Dingri Nagaraj Son: ನಾನು ಹಿರಣ್ಯ, ಇರೋದೆಲ್ಲ ರಾಕ್ಷಸ ಗುಣ! ಡಿಂಗ್ರಿ ನಾಗರಾಜ್ ಮಗನ ಹೊಸ ರೂಪ!

ಹೌದು. ಯುವನಟ ರಾಜವರ್ಧನ್ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಇದರಲ್ಲಿ  ರಾಜವರ್ಧನ್ ರೂಪವೇ ಬದಲಾಗಿದೆ. ಈ ಬಗ್ಗೆ ರಾಜವರ್ಧನ್ ನಮ್ಮೊಟ್ಟಿಗೆ ಕೆಲವು ವಿಷಯ ಹಂಚಿಕೊಂಡಿದ್ದಾರೆ.

ಹಿರಣ್ಯಾಕ್ಷನ ಆರ್ಭಟ!

ಹಿರಣ್ಯಾಕ್ಷನ ಆರ್ಭಟ!

 • Share this:
  ಬಿಚ್ಚುಗತ್ತಿ (Bicchugatti) ಭರಮಣ್ಣ ಈಗ ದಿ ವಿಲನ್. ಹೌದು. ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ ಪುತ್ರ ರಾಜವರ್ಧನ್ ಹಿರಣ್ಯಾಕ್ಷ ಆಗಿ ಬಿಟ್ಟಿದ್ದಾರೆ. ಮುಖದಲ್ಲಿ ರಾಕ್ಷಸ ಗುಣ ಎದ್ದು ಕಾಣುತ್ತಿದೆ. ಒಂದ್ ಅರೆಕ್ಷಣ ಭಯ ಕೂಡ ಹುಟ್ಟುತ್ತದೆ.ಅಷ್ಟೊಂದು ಕ್ರೌರ್ಯ ತುಂಬಿದ ಪಾತ್ರದ ಪೋಸ್ಟರ್ (Film Poster) ಹೊರ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜವರ್ಧನ್ (Rajvardhan) ನಮ್ಮ ಜೊತೆ ಮಾತನಾಡಿದ್ದಾರೆ. ಕನ್ನಡದ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಮತ್ತೊಂದು ರೂಪ ತಾಳಿದ್ದಾರೆ. ಅದನ್ನ ಕಂಡ್ರೆ ಒಂದ್ ಅರೆಕ್ಷಣ ಏನಪ್ಪ ಇದು. ಈ ಪಾಟಿ ಇದೆ ಅಂತ ಅನಿಸದೇ ಇರದು. ಇದಕ್ಕೆ ಕಾರಣ ಚಿತ್ರದ ರಗಢ್ ಲುಕ್.

  ಹೌದು. ಯುವನಟ ರಾಜವರ್ಧನ್ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಇದರಲ್ಲಿ  ರಾಜವರ್ಧನ್ ರೂಪವೇ ಬದಲಾಗಿದೆ. ಈ ಬಗ್ಗೆ ರಾಜವರ್ಧನ್ ನಮ್ಮೊಟ್ಟಿಗೆ ಕೆಲವು ವಿಷಯ ಹಂಚಿಕೊಂಡಿದ್ದಾರೆ.  ನಾನು ಹಿರಣ್ಯ-ನನಗೆ ಭಾವನೆಗಳೇ ಇಲ್ಲ
  ನನಗೆ ಭಾವನೆಗಳೇ ಇಲ್ಲ, ನಂಗೆ ನೆಗೆಟೀವ್ ಹೆಸರೇ ಬೇಕಿತ್ತು. ಅದಕ್ಕೇನೆ ಹಿರಣ್ಯಾಕ್ಷವನ್ನ ಇಲ್ಲಿ ಹಿರಣ್ಯ ಮಾಡಿದ್ದೇವೆ. ಚಿತ್ರದ ನನ್ನ ಪಾತ್ರ ನಿಜಕ್ಕೂ ರಗಢ್ ಆಗಿಯೇ ಇದೆ. ಈ ಪಾತ್ರಕ್ಕೆ ಭಾವನೆಗಳೇ ಇಲ್ಲ. ಅಪ್ಪನೂ ಇಲ್ಲ. ಅಮ್ಮನೂ ಇಲ್ಲ. ಸ್ಮೈಲ್ ಅಂತು ಮೊದಲೇ ಇಲ್ಲ. ರೋಮ್ಯಾನ್ಸ್ ಕೇಳಲೇಬೇಡ ಬಿಡಿ.

  ಐದೇ ಐದು ದಿನದಲ್ಲಿ ನಡೆಯೋ ಈ ಕಥೆಯಲ್ಲಿ ಏನೇನೋ ಆಗುತ್ತದೆ. ಅದನ್ನ ಇಲ್ಲಿ ನವ ನಿರ್ದೇಶಕ ಪ್ರವೀಣ್ ವಿಶೇಷವಾಗಿಯೇ ಹೇಳಿದ್ದಾರೆ. ಕೇವಲ 75 ದಿನದಲ್ಲಿ ಈ ಚಿತ್ರದ ಚಿತ್ರೀಕರಣ ಆಗಿದೆ. ಒಂದೇ ಹಂತದಲ್ಲಿಯೇ ಎಲ್ಲವನ್ನೂ  ಪೂರ್ಣಗೊಳಿಸಿದ್ದೇವೆ.

  ಕೇವಲ 75 ದಿನದಲ್ಲಿ ಚಿತ್ರೀಕರಣ ಪೂರ್ಣ
  ಚಿತ್ರದ ಪ್ಲಾನಿಂಗ್ ಚೆನ್ನಾಗಿಯೇ ಇತ್ತು. ಬಿದರಳ್ಳಿಯ ನಿರ್ಮಾಪಕ ವಿಜಯಕುಮಾರ್ ಹೊಸಬರು. ಚಿತ್ರ ಚೆನ್ನಾಗಿ ಬರಲಿ ಅಂತಲೇ ಯಾವುದಕ್ಕೂ ಬೇಡ ಅಂತ ಹೇಳಲಿಲ್ಲ. ಉತ್ಸಾಹದಲ್ಲಿಯೇ ಚಿತ್ರತಂಡಕ್ಕೆ ಸಪೋರ್ಟ್ ಮಾಡಿದರು. ಹೀಗಾಗಿಯೇ ಕೇವಲ 75 ದಿನದಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಸಾಧ್ಯವಾಯಿತು.

  ಅಬ್ಬಬ್ಬಾ! ಇವರೇ ನೋಡಿ ಡಿಂಗ್ರಿ ನಾಗರಾಜ್ ಮಗ


  ಬಿಚ್ಚುಗತ್ತಿ ಚಿತ್ರ ಆದ್ಮೇಲೆ ಸಾಹಸಮಯ ಸಿನಿಮಾ ಮಾಡುವಂತೆ ಅನೇಕರು ಹೇಳಿದರು. ಆ ಟೈಮ್​ ನಲ್ಲಿ ಹಿರಣ್ಯ ಸಿನಿಮಾ ಆಫರ್ ಬಂದಿತ್ತು. ಹಾಗಾಗಿಯೇ ಈ ಚಿತ್ರ ಒಪ್ಪಿಕೊಂಡೆ. ಭಾರೀ ಸಾಹಸಗಳನ್ನೆ ಈ ಚಿತ್ರದಲ್ಲಿ ಮಾಡಲು ಸಾಧ್ಯವಾಯಿತು ಅಂತಲೂ ರಾಜವರ್ಧನ್ ಹೇಳಿಕೊಂಡರು.

  ರಾಜವರ್ಧನ್ ಐದು ಪ್ರಮುಖ ಫೈಟ್​ ಸೀನ್
  ಹೀಗೆ ಮಾಹಿತಿ ಕೊಡುವ ರಾಜವರ್ಧನ್, ತಮ್ಮ ಚಿತ್ರ ಬದುಕಿನಲ್ಲಿ ಈ ಮೂಲಕ ರಾಣಾ ಹೆಸರಿನ ಒಂದ್ ಒಳ್ಳೆ ಪಾತ್ರವನ್ನೆ ಮಾಡಿದ್ದಾರೆ. ವಿಶೇಷವೆಂದ್ರೆ ಈ ಚಿತ್ರದಲ್ಲಿ ರಾಜವರ್ಧನ್ ಐದು ಪ್ರಮುಖ ಫೈಟ್​ ಸೀನ್​ಗಳನ್ನ ಅದ್ಭುತವಾಗಿಯೇ ಮಾಡಿದ್ದಾರೆ.

  ಇದನ್ನೂ ಓದಿ: Ranjani Raghavan: ಕನ್ನಡ ಅಕ್ಷರಮಾಲೆ ಬರೆದು ರೀಲ್ಸ್ ಮಾಡಿ; ಇದು ಕನ್ನಡತಿಯ ಕರೆ!

  ಹಿರಣ್ಯನಿಗೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಸುರೇಶ್ ಜೋಡಿ
  ಈ ಸಾಹಸಗಳನ್ನ ಮೂವರು ಫೈಟರ್ ಮಾಸ್ಟರ್ ಗಳೇ ವಿಭಿನ್ನವಾಗಿಯೇ ಕಂಪೋಸ್ ಮಾಡಿದ್ದು, ಫೈಟ್ ಮಾಸ್ಟರ್​ ಗಳಾದ ವಿನೋದ್,ಅರ್ಜುನ್ ಹಾಗೂ ಶಿವ ಇಲ್ಲಿ ರಾಜವರ್ಧನ್ ಅವರಿಂದ ಥ್ರಿಲಿಂಗ್ ಫೈಟ್ಸ್ ಅನ್ನೆ ತೆಗೆಸಿದ್ದಾರೆ.

  ಹಿರಣ್ಯನ ಜೋಡಿ


  ಈ ಚಿತ್ರದಲ್ಲಿ ರೋಮಾನ್ಸ್ ಇಲ್ಲದೇ ಇದ್ದರೂ ಕೂಡ ಚಿತ್ರದ ಹಿರಣ್ಯನಿಗೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಸುರೇಶ್ ಜೋಡಿಯಾಗಿದ್ದಾರೆ. ಜುಡಾ ಸ್ಯಾಂಡಿ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

  ರಗಢ್ ಲುಕ್ ಝಲ್ ಎನಿಸುತ್ತೆ! (ಧೂಮಪಾನ ಆರೋಗ್ಯಕ್ಕೆ ಹಾನಿಕರ)


  ಇದನ್ನೂ ಓದಿ: Divya Uruduga: ಅಮ್ಮನ ಬರ್ತ್ ಡೇಗೆ ದಿವ್ಯಾ ಉರುಡುಗ ವಿಶ್ ಮಾಡಿದ್ದು ಹೀಗೆ, ಫ್ಯಾನ್ಸ್​​ ಫಿದಾ

  ಉಳಿದಂತೆ ಈ ಚಿತ್ರದ ಚಿತ್ರೀಕರಣದ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಇತರ ಕೆಲಸ ನಡೀತಾ ಇವೆ. ಮುಂದಿನ ವರ್ಷದ ಮಧ್ಯದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತದೆ. ಇದಕ್ಕೂ ಮೊದಲೇ ರಾಜವರ್ಧನ್ ಅಭಿನಯದ ಪ್ರಯಣಂ ಸಿನಿಮಾ ತೆರೆಗೆ ಬರುತ್ತದೆ.
  First published: