• Home
  • »
  • News
  • »
  • entertainment
  • »
  • Bigg Boss Season 9: ಸಾನಿಯಾ ಎಂಬ ಹಾಟ್ ಹುಡುಗಿ, ರಾಕೇಶ್ ಎಂಬ ಸೂಪರ್ ಕೂಲ್ ಹುಡುಗ! ಬಿಗ್​ಬಾಸ್ ಮನೆಯಲ್ಲಿ ಹೇಗಿರುತ್ತೆ ಇವರ ಆಟ?

Bigg Boss Season 9: ಸಾನಿಯಾ ಎಂಬ ಹಾಟ್ ಹುಡುಗಿ, ರಾಕೇಶ್ ಎಂಬ ಸೂಪರ್ ಕೂಲ್ ಹುಡುಗ! ಬಿಗ್​ಬಾಸ್ ಮನೆಯಲ್ಲಿ ಹೇಗಿರುತ್ತೆ ಇವರ ಆಟ?

ಬಿಗ್ ಬಾಸ್-09- ಸಾನಿಯಾ ಅಯ್ಯರ್, ರಾಕೇಶ್ ಅಡಿಗ

ಬಿಗ್ ಬಾಸ್-09- ಸಾನಿಯಾ ಅಯ್ಯರ್, ರಾಕೇಶ್ ಅಡಿಗ

ಓಟಿಟಿ ಬಿಗ್ ಬಾಸ್ ನ (OTT Big Boss) ಸ್ಪರ್ಧಿಗಳಿಗೆ ಮತ್ತೊಮ್ಮೆ ಚಾನ್ಸ್ ಸಿಕ್ಕಿದೆ. ಅದನ್ನ ಸದುಪಯೋಗ ಪಡೆಸಿಕೊಳ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಗದ್ದಲದೊಂದಿಗೆ ಹೆಸರಾಗಿರೋ ಒಂದಷ್ಟು ಹೆಸರು ಇಲ್ಲಿವೆ.

  • Share this:

ಪುಟ್ಟ ಪರದೆಯಲ್ಲಿ ಇಂದಿನಿಂದ (Big Boss-09) ದೊಡ್ಡಮನೆಯ ಅಬ್ಬರ ಶುರು ಆಗುತ್ತಿದೆ. ಬಿಗ್ ಮನೆಯಲ್ಲಿ ನವೀನರ ಜೊತೆಗೆ ಪ್ರವೀಣರು ಹೋಗುತ್ತಿದ್ದಾರೆ. ಯಾರೆಲ್ಲ ಈ ಸಲ ಈ ಮನೆಯೊಳಗೆ ಹೋಗುತ್ತಿದ್ದಾರೆ ಅನ್ನೊ ಕುತೂಹಲಕ್ಕೆ ಸಂಜೆಯಾದಂತೆ ಕ್ಲಿಯರ್ ಆಗುತ್ತಿದೆ. ಆ ಲೆಕ್ಕದಂತೆ ಒಂದಷ್ಟು (Actor-Actress) ನಟರು-ನಟಿಯರು ಹಾಗೂ ಜ್ಯೋತಿಷಿಗಳ ಲೆಕ್ಕವೂ ಇಲ್ಲಿ ಸೇರಿ ಹೋಗಿದೆ. ಆದರೆ ವಿಶೇಷವಾಗಿ ಈ ಸಲದ ಬಿಗ್ ಮನೆಯೊಳಗೆ ಓಟಿಟಿ ಬಿಗ್ ಬಾಸ್ ಮನೆಯಲ್ಲಿದ್ದ ಆ ನಟರು-ನಟಿಯರು ಕೂಡ ಹೋಗುತ್ತಿದ್ದಾರೆ. ಅವರೆಲ್ಲ ಈಗಾಗಲೇ ಬಿಗ್ ಮನೆಯಲ್ಲಿ ದಿನಗಳನ್ನ ಕಳೆದು ಬಂದಿದ್ದಾರೆ. ಆದರೆ ಇದೆ ಓಟಿಟಿ ಬಿಗ್ ಬಾಸ್ ನ (OTT Big Boss) ಸ್ಪರ್ಧಿಗಳಿಗೆ ಮತ್ತೊಮ್ಮೆ ಚಾನ್ಸ್ ಸಿಕ್ಕಿದೆ. ಅದನ್ನ ಸದುಪಯೋಗ ಪಡೆಸಿಕೊಳ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಗದ್ದಲದೊಂದಿಗೆ ಹೆಸರಾಗಿರೋ ಒಂದಷ್ಟು ಹೆಸರು ಇಲ್ಲಿವೆ.


ಓಟಿಟಿ ಬಿಗ್ ಮನೆಯಿಂದ ಬಿಗ್ ಬಾಸ್ ಮನೆಗೆ ರಾಕೇಶ್ ಅಡಿಗ


ಬಿಗ್ ಬಾಸ್ ಮನೆಯಲ್ಲಿ ಕನ್ನಡದ ನಾಯಕ ನಟ ಹಾಗೂ ಗಾಯಕ ರಾಕೇಶ್ ಅಡಿಗ ಕೂಡ ಹೋಗ್ತಿದ್ದಾರೆ. ಇವರ ಪ್ರವೇಶ ಸಖತ್ ಆಗಿಯೇ ಇರುತ್ತದೆ. ರಾಕೇಶ್ ಅಡಿಗ ಕನ್ನಡದ ಇಂಡಸ್ಟ್ರೀಯಲ್ಲಿ ತಮ್ಮದೇ ರೀತಿಯಲ್ಲಿ ಹೆಸರು ಮಾಡಿದವರು, Rap ಸಾಂಗ್ ಮೂಲಕವೂ ರಾಕೇಶ್ ಅಡಿಗ ಹೆಸರಾದವರು.


Kannada Actor Rakesh Adiga and Actress Saniya Iyer Going to enter Big Boss-09
ಬಿಗ್ ಬಾಸ್-09 ರಾಕೇಶ್ ಅಡಿಗ


ರಾಕೇಶ್ ಅಡಿಗ ತಮ್ಮ ಚಿತ್ರ ಜೀವನದಲ್ಲಿ ಏಳು-ಬೀಳುಗಳನ್ನ ಕಂಡಿದ್ದಾರೆ. ಯಶಸ್ಸು ಒಂದು ರೀತಿ ಮರಿಚಿಕೆನೆ ಆಗಿದೆ. ಆದರೂ ಒಳ್ಳೆ ನಟ ಅನ್ನೋ ಸತ್ಯ ತಿಳಿದೇ ಇದೆ. ಜೋಶ್ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರೀಗೆ ಕಾಲಿಟ್ಟ ರಾಕೇಶ್ ಅಡಿಗ ಅದೃಷ್ಟ ಪರೀಕ್ಷೆ ಮಾಡ್ತಾನೇ ಇದ್ದಾರೆ.


ಇದನ್ನೂ ಓದಿ: Bigg Boss Season 9: ಬಿಗ್​ಬಾಸ್​ ಸೀಸನ್​ 9ರ ಫಸ್ಟ್​ ಕಂಟೆಸ್ಟೆಂಟ್​ ಇವ್ರೇ, ಮತ್ತೆ ದೊಡ್ಮನೆ ಸೇರಿದ ಕಿಚ್ಚನ ಕ್ಲೋಸ್ ಫ್ರೆಂಡ್​!


ಆದರೆ ಅದ್ಯಾಕೋ ಏನೋ, ಸಿನಿಮಾ ಈ ಯುವ ನಟನ ಕೈ ಹಿಡಿತಾನೇ ಇಲ್ಲ. ಆದರೂ ಪ್ರಯತ್ನ ಬಿಡದೇ ಇರೋ ರಾಕೇಶ್ ಗೆ ಓಟಿಟಿ ಬಿಗ್ ಬಾಸ್ ಒಳ್ಳೆ ವೇದಿಕೆ ಆಗಿದೆ. ಇಲ್ಲಿ ಮಿಂಚಿದ ರಾಕೇಶ್ ಅಡಿಗ ಬಿಗ್ ಬಾಸ್ ಮನೆಗೂ ಕಾಲಿಡುತ್ತಿದ್ದಾರೆ. ಇವರ ಈ ಹೊಸ ಪಯಣಕ್ಕೆ ಗುಡ್ ಲಕ್ ಹೇಳಿ ಬಿಡೋಣ ಅಲ್ವೇ.


ಸಾನಿಯಾ ಅಯ್ಯರ್ ಸೂಪರ್ ಕೂಲ್ ಸೂಪರ್ ಹಾಟ್


ಸಾನಿಯಾ ಅಯ್ಯರ್ ಯಾರೂ? ಈ ಪ್ರಶ್ನೆಗೆ ಉತ್ತರ ಎಲ್ಲರ ಬಳಿ ಇದೆ. ಯಾಕೆಂದ್ರೆ, ಸಾನಿಯಾ ಬಣ್ಣದ ಲೋಕವನ್ನ ಆಂಭಿಸಿರೊದು ಇದೇ ಪುಟ್ಟ ಪರದೆಯಿಂದಲೇ, ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕವೇ ಸಾನಿಯಾ ಅಯ್ಯರ್ ಕನ್ನಡ ನಾಡಿನ ಮನೆ ಮನೆಗೂ ಪರಿಚಯವಾಗಿದ್ದಾರೆ.


Kannada Actor Rakesh Adiga and Actress Saniya Iyer Going to enter Big Boss-09
ಬಿಗ್ ಬಾಸ್-09 ಸಾನಿಯಾ ಅಯ್ಯರ್


ಸಿನಿಮಾ ಫ್ಯಾಮಿಲಿಯಿಂದಲೇ ಬಂದ ಸಾನಿಯಾ ಅಯ್ಯರ್, ಅಮ್ಮ ಕೂಡ ನಟಿ ಆಗಿದ್ದಾರೆ. ಚಿಕ್ಕಮ್ಮ ರೂಪಾ ಅಯ್ಯರ್ ಎಲ್ಲರಿಗೂ ಚಿರಪರಿಚಿತವೇ ಇದ್ದಾರೆ. ನಟಿಯಾಗಿ ನಿರ್ದೇಶಕಿಯಾಗಿ ರೂಪಾ ಅಯ್ಯರ್ ಹೆಸರು ಮಾಡಿಕೊಂಡಿದ್ದಾರೆ.


ಅದೇ ಮನೆಯ ಸಾನಿಯಾ ಅಯ್ಯರ್, ಸಿನಿಮಾರಂಗಕ್ಕೆ ಇನ್ನೂ ಕಾಲಿಟ್ಟಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಾನಿಯಾ ಅಯ್ಯರ್ ಸಾಕಷ್ಟು ಹೆಸರು ಮಾಡಿದ್ದಾರೆ. ತಮ್ಮ ರೀಲ್ಸ್ ಮೂಲಕವೂ ಗಮನ ಸೆಳೆದಿದ್ದಾರೆ.


ರೀಲ್ಸ್ ಗಳಿಂದಲೇ ಅತಿ ಹೆಚ್ಚು ಗಮನ ಸೆಳೆದ ಸಾನಿಯಾ ಅಯ್ಯರ್, ತಮ್ಮ ಓಪನ್ ಹಾರ್ಟೆಡ್ ಮಾತುಗಳಿಂದಲೂ ಫೇಮಸ್ ಆಗಿದ್ದಾರೆ. ಅದು ಇದೇ ಓಟಿಟಿ ಬಿಗ್ ಬಾಸ್ ಮನೆಯಿಂದಲೇ ಅಂದ್ರೆ ತಪ್ಪೇ ಇಲ್ಲ ಬಿಡಿ.


ಇದನ್ನೂ ಓದಿ: Bigg Boss Season 9: ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡೋಕೆ 18 ಕಂಟೆಸ್ಟೆಂಟ್ಸ್ ರೆಡಿ! ಕೆಲವ್ರಿಗೆ ಸಿಕ್ಕಾಪಟ್ಟೆ ಟೆಂಪರ್ ಇಶ್ಯೂ ಇದ್ಯಂತೆ


ಸಾನಿಯಾ ಅಯ್ಯರ್ ತಮ್ಮ ಮನೆಯ ಎಲ್ಲ ವಿಚಾರಗಳನ್ನೂ ಇದೇ ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಬೋಲ್ಡ್ ಹಾಗೂ ಓಪನ್ ಹಾರ್ಟೆಡ್ ಸಾನಿಯಾ ಅಯ್ಯರ್, ತಮ್ಮ ಈ ಒಂದು ಆ್ಯಟಿಟ್ಯೂಡ್ ನಿಂದಲೇ ಎಲ್ಲರ ಮನಸ್ಸನ್ನ ಗೆದಿದ್ದಾರೆ.


ಓಟಿಟಿ ಬಿಗ್ ಬಾಸ್ ಮನೆಯಿಂದ ಬಿಗ್ ಮನೆಗೆ ಸಾನಿಯಾ ಅಯ್ಯರ್ ಕಾಲಿಡುತ್ತಿದ್ದಾರೆ. ಸಾನಿಯಾ ಅಯ್ಯರ್ ಇಲ್ಲಿವರೆಗೂ ಕಳೆದ ಬಿಗ್ ಬಾಸ್ ಮನೆ ಆಟ ಬೇರೆ ಇತ್ತು. ಆದರೆ ಬಿಗ್ ಮನೆಯ ಈ ಆಟ ಬೇರೆನೆ ಇದೆ. ಇಲ್ಲಿ ಬೇರೆ ಬೇರೆ ಮನಸ್ಥಿತಿಯ ಜನರೇ ಬರ್ತಿದ್ದಾರೆ.


ಇವರೊಟ್ಟಿಗೆ ಸಾನಿಯಾ ಅಯ್ಯರ್ ಹೇಗೆಲ್ಲ ಬರೆಯುತ್ತಾರೆ? ಹೇಗೆಲ್ಲ ಆಟವನ್ನ ಆಡ್ತಾರೆ? ಬಿಗ್ ಬಾಸ್ ಕೊಡೋ ಟಾಸ್ಕ್​ ಅನ್ನ ಆಡುತ್ತಲೇ ತಮ್ಮ ತನವನ್ನ ಹೇಗೆ ಉಳಿಸಿಕೊಳ್ತಾರೆ ಅನ್ನೋದೇ ಕುತೂಹಲ. ಇವರಿಗೂ ನಮ್ಮ ಕಡೆಯಿಂದ ಗುಡ್ ಲಕ್.

First published: