Raj Classic Movie: ಸಿಪಾಯಿ ರಾಮು ಸಿನಿಮಾ ರಾಜ್​ಕುಮಾರ್​ ಜೀವನದಲ್ಲಿ ತುಂಬಾ ಸ್ಪೆಷಲ್, ಯಾಕೆ?

ಸಿಪಾಯಿ ರಾಮು ರಾಜ್ ಚಿತ್ರ ಜೀವನದ ಸ್ಪೆಷಲ್ ಸಿನಿಮಾ

ಸಿಪಾಯಿ ರಾಮು ರಾಜ್ ಚಿತ್ರ ಜೀವನದ ಸ್ಪೆಷಲ್ ಸಿನಿಮಾ

ರಾಜ್‌ಕುಮಾರ್ ಅವರ ಈ ಪಾತ್ರವನ್ನ ಕೂಡ ಜನ ಒಪ್ಪಿಕೊಂಡಿದ್ದರು. ಸೇನೆಯಲ್ಲಿದ್ದ ಒಬ್ಬ ರಾಮು, ಅದೊಂದು ಕಾರಣಕ್ಕೆ ದರೋಡೆಕೋರ ಆಗ್ತಾನೇ ಅನ್ನೋದೇ ಇಡೀ ಕಥೆ ಆಗಿತ್ತು. ಆದರೆ ಈ ಕಥೆಗೆ "ಬರಲೇ ಇನ್ನು ಯಮುನೆ" (Barale Innu Yamune?) ಕಾದಂಬರಿಯ ಆಧಾರ ಇತ್ತು.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಅಣ್ಣಾವ್ರ ಸಿನಿಮಾಗಳಲ್ಲಿ ಸಿಪಾಯಿ ರಾಮು (Rajkumar Sipayi Ramu Movie) ಸಿನಿಮಾ ಸ್ಪೆಷಲ್ ಆಗಿದೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ಒಬ್ಬ ದರೋಡೆ ಕೋರ ಆಗಿದ್ದರು. ಆದರೆ ಇದು ಕಾದಂಬರಿ ಆಧರಿಸಿದ ಸಿನಿಮಾ (Kannada Sipayi Ramu Movie) ಆಗಿತ್ತು. ಬಾಲಿವುಡ್‌ನ ನಟ ಇರ್ಫಾನ್ ಖಾನ್ ಅಭಿನಯದ ಪಾನ್ ಸಿಂಗ್ ಥೋಮರ್ ಚಿತ್ರ ಕಥೆ ಕೂಡ ಸಿಪಾಯಿ ರಾಮು ರೀತಿನೇ ಇತ್ತು. ಆದರೆ, ಎಲ್ಲೂ ಇದು ಸಿಪಾಯಿ (Raj Sipayi Ramu Cinema) ರಾಮು ರೀಮೇಕ್ ಅಂತ ಯಾರೂ ಹೇಳಿಕೊಂಡಿಲ್ಲ ಬಿಡಿ. ಒಬ್ಬ ಸೇನೆಯ ಯೋಧ ದರೋಡೆಕೋರ ಆಗೋದು ಸಿಪಾಯಿ ರಾಮು ಚಿತ್ರದ ಮೂಲ ಲೈನ್ ಆಗಿತ್ತು. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.


ಈ ಚಿತ್ರ ಕಾದಂಬರಿ (Sipayi Ramu Film Facts) ಆಧರಿಸಿದ ಕನ್ನಡದ ಮೊದಲ ಕಲರ್ ಸಿನಿಮಾ ಕೂಡ ಆಗಿತ್ತು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.


Kannada Actor Rajkumar Acted Sipayi Ramu Movie Untold Story
ಸಿಪಾಯಿ ರಾಮು ಕನ್ನಡದ ಸ್ಪೆಷಲ್ ಸಿನಿಮಾ


ಸಿಪಾಯಿ ರಾಮು ರಾಜ್ ಚಿತ್ರ ಜೀವನದ ಸ್ಪೆಷಲ್ ಸಿನಿಮಾ


ಸಿಪಾಯಿ ರಾಮು ಸಿನಿಮಾದಲ್ಲಿ ರಾಜ್‌ಕುಮಾರ್ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಇವರ ಅಭಿನಯದಲ್ಲಿ ಸಿಪಾಯಿ ರಾಮು ಸ್ಪೆಷಲ್ ಆಗಿಯೇ ಕಾಣಿಸಿಕೊಂಡಿದೆ. 1972 ರಲ್ಲಿ ರಿಲೀಸ್ ಆಗಿರೋ ಈ ಚಿತ್ರ ಕಲರ್ ಆಗಿತ್ತು. ಇದನ್ನ ನೋಡಿದ ಜನ ಆಗ ಹುಬ್ಬೇರಿಸಿದ್ದರು.
ಸಿಪಾಯಿ ರಾಮು ಚಿತ್ರದಲ್ಲಿ ರಾಜ್ ದರೋಡೆಕೋರ!


ರಾಜ್‌ಕುಮಾರ್ ನೆಗೆಟಿವ್ ಪಾತ್ರ ಮಾಡಿದ್ದೇಯಿಲ್ಲ. ಹಾಗೆ ಮಾಡಿದ್ರೆ, ಸಿನಿಮಾ ನೋಡುವ ತಮ್ಮ ಅಭಿಮಾನಿ ದೇವರುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅನ್ನೋದನ್ನ ರಾಜ್‌ಕುಮಾರ್ ಬಲವಾಗಿಯೇ ನಂಬಿದ್ದರು. ಆದರೆ ಸಿಪಾಯಿ ರಾಮು ಇಲ್ಲಿ ಒಬ್ಬ ದರೋಡೆಕೋರನಾಗಿಯೇ ಅಭಿನಿಸಿದ್ದರು.


ರಾಜ್‌ಕುಮಾರ್ ಅವರ ಈ ಪಾತ್ರವನ್ನ ಕೂಡ ಜನ ಒಪ್ಪಿಕೊಂಡಿದ್ದರು. ಸೇನೆಯಲ್ಲಿದ್ದ ಒಬ್ಬ ರಾಮು, ಅದೊಂದು ಕಾರಣಕ್ಕೆ ದರೋಡೆಕೋರ ಆಗ್ತಾನೇ ಅನ್ನೋದೇ ಇಡೀ ಕಥೆ ಆಗಿತ್ತು. ಆದರೆ ಈ ಕಥೆಗೆ "ಬರಲೇ ಇನ್ನು ಯಮುನೆ" (Barale Innu Yamune?) ಕಾದಂಬರಿಯ ಆಧಾರ ಇತ್ತು. ನುಗ್ಗೇನಹಳ್ಳಿ ಪಂಕಜಾ ಈ ಒಂದು ಕಾದಂಬರಿಯನ್ನ ಬರೆದಿದ್ದರು.


ಸಿಪಾಯಿ ರಾಮು ಕನ್ನಡದ ಸ್ಪೆಷಲ್ ಸಿನಿಮಾ


ಕಾದಂಬರಿಯನ್ನ ಆಧರಿಸಿಯೇ ಬಾಸುಮಣಿ ಚಿತ್ರಕಥೆ ಮಾಡಿದ್ದರು. ಅದೇ ಚಿತ್ರಕಥೆಯನ್ನ ವೈ.ಆರ್. ಸ್ವಾಮಿ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ನಟಿ ಲೀಲಾವತಿ ಅವರು ಯಮುನಾ ಅನ್ನೋ ಪಾತ್ರ ನಿರ್ವಹಿಸಿದ್ದರು. ರಾಜ್‌ ಕುಮಾರ್ ಅವರು ರಾಮ್ ಸಿಂಗ್ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದರು.


Kannada Actor Rajkumar Acted Sipayi Ramu Movie Untold Story
ಸಿಪಾಯಿ ರಾಮು ಚಿತ್ರದಲ್ಲಿ ರಾಜ್ ದರೋಡೆಕೋರ!


ಈ ಜೋಡಿಯ ಈ ಚಿತ್ರದಲ್ಲಿ ನಟಿ ಆರತಿ ಕೂಡ ಅಭಿನಯಿಸಿದ್ದರು. ಚಂಪಾ ಹೆಸರಿನ ರೋಲ್‌ ಅನ್ನು ಇಲ್ಲಿ ನಿರ್ವಹಿಸಿದ್ದರು. ಕೆ.ಎಸ್. ಅಶ್ವಥ್ ಅವರು ಇಲ್ಲಿ ಹರಿ ಸಿಂಗ್ ಪಾತ್ರಕ್ಕೆ ಜೀವ ತುಂಬಿದ್ದರು. ಇವರ ಈ ಚಿತ್ರದಲ್ಲಿ ವಜ್ರಮುನಿ, ತೂಗುದೀಪ್ ಶ್ರೀನಿವಾಸ್, ಶಕ್ತಿ ಪ್ರಸಾದ್ ಅವರು ಅಭಿನಯಿಸಿದ್ದರು.


ಸಿಪಾಯಿ ರಾಮು ಚಿತ್ರಕ್ಕೆ ಎರಡು ಪ್ರಶಸ್ತಿಗಳ ಗೌರವ

ಸಿಪಾಯಿ ರಾಮು ಚಿತ್ರಕ್ಕೆ ರಾಜ್ಯ ಸರ್ಕಾರದ ಎರಡು ಪ್ರಶಸ್ತಿ ಕೂಡ ಬಂದವು. ಮೂರನೇ ಅತ್ಯುತ್ತಮ ಸಿನಿಮಾ ಅನ್ನೋದು ಒಂದು ಪ್ರಶಸ್ತಿ ಆಗಿತ್ತು. ಅತ್ಯುತ್ತಮ ನಟಿ ಪ್ರಶಸ್ತಿ ಈ ಚಿತ್ರದ ಮೂಲಕ ಲೀಲಾವತಿ ಅವರಿಗೆ ಬಂದಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.


ಸಿಪಾಯಿ ರಾಮು ಸಿನಿಮಾಕ್ಕೆ ಚಿಟ್ಟಿಬಾಬು ಅವರ ಛಾಯಾಗ್ರಹಣ ಇತ್ತು. ಉಪೇಂದ್ರ ಕುಮಾರ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದರು. 161 ನಿಮಿಷದ ಕನ್ನಡದ ಸಿಪಾಯಿ ರಾಮು ಸಿನಿಮಾ ಬಂದು ಇದೀಗ 51 ವರ್ಷಗಳು ಉರುಳಿವೆ.


ಇದನ್ನೂ ಓದಿ: Rajkumar Movie: ಮೇಯರ್ ಮುತ್ತಣ್ಣ ಚಿತ್ರಕ್ಕೆ ಸ್ಪೂರ್ತಿ ಸಿಕ್ಕಿದ್ದೆಲ್ಲಿಂದ ಗೊತ್ತಾ? ಇಲ್ಲಿದೆ ಆ ಇಂಟ್ರೆಸ್ಟಿಂಗ್ ಫ್ಯಾಕ್ಟ್

top videos


    ಆದರೂ ರಾಜ್ ಸಿನಿಮಾಗಳ ಪಟ್ಟಿ ಮಾಡ್ತಾ ಹೋದ್ರೆ, ಅಲ್ಲಿ ಸಿಪಾಯಿ ರಾಮು ಇದ್ದೇ ಇರುತ್ತದೆ. ಇದಕ್ಕೆ ರಾಜ್ ಅವರ ಅಭಿನಯವೇ ಕಾರಣ ಅಂತ ಮತ್ತೆ ಮತ್ತೆ ಹೇಳೋದೇ ಬೇಡ ಅನಿಸುತ್ತದೆ ಅಲ್ವೇ?

    First published: