• Home
  • »
  • News
  • »
  • entertainment
  • »
  • Bigg Boss Rakesh Adiga: ಪ್ರ್ಯಾಂಕ್ ಮಾಡಿ ಜೈಲು ಸೇರಿದ ರಾಕಿ ಭಾಯ್-ಕಳಪೆ ಪಟ್ಟ ಕಟ್ಟಿದರು ಇಡೀ ಮನೆ ಮಂದಿ

Bigg Boss Rakesh Adiga: ಪ್ರ್ಯಾಂಕ್ ಮಾಡಿ ಜೈಲು ಸೇರಿದ ರಾಕಿ ಭಾಯ್-ಕಳಪೆ ಪಟ್ಟ ಕಟ್ಟಿದರು ಇಡೀ ಮನೆ ಮಂದಿ

ಬಿಗ್ ಬಾಸ್  ಜೈಲು ಸೇರಿದ ರಾಕಿ ಭಾಯ್

ಬಿಗ್ ಬಾಸ್ ಜೈಲು ಸೇರಿದ ರಾಕಿ ಭಾಯ್

ರಾಕೇಶ್ ಅಡಿಗ ತನ್ನ ಪ್ರ್ಯಾಂಕ್​ ಕಾರ್ಯಾಚರಣೆ ಬಗ್ಗೆ ಹೆಚ್ಚಿಗೆ ಏನೂ ವಿವರಣೆ ಕೊಡಲಿಲ್ಲ. ಖೈದಿಯ ಬಟ್ಟೆ ತೊಟ್ಟು ಜೈಲು ಸೇರಿದರು. ನಯಾ ಕ್ಯಾಪ್ಟನ್ ಆರ್ಯವರ್ಧನ್ ಗುರೂಜಿ ಜೈಲ್ ಲಾಕ್ ತೆಗೆದು ರಾಕಿಯನ್ನ ಲಾಕ್ ಮಾಡಿಯೇ ಬಿಟ್ಟರು.

  • Share this:

ಬಿಗ್ ಬಾಸ್ ಮನೆಯಲ್ಲಿ ಪ್ರ್ಯಾಂಕ್ (Prank Master) ಮಾಸ್ಟರ್ ಇಬ್ಬರಿದ್ದಾರೆ. ಅವರಲ್ಲಿ ಒಬ್ಬರು ಮಾಸ್ಟರ್ (Master Mind) ಮೈಂಡ್. ಮತ್ತೊಬ್ಬರು ಅದನ್ನ ಕಾರ್ಯರೂಪಕ್ಕೆ ತರೋ ಮೈಂಡ್. ನಿಜ, ಬಿಗ್ ಮನೆಯಲ್ಲಿ ಪ್ರ್ಯಾಂಕ್ ಆಟ ಬಲು ಜೋರಾಗಿಯೇ ನಡೆದು ಹೋಗಿದೆ. ಇದರಿಂದ ಸ್ವತಃ ಬಿಗ್ ಬಾಸ್ (Big Boss) ಕೂಡ ಪ್ರ್ಯಾಂಕ್ ಮಾಡಿ ಇಡೀ ಮನೆಯ ಎಲ್ಲ ಸದಸ್ಯರಿಗೂ (Shock) ಶಾಕ್ ಕೊಟ್ಟಿದ್ದಾರೆ. ಆದರೆ ದಿನ ಕೊನೆಯಲ್ಲಿ ನಿಜಕ್ಕೂ ಬಿಗ್ ಮನೆಯ ಪ್ರ್ಯಾಂಕ್ ಮಾಸ್ಟರ್ ಯಾರೂ ಅನ್ನೋದು ತಿಳಿದು ಹೋಯಿತು. ಅದರಿಂದ ಮನೆಯ ಸದಸ್ಯರೂ ನಲುಗಿದ್ದರು. ಅದರಿಂದ ಆ ಪ್ರ್ಯಾಂಕ್ ಮಾಸ್ಟರ್ ಈಗ ಜೈಲು ಪಾಲಾಗಿದ್ದಾರೆ. ಆದರೆ ಇದು ರಿಯಲ್ ಜೈಲ್ ಅಲ್ಲವೇ ಅಲ್ಲ. ಬಿಗ್ ಬಾಸ್ ಮನೆಯ ಜೈಲು.


ಬಿಗ್ ಬಾಸ್ ಮನೆಯ ಜೈಲು ಸೇರಿದ ಪ್ರ್ಯಾಂಕ್ ಮಾಸ್ಟರ್
ಬಿಗ್ ಬಾಸ್ ಮನೆಯಲ್ಲಿ ಪ್ರ್ಯಾಂಕ್ ಮಾಡಿದವರು ಯಾರು? ಮನೆಯ ಬಹುತೇಕ ಸದಸ್ಯರು ಈ ಪ್ರ್ಯಾಂಕ್ ಆಟದಲ್ಲಿ ಭಾಗಿಯಾಗಿದ್ದರು. ಇದರ ಏಟಿಗೆ ಕೆಲವರು ನಲುಗಿ ಹೋದರು.


ರಾಕೇಶ್ ಮೂರ್ಛೆ ರೋಗ ಪ್ರ್ಯಾಂಕ್​ಗೆ ಪ್ರಶಾಂತ್ ಸಂಬರ್ಗಿ ತಬ್ಬಿಬ್ಬು
ಹೌದು, ರಾಕೇಶ್ ಒಂದು ದಿನ ಯಾರೂ ನಿರೀಕ್ಷೆ ಮಾಡದೇ ಇರೋ ಒಂದು ಪ್ರ್ಯಾಂಕ್ ಮಾಡಿದ್ದರು. ಮೂರ್ಛೆ ರೋಗ ಬಂದ ರೀತಿಯಲ್ಲಿಯೇ ಬಿಗ್ ಮನೆಯ ಆವರಣದಲ್ಲಿ ಬಂದು ಬಿದ್ದರು. ಆಗಲೇ ನೋಡಿ ಕೆಲವರನ್ನ ಬಿಟ್ಟು ಎಲ್ಲರೂ ಶಾಕ್ ಆಗಿದ್ದರು.


ಪ್ರಶಾಂತ್ ಸಂಬರ್ಗಿ ಅಂತೂ ಫುಲ್ ಶಾಕ್ ಅಲ್ಲಿಯೇ ಇದ್ದರು. ರೂಪೇಶ್ ಕೂಡ ಶಾಕ್ ತೆಗೆದುಕೊಂಡಿದ್ದರು. ಆದರೆ ನೇಹಾ ಗೌಡ ಆ್ಯಂಡ್ ಅಮೂಲ್ಯ ಗೌಡ ಸೇರಿದಂತೆ ಇನ್ನು ಕೆಲವರು ರಾಕೇಶ್ ಬಳಿಯೇ ಬಂದು ಮಜಾ ತೆಗೆದುಕೊಳ್ಳುತ್ತಿದ್ದರು.


Kannada Actor Rakesh Adiga is a Real Prank Master of Big Boss House
ರಾಕೇಶ್ ಅಡಿಗ ರಾಕಿಂಗ್ ಟೈಮ್


ರಾಕಿಯ ಪ್ರ್ಯಾಂಕ್​ ಗೆ ಮನೆಯ ಮಂದಿಯಲ್ಲ ಬೇಸರ
ಯಾವಾಗ ಇದು ರಾಕೇಶ್ ಮಾಡಿದ ಪ್ರ್ಯಾಂಕ್ ಅಂತ ಗೊತ್ತಾಯಿತೊ ಆಗ ಕೆಲವರಂತೂ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಂಡರು. ಪ್ರಶಾಂತ್ ಸಂಬರ್ಗಿ ಅಂತೂ ಸಿಕ್ಕಾಪಟ್ಟೆ ಹರ್ಟ್ ಆಗಿದ್ದರು.


ಈ ರೀತಿಯ ಸಮಸ್ಯೆ ತಮ್ಮ ಮಗನಿಗ ಇದೆ. ಅದರ ನೋವು ಏನೂ ಅನ್ನೋದು ನನಗೆ ಗೊತ್ತಿದೆ. ರಾಕೇಶ್ ನೀವು ಈ ವಿಷಯದಲ್ಲಿ ಪ್ರ್ಯಾಂಕ್ ಮಾಡಿರೋದು ತಪ್ಪು ಅಂತಲೇ ಪ್ರಶಾಂತ್ ಸಂಬರ್ಗಿ ನೇರವಾಗಿ ಹೇಳಿಯೇ ಬಿಟ್ಟರು.


ಇದನ್ನೂ ಓದಿ: Kantara-Kichcha Sudeep: ಕಾಂತಾರ ಸಿನಿಮಾ ನೋಡಿ ಪತ್ರ ಬರೆದ ಕಿಚ್ಚ ಸುದೀಪ್!


ಇದರ ಹೊರತಾಗಿ ರಾಕೇಶ್ ಇನ್ನು ಹಲವು ಪ್ರ್ಯಾಂಕ್​ಗಳನ್ನೂ ಮಾಡಿದ್ದರು. ಅನುಪಮಾ ಗೌಡ ಕೂಡ ಈ ಕೆಲಸ ಮಾಡಿದ್ದರು. ಆದರೆ ಅನುಪಮಾ ಗೌಡ ಮಾಡಿರೋ ಪ್ರ್ಯಾಂಕ್ ಹಿಂದಿನ ಅಸಲಿ ಮಾಸ್ಟರ್ ರಾಕೇಶ್ ಅನ್ನೋದು ಕೂಡ ಈಗ ರಿವೀಲ್ ಆಗಿದೆ.


ಪ್ರ್ಯಾಂಕ್ ಮಾಸ್ಟರ್​ಗೆ ಬುದ್ದಿ ಹೇಳಿದ ಕಾವ್ಯ ಗೌಡ
ಅತ್ಯುತ್ತಮ ಯಾರು? ಕಳಪೆ ಯಾರು? ಅಂತ ಎಂದಿನಂತೆ ಮನೆಯ ಸದಸ್ಯರ ಹೇಳಬೇಕಿತ್ತು. ಅದರಂತೆ ಎಲ್ಲರೂ ಹೇಳ್ತಾ ಹೋದ್ರು. ಗುರೂಜಿ ಆರ್ಯವರ್ಧನ್ ಅತ್ಯುತ್ತಮ ಅಂತಲೇ ಮನೆಯ ಬಹುತೇಕ ಸದ್ಯರು ಹೇಳಿದರು. ಕಳಪೆ ವಿಚಾರಕ್ಕೆ ಬಂದ್ರೆ, ರಾಕೇಶ್ ಅಡಿಗ ಹೆಸರನ್ನ ಜಾಸ್ತಿ ಹೇಳಿದರು.


Kannada Actor Rakesh Adiga is a Real Prank Master of Big Boss House
ರಾಕೇಶ್ ಅಡಿಗ-ರೂಪೇಶ್ ರಾಜಣ್ಣ-ಪ್ರಶಾಂತ್ ಸಂಬರ್ಗಿ


ಕಾವ್ಯ ಗೌಡ ಸರದಿ ಬಂದಾಗ, ಕಾವ್ಯ ಕೂಡ ರಾಕೇಶ್ ಅತ್ಯುತ್ತಮ ಅಂತ ಹೇಳಲಿಲ್ಲ. ಕಳಪೆ ಅಂತಲೇ ಹೇಳಿದರು. "ನೀವು ಬೇರೆಯವರನ್ನ ನಗಿಸಲು ಪ್ರ್ಯಾಂಕ್ ಮಾಡಿದ್ದೀರಾ.


ಆದರೆ ಅದರಿಂದ ನೀವೇ ಹಾಳಾಗುತ್ತಿದ್ದೀರಾ. ನಿಮ್ಮನ್ನ ನೀವು ಹಾಳು ಮಾಡಿಕೊಂಡು ನಗಿಸಲು ಹೋಗಬೇಡಿ" ಅಂತಲೇ ಕಾವ್ಯ ಗೌಡ ಇಲ್ಲಿ ರಾಕೇಶ್​​ಗೆ ಬುದ್ದಿ ಹೇಳಿದರು.


ಪ್ರ್ಯಾಂಕ್ ಮಾಡಿಯೇ ಕಳಪೆಪಟ್ಟ ಪಡೆದ ರಾಕೇಶ್ ಅಡಿಗ
ರಾಕೇಶ್ ಅಡಿಗ ತನ್ನ ಪ್ರ್ಯಾಂಕ್​ ಕಾರ್ಯಾಚರಣೆ ಬಗ್ಗೆ ಹೆಚ್ಚಿಗೆ ಏನೂ ವಿವರಣೆ ಕೊಡಲಿಲ್ಲ. ಖೈದಿಯ ಬಟ್ಟೆ ತೊಟ್ಟು ಜೈಲು ಸೇರಿದರು. ನಯಾ ಕ್ಯಾಪ್ಟನ್ ಆರ್ಯವರ್ಧನ್ ಗುರೂಜಿ ಜೈಲ್ ಲಾಕ್ ತೆಗೆದು ರಾಕಿಯನ್ನ ಲಾಕ್ ಮಾಡಿಯೇ ಬಿಟ್ಟರು.


ಇದನ್ನೂ ಓದಿ: Gaalipata-2 New Record: ಒಟಿಟಿಯಲ್ಲಿ ಗಾಳಿಪಟ-2 ಸಖತ್ ಹಾರಾಟ,10 ಕೋಟಿ ಸ್ಟ್ರೀಮಿಂಗ್ ಮಿನಿಟ್ ದಾಖಲೆ ಬರೆದ ಕನ್ನಡ ಸಿನಿಮಾ


ಜೈಲು ಡ್ರೆಸ್ ತೊಟ್ಟು ಒಳಗೆ ಹೋದ ರಾಕಿ, ತದನಂತರ ಮಾತನಾಡಿಕೊಂಡರು. ನಾನು ಕಳೆದ ವಾರ ಪ್ರ್ಯಾಂಕ್ ಮಾಡಿದ್ದೇನೆ. ಈ ವಾರ ಯಾರಿಗೂ ಪ್ರ್ಯಾಂಕ್ ಮಾಡಿಯೇ ಇಲ್ಲಪ್ಪ ಅಂತ ಹೇಳಿದರು. ಅಷ್ಟು ಬಿಟ್ಟರೆ, ಮನೆಯ ಎಲ್ಲ ಸದಸ್ಯರ ದೃಷ್ಟಿಯಲ್ಲಿ ಪ್ರ್ಯಾಂಕ್ ಮಾಸ್ಟರ್ ರಾಕೇಶ್ ಕಳಪೆಯಾಗಿದ್ದಾರೆ. ಜೈಲು ಸೇರಿ ಆಗಿದೆ.

First published: