Kannada Movies: ಕನ್ನಡದ ಒಂದೇ ಕಥೆ ಎರಡು ಸಲ ಸಿನಿಮಾ ಆಗಿತ್ತು! ಅದು ಯಾವ ಸಿನಿಮಾ?

ಕನ್ನಡ ಸಿನಿಮಾ ತೆಲುಗು ಭಾಷೆಯಲ್ಲಿ ರೀಮೇಕ್

ಕನ್ನಡ ಸಿನಿಮಾ ತೆಲುಗು ಭಾಷೆಯಲ್ಲಿ ರೀಮೇಕ್

ಕನ್ನಡದ ಒಂದು ಕಥೆ ಎರಡು ಸಲ ಸಿನಿಮಾ ಆಗಿದೆ. ಹಾಗೆ ಬಂದ ಈ ಚಿತ್ರದಲ್ಲಿ ಕನ್ನಡ ಕಲಾವಿದರೇ ಇದ್ದಾರೆ. ಆ ಸಿನಿಮಾದ ಇನ್ನಷ್ಟು ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ ಓದಿ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ನ ಒಂದು ಕ್ಲಾಸಿಕ್‌ ಸಿನಿಮಾ (Ramesh Aravind Movie) ಎರಡು ಸಲ ನಿರ್ಮಾಣ ಆಗಿದೆ. ಆದರೆ ಅದು ಬೇರೆ ಭಾಷೆ ಅನ್ನೋದೇ ವಿಶೇಷ. 1995 ರಲ್ಲಿ ಬಂದ ಈ ಚಿತ್ರ ಕನ್ನಡದ ಬಹುತೇಕ ಪ್ರೇಕ್ಷಕರ ಫೇವರಿಟ್ ಸಿನಿಮಾ ಕೂಡ ಆಗಿದೆ. ಇದರ ಇನ್ನೂ ಒಂದು ವಿಶೇಷ ಏನೂ (Srigandha Movie Untold Story) ಅಂದ್ರೆ, ಬೇರೆ ಭಾಷೆಯಲ್ಲಿ ಬಂದ ಈ ಚಿತ್ರದಲ್ಲಿ ಕನ್ನಡದ ನಟರೇ ಪ್ರಮುಖ ಭೂಮಿಕೆಯಲ್ಲಿದ್ದರು. ಹಾಗೆ ಬಂದ ಒಂದು ಚಿತ್ರಕ್ಕೆ ಅರುಂಧತಿ ಅಂತಲೇ ಹೆಸರಿತ್ತು. ಕನ್ನಡ ಚಿತ್ರಕ್ಕೆ ಶ್ರೀಗಂಧ (Sudharani Movie Intresting Facts) ಅಂತಲೇ ಶೀರ್ಷಿಕೆ ಇಟ್ಟಿದ್ದರು. ಈ ಎರಡೂ ಸಿನಿಮಾಗಳ (Ramesh Aravind Old Film Story) ಮಾಹಿತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಹರಿದಾಡುತ್ತಿದೆ.


ಶ್ರೀಗಂಧ ಸಿನಿಮಾ ಯಾವ ಭಾಷೆಯಲ್ಲಿ ರೀಮೇಕ್ ಆಗಿದೆ ಗೊತ್ತೇ?


ಶ್ರೀಗಂಧ ಸಿನಿಮಾ ಸ್ಪೆಷಲ್ ಆಗಿಯೇ ಇತ್ತು. ರಮೇಶ್ ಅರವಿಂದ್ ಮತ್ತು ಸುಧಾರಾಣಿ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಡೈರೆಕ್ಟರ್ ಪಿ.ಎಚ್.ವಿಶ್ವನಾಥ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು.


Kannada actor Ramesh Aravind-Sudharani Acted Srigandha Movie Untold Story
ರಮೇಶ್ ಅರವಿಂದ್-ಸುಧಾರಾಣಿ ಜೋಡಿ


ಪಿ.ಎಚ್.ವಿಶ್ವನಾಥ್ ನಿರ್ದೇಶನದ ಶ್ರೀಗಂಧ ಸಿನಿಮಾ


ಚಿತ್ರದಲ್ಲಿ ಒಂದ್ ಒಳ್ಳೆ ಲವ್ ಸ್ಟೋರಿ ಇತ್ತು. ರಮೇಶ್ ಅರವಿಂದ್ ಮತ್ತು ಸುಧಾರಾಣಿ ಅವರ ಈ ಚಿತ್ರಕ್ಕೆ ಹಂಸಲೇಖ ಸಂಗೀತ ಕೊಟ್ಟಿದ್ದರು.




ಶ್ರೀಗಂಧ ಸಿನಿಮಾದಲ್ಲಿ ಸೂಪರ್ ಹಿಟ್ ಹಾಡಿನ ರಂಗು


ಇವರ ಸಂಗೀತ ಈ ಹಾಡು ತುಂಬಾ ವಿಶೇವಾಗಿಯೇ ಮೂಡಿ ಬಂದಿದ್ದವು. ಸಿನಿಮಾ ಪ್ರೇಮಿಗಳೂ ಈ ಹಾಡುಗಳನ್ನ ಮತ್ತು ಸಿನಿಮಾ ಬಹುವಾಗಿಯೇ ಮೆಚ್ಚಿಕೊಂಡಿದ್ದರು. 1995 ರಲ್ಲಿ ತೆರೆಕಂಡಿದ್ದ ಈ ಚಿತ್ರ ಮುಂದೆ ತೆಲುಗು ಭಾಷೆಯಲ್ಲಿ ರೀಮೇಕ್ ಆಯಿತು.




ರಮೇಶ್ ಅರವಿಂದ್-ಸುಧಾರಾಣಿ ಜೋಡಿ


ಹೌದು, ರಮೇಶ್ ಅರವಿಂದ್ ಮತ್ತು ಸುಧಾರಾಣಿ ಅವರ ಈ ಶ್ರೀಗಂಧ ಸಿನಿಮಾ ಟಾಲಿವುಡ್‌ನಲ್ಲಿ ರೀಮೇಕ್ ಆಯಿತು.1999 ರಲ್ಲಿ ರೀಮೇಕ್ ಆದ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಮತ್ತು ಸುಧಾರಾಣಿ ಇರಲಿಲ್ಲ. ಬದಲಾಗಿ ಕನ್ನಡದ ಇಬ್ಬರು ನಟರೇ ಈ ಚಿತ್ರದಲ್ಲಿ ಅಭಿನಯಿಸಿದ್ದರು.


ತೆಲುಗು ಅರುಂಧತಿ ಯಾವ ಸಿನಿಮಾ ರೀಮೇಕ್ ಗೊತ್ತೇ?


ಹಾಗೆ ಬಂದ ಈ ಚಿತ್ರಕ್ಕೆ ಅರುಂಧತಿ ಅನ್ನೋ ಶೀರ್ಷಿಕೆ ಇಡಲಾಗಿತ್ತು. ಕನ್ನಡದ ಹ್ಯಾಂಡ್ಸಮ್ ಹೀರೋ ರಾಮ್‌ಕುಮಾರ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದರು. ಸುಧಾರಾಣಿ ಜಾಗದಲ್ಲಿ ನಟಿ ಸೌಂದರ್ಯ ಅಭಿನಯಿಸಿದ್ದರು.


Kannada actor Ramesh Aravind-Sudharani Acted Srigandha Movie Untold Story
ತೆಲುಗು ಅರುಂಧತಿ ಯಾವ ಸಿನಿಮಾ ರೀಮೇಕ್ ಗೊತ್ತೇ?


ಅರುಂಧತಿ ಚಿತ್ರಕ್ಕೆ ಕ್ರಾಂತಿ ಕುಮಾರ್ ಡೈರೆಕ್ಷನ್


ಈ ಸಿನಿಮಾವನ್ನ ಅಂದು ಕ್ರಾಂತಿ ಕುಮಾರ್ ಡೈರೆಕ್ಟ್ ಮಾಡಿದ್ದರು. ಮೂಲ ಕಥೆಯನ್ನ ಕನ್ನಡದಿಂದಲೇ ತೆಗೆದುಕೊಂಡಿದ್ದರೂ ಕೂಡ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡೋವಾಗ ಒಂದಷ್ಟು ಬದಲಾವಣೆ ಮಾಡಿಕೊಂಡೇ ಚಿತ್ರ ಮಾಡಿದ್ದಾರೆ ಅನ್ನುವ ಮಾಹಿತಿ ಕೂಡ ಇದೆ.


ಕನ್ನಡ ಸಿನಿಮಾ ತೆಲುಗು ಭಾಷೆಯಲ್ಲಿ ರೀಮೇಕ್


ಅರುಂಧತಿ ಚಿತ್ರದಲ್ಲಿ ಶ್ರೀವಿದ್ಯಾ, ರಾಧಿಕಾ, ಬ್ರಹ್ಮಾನಂದಂ ಕೂಡ ನಟಿಸಿದ್ದರು. ಎಂ.ಎಂ.ಕೀರವಾಣಿ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದರು.


ಕನ್ನಡದ ಶ್ರೀಗಂಧ ಸಿನಿಮಾ ಎಲ್ಲರ ಫೇವರಿಟ್


ಹೀಗೆ ಕನ್ನಡ ಕ್ಲಾಸಿಕ್ ಶ್ರೀಗಂಧ ನಿಮಾ ಈಗಲೂ ಜನರ ಮನದಲ್ಲಿದೆ. ತೆಲುಗು ಸಿನಿಮಾ ಪ್ರೇಮಿಗಳೂ ಕನ್ನಡದ ರೀಮೇಕ್ ಅರುಂಧತಿ ಚಿತ್ರ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಒಟ್ಟಾರೆ, ಕನ್ನಡದ ಅನೇಕ ಸಿನಿಮಾಗಳಲ್ಲಿ ಶ್ರೀಗಂಧ ಸಿನಿಮಾ ಕೂಡ ವಿಶೇಷವಾಗಿಯೇ ನಿಲ್ಲುತ್ತದೆ.


ಶ್ರೀಗಂಧ-ಅರುಂಧತಿ ಸಿನಿಮಾಗಳ ಸುದ್ದಿ ವೈರಲ್


ಈ ಒಂದು ವಿಷಯದ ಪೋಸ್ಟ್ ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ. ಶ್ರೀಗಂಧ ಸಿನಿಮಾ ಯಾವಾಗ ಬಂತು.


ಇದನ್ನೂ ಓದಿ: Harish Raj: ಜೊತೆ ಜೊತೆಯಲಿ ಹರೀಶ್ ರಾಜ್ ಈಗ ಏನ್ ಮಿಸ್ ಮಾಡಿಕೊಳ್ತಿದ್ದಾರೆ?


ಅರುಂಧತಿ ಯಾವ ಸಿನಿಮಾದ ರೀಮೇಕ್ ಅನ್ನುವ ವಿಷಯವನ್ನೂ ನಾವು ಇಲ್ಲಿ ನೋಡಬಹುದಾಗಿದೆ. ಇನ್ನುಳಿದಂತೆ ಕನ್ನಡದ ಕ್ಲಾಸಿಕ್ ಚಿತ್ರದ ಒಂದು ಹಳೆ ಸುದ್ದಿ ಈಗ ಮತ್ತೆ ವೈರಲ್ ಆಗುತ್ತಿದೆ.

top videos
    First published: