• Home
  • »
  • News
  • »
  • entertainment
  • »
  • Rakshit Shetty: ಸಮಂತಾ ಚಿತ್ರಕ್ಕೆ ಕನ್ನಡ ಸ್ಟಾರ್ ಸಾಥ್; ಚಿತ್ರದ ಟ್ರೈಲರ್ ರಿಲೀಸ್ ಮಾಡಲಿರುವ ರಕ್ಷಿತ್ ಶೆಟ್ಟಿ

Rakshit Shetty: ಸಮಂತಾ ಚಿತ್ರಕ್ಕೆ ಕನ್ನಡ ಸ್ಟಾರ್ ಸಾಥ್; ಚಿತ್ರದ ಟ್ರೈಲರ್ ರಿಲೀಸ್ ಮಾಡಲಿರುವ ರಕ್ಷಿತ್ ಶೆಟ್ಟಿ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶೋದಾ ಸಿನಿಮಾ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶೋದಾ ಸಿನಿಮಾ

ಯಶೋದಾ ಸಿನಿಮಾ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಸಿಂಪಲ್ (Simple Star) ಸ್ಟಾರ್ ರಕ್ಷಿತ್ (Rakshith Shetty) ಶೆಟ್ಟಿ ಈ ಹಿಂದೆ ಚಾರ್ಲಿ -777 ಚಿತ್ರದ ಮೂಲಕ ಧೂಳ್ ಎಬ್ಬಿಸಿದ್ದಾರೆ. ಈ ಚಿತ್ರದಲ್ಲಿ ವಿಶೇಷವಾಗಿಯೇ ಕಾಣಿಸಿಕೊಂಡು ಸಿನಿಪ್ರೇಮಿಗಳಿಗೆ ಹೊಸ ರೀತಿಯ ಸಿನಿಮಾ ಕೊಟ್ಟಿದ್ದಾರೆ. ಕನ್ನಡದಲ್ಲಿ (Kannada Cinema) ಈಗಾಗಲೇ ಡಾಗ್ ಸಿನಿಮಾ ಬಂದಿವೆ. ಆದರೆ ಚಾರ್ಲಿ-777 ವಿಶೇಷವಾಗಿಯೇ ಇತ್ತು. ಪ್ರಾಣಿ ಪ್ರಿಯರ ವಿಶೇಷ ಚಿತ್ರವೂ ಆಗಿತ್ತು. ಈ ಸಿನಿಮಾದ ನಾಯಕ ನಟ ರಕ್ಷಿತ್ ಶೆಟ್ಟಿ ಈಗ ಟಾಲಿವುಡ್​ನ ಹೆಸರಾಂತ ನಾಯಕಿ ಸಮಂತಾ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಈ ಮೂಲಕ ಆ ಫ್ಯಾನ್ (Pan India) ಇಂಡಿಯಾ ಚಿತ್ರಕ್ಕೂ ತಮ್ಮದೇ ರೀತಿಯಲ್ಲಿಯೆ ಸಪೋರ್ಟ್ ಮಾಡುತ್ತಿದ್ದಾರೆ. ಅದರ ವಿವರ ಇಲ್ಲಿದೆ.


ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಮಂತಾ ಸಿನಿಮಾ
ನಾಯಕಿಯರ ಸಿನಿಮಾ ಪ್ಯಾನ್ ಇಂಡಿಯಾ ಹೋಗೋದು ಕಡಿಮೆ. ಟಾಲಿವುಡ್​ ನ ನಾಯಕಿ ಸಮಂತಾ ಈ ವಿಷಯದಲ್ಲಿ ಲಕ್ಕಿಯಾಗಿದ್ದಾರೆ. ಸಮಂತಾ ಅಭಿನಯದ ಸಿನಿಮಾವೊಂದು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್​ಗೆ ರೆಡಿ ಆಗಿದೆ.


ಯಶೋದಾ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರ್ತಿರೋ ಈ ಚಿತ್ರದ ಹೆಸರು ಯಶೋದಾ, ಇದು ವಿಶೇಷ ಕಥಾಹಂದರವನ್ನೇ ಹೊಂದಿದೆ. ಸಿನಿಮಾ ಪ್ರೇಮಿಗಳಿಗೂ ಇದು ಹೊಸ ರೀತಿಯ ಎಂಟರಟೈನಮೆಂಟ್ ಕೊಡಲು ರೆಡಿ ಆಗಿದೆ.


ಸಮಂತಾ ಅಭಿನಯದ ಈ ಚಿತ್ರದಲ್ಲಿ ಆ್ಯಕ್ಷನ್ ಕೂಡ ಇದೆ. ಈ ಚಿತ್ರದ ಮೂಲಕ ನಟಿ ಸಮಂತಾ ವಿಭಿನ್ನ ರೀತಿಯಲ್ಲಿಯೇ ಪ್ರೇಕ್ಷಕರನ್ನ ರಂಜಿಸಲು ಬರ್ತಿದ್ದಾರೆ. ಈ ಒಂದು ಚಿತ್ರಕ್ಕೇನೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಸಾಥ್ ಕೊಟ್ಟಿದ್ದಾರೆ.


Kannada Actor Rakshit Shetty going to Release Samantha Film Trailer
ಒಂದೇ ಯಶೋದಾ ಸಿನಿಮಾ ಇಬ್ಬರು ಡೈರೆಕ್ಟರ್


ಒಂದೇ ಯಶೋದಾ ಸಿನಿಮಾ ಇಬ್ಬರು ಡೈರೆಕ್ಟರ್
ಯಶೋದಾ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಅವುಗಳಲ್ಲಿ ಡೈರೆಕ್ಟರ್ ವಿಷಯವೂ ಕೂಡ ಒಂದಾಗಿದೆ. ಹೌದು, ಈ ಒಂದೇ ಸಿನಿಮಾವನ್ನ ಹರಿ ಮತ್ತು ಹರೀಶ್ ಎಂಬುವವರು ಡೈರೆಕ್ಟ್ ಮಾಡಿದ್ದಾರೆ.


ಇದನ್ನೂ ಓದಿ: Samantha: ಸರ್ಜರಿ ಮಾಡಿಸ್ಕೊಂಡ್ರಾ ಸಮಂತಾ? ಮುಖ ಹೇಗಾಗಿದೆ ನೋಡಿ


ಯಶೋದಾ ಅನ್ನೋ ಹೆಸರೇ ಹೇಳುವಂತೆ ಇದು ಮಹಿಳಾ ಪ್ರಧಾನ ಸಿನಿಮಾನೇ ಅನಿಸುತ್ತಿದೆ. ವಿಶೇಷವಾಗಿ ಈ ಚಿತ್ರದಲ್ಲಿ ಆ್ಯಕ್ಷನ್ ಕೂಡ ಇವೆ ಅಂತಲೇ ಹೇಳಿದ್ದಾರೆ. ಇದರಿಂದ ಈ ಚಿತ್ರ ಭರ್ಜರಿಯಾಗಿಯೇ ಇರುತ್ತದೆ ಅನ್ನೋದೇ ಈಗೀನ ವಿಶೇಷ.


ಪ್ಯಾನ್ ಇಂಡಿಯಾಮಟ್ಟದಲ್ಲಿ ಯಶೋದಾ ಸಿನಿಮಾ ರಿಲೀಸ್
ಯಶೋದಾ ಸಿನಿಮಾ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.


ಇದೇ ವರ್ಷ ನವೆಂಬರ್-11 ರಂದು ಯಶೋದಾ ಸಿನಿಮಾ ರಿಲೀಸ್
ಈ ಒಂದು ಸಿನಿಮಾ ಈಗ ರಿಲೀಸ್​ಗೆ ರೆಡಿ ಆಗಿದೆ. ನವೆಂಬರ್-11 ರಂದು ಎಲ್ಲೆಡೆ ತೆಲುಗು ಭಾಷೆಯ ಯಶೋದಾ ಸಿನಿಮಾ ರಿಲೀಸ್ ಆಗುತ್ತಿದೆ. ಇದಕ್ಕೂ ಮೊದಲೇ ಸಿನಿಮಾ ತಂಡ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಪ್ಲಾನ್​ ಮಾಡಿದ್ದಾರೆ.


ಯಶೋದಾ ಟ್ರೈಲರ್ ರಿಲೀಸ್ ಮಾಡ್ತಾರೆ ರಕ್ಷಿತ್
ಸಮಂತಾ ಅಭಿನಯದ ಯಶೋದಾ ಸಿನಿಮಾದ ಟ್ರೈಲರ್ ಎಲ್ಲ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಅಕ್ಟೋಬರ್-27 ರಂದು ಕನ್ನಡದ ಟ್ರೈಲರ್ ರಿಲೀಸ್ ಆಗುತ್ತಿದೆ. ಅದನ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಲೀಸ್ ಮಾಡುತ್ತಿದ್ದಾರೆ. ಈ ಮೂಲಕ ಸಮಂತಾ ಸಿನಿಮಾಕ್ಕೆ ರಕ್ಷಿತ್ ಸಪೋರ್ಟ್ ಕೊಟ್ಟಿದ್ದಾರೆ.


Kannada Actor Rakshit Shetty going to Release Samantha Film Trailer
ನವೆಂಬರ್-11 ರಂದು ಯಶೋದಾ ಸಿನಿಮಾ ರಿಲೀಸ್


ಯಶೋದಾ ಸಿನಿಮಾದ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಯ ಚಿತ್ರದ ಟ್ರೈಲರ್​ ಗಳನ್ನ ಆಯಾ ಭಾಷೆಯ ಹೀರೋಗಳು ರಿಲೀಸ್ ಮಾಡಲಿದ್ದಾರೆ. ಹೀಗಿರೋವಾಗ ಅಕ್ಟೋಬರ್-27 ರಂದು ರಕ್ಷಿತ್ ಶೆಟ್ಟಿ ಸಂಜೆ 5:36 ಕ್ಕೆ ಯಶೋದಾ ಚಿತ್ರದ ಕನ್ನಡ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ.


ಯಶೋದಾ ಸಿನಿಮಾದಲ್ಲಿ ಸಮಂತಾ ಜೊತೆಗೆ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ. ವರಲಕ್ಷ್ಮಿ ಶರತ್​ಕುಮಾರ್, ಉನ್ನಿ ಮುಕುಂದನ್ ಹೀಗೆ ಇನ್ನೂ ಅನೇಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಇದನ್ನೂ ಓದಿ: Kantara Rishab Shetty Next Movie: ಕಾಂತಾರ ಸಿನಿಮಾ ಸೂಪರ್ ಹಿಟ್, ಮುಂದೇನ್ ಮಾಡ್ತಾರೆ ರಿಷಬ್?


ಉಳಿದಂತೆ ಈ ಚಿತ್ರ ತನ್ನ ವಿಶೇಷ ಕಂಟೆಂಟ್​ನಿಂದಲೇ ಈಗ ಗಮನ ಸೆಳೆಯುತ್ತಿದೆ. ರಕ್ಷಿತ್ ಶೆಟ್ಟಿ ಈ ಸಿನಿಮಾ ಬಗ್ಗೆ ತಿಳಿದುಕೊಂಡು ಈಗ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲು ಸಜ್ಜಾಗಿದ್ದಾರೆ.

First published: