ನನ್ನ ಕೈಲಿ ಏನೂ ಆಗೊಲ್ಲ ಎಂಬವರು ಈ ವಿಡಿಯೋ ನೋಡಿ: ರಮೇಶ್ ಅರವಿಂದ್ ಕಾರ್ಯಕ್ಕೆ ಜನರ ಬಹುಪರಾಕ್

Ramesh motivational speech: ನೀವು ಯಾವುದೇ ಕೆಲಸ ಮಾಡಿ, ಅದರ ಬಗ್ಗೆ ತಿಳಿದುಕೊಂಡು ಮಾಡಿ. ಯಾರಾದರೂ ನಿಮ್ಮ ಹೆಸರೇನು, ನಿಮ್ಮ ಊರು ಯಾವುದು ಅಂತ ಕೇಳಿದರೆ, ಥಟ್ ಅಂತ ಉತ್ತರ ಹೇಳಿ ಬಿಡ್ತೀರಿ. ಕಾರಣ ನಿಮ್ ಹೆಸರು, ನಿಮ್ ಊರು ಯಾವುದು ಅಂತ ನಿಮಗೆ ಗೊತ್ತಿದೆ.

ರಮೇಶ್ ಅರವಿಂದ್

ರಮೇಶ್ ಅರವಿಂದ್

  • Share this:
ನಟ ರಮೇಶ್ ಅರವಿಂದ್ ಸಿನಿಮಾದಿಂದಾಚೆ, ತಮ್ಮ ಮಾತುಗಳ ಮೂಲಕ, ಮಾಡುವ ಕೆಲಸಗಳಿಂದ ಸಾವಿರಾರು ಜನರಿಗೆ ಸ್ಫೂರ್ತಿ ತುಂಬುವ, ಹುಮ್ಮಸ್ಸು ತುಂಬುವ ಕೆಲಸ ಮಾಡುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಸಾಕಷ್ಟು ವೀಡಿಯೋ ತುಣುಕುಗಳು ಈಗಾಗಲೇ ವೈರಲ್ ಆಗಿವೆ. ರಮೇಶ್ ಅರವಿಂದ್ ಅವರ ಕಾರ್ಯ ಕಂಡು ಜನರು ಬಹುಪರಾಕ್ ಅಂದಿದ್ದಾರೆ.

ಸದ್ಯ ಅದರ ಮುಂದುವರೆದ ಭಾಗವಾಗಿ ರಮೇಶ್ ಅರವಿಂದ್ ಮತ್ತೊಂದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆತ್ಮವಿಶ್ವಾಸವನ್ನ ಹೆಚ್ಚಿಸುವುದೇಗೆ ಎಂಬ ಕ್ಯಾಪ್ಷನ್ ಇರುವ ಆ ವೀಡಿಯೋ ಮೂಲಕ ಆತ್ಮವಿಶ್ವಾಸ ಕಳೆದುಕೊಂಡು, ನನ್ನ ಕೈಲಿ ಏನೂ ಆಗೊಲ್ಲ ಅನ್ನುವವರನ್ನ ಸಹ ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ.

Rashmika: 2020ರ ನ್ಯಾಷನಲ್​ ಕ್ರಶ್​ ಆದ ರಶ್ಮಿಕಾ ಮಂದಣ್ಣ; ಗೂಗಲ್​ನಲ್ಲಿ ಕೊಡಗಿನ ಕುವರಿ ಹವಾ

ಹೌದು, ನೀವು ಯಾವುದೇ ಕೆಲಸ ಮಾಡಿ, ಅದರ ಬಗ್ಗೆ ತಿಳಿದುಕೊಂಡು ಮಾಡಿ. ಯಾರಾದರೂ ನಿಮ್ಮ ಹೆಸರೇನು, ನಿಮ್ಮ ಊರು ಯಾವುದು ಅಂತ ಕೇಳಿದರೆ, ಥಟ್ ಅಂತ ಉತ್ತರ ಹೇಳಿ ಬಿಡ್ತೀರಿ. ಕಾರಣ ನಿಮ್ ಹೆಸರು, ನಿಮ್ ಊರು ಯಾವುದು ಅಂತ ನಿಮಗೆ ಗೊತ್ತಿದೆ.ಆದರೆ ಅದೇ ಯಾರಾದರೂ ನಿಮಗೆ ಗೊತ್ತಿಲ್ಲದ ವಿಚಾರ ಕೇಳಿದರೆ, ನೀವ್ ಉತ್ತರ ಮಾಡಲು ಆಗುತ್ತಾ? ಸೋ... ನಿಮಗೆ ಯಾವುದು ಅವಶ್ಯಕನೋ ಆ ವಿಷಯಗಳತ್ತ ಹೆಚ್ಚೆಚ್ಚು ಗಮನ ಹರಿಸಿ, ಆ ಮೂಲಕ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಅದರ ಬದಲು ಅನವಶ್ಯಕ ವಿಚಾರಕ್ಕೆ ಸಮಯ ಹಾಳು ಮಾಡಿಕೊಳ್ಳಬೇಡಿ ಎಂಬ ಕಿವಿಮಾತನ್ನ ವೀಡಿಯೋ ತುಣುಕು ಮೂಲಕ ರಮೇಶ್ ಅರವಿಂದ್ ಹೇಳಿದ್ದಾರೆ.ರಮೇಶ್ ಅರವಿಂದ್ ಅವರ ಈ ವೀಡಿಯೋ ವೈರಲ್ ಆಗುತ್ತಿದೆ.
Published by:Vinay Bhat
First published: