ಸ್ಯಾಂಡಲ್ವುಡ್ ಸಿಂಪಲ್ (Simple Star Rakshit Shetty) ಸ್ಟಾರ್ ರಕ್ಷಿತ್ ಶೆಟ್ಟಿ ಇಲ್ಲಿವರೆಗೂ ಬೇರೆ ಭಾಷೆಯ ಸಿನಿಮಾ ಮಾಡಿಯೇ ಇಲ್ಲ. ಆದರೆ ರಕ್ಷಿತ್ ಅಭಿನಯದ (Rakshit Shetty Tamil Movie) ಚಾರ್ಲಿ ಟ್ರಿಪಲ್ 7 ಚಿತ್ರ ಬೇರೆ ಭಾಷೆಯಲ್ಲಿ ಡಬ್ ಆಗಿತ್ತು. ಈಗ ಇದೇ ಕನ್ನಡದ ನಾಯಕ ನಟ ರಕ್ಷಿತ್ ಶೆಟ್ಟಿ ಕಾಲಿವುಡ್ಗೆ (Kollywood Cinema) ಕಾಲಿಡುತ್ತಿದ್ದಾರೆ. ಫಸ್ಟ್ ಟೈಮ್ ತಮ್ಮ ಚಿತ್ರ ಜೀವನದಲ್ಲಿ ತಮಿಳು ಸಿನಿಮಾವೊಂದನ್ನ ಒಪ್ಪಿದ್ದಾರೆ. ಇನ್ನೇನು ಈ ಸಿನಿಮಾ (Tamil Actor Vijay Cinema) ಶೂಟಿಂಗ್ ಕೂಡ ಶುರು ಆಗುತ್ತದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪಾತ್ರ ಹೇಗಿರುತ್ತದೆ? ರಕ್ಷಿತ್ ಅಭಿನಯದ ಈ ಚಿತ್ರದಲ್ಲಿ ಹೀರೋ ಯಾರು? ಈ ಎಲ್ಲ ಹರಿದಾಡುತ್ತಿರೋ ಸುದ್ದಿಯ ಸುತ್ತ ಸದ್ಯ ಇಲ್ಲೊಂದು ಸ್ಟೋರಿ ಇದೆ ಓದಿ.
ರಕ್ಷಿತ್ ಶೆಟ್ಟಿ ಕಾಲಿವುಡ್ ಸಿನಿಮಾ ಪಯಣ ಶುರು?
ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸುತ್ತ ಈಗೊಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಇದೆ. ಸಿನಿಮಾ ಜರ್ನಿಯಲ್ಲಿ ರಕ್ಷಿತ್ ಶೆಟ್ಟಿ ತಮಿಳು ಸಿನಿಮಾ ಮಾಡಿದ್ದೇ ಇಲ್ಲ. ಆದರೆ ಈ ಚಿತ್ರದ ಸುತ್ತ ಈಗ ಒಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಕ್ಷಿತ್ ಶೆಟ್ಟಿ ಈ ಚಿತ್ರದ ಬಗ್ಗೆ ಸದ್ಯ ಎಲ್ಲೂ ಮಾತನಾಡಿರೋ ಹಾಗೇ ಕಾಣೋದಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ವಿಷಯ ಹೆಚ್ಚು ಹರಿದಾಡುತ್ತಿದೆ.
ವಿಶೇಷವಾಗಿಯೇ ಈ ಚಿತ್ರದಲ್ಲಿ ಇಬ್ಬರು ದಿಗ್ಗಜ ನಟರ ಜೊತೆಗೆ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿದ್ದಾರೆ ಅನ್ನೋದೇ ಈಗೀನ ಭಾರೀ ಕುತೂಹಲ ಆಗಿದೆ. ಆ ಕುತೂಹಲಕ್ಕೆ ಕಾರಣವೂ ಇದೆ. ಅದೇನೂ ಅನ್ನೋದನ್ನ ಹೇಳ್ತಿವಿ ಓದಿ.
ಇಳಯದಳಪತಿ ವಿಜಯ್ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ!
ಇಳಯದಳಪತಿ ವಿಜಯ್ ಸಿನಿಮಾಗಳಲ್ಲಿ ಮೊನ್ನೆ ವಾರಿಸು ಚಿತ್ರ ಬಂದು ಹೋಗಿದೆ. ಇದಾದ್ಮೇಲೆ ವಿಜಯ್ 67ನೇ ಚಿತ್ರದ ಮೇಲೆನೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಈ ಚಿತ್ರದ ಬಗ್ಗೆ ಅದೇನೋ ಭಾರೀ ಕುತೂಹಲ ಕೂಡ ಮೂಡಿದೆ.
ಇಷ್ಟಿರೋವಾಗ್ಲೇ, ಕಾಲಿವುಡ್ನ ಈ ಚಿತ್ರದಲ್ಲಿ ಕನ್ನಡದ ನಾಯಕ ನಟ ರಕ್ಷಿತ್ ಶೆಟ್ಟಿ ಕೂಡ ಅಭಿನಯಿಸಲಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿಯೇ ಹರಿದಾಡುತ್ತಿದೆ. ಅಧಿಕೃತವಾಗಿ ಇಲ್ಲಿವರೆಗೂ ಯಾರೂ ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಆದರೆ ಸುದ್ದಿ ಮಾತ್ರ ಭರ್ಜರಿಯಾಗಿಯೇ ಹರಿದಾಡುತ್ತಿದೆ.
ಅರ್ಜುನ್ ಸರ್ಜಾ-ಕಮಲ್ ಹಾಸನ್-ರಕ್ಷಿತ್ ಶೆಟ್ಟಿ!
ವಿಜಯ್ ಅಭಿನಯದ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಈ ಲೆಕ್ಕದಲ್ಲಿ ಈಗ ಕೇಳಿ ಬರ್ತಿರೋ ಹೆಸರುಗಳಲ್ಲಿ ಅರ್ಜುನ್ ಸರ್ಜಾ, ಕಮಲ್ ಹಾಸನ್ ಮತ್ತು ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿದ್ದಾರೆ ಅನ್ನೋದು ಮಾತ್ರ ಹೆಚ್ಚು ಹೈಲೈಟ್ ಆಗುತ್ತಿದೆ.
ಇದರ ಬೆನ್ನಲ್ಲಿಯೇ ಇನ್ನೂ ಒಂದು ಸುದ್ದಿ ಕೂಡ ಇದೆ. ಇದು ರಕ್ಷಿತ್ ಶೆಟ್ಟಿಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ. ಇದು ಬಾಲಿವುಡ್ನ ಒಂದು ಕಾಲದ ನಾಯಕ ನಟನ ವಿಷಯವೇ ಆಗಿದೆ.
ವಿಜಯ್ ಚಿತ್ರದಲ್ಲಿ ಸಂಜಯ್ ದತ್ ಅಭಿನಯ?
ವಿಜಯ್ 67ನೇ ಚಿತ್ರದಲ್ಲಿ ತಾರಾ ಬಳಗೆ ದೊಡ್ಡದೇ ಇದ್ದಂತೆ ಕಾಣಿಸುತ್ತಿದೆ. ಈಗೀನ ಹರಿದಾಡುತ್ತಿರೋ ಸುದ್ದಿಯನ್ನೆ ಗಮನಸಿದ್ರೆ, ಈ ಚಿತ್ರದಲ್ಲಿ ಬಾಲಿವುಡ್ನ ನಟ ಸಂಜಯ್ ದತ್ ಕೂಡ ಅಭಿನಯಿಸ್ತಾರೆ ಅನ್ನೋ ಸುದ್ದಿನೂ ಇದೆ.
ಇದನ್ನೂ ಓದಿ: Varisu Collection: 100 ಕೋಟಿ ಕ್ಲಬ್ ಸೇರಿದ ರಶ್ಮಿಕಾ ಸಿನಿಮಾ! ವಾರಿಸು ಕಲೆಕ್ಷನ್ ಎಷ್ಟು?
ಇನ್ನು ಈ ಚಿತ್ರವನ್ನ ಮಾಸ್ಟರ್ ಚಿತ್ರದ ಡೈರೆಕ್ಟರ್ ಲೋಕೇಶ್ ಕನಕರಾಜ್ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಎಲ್ಲ ವಿಷಯ ಈಗಾಗಲೇ ಅನೌನ್ಸ್ ಆಗಿವೆ. ಆದರೆ, ಕನ್ನಡ ನಟ ರಕ್ಷಿತ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ಅಭಿನಯಿಸ್ತಾರೆ ಅನ್ನೋದೇ ಈಗೀನ ಅಪ್ಡೇಟ್ಸ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ