ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ (Rakshit Shetty Movie) ಸಪ್ತಸಾಗರದಾಚೆ ಎಲ್ಲೋ ಚಿತ್ರದ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಚಿತ್ರದ ರಿಲೀಸ್ ಬಗ್ಗೆನೂ ಇಲ್ಲಿ ಒಂದಷ್ಟು ಮಾಹಿತಿ ಪಡೆಯಬಹುದು. ಚಿತ್ರದಲ್ಲಿರೋ ಲವ ಸ್ಟೋರಿ ಕಾಲಘಟ್ಟದ (Special Love Story Cinema) ಮಾಹಿತಿ ಕೂಡ ರಿವೀಲ್ ಆಗಿದೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಇರೋ ಪ್ರೀತಿ-ಪ್ರೇಮದ (Intense Love Story Movie) ಕಥೆ ತುಂಬಾ ಇಂಟೆನ್ಸ್ ಆಗಿದೆ. ಇದರ ತೀವ್ರತೆ ಬೆಳ್ಳಿ ತೆರೆ ಮೇಲೆ ಬೇರೆ ರೀತಿ ಮೂಡಿ ಬಂದಿದೆ. ಡೈರೆಕ್ಟರ್ ಹೇಮಂತ್ ರಾವ್ ಈ ಮೊದಲು ಕೂಡ ಒಂದು ಹುಡುಕಾಟದ (Director Hemanth Rao) ಕಥೆ ಮಾಡಿದ್ದರು. ಆ ಸಿನಿಮಾ ಆದ್ಮೇಲೆ ರಕ್ಷಿತ್ ಶೆಟ್ಟಿ ಜೊತೆಗೆ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಕಾಂಬಿನೇಷನ್ ಚೆನ್ನಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಅಪ್ಪ-ಮಗನ ಭಾವ ತೀವ್ರತೆಯ ಕಥೆ ಇತ್ತು. ಮರುವು ಇರೋ ಅಪ್ಪನನ್ನ ಹುಡುಕಿಕೊಂಡು ಮಗ ಹೋಗೋದೇ ಸಿನಿಮಾ ಕಥೆ ಆಗಿತ್ತು.
ಭಾವ ತೀವ್ರತೆಯ ಪ್ರೇಮ ಕಥೆ ಸಿನಿಮಾ
ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲೂ ಒಂದು ಹುಡುಕಾಟ ಇದ್ದಂತೆ ಕಾಣುತ್ತಿದೆ. ಪ್ರೀತಿ-ಪ್ರೇಮದ ಹುಡುಕಾಟ ಅಂತ ಇದು ಮೇಲ್ನೋಟಕ್ಕೆ ಈಗಲೇ ಗೆಸ್ ಮಾಡಬಹುದು. ಪ್ರೀತಿಯಲ್ಲಿ ಹುಡುಕಾಟವೂ ಇರುತ್ತದೆ. ವಿರಹ ವೇದನೆ ಉತ್ತುಂಗವೂ ಕಾಣಬಹುದು. ಹೇಮಂತ್ ರಾವ್ ಅವರ ಚಿತ್ರ ನಿರೂಪಿಸೋ ಶೈಲಿ ಬೇರೆ ಇದೆ. ಸಹಜವಾಗಿಯೇ ಇಡೀ ಚಿತ್ರ ನಿಮ್ಮನ್ನ ಸೆಳೆಯುತ್ತಲೇ ಸಾಗುತ್ತದೆ.
2010-2020 ರ ಮಧ್ಯ ನಡುವೆ ನಡೆಯೊ ಕಥೆ
ಸಿನಿಮಾ ನೋಡ್ತಾ ನೋಡ್ತಾ ನೀವು ಆ ಕಥೆಯ ಒಳಗೆ ಸಾಗುತ್ತೀರಾ? ಅಂತಹ ಶಕ್ತಿಯುತ ಟೆಕ್ನಿಕ್ ಅನ್ನು ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲೂ ನೋಡಬಹುದು. ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಒಂದು ವಿಶೇಷ ಕಾಲಘಟ್ಟದ ಕಥೆಯನ್ನ ಹೇಳಲಾಗಿದೆ. 2010 ರಿಂದ 2020ರ ನಡುವಿನ 10 ವರ್ಷದಲ್ಲಿ ನಡೆಯೋ ಕಥೆ ಇದಾಗಿದೆ.
ಸಿಂಪಲ್ ಸ್ಟಾರ್ ರಕ್ಷಿತ್ ಡಬಲ್ ಶೇಡ್ಲ್ಲಿ ಅಭಿನಯ
ಸಿನಿಮಾದ ಟೀಸರ್ ಇಲ್ಲವೇ ಪೋಸ್ಟರ್ಗಳನ್ನ ಗಮನಸಿದ್ರೆ, ರಕ್ಷಿತ್ ಶೆಟ್ಟಿ ಎರಡು ಶೇಡ್ನಲ್ಲಿ ಕಾಣಿಸುತ್ತಾರೆ. ದೇಹದ ತೂಕವನ್ನ ವಿಪರೀತವಾಗಿ ಹೆಚ್ಚಸಿಕೊಂಡ ಒಂದು ಪಾತ್ರ ಇಲ್ಲಿ ನಿಮಗೆ ಸಿಗುತ್ತದೆ.
ಇನ್ನೂ ಒಂದು ರೋಲ್ನಲ್ಲಿ ರಕ್ಷಿತ್ ಸ್ಲಿಮ್ ಆ್ಯಂಡ್ ಟ್ರಿಮ್ ಆಗಿ ಕಾಣಿಸಿಕೊಳ್ತಾರೆ. ಎರಡೂ ಪಾತ್ರದಲ್ಲು ತುಂಬಾನೆ ವ್ಯತ್ಯಾಸ ಇದೆ. ನಾಯಕಿ ನಟಿ ರುಕ್ಮಿಣಿ ವಸಂತ್ ಕೂಡ ಎರಡು ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿಂಪಲ್ ಸ್ಟಾರ್ ಕಾಡಿದ ಸಪ್ತಸಾಗರದಾಚೆ ಎಲ್ಲೋ ಕಥೆ
ಭಾವ ತೀವ್ರತೆಯ ಈ ಸಿನಿಮಾವನ್ನ ತುಂಬಾ ಹಚ್ಚಿಕೊಂಡು ನಟ ರಕ್ಷಿತ್ ಅಭಿನಯಿಸಿದ್ದಾರೆ. ಅಷ್ಟೊಂದು ಕಾಡಿದ ಈ ಕಥೆಯ ಬಗ್ಗೆ ರಕ್ಷಿತ್ ಶೆಟ್ಟಿ ತಮ್ಮದೇ ಶೈಲಿಯಲ್ಲಿ ಹೇಳಿಕೊಂಡು ಆಗಿದೆ.
ಸಪ್ತಸಾಗರದಾಚೆ ಎಲ್ಲೋ ಜುಲೈ ತಿಂಗಳಲ್ಲಿ ರಿಲೀಸ್?
ಈ ಚಿತ್ರದ ಚಿತ್ರೀಕರಣ ಮುಗಿದರೆ, ಮುಂದಿನ ಚಿತ್ರದಲ್ಲಿ ಬ್ಯುಸಿ ಆಗುವೆ ಎಂದು ರಕ್ಷಿತ್ ಈ ಹಿಂದೇನೆ ಹೇಳಿಕೊಂಡಿದ್ದರು. ಡೈರೆಕ್ಟರ್ ಹೇಮಂತ್ ರಾವ್ ಕೂಡ ತಮ್ಮ ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸುತ್ತಿದ್ದಾರೆ.
ಇದನ್ನೂ ಓದಿ: Sapta Sagaradaache Ello: ಸಪ್ತ ಸಾಗರದಾಚೆ ಎಲ್ಲೋ ಸೆಕೆಂಡ್ ಟೀಸರ್ ಔಟ್; ಮನು-ಸುರಭಿ ಲವ್ ಸ್ಟೋರಿ ಝಲಕ್
ಚಿತ್ರದ ರಿಲೀಸ್ ಡೇಟ್ ಇನ್ನೂ ಅನೌನ್ಸ್ ಆಗಿಲ್ಲ. ಯಾವುದೇ ಡೇಟ್ ಕೂಡ ಇನ್ನು ಫಿಕ್ಸ್ ಆಗಿಲ್ಲ. ಆದರೆ ಜುಲೈ ತಿಂಗಳಲ್ಲಿ ಸಪ್ತಸಾಗರದಾಚೆ ಎಲ್ಲೋ ರಿಲೀಸ್ ಆಗುತ್ತದೆ ಅನ್ನುವ ಮಾಹಿತಿ ಹರಿದಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ