ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty Movie) ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಈಗಾಗಲೇ ಆ ಚಿತ್ರಗಳ ಕೆಲಸದಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿ, ಆದರೆ ಟ್ರಿಪಲ್ 7 ಚಾರ್ಲಿ ಚಿತ್ರ ಆದ್ಮೇಲೆ ರಕ್ಷಿತ್ ಅಭಿನಯದ ಯಾವುದೇ ಚಿತ್ರ ಇನ್ನೂ (Rakshit Shetty Movie Updates) ಅನೌನ್ಸ್ ಆಗಿಲ್ಲ. ಆ ಹಿನ್ನೆಲೆಯಲ್ಲಿ ಸದ್ಯ ರಕ್ಷಿತ್ ಶೆಟ್ಟಿ ಸುತ್ತ ಒಂದಷ್ಟು ವಿಷಯ ಈಗ ಹರಿದಾಡುತ್ತಿದೆ. ರಕ್ಷಿತ್ ಶೆಟ್ಟಿ (Kannada Acto Rakshit Shetty ) ಪರ ಭಾಷೆಯಲ್ಲಿ ಸಿನಿಮಾ ಮಾಡುತ್ತಾರೆ ಅನ್ನೋ ಆ ಸುದ್ದಿ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಇದೆ. ಇದರ ಬೆನ್ನಲ್ಲಿಯೇ ರಕ್ಷಿತ್ ಶೆಟ್ಟಿ ತಮ್ಮ ಅಭಿನಯದ ಚಿತ್ರಗಳ ಪಟ್ಟಿಯನ್ನೆ (Rakshit Shetty New Movie Updates) ರಿವೀಲ್ ಮಾಡಿದ್ದಾರೆ.
ಇದರಲ್ಲಿ ವಿಶೇಷವಾಗಿ ಕಿರಿಕ್ ಪಾರ್ಟಿ-2 ಚಿತ್ರದ ಕುರಿತು ಹೇಳಿಕೊಂಡಿದ್ದಾರೆ. ಅದರ ಒಟ್ಟು ಚಿತ್ರಣ ಇಲ್ಲಿದೆ ಓದಿ.
ರಕ್ಷಿತ್ ಶೆಟ್ಟಿ ಪರ ಭಾಷೆ ಸಿನಿಮಾ ಮಾಡೋದಿಲ್ವೇ?
ರಕ್ಷಿತ್ ಶೆಟ್ಟಿ ಪರ ಭಾಷೆ ಚಿತ್ರದಲ್ಲಿ ಅಭಿನಯಿಸ್ತಿರೋ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೆ ತಮ್ಮ ಚಿತ್ರಗಳ ಕುರಿತು ಒಂದಷ್ಟು ಅಧಿಕೃತ ಮಾಹಿತಿಕೊಟ್ಟಿದ್ದಾರೆ. ಯಾವೆಲ್ಲ ಚಿತ್ರಗಳು ಇವೆ. ಯಾವ ಹಂತಕ್ಕಿವೆ ಅನ್ನೋದನ್ನ ಸಂಕ್ಷಿಪ್ತವಾಗಿಯೇ ಹೇಳಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿರೋ ಚಿತ್ರಗಳು ವಿಶೇಷವಾಗಿಯೇ ಇವೆ. ಎಲ್ಲ ಚಿತ್ರಗಳಲ್ಲೂ ಏನೋ ಒಂದು ಸೆಳೆತ ಇದೆ. ಇವುಗಳ ಬಗ್ಗೆ ಈಗಾಗಲೇ ಸುದ್ದಿ ಹೊರ ಬಿದ್ದಿದೆ. ಆದರೆ ಇವೆಲ್ಲ ಯಾವ ಹಂತದಲ್ಲಿವೆ ಅನ್ನೋದನ್ನ ರಕ್ಷಿತ್ ಶೆಟ್ಟಿ ವಿವರಿಸಿದ್ದಾರೆ.
ರಕ್ಷಿತ್ ಶೆಟ್ಟಿ ಒಪ್ಪಿರೋ ಆ 6 ಚಿತ್ರಗಳು ಯಾವವು?
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಒಟ್ಟು 6 ಚಿತ್ರಗಳನ್ನ ಒಪ್ಪಿಕೊಂಡಿದ್ದಾರೆ. ಅದರಲ್ಲಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರವೂ ಇದೆ. ಇದರ ಜೊತೆಗೆ ಪುಣ್ಯಕೋಟಿ ಪಾರ್ಟ್-1 ಪುಣ್ಯಕೋಟಿ-2, ಮಿಡ್ನೈಟ್ ಟು ಮೋಕ್ಷ, ಕಿರಿಕ್ ಪಾರ್ಟಿ-2 ಸಿನಿಮಾಗಳು ಇವೆ.
ಇವುಗಳಲ್ಲಿ ಹೆಚ್ಚು ಕಡಿಮೆ ಎಲ್ಲ ಚಿತ್ರಗಳು ಆಗಿವೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಕೆಲಸ ಪೂರ್ಣ ಆದರೆ, ಒಪ್ಪಿಕೊಂಡ ಎಲ್ಲ ಚಿತ್ರಗಳೂ ಪೂರ್ಣ ಆದಂತೆ ಅಂತಲೇ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದ ತಮ್ಮ ಅಧಿಕೃತ ಪೇಜ್ನಲ್ಲಿಯೇ ಈ ಒಂದು ವಿಷಯವನ್ನ ತಿಳಿಸಿದ್ದಾರೆ.
ಕಿರಿಕ್ ಪಾರ್ಟಿ-2 ಚಿತ್ರದ ಬಗ್ಗೆ ಬೇರೆ ಪ್ಲಾನ್ ಇದೆ!
ರಕ್ಷಿತ್ ಶೆಟ್ಟಿ ಚಿತ್ರ ಜೀವನದಲ್ಲಿ ಕಿರಿಕ್ ಪಾರ್ಟಿ ವಿಶೇಷವಾದ ಸಿನಿಮಾನೇ ಆಗಿದೆ. ಈ ಚಿತ್ರ ಹಿಟ್ ಆದ್ಮೇಲೆ ಪಾರ್ಟ್-2 ವಿಷಯವೂ ಹರಿದಾಡಿತ್ತು. ಅದೇ ವಿಷಯಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಸ್ಪಷ್ಟವಾಗಿಯೇ ಈಗ ಹೇಳಿಕೊಂಡಿದ್ದಾರೆ.
ಕಿರಿಕ್ ಪಾರ್ಟಿ-2 ಸಿನಿಮಾದ ಬಗ್ಗೆ ಬೇರೆ ಪ್ಲಾನ್ ಇದೆ. ಆದರೆ ಈಗ ಹರಿದಾಡುತ್ತಿರೋ ಸುದ್ದಿಗಳು ನಿಜ ಅಲ್ಲವೇ ಅಲ್ಲ. ಮುಂದೆ ಎಂದೂ ಇವು ನಿಜ ಆಗೋದೂ ಇಲ್ಲ. Love You All ಅಂತಲೇ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಹೊಸ ಚಿತ್ರ ಯಾವಾಗ ರಿಲೀಸ್?
ರಕ್ಷಿತ್ ಶೆಟ್ಟಿ ಒಪ್ಪಿರೋ ಅಷ್ಟೂ ಸಿನಿಮಾದ ಕೆಲಸ ಪೂರ್ಣಗೊಳಿಸುತ್ತಿದ್ದಾರೆ. 2022 ರಲ್ಲಿ ಟ್ರಿಪಲ್ 7 ಚಾರ್ಲಿ ಬಂದ್ಮೇಲೆ ಇನ್ನು ಯಾವುದೇ ಚಿತ್ರ ರಿಲೀಸ್ ಆಗಿಲ್ಲ. ಆದರೆ ಈಗ ಒಪ್ಪಿರೋ ಚಿತ್ರಗಳಲ್ಲಿ ಯಾವುದು ಮೊದಲು ಬರುತ್ತದೆ ಅನ್ನೋದೇ ಈಗೀನ ಕುತೂಹಲ ಆಗಿದೆ.
ಇದನ್ನೂ ಓದಿ: Rishab shetty: ವಾರಿಯರ್ ಲುಕ್ನಲ್ಲಿ ಕಾಂತಾರ ಶಿವ; ಹುಚ್ಚು ಕನಸುಗಳಿಗೆ ಜೀವ ತುಂಬಿದೆ ಎಂದ ರಿಷಬ್ ಶೆಟ್ಟಿ
ಇನ್ನು ರಕ್ಷಿತ್ ಶೆಟ್ಟಿ ಅಭಿನಯದ ಪುಣ್ಯಕೋಟಿ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಕೂಡ ಇದೆ. ಇದು ಎರಡು ಭಾಗದಲ್ಲಿಯೇ ರಿಲೀಸ್ ಆಗುತ್ತಿದೆ. ಆದರೆ ಯಾವಾಗ ಅನ್ನೋದ ಮಾತ್ರ ಇನ್ನೂ ಕ್ಯೂರಿಯೆಸ್ ಆಗಿಯೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ