ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty New Movie) ಅಭಿನಯದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರವೂ ಬರುತ್ತಿದೆ. ಈ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದರು. ಈ ಚಿತ್ರದ ಪಾತ್ರ ತೀರಾ ಸಿಂಪಲ್ (Simple Star Rakshit Shetty) ಆಗಿಯೇನೂ ಇಲ್ಲ. ಸ್ವಲ್ಪ ಜಾಸ್ತಿನೇ ಕಾಂಪ್ಲೆಕ್ಸ್ ಕ್ಯಾರೆಕ್ಟರ್ ಇದಾಗಿದೆ. ಇದನ್ನ ನಿಭಾಯಿಸೋದು ಅಷ್ಟು ಸುಲಭದ ಕೆಲಸವೂ ಅಲ್ಲ ಬಿಡಿ. ಆದರೆ ರಕ್ಷಿತ್ ಈ ಒಂದು ಪಾತ್ರವನ್ನ ತುಂಬಾ (Sapta Sagaradaache Ello Movie) ಚೆನ್ನಾಗಿಯೇ ನಿಭಾಯಿಸಿದ್ದಾರೆ. ಇಂತಹ ಕಾಂಪ್ಲೆಕ್ಸ್ ಕ್ಯಾರೆಕ್ಟರ್ ಒಳಗೆ ಹೋಗಿ ಹೊರಗೆ ಬರುವ ಕಲೆ ರಕ್ಷಿತ್ ಶೆಟ್ಟಿ ಅವರಿಗೆ ಇದೆ. ರಕ್ಷಿತ್ ಅವರ ಈ ಚಿತ್ರದ ಒಂದಷ್ಟು (Movie Details) ಮಾಹಿತಿ ಇಲ್ಲಿದೆ ಓದಿ.
ಸಿಂಪಲ್ ಸ್ಟಾರ್ ಕಾಂಪ್ಲೆಕ್ಸ್ ಕ್ಯಾರೆಕ್ಟರ್ ಹೇಗಿದೆ?
ರಕ್ಷಿತ್ ಶೆಟ್ಟಿ ತಮ್ಮ ಚಿತ್ರ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆದರೆ ಎಲ್ಲ ಪಾತ್ರಗಳು ಇವರನ್ನ ಕಾಡಿರೋದು ಇಲ್ಲವೇ ಇಲ್ಲ. ಹಾಗಿರೋವಾಗ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಕಾಂಪ್ಲೆಕ್ಸ್ ಕ್ಯಾರೆಕ್ಟರ್ ಮಾಡಿದ್ದಾರೆ. ಅದನ್ನ ಅಷ್ಟೇ ಅದ್ಭುತವಾಗಿಯೇ ನಿಭಾಯಿಸಿದ್ದಾರೆ.
ಈ ಚಿತ್ರದ ಪಾತ್ರಕ್ಕೆ ರಕ್ಷಿತ್ ಶೆಟ್ಟಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ಎತ್ತರದ ರಕ್ಷಿತ್ ಶೆಟ್ಟಿ ಇಡೀ ಸ್ಕ್ರೀನ್ನ್ನೆ ಆವರಿಸೋ ರೀತಿಯಲ್ಲಿ ಕಾಣಸಿಕೊಂಡ್ರು ಆಶ್ಚರ್ಯ ಇಲ್ಲ ಅಂತಲೇ ಹೇಳಬಹುದು.
"ಮನು" ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಅಭಿನಯ
ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ "ಮನು" ಹೆಸರಿನ ಪಾತ್ರ ಮಾಡಿದ್ದಾರೆ. ಈ ಪಾತ್ರ ವಿಶೇಷವಾಗಿಯೇ ಇದೆ. ಇದಕ್ಕಾಗಿ ರಕ್ಷಿತ್ ಶೆಟ್ಟಿ ನಿದ್ದೆಗೆಟ್ಟಿದ್ದಾರೆ. ಈ ವಿಷಯವನ್ನ ಸ್ವತಃ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದು ಇದೆ.
ಮೊನ್ನೆ ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ನಲ್ಲಿ ತಮ್ಮ ಚಿತ್ರದ ಒಟ್ಟು ಪಟ್ಟಿಯನ್ನ ಬರೆದುಕೊಂಡಿದ್ದರು. ಸಪ್ತ ಸಾಗರದಾಚೆ ಎಲ್ಲೋ, ರಿಚರ್ಡ್ ಆ್ಯಂಟನಿ, ಪುಣ್ಯ ಕೋಟಿ ಪಾರ್ಟ್-1, ಪುಣ್ಯ ಕೋಟಿ ಪಾರ್ಟ್-2, ಮಿಡ್ನೈಟ್ ಟು ಮೋಕ್ಷ ಸೇರಿ ಈ ನಾಲ್ಕು ಚಿತ್ರಗಳು ನನ್ನ ನಿದ್ದೆ ಗೆಡಿಸಿದ ಅದ್ಭುತ ಚಿತ್ರಗಳು ಅಂತಲೇ ಹೇಳಿಕೊಂಡಿದ್ದರು.
ಸಪ್ತ ಸಾಗರದಾಚೆ ಎಲ್ಲೋ ಈಗ ಎಲ್ಲಿಗೆ ಬಂದಿದೆ?
ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಚಿತ್ರೀಕರಣ ನಡೆಯುತ್ತಿದೆ. ಗೋಧಿ ಬಣ್ಣ ಚಿತ್ರದ ಡೈರೆಕ್ಟರ್ ಹೇಮಂತ್ ರಾವ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ಮೂರ್ನಾಲ್ಕು ವಾರ ಕೆಲಸ ಇದೆ. ಅದು ಮುಗಿದರೆ, ಇಡೀ ಸಿನಿಮಾ ಪೂರ್ಣಗೊಂಡಂತೆ ಅನ್ನೋ ಮಾಹಿತಿ ಕೂಡ ಇದೆ.
ಇನ್ನ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಕೆಲಸ ಮುಗಿದ ಕೂಡಲೇ ರಕ್ಷಿತ್ ಶೆಟ್ಟಿ ತಮ್ಮ ರಿಚರ್ಡ್ ಆ್ಯಂಟನಿ ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ. ಇದಾದ್ಮೇಲೆ ಪುಣ್ಯಕೋಟಿ-1 ಮತ್ತು 2 ಚಿತ್ರದ ಕೆಲಸ ಆರಂಭಗೊಳ್ಳುತ್ತದೆ.
ರಕ್ಷಿತ್ ಅಭಿನಯದ ಕಿರಿಕ್ ಪಾರ್ಟಿ-2 ಸಿನಿಮಾ ಬರೋದಿಲ್ವೇ?
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ-2 ಚಿತ್ರವೂ ರಕ್ಷಿತ್ ಲೈನ್ ಅಪ್ಸ್ನಲ್ಲಿದೆ. ಅದನ್ನ ಸ್ವತಃ ರಕ್ಷಿತ್ ಈಗಾಗಲೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Mufti Movie: ಕಾಲಿವುಡ್ನಲ್ಲಿ ಮಫ್ತಿ ಸಿನಿಮಾ; ಹೆಸರು ಬದಲು, ಚಿತ್ರಕಥೆ ಕೂಡ ಚೇಂಜ್, ಸಿಂಗ ಪಾತ್ರಧಾರಿ ಮಧು ಏನ್ ಹೇಳ್ತಾರೆ?
ಆದರೆ ಇದಕ್ಕೆ ರಕ್ಷಿತ್ ಬೇರೆ ಪ್ಲಾನ್ ಹಾಕಿಕೊಂಡಿದ್ದಾರೆ. ಆದರೆ ಈ ಬಗ್ಗೆ ಇನ್ನು ಏನೂ ಹೇಳಿಕೊಂಡಿಲ್ಲ. ಇನ್ನುಳಿದಂತೆ ರಕ್ಷಿತ್ ಶೆಟ್ಟಿ ಸದ್ಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಶೂಟಿಂಗ್ಲ್ಲಿಯೇ ಬ್ಯುಸಿ ಇದ್ದಾರೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ