುಡ್ನಲ್ಲಿ ಮಾರ್ಚ್-3ಕ್ಕೆ ಕಬ್ಜ ಟ್ರೈಲರ್ ರಿಲೀಸ್
ಬಾಲಿವುಡ್ನಲ್ಲೂ ಕಬ್ಜ ಹವಾ ಕ್ರಿಯೇಟ್ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ವಿತರಕ ಆನಂದ್ ಪಂಡಿತ್ ಈಗೊಂದು ಪ್ಲಾನ್ ಮಾಡಿದ್ದಾರೆ. ಮಾರ್ಚ್-3 ರಂದು ಕಬ್ಜ ಚಿತ್ರದ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ.ಇದನ್ನ ದೊಡ್ಡಮಟ್ಟದಲ್ಲಿಯೇ ಪ್ಲಾನ್ ಮಾಡಿದ್ದಾರೆ.
ಮುಂಬೈಯಲ್ಲಿ ಐದು ಭಾಷೆಯ ಟ್ರೈಲರ್ ರಿಲೀಸ್
ಕಬ್ಜ ಚಿತ್ರದ ಟ್ರೈಲರ್ ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಚಿತ್ರದ ಕಲಾವಿದರೆಲ್ಲ ಭಾಗಿ ಆಗಲಿದ್ದಾರೆ. ಬಹು ಭಾಷೆಯ ಈ ಟ್ರೈಲರ್ ಹೇಗಿರುತ್ತದೆ ಅನ್ನೋ ಈ ಮಾಹಿತಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ