Ramesh Aravind: ರಮೇಶ್ ಅರವಿಂದ್ ಪ್ರೀತಿಯಿಂದ ಬರೆದ್ರು ಪುಸ್ತಕ! ನಿಮಗೂ ಸ್ಪೂರ್ತಿ ಹುಟ್ಟಲಿ ಎಂದ ನಟ

ಪ್ರೀತಿಯಿಂದ ನಿಮ್ಮ ರಮೇಶ್, ಇಷ್ಟಂದ್ರೆ ಸಾಕು. ಎಲ್ಲರಿಗೂ ಅದೇನೋ ಖುಷಿ. ಉತ್ಸಾಹ ತುಂಬಿದ ಅವರ ಮಾತು, ಸದಾ ಸಕಾರಾತ್ಮಕವಾಗಿ ಯೋಚಿಸೋ ಮನಸ್ಸು, ಎಲ್ಲರ ಜೊತೆಗೂ ಹಸನ್ಮುಖಿ ಆಗಿ ಮಾತಾಡೋ ಚೈತನ್ಯ, ಇವೆಲ್ಲವೂ ನಾಯಕ ನಟ ರಮೇಶ್ ಅರವಿಂದ್ ಅವರ ಐಡೆಂಟಿಟಿಗಳೇ ಆಗಿವೆ.

ಪ್ರೀತಿಯಿಂದ ರಮೇಶ್ ಬರೆದರು ಸ್ಪೂರ್ತಿದಾಯಕ ಪುಸ್ತಕ

ಪ್ರೀತಿಯಿಂದ ರಮೇಶ್ ಬರೆದರು ಸ್ಪೂರ್ತಿದಾಯಕ ಪುಸ್ತಕ

  • Share this:
ಪ್ರೀತಿಯಿಂದ ನಿಮ್ಮ ರಮೇಶ್, ಇಷ್ಟಂದ್ರೆ ಸಾಕು. ಎಲ್ಲರಿಗೂ ಅದೇನೋ ಖುಷಿ. ಉತ್ಸಾಹ ತುಂಬಿದ ಅವರ ಮಾತು, ಸದಾ ಸಕಾರಾತ್ಮಕವಾಗಿ ಯೋಚಿಸೋ ಮನಸ್ಸು, ಎಲ್ಲರ ಜೊತೆಗೂ ಹಸನ್ಮುಖಿ ಆಗಿಯೇ ಮಾತಾಡೋ ಚೈತನ್ಯ, ಇವೆಲ್ಲವೂ ನಾಯಕ ನಟ ರಮೇಶ್ ಅರವಿಂದ್ (Ramesh Aravind) ಅವರ ಐಡೆಂಟಿಟಿಗಳೇ ಆಗಿವೆ. ಯಾವತ್ತೂ ನಕಾರಾತ್ಮಕವಾಗಿ ಮಾತನಾಡಿದ್ದೇ ಇಲ್ಲ. ಸಕಾರಾತ್ಮಕವಾಗಿಯೇ ಇಡೀ ಜೀವನ ನೋಡೋ ಇವರ ಶೈಲಿ ಎಂತಹ ಕಲ್ಲು ಮನಸ್ಸಿಗೂ ಅಷ್ಟೇ ಪ್ರೀತಿಯಿಂದ ನಾಟಿ ಬಿಡುತ್ತದೆ. ಅಂತಹ ರಮೇಶ್ ಅರವಿಂದ್ ಅವರು ಈಗೊಂದು ಪುಸ್ತಕ (Book) ಬರೆದಿದ್ದಾರೆ. ಇದು ಒಂದು ರೀತಿ ರಮೇಶ್ ಅರವಿಂದ್ ತಮ್ಮ ಕಥೆಯನ್ನೆ ಸ್ಪೂರ್ತಿದಾಯಕವಾಗಿ ಹೇಳಿದ ಪುಸ್ತಕ. ಇವತ್ತು ರಿಲೀಸ್ ಆಗುತ್ತಿದೆ. ಇದರ ಸುತ್ತ ಒಂದಷ್ಟು ಮಾಹಿತಿ ಇಲ್ಲಿದೆ.

ರಮೇಶ್ ಅರವಿಂದ್ ಅವ್ರು ನಟನೆ ಮಾಡುತ್ತಾರೆ. ಸಿನಿಮಾ ನಿರ್ದೇಶನವನ್ನೂ ಮಾಡ್ತಾರೆ. ಟೈಮ್ ಸಿಕ್ಕರೇ, ಒಂದಷ್ಟು ಒಳ್ಳೇ ಮಾತುಗಳನ್ನೂ ಆಡ್ತಾರೆ. ಕಥೆ ಹೇಳ್ತಾರೆ.ಮುರಿದ ಮನಸ್ಸುಗಳು, ಮುನಿಸಿಕೊಂಡ ಮನಸ್ಸುಗಳು,ಜೀವನದ ಆಸೆಯನ್ನೆ ಕಳೆದುಕೊಂಡ ಮನಸ್ಸುಗಳು, ಹೀಗೆ ಇಂತಹ ಮನಸ್ಥಿತಿಯ ಜನಕ್ಕೆ ಇವರ ಮಾತು ಜೀವನದ ಅಸಲಿ ಸತ್ಯವನ್ನೇ ಹೇಳುತ್ತವೆ. ಅದನ್ನ ಹೇಳಲಿಕ್ಕೇನೆ ರಮೇಶ್ ಅರವಿಂದ್ ಅವ್ರು ಸೋಷಿಯಲ್ ಮೀಡಿಯಾ ಪ್ಲಾಟ್​ ಫಾರಂ ಬಳಸಿಕೊಂಡಿದ್ದರು. ಸ್ಟೇಟಸ್ ಗೆ ಹೋದ್ರೆ ಸಾಕು. ರಮೇಶ್ ಅರವಿಂದ್ ಅವರ ಸ್ಪೂರ್ತಿದಾಕ ಕಥೆ ಇರುತ್ತವೆ. ಸ್ಪೂರ್ತಿದಾಯಕ ಚಂದದ ಮಾತುಗಳೂ ನಿಮ್ಮ ಮಾರ್ನಿಂಗ್ ಅನ್ನ ಇನ್ನಷ್ಟು ಗುಡ್ ಮಾಡುತ್ತವೆ.ರಮೇಶ್ ಅರವಿಂದ್ ಸಾಧನೆಯ ಹಾದಿನೇ ಇಲ್ಲಿ ಸ್ಪೂರ್ತಿದಾಯಕ ಪುಸ್ತಕ 
ರಮೇಶ್ ಅರವಿಂದ್ ಎಲ್ಲರ ಫೇವರಿಟ್ ನಾಯಕ ನಟ. ಯುವಕರು,ಯುವತಿಯರು, ಮಹಿಳೆಯರು ಹೀಗೆ ಎಲ್ಲರೂ ಇಷ್ಟಪಡುವ ರಮೇಶ್ ಅರವಿಂದ್ ಅವರ ಮೋಟಿವೇಷ್ನಲ್ ಮಾತುಗಳು ಜೀವನದ ಕ್ಷಣಗಳನ್ನ ದಿನೇ ದಿನೇ ತಾಜಾ ಮಾಡುತ್ತವೆ. ಅಂತಹ ರಮೇಶ್ ಅರವಿಂದ್ ಅವರು ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಹೌದು. ರಮೇಶ್ ಅರವಿಂದ್ ತಮ್ಮ ಬದುಕಿನ ಪ್ರತಿ ಹಂತವನ್ನೂ ಅನುಭವಿಸಿದ್ದಾರೆ. ಪ್ರತಿ ಹಾದಿಯನ್ನೂ ಅಷ್ಟೇ ಅಚ್ಚುಕಟ್ಟಾಗಿಯೇ ನೋಡಿಕೊಂಡಿದ್ದಾರೆ. ಪ್ರತಿ ಸಾಧನೆಯನ್ನೂ ದಾಖಲಿಸಿಕೊಂಡು ಬಂದಂತಿದೆ. ಇಂತಹ ರಮೇಶ್ ಅರವಿಂದ್ ಅವರು ಈಗ ಒಂದು ಪುಸ್ತಕ ಬರೆದಿದ್ದಾರೆ. ಇದರ ಹೆಸರು "ಪ್ರೀತಿಯಿಂದ ರಮೇಶ್ ಯಶಸ್ಸಿನ ಸರಳ ಸೂತ್ರಗಳು" ಇಂದು ಭಾನುವಾರ ಈ ಪುಸ್ತಕ ರಿಲೀಸ್ ಆಗುತ್ತಿದೆ.

Ramesh Arvind Wrote a book on his life Story
ಇದು ರಮೇಶ್ ಅರವಿಂದ್ ಸಾಧನೆಯ ಹಾದಿಯ ಸ್ಪೂರ್ತಿಯದಾಯಕ ಪುಸ್ತಕ


ಪ್ರೀತಿಯಿಂದ ರಮೇಶ ಪುಸ್ತಕ ಒಂದು ರೀತಿ ರಮೇಶ್ ಬದುಕಿನ ಚಿತ್ರಣ
ರಮೇಶ್ ಅರವಿಂದ್ ಅವರ ಈ ಪುಸ್ತಕ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಬದುಕಿನ ಚಿತ್ರಣವೇ ಆಗಿದೆ. ತಮ್ಮ ಜೀವನದಲ್ಲಿ ಆದ ಎಲ್ಲ ಬದಲಾವಣೆಗಳನ್ನ ಇಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ತಾವು ಖರೀದಿಸಿದ ಬೈಕ್​ ಗಳ ಚಿತ್ರಣ, ಹಂತ..ಹಂತವಾಗಿಯೇ ಬೆಳೆದ ರೀತಿ, ಎಲ್ಲವೂ ಇಲ್ಲಿ ಸಿಗುತ್ತದೆ. ಇದನ್ನ ಓದೋ ಪ್ರತಿಯೊಬ್ಬರಿಗೂ ಪ್ರೀತಿಯ ರಮೇಶ್ ಅರವಿಂದ್ ಬದುಕು ಹೊಸ ಉತ್ಸಾಹ ತುಂಬುತ್ತದೆ.
ಪುಸ್ತಕದ ಬಗ್ಗೆ ರಮೇಶ್ ಅರವಿಂದ್ ಅವರ ಒಂದು ಅದ್ಭುತ ವೀಡಿಯೋ ವಿವರಣೆ
ರಮೇಶ್ ಅರವಿಂದ್ ಅವ್ರು ಏನೇ ಮಾಡಲಿ ಅದ್ಭುತವಾಗಿಯೆ ಮಾಡುತ್ತಾರೆ. ಪಕ್ಕಾ ಪ್ಲಾನ್ ಮಾಡಿಯೇ ಹೇಳುತ್ತಾರೆ. ತಮ್ಮ ಪುಸ್ತಕ ಹೇಗಿರುತ್ತದೆ. ಪುಸ್ತಕದಲ್ಲಿ ಏನೆಲ್ಲ ಇರುತ್ತದೆ ಅನ್ನೋದನ್ನೂ ಕೂಡ ರಮೇಶ್ ಅರವಿಂದ್ ಚಿತ್ರರೂಪದಲ್ಲಿಯೇ ತೋರಿಸಿದ್ದಾರೆ. ಆ ವೀಡಿಯೋ ಮೂಲಕವೇ ತಮ್ಮ ಪುಸ್ತಕ ಭಾನುವಾರ ರಿಲೀಸ್ ಆಗುತ್ತದೆ ಅನ್ನೋದನ್ನೂ ಹೇಳಿಕೊಂಡಿದ್ದಾರೆ. ವಿಶೇಷವಾದ ಈ ಪುಸ್ತಕ ನಿಜಕ್ಕೂ ಸ್ಪೂರ್ತಿದಾಯಕವಾಗಿಯೇ ಇದೆ. ಈ ಸತ್ಯವನ್ನ ಈಗ ಇವರ ವೀಡಿಯೋ ಹೇಳುತ್ತಿದೆ. ಇಡೀ ಪುಸ್ತಕ ಓದಿ. ಸ್ಪೂರ್ತಿ ಪಡೆಯಿರಿ.
First published: