ಚಂದನವನದಲ್ಲಿ ಅದ್ಭುತ ಸಿನಿಮಾಗಳು (Ranadheera Kanteerava Facts) ಬಂದಿವೆ. ಆ ಚಿತ್ರಗಳಲ್ಲಿ ರಾಜ್ ಕುಮಾರ್ ಸಿನಿಮಾಗಳೂ ಸಾಕಷ್ಟಿವೆ. ರಣಧೀರ ಕಂಠೀರವ ಸಿನಿಮಾ ಕೂಡ ಆ ಸಾಲಿನ ಚಿತ್ರ ಆಗಿದೆ. ರಾಜ್ ಕುಮಾರ್ (Ranadheera Kanteerava Unknown Facts) ಈ ಚಿತ್ರದ ಮೂಲಕವೇ ನಿರ್ಮಾಪಕರೂ ಆಗಿದ್ದರು. ಇವರಷ್ಟೇ ಅಲ್ಲದೇ ಈ ಚಿತ್ರಕ್ಕೆ ನರಸಿಂಹ ರಾಜು, ಬಾಲಕೃಷ್ಣ ಅವರೂ ಕೂಡ ಈ ಚಿತ್ರಕ್ಕೆ ದುಡ್ಡು ಹಾಕಿದ್ದರು. ಈ ಒಂದು ಕೆಲಸಕ್ಕಾಗಿಯೇ ಕನ್ನಡ ಚಲನಚಿತ್ರ ಕಲಾವಿದರ ಸಂಘ ಅಂತ ಆಗ (Rajkumar Acted Cinema Facts) ಹುಟ್ಟಿಕೊಂಡಿತ್ತು. ಹೌದು, ಈ ಚಿತ್ರಕ್ಕೆ ಈ ಮೂವರು ದುಡ್ಡು ಹಾಕಿದ್ದರು. ಆ ಟೈಮ್‌ಲ್ಲಿಯೇ ಕೋ ಆಫರೇಟಿವ್ ಸೋಸಾಯಿಟಿ ಮೂಲಕ ಈ ಒಂದು ಚಿತ್ರ ರೆಡಿ ಆಗಿತ್ತು.
ಆದರೆ ಈ ಚಿತ್ರ ಅಷ್ಟು ಸುಲಭವಾಗಿ ರಿಲೀಸ್ ಏನೂ ಆಗಲಿಲ್ಲ. ಆರಂಭದಲ್ಲಿ ಈ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಬೇರೆನೆ ಇತ್ತು. ಅದಾದ್ಮೇಲೆ (Classic Movie Untold Stories) ಆದದ್ದೆಲ್ಲ ಇತಿಹಾಸವೇ ಸರಿ. ಅದನ್ನ ಇಲ್ಲಿ ಹೇಳಿದ್ದೇವೆ ಓದಿ.
ರಣಧೀರ ಕಂಠೀರವ ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ
ರಣಧೀರ ಕಂಠೀರವ ಸಿನಿಮಾದಲ್ಲಿ ಒಂದು ಅದ್ಭುತವಾದ ಕಥೆ ಇದೆ. ಅಧಿಕೃತ ಐತಿಹಾಸಿಕ ಸಿನಿಮಾ ಅನ್ನೋ ಹೆಗ್ಗಳಿಕೆನೂ ಈ ಚಿತ್ರಕ್ಕಿದೆ. ಕಾರಣ, ಮೈಸೂರು ರಾಜವಂಶದ ಕಥೆ ಇದಾಗಿದ್ದು, ಕಂಠೀರವ ನರಸರಾಜ ಒಡೆಯರ್ ಅವರ ಜೀವನವನ್ನೆ ಇಲ್ಲಿ ಸಿನಿಮಾ ಮಾಡಲಾಗಿದೆ.
ಕಂಠೀರವ ನರಸರಾಜ ಒಡೆಯರ್ ಅವರನ್ನ ರಣಧೀರ ಕಂಠೀರವ ಅಂತಲೂ ಕರೆಯುತ್ತಿದ್ದರು. ಅವರ ಶೌರ್ಯ ಮತ್ತು ಪರಾಕ್ರಮಕ್ಕೆ ಅವರನ್ನ ಈ ಹೆಸರಿನಿಂದಲೇ ಕರೆಯುತ್ತಿದ್ದರು. ಅಂತಹ ಈ ಪರಾಕ್ರಮಿಯ ಅಧಿಕೃತ ಕಥೆಯನ್ನ ಇಟ್ಟುಕೊಂಡೇ ಜಿ.ವಿ. ಅಯ್ಯರ್ ಅವರು ಇಡೀ ಸಿನಿಮಾ ಕಥೆ ಬರೆದಿದ್ದರು.
ರಣಧೀರ ಕಂಠೀರವ ಕನ್ನಡದ ಅಧಿಕೃತ ಐತಿಹಾಸಿಕ ಸಿನಿಮಾ
ಅದೇ ಕಥೆಯನ್ನ ಸಂಕಲನಕಾರ ಎನ್.ಸಿ. ರಾಜನ್ ನಿರ್ದೇಶನ ಮಾಡಿದ್ದರು. ಇಂತಹ ಈ ಕಥೆಯಲ್ಲಿ ರಣಧೀರ ಕಂಠೀರವ ಪಾತ್ರವನ್ನ ರಾಜ್‌ಕುಮಾರ್ ನಿರ್ವಹಿಸಿದ್ದರು. ಉದಯ್ ಕುಮಾರ್, ಬಾಲಕೃಷ್ಣ, ಲೀಲಾವತಿ, ನರಸಿಂಹರಾಜು ಹಾಗೂ ಸಂಧ್ಯಾ ಕೂಡ ಅಭಿನಯಿಸಿದ್ದರು.
ಹಾಗೇನೆ ಕನ್ನಡದ ಅಧಿಕೃತ ಐತಿಹಾಸಿಕ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿದೆ. ಮೈಸೂರು ಅರಮನೆಯಲ್ಲಿ ದೊರೆತ ಅಧಿಕೃತ ದಾಖಲೆ ಆಧರಿಸಿ ಇಡೀ ಸಿನಿಮಾದ ಕಥೆಯನ್ನ ಮಾಡಲಾಗಿದೆ. ಅಂತಹ ಈ ಅಧಿಕೃತ ಐತಿಹಾಸಿಕ ಸಿನಿಮಾವನ್ನ ಕನ್ನಡ ಚಲನಚಿತ್ರ ಕಲಾವಿದರ ಸಂಘದಿಂದಲೇ ನಿರ್ಮಿಸಲಾಗಿತ್ತು.
ರಣಧೀರ ಕಂಠೀರವ ಕಲಾವಿದರೇ ನಿರ್ಮಿಸಿದ್ದ ಸಿನಿಮಾ!
ಕಾರಣ ಅಂದು ಕನ್ನಡ ಇಂಡಸ್ಟ್ರೀ ಆಗ ಆರ್ಥಿಕ ಸಮಸ್ಯೆಯನ್ನ ಎದುರಿಸುತ್ತಿತ್ತು. ಹಾಗಾಗಿಯೇ ಈ ಚಿತ್ರಕ್ಕೆ ಹಲವರು ದುಡ್ಡು ಹಾಕುವ ಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಇಷ್ಟು ಕಷ್ಟಪಟ್ಟು ಮಾಡಿರೋ ಸಿನಿಮಾವನ್ನ ಅಂದು ವಿತರಿಸಲು ಯಾರೂ ಮುಂದೇ ಬರಲೇ ಇಲ್ಲ.
ರಣಧೀರ ಕಂಠೀರವ ಸಿನಿಮಾ ಈ ಒಂದು ಸಮಸ್ಯೆಯನ್ನ ಅಂದು ಎದುರಿಸಿತ್ತು. ಆದರೆ ಹಾಗೋ ಹೀಗೋ ಸಿನಿಮಾ ಬೆಂಗಳೂರಿನ ಭಾರತಿ ಥಿಯೇಟರ್‌ನಲ್ಲಿ ರಿಲೀಸ್ ಆಯಿತು. ರಿಲೀಸ್ ಆದ ಬಳಿಕ ಸಿನಿಮಾದ ಬಗ್ಗೆ ಟಾಕ್ ಶುರು ಆಯಿತು ನೋಡಿ.
ಭಾರತ್ ಹೆಸರಿನ ಒಂದೇ ಥಿಯೇಟರ್‌ನಲ್ಲಿ ರಣಧೀರ ಕಂಠೀರವ ರಿಲೀಸ್
ಮೌತ್ ಪಬ್ಲಿಸಿಟಿಯಿಂದಲೇ ಜನರ ಮನಸ್ಸಿಗೆ ತಲುಪಿದ ರಣಧೀರ ಕಂಠೀರವ ಸಿನಿಮಾ, ಭಾರತ್ ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಹಾಗೇನೆ ಕಲೆಕ್ಷನ್ ಕೂಡ ಜೋರಾಗಿಯೇ ಇತ್ತು. ಈ ಒಂದು ಯಶಸ್ವಿ ಮುನ್ನಡೆಯಿಂದಲೇ ಇಡೀ ಟೀಮ್ ಖುಷಿಪಟ್ಟಿತ್ತು.
ಇತಿಹಾಸ ಪುಟ ತಿರುವಿ ನೋಡಿದ್ರೆ, ಅಲ್ಲಿ ಇನ್ನೂ ಒಂದು ಸತ್ಯ ಕೂಡ ಹೊರ ಬೀಳುತ್ತದೆ. ಕನ್ನಡದಲ್ಲಿ ಇಲ್ಲಿವರೆಗೂ ಒಂದೇ ಒಂದು ಸಿನಿಮಾ ಬ್ಲಾಕ್‌ಬಸ್ಟರ್ ಆಗಿರಲಿಲ್ಲ. ಆದರೆ ರಣಧೀರ ಕಂಠೀರವ ಸಿನಿಮಾ ಮೂಲಕ ಆ ಒಂದು ಯಶಸ್ಸು ಸಾಧ್ಯವಾಗಿದೆ.
ರಣಧೀರ ಕಂಠೀರವ ರಾಜ್ ಸಿನಿಮಾ ಜೀವನದ ಸ್ಪೆಷಲ್ ಸಿನಿಮಾ
ರಣಧೀರ ಕಂಠೀರವ ಕನ್ನಡದ ಮೊಟ್ಟ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ ಆಗಿದ್ದು ರಾಜ್ ಅವರ ಸಿನಿಮಾ ಜೀವನದಲ್ಲಿ ಈ ಚಿತ್ರವೂ ಅಷ್ಟೇ ವಿಶೇಷವಾದ ಸಿನಿಮಾ ಆಗಿದೆ.
1960 ರಲ್ಲಿ ರಿಲೀಸ್ ಆದ ಈ ಚಿತ್ರಕ್ಕೂ ಜಿ.ಕೆ. ವೆಂಕಟೇಶ್ ಸಂಗೀತ ಮಾಡಿದ್ದರು. ಬಿ. ದೊರೈರಾಜ್ ಕ್ಯಾಮೆರಾವರ್ಕ್ ಮಾಡಿದ್ದು, ಕನ್ನಡ ಚಲನಚಿತ್ರ ಕಲಾವಿದರ ಸಂಘದ ಬ್ಯಾನರ್ ಅಡಿಯಲ್ಲಿಯೇ ಈ ಸಿನಿಮಾ ಬಂದು ಜನರನ್ನ ರಂಜಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ