ಕನ್ನಡದ ತ್ಯಾಗರಾಜ್ ರಮೇಶ್ ಅರವಿಂದ್ (Ramesh Aravind) ಅವರು ಈಗ ಬದಲಾಗಿದ್ದಾರೆ. ಪ್ರೀತಿ-ಪ್ರೇಮ ಅಂತ ಚಿತ್ರದ ಕೊನೆಯಲ್ಲಿ ತ್ಯಾಗ ಮಾಡಿರೋದೇ ಹೆಚ್ಚು. ಆದರೆ ಕಾಲಕ್ಕೆ ತಕ್ಕನಾಗಿ ಅಪ್ಡೇಟ್ಸ್ ಆಗ್ತಿರೋ ರಮೇಶ್ ಅರವಿಂದ್ ಅವರು, ಶಿವಾಜಿ ಸುರತ್ಕಲ್-2 (Shivaji Surathkal-2 Cinema) ಚಿತ್ರದ ಮೂಲಕ ಬೇರೆ ರೇಂಜ್ಗೆ ಹೋಗಿದ್ದಾರೆ. ಅವರ ಯೋಚನಾ ಲಹರಿ ಬದಲಾಗುತ್ತಿದೆ. ಬದಲಾದ ಇವರ ಸಿನಿಮಾ ಪ್ರೀತಿ ಶಿವಾಜಿ ಸುರತ್ಕಲ್-2 ಸಿನಿಮಾ ರೆಡಿ ಆಗಿದೆ. ಲೈವ್ ಅಲ್ಲಿ ಚಿತ್ರಕ್ಕೆ ರೀರೆಕಾರ್ಡಿಂಗ್ ನಡೆಯುತ್ತಿದೆ. ಸಂಗೀತ ನಿರ್ದೇಶಕ ಜುಡಾ ಸ್ಯಾಂಡಿ ಹೆಚ್ಚು ಕಡಿಮೆ 45 ದಿನಗಳ ಕಾಲ ಚಿತ್ರಕ್ಕೆ ರೀ-ರೆಕಾರ್ಡಿಂಗ್ (Re-Recording) ಮಾಡಿದ್ದಾರೆ. ಹಾಲಿವುಡ್ ಮಟ್ಟದಲ್ಲಿ ಸೌಂಡಿಂಗ್ ಇರಬೇಕು ಅನ್ನೋದು ನಿರ್ದೇಶಕ ಆಕಾಶ್ (Akash Srivatsa) ಪ್ರಥಮ ಆದ್ಯತೆ ಆಗಿದೆ. ಈ ಹಿನ್ನೆಲೆಯಲ್ಲಿ ಕೆಲಸ ನಡೆಯುತ್ತಿದೆ
ರಮೇಶ್ ಅರವಿಂದ್ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಪ್ಲಾನ್
ಅಂದ್ಹಾಗೆ ಡೈರೆಕ್ಟರ್ ಆಕಾಶ್ ಶ್ರೀವತ್ಸ ಚಿತ್ರದಲ್ಲಿ ಒಂದು ಸ್ಪೆಷಲ್ ಸಾಂಗ್ ಇಡಬೇಕು ಅಂತಲೇ ಯೋಚನೆ ಮಾಡಿದ್ದಾರೆ. ಚಿತ್ರದಲ್ಲಿ ಅಂತಹ ಹಾಡೊಂದನ್ನ ಇಡಲಿಕ್ಕೆ ಜಾಗ ಕೂಡ ಇದೆ. ಅದಕ್ಕೇನೆ ಈಗೊಂದು ಪ್ಲಾನ್ ಕೂಡ ಮಾಡಿದ್ದಾರೆ.
ಹಾಗೇನೆ ಇಂದು ಬೆಳಗ್ಗೆ ಹೆಚ್ಚು ಕಡಿಮೆ 3 ಗಂಟೆ ಹೊತ್ತಿಗೆ ಜುಡಾ ಸ್ಯಾಂಡಿ ಸ್ಪೆಷಲ್ ಸಾಂಗ್ಗಾಗಿಯೇ ಒಂದು ಟ್ಯೂನ್ ಕಳಿಸಿದ್ದರು. ಅದನ್ನ ಕೇಳಿದ ಡೈರೆಕ್ಟರ್ ಆಕಾಶ್ ಶ್ರೀವತ್ಸ ಬೆಂಗಳೂರಿಗೆ ಬರಲು ಮಂಗಳೂರು ಏರ್ಪೋರ್ಟ್ಗೆ ಬಂದಿದ್ದರು. 6 ಗಂಟೆಗೆ ಫ್ಲೈಟ್ ಇದ್ದ ಕಾರಣ ಹಾಡಿನ ಬಗ್ಗೆ ಯೋಚನೆ ಮಾಡಿಕೊಂಡು ಬಂದ್ರು.
ಸ್ಪೆಷಲ್ ಸಾಂಗ್ ಹುಟ್ಟಿದ ಅನುಭವ ಹಂಚಿಕೊಂಡ ಡೈರೆಕ್ಟರ್
ಪ್ಲೈಟ್ ಹತ್ತೋ ಹೊತ್ತಿಗೆ ಇಡೀ ಹಾಡು ರೆಡಿ ಆಗಿತ್ತು. ಅದನ್ನ ಜುಡಾ ಸ್ಯಾಂಡಿಗೆ ಕಳಿಸಿಕೊಟ್ಟರು. ಆ ಹಾಡಿನ ಟ್ರ್ಯಾಕ್ ಸಿಂಗಿಂಗ್ ಕೂಡ ಈಗಾಗಲೇ ಆಗಿದೆ. ಹಾಗಂತ ನ್ಯೂಸ್-18 ಕನ್ನಡ ಡಿಜಿಟಲ್ಗೆ ಈ ಎಲ್ಲ ವಿಷಯವನ್ನ ಶೇರ್ ಮಾಡಿರೋ ಡೈರೆಕ್ಟರ್ ಆಕಾಶ್ ಶ್ರೀವತ್ಸ, ಈ ಹಾಡಿನ ಚಿತ್ರೀಕರಣದ ಪ್ಲಾನ್ ಮಾಡಿಕೊಳ್ತಿದ್ದಾರೆ.
ಇದೇ ತಿಂಗಳ ಕೊನೆಯಲ್ಲಿ ಶಿವಾಜಿ ಸುರತ್ಕಲ್-2 ಚಿತ್ರದ ಸ್ಪೆಷಲ್ ಸಾಂಗ್ ಶೂಟಿಂಗ್ ಪ್ಲಾನ್ ಮಾಡಿದ್ದಾರೆ. ಇದೇ ಹಾಡಿನಲ್ಲಿ ಅಭಿನಯಿಸಲು ವಿಶೇಷ ನಟಿಯ ಹುಡುಕಾಟವನ್ನೂ ಆರಂಭಿಸಿದ್ದಾರೆ.
ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ "ವಾವ್ ಫ್ಯಾಕ್ಟರ್" ಪ್ಲಾನ್
ಶಿವರಾಜಿ ಸುರತ್ಕಲ್-2 ಚಿತ್ರವನ್ನ ಥಿಯೇಟರ್ಗೆ ನೋಡಲು ಬರುವ ಪ್ರೇಕ್ಷಕರಿಗೆ "ವಾವ್ ಫ್ಯಾಕ್ಟರ್" ಇಡಲೇಬೇಕು ಅಂತಲೇ ಆಕಾಶ್ ಶ್ರೀವತ್ಸ ಪ್ಲಾನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಗೀತ ನಿರ್ದೇಶಕ ಜುಡಾ ಸ್ಯಾಂಡಿ ಸಾಥ್ ಕೊಟ್ಟಿದ್ದಾರೆ.
ಕಳೆದ 45 ದಿನಗಳಿಂದಲೂ ಶಿವಾಜಿ ಸುರತ್ಕಲ್-2 ಚಿತ್ರಕ್ಕೆ ರೀರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ. ಲೈವ್ ಸಂಗೀತದ ಮೂಲಕವೇ ಜುಡಾ ಸ್ಯಾಂಡಿ RR ಮಾಡುತ್ತಿದ್ದಾರೆ. ಇಲ್ಲಿವರೆಗೂ ಆಕಾಶ್ ಶ್ರೀವತ್ಸ ಎರಡು ಸಿನಿಮಾ ಮಾಡಿದ್ದಾರೆ. ಬದ್ಮಾಷ್ ಇವರ ಮೊದಲ ಸಿನಿಮಾ, ಶಿವಾಜಿ ಸುರತ್ಕಲ್ ಎರಡನೇ ಸಿನಿಮಾ ಆಗಿದೆ.
ಶಿವಾಜಿ ಸುರತ್ಕಲ್-2 ಚಿತ್ರಕ್ಕಾಗಿ 45 ದಿನ ರೀ-ರೆಕಾರ್ಡಿಂಗ್!
ಇದೇ ಚಿತ್ರದ ಮುಂದುವರೆದ ಭಾಗ ಶಿವಾಜಿ ಸುರತ್ಕಲ್-2 ಮೂರನೇ ಸಿನಿಮಾ ಆಗಿದೆ. ಇದನ್ನ ಇಲ್ಲಿ ಯಾಕೆ ಹೇಳ್ತಿದ್ದೀನಿ ಅಂದ್ರೆ, ಚಿತ್ರದ ಡೈರೆಕ್ಟರ್ ಆಕಾಶ್ ಶ್ರೀವತ್ಸ, ಇಲ್ಲಿವರೆಗೂ ಕೇವಲ ರೀ ರೆಕಾರ್ಡಿಂಗ್ ಗೆ 45 ದಿನಗಳನ್ನ ತೆಗೆದುಕೊಂಡಿದ್ದೇ ಇಲ್ಲ. ಆದರೆ ಶಿವಾಜಿ ಸುರತ್ಕಲ್-2 ಸಿನಿಮಾ ಅಷ್ಟು ಕೆಲಸ ತೆಗೆದುಕೊಂಡಿದೆ.
ಇದನ್ನೂ ಓದಿ: Kannada Movies: ಪ್ರೇಮಿಗಳ ವಾರ ಸಿನಿಮಾಗಳ ಸಾಕ್ಷಾತ್ಕಾರ! ಭರ್ಜರಿ 11 ಸಿನಿಮಾ
ಆಕಾಶ್ ಶ್ರೀವತ್ಸ ತಮ್ಮ ಈ ಚಿತ್ರವನ್ನ ಈ ಸಲ ಹಾಲಿವುಡ್ ಮಟ್ಟದಲ್ಲಿಯೇ ತಯಾರಿಸಿದ್ದಾರೆ. ಚಿತ್ರದ ರೀ-ರೆಕಾರ್ಡಿಂಗ್ನ್ನ ಅದ್ಭುತವಾಗಿಯೇ ಮಾಡಿಸಿದ್ದಾರೆ. ಚಿತ್ರವೂ ಒಳ್ಳೆ ಕ್ವಾಲಿಟಿಯಲ್ಲಿಯೇ ಬಂದಿದೆ. ಅದ್ಭುತ ಅನಿಸೋ ಲೋಕೇಷನ್ಗಳಲ್ಲಿಯೇ ಶಿವಾಜಿ ಸುರತ್ಕಲ್-2 ಚಿತ್ರ ರೆಡಿ ಆಗಿದೆ. ಒಂದು ವಿಶೇಷ ಹಾಡಿನೊಂದಿಗೆ ಈ ಚಿತ್ರ ಜನರ ಮುಂದೆ ಬರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ