Raghavendra Rajkumar: ಮತ್ತೊಂದು ಇಂಟ್ರೆಸ್ಟಿಂಗ್​ ಪಾತ್ರದಲ್ಲಿ ರಾಘವೇಂದ್ರ ರಾಜ್​ಕುಮಾರ್​! ಕ್ಯೂರಿಯಾಸಿಟಿ ಹುಟ್ಟಿಸಿದ ಸಿನಿಮಾ ಟೈಟಲ್​

ರಾಘವೇಂದ್ರ ರಾಜಕುಮಾರ್ ಹೊಸ ಸಿನಿಮಾದ ಹೆಸರು ಆಪರೇಷನ್ U ಅಂತಲೇ ಇದೆ. ಸಸ್ಪೆನ್ಸ್ ಥ್ರಿಲ್ಲರ್ ಕಂಟೆಂಟ್ ಇರೋ ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಗುರೂಜಿ ಆಗಿದ್ದಾರೆ. ಆದರೆ ಇದಕ್ಕೆ ಇಲ್ಲಿ ಬೇರೆ ಟಚ್ ಇದೆ.

ರಾಘವೇಂದ್ರ ರಾಜಕುಮಾರ್ ಹೊಸ ಸಿನಿಮಾ ಶುರು

ರಾಘವೇಂದ್ರ ರಾಜಕುಮಾರ್ ಹೊಸ ಸಿನಿಮಾ ಶುರು

  • Share this:
ಒಂದು ಕಾಲದ ನಾಯಕ ನಟ ರಾಘವೇಂದ್ರ ರಾಜಕುಮಾರ್ (Raghavendra Rajkumar) ಈಗ ಮತ್ತೆ ಆಕ್ಟೀವ್ ಆಗಿದ್ದಾರೆ. ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಇದೇ ರಾಘವೇಂದ್ರ ರಾಜಕುಮಾರ್ ಈಗ ಇನ್ನೂ ಒಂದು ಸಿನಿಮಾ (New Film Project) ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಟೈಟಲ್ ತುಂಬಾ ವಿಭಿನ್ನ ಅನಿಸುತ್ತದೆ. ಯುವ ನಿರ್ದೇಶಕ ಅವಿರಾಮ್ (Director Aviram) ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಫಸ್ಟ್ ಲುಕ್ ಅನ್ನೂ ಬಿಟ್ಟಿದ್ದಾರೆ. ಆಪರೇಷನ್ U ಅಂತಲೇ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಇದರ ಮುಹೂರ್ತ ಕೂಡ ಇಂದೇ ನಡೆದಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

ಆಪರೇಷನ್ U ಸಿನಿಮಾ ಗುರೂಜಿ ಆದ್ರು ರಾಘವೇಂದ್ರ ರಾಜಕುಮಾರ್
ರಾಘವೇಂದ್ರ ರಾಜಕುಮಾರ್ ಅಭಿನಯದ ಆಪರೇಷನ್ U ಚಿತ್ರ ಟೈಟಲ್ ಇಂಟ್ರಸ್ಟಿಂಗ್ ಆಗಿಯೇ ಇದೆ. ಇಂತಹ ವಿಶೇಷ ಟೈಟಲ್​ ನ ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಜೇಮ್ಸ್ ಚಿತ್ರದಲ್ಲೂ ಗುರೂಜಿ ಪಾತ್ರವನ್ನೆ ರಾಘವೇಂದ್ರ ರಾಜಕುಮಾರ್ ನಿರ್ವಹಿಸಿದ್ದರು. ಇಲ್ಲೂ ಅಂತಹದ್ದೇ ರೋಲ್ ಮಾಡುತ್ತಿದ್ದಾರೆ. ಆದರೆ ಅದು ವಿಭಿನ್ನವಾಗಿಯೇ ಇರುತ್ತದೆ. ಸಮಾಜ ಮುಖಿ ಗುರೂಜಿ ಆಗಿಯೇ ರಾಘವೇಂದ್ರ ರಾಜಕುಮಾರ್ ಇಲ್ಲಿ ಕಾಣಿಸಿಕೊಳ್ಳ್ಳುತ್ತಾರೆ.

kannada Actor Raghawendra Rajkumar New Project
ಆಪರೇಷನ್ ಯು ಸಿನಿಮಾದ ಪೋಸ್ಟರ್


ಆಪರೇಷನ್ U ಅಂದ್ರೆ ಏನು ಅರ್ಥ
ಆಪರೇಷನ್ U ಅಂದ್ರೇನೂ ಅನ್ನೋ ಹಾಗೇನೆ ಸಿನಿಮಾ ಟೈಟಲ್ ಇದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾ ಟೈಟಲ್ ನೋಡಿದ ಹಾಗೆ ಆಗುತ್ತದೆ. ಆಪರೇಷನ್ U ಟೈಟಲ್ ಅರ್ಥ ಏನೂ ಅಂತ ಕೇಳಿದ್ರೆ, ಡೈರೆಕ್ಷರ್ ಅವಿರಾಮ್ ಅದನ್ನ ರಿವೀಲ್ ಮಾಡೋದೇ ಇಲ್ಲ. ಇಡೀ ಸಿನಿಮಾದ ಕಂಟೆಂಟ್ ಈ ಒಂದು ಟೈಟಲ್ ನಲ್ಲಿಯೇ ಅಡಗಿದೆ. ಅದಕ್ಕೇನೆ ಈಗಲೇ ಅದನ್ನ ರಿವೀಲ್ ಮಾಡೋದಿಲ್ಲ.ವೇಟ್ ಮಾಡಿ ಅನ್ನೋ ಅರ್ಥದಲ್ಲಿಯೇ ರಿಯಾಕ್ಟ್ ಮಾಡಿದ್ದಾರೆ.

ಆಪರೇಷನ್ U ನಲ್ಲಿ ಬ್ಲಾಕ್ ಅಂಡ್ ವೈಟ್ ಛಾಯೆ
ಆಪರೇಷನ್ U ಚಿತ್ರದ ಪೋಸ್ಟರ್ ಅನ್ನ ಒಮ್ಮೆ ಗಮನಿಸಿ ನೋಡಿ. ಈ ಪೋಸ್ಟರ್ ಅಣ್ಣಾವ್ರ ಬಾಂಡ್ ಸಿನಿಮಾದ ಪೋಸ್ಟರ್ ನೋಡಿದ ಹಾಗೇನೆ ಆಗುತ್ತದೆ. ಅಲ್ಲಿಗೆ ಇದು ಕೂಡ ಬಾಂಡ್ ರೀತಿಯ ಸಿನಿಮಾನೇ ಅನ್ನೋ ಅನುಮಾನವೂ ಮೂಡುತ್ತದೆ. ಅದರಲ್ಲೂ ಆಪರೇಷನ್ U ಅನ್ನೋ ಟೈಟಲ್​ನ ಫಾಂಟ್ಸ್ ನೋಡಿದ್ರೂ ಕೂಡ ಹಳೆ ಶೈಲಿಯಲ್ಲಿಯೇ ಇವೆ. ಅಲ್ಲಿಯೇ ಇದು ಬಾಂಡ್ ರೀತಿಯ ಸಿನಿಮಾ ಇರಬಹುದು ಅಂತಲೇ ಗೆಸ್ ಮಾಡೋ ಹಾಗೆ ಮಾಡುತ್ತದೆ ಚಿತ್ರದ ಈ ಪೋಸ್ಟರ್.

ಆಪರೇಷನ್ U ಚಿತ್ರ ಅಸಲಿಗೆ ಯಾವ ಜಾನರ್ ಸಿನಿಮಾ
ಆಪರೇಷನ್ U ಸಿನಿಮಾ ಒಂದು ಸಸ್ಪೆನ್ಸ್ ಸಿನಿಮಾ. ಇದರಲ್ಲಿ ಥ್ರಿಲ್ ಇದ್ದೇ ಇರುತ್ತದೆ ಅಂತ ಈಗಲೇ ಗೆಸ್ ಮಾಡಬಹುದು. ನಿರ್ದೇಶಕರೇ ಹೇಳೋವಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೇ ಆಗಿದೆ. ಇದರ ಸುತ್ತವೇ ಇಡೀ ಕಥೆ ರೂಪಗೊಂಡಿದೆ.

Operation U Film Director Aviram
ಆಪರೇಷನ್ ಯು ಸಿನಿಮಾ ಡೈರೆಕ್ಟರ್ ಅವಿರಾಮ್


ಆಪರೇಷನ್ U ಚಿತ್ರದಲ್ಲಿ ನವ ನಾಯಕ-ನಾಯಕಿ ಮೋಡಿ
ಈ ಚಿತ್ರದಲ್ಲಿ ಯಶ್ ಶೆಟ್ಟಿ ಮೇನ್ ಲೀಡ್ ಅಲ್ಲಿದ್ದಾರೆ. ಭಟ್ಟರ ಸಿನಿಮಾದ ಸೋನಲ್ ಮೆಂಟೆರೋ ನಾಯಕಿ ಆಗಿದ್ದಾರೆ. ಲಾಸ್ಯಾ ನಾಗರಾಜ್ ಕೂಡ ಇಲ್ಲಿರೋದು ವಿಶೇಷ. ಇವರ ಜೊತೆಗೆ ಇಲ್ಲಿ ಸಾಕಷ್ಟು ಸಪೋರ್ಟಿಂಗ್ ಪಾತ್ರಧಾರಿಗಳೂ ಇದ್ದಾರೆ. ಅವರಲ್ಲಿ ವಿಲನ್ ಪಾತ್ರಧಾರಿ ರವಿಶಂಕರ್,ಧರ್ಮ,ಅವಿನಾಶ್, ಮಾಳವಿಕಾ,ಸ್ಪರ್ಶ ರೇಖಾ, ಗೋವಿಂದೇ ಗೌಡ (ಜಿಜಿ) ವೀಣಾ ಸುಂದರ್ ಹೀಗೆ ಇನ್ನೂ ಅನೇಕರು ಅಭಿನಯಿಸುತ್ತಿದ್ದಾರೆ.

ಅಕ್ಟೋಬರ್ ತಿಂಗಳ ಮೊದಲವಾರ ಆಪರೇಷನ್ U ಚಿತ್ರೀಕರಣ ಆರಂಭ
ಆಪರೇಷನ್ U ಸಿನಿಮಾದ ಚಿತ್ರೀಕರಣ ಕೂಡ ಪ್ಲಾನ್ ಆಗಿದೆ.ಇದೇ ತಿಂಗಳ 10 ರಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ತಂಡ ಮುಹೂರ್ತ ಮಾಡಿಕೊಂಡಿದೆ. ಇದಾದ ಬಳಿಕ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿಯೇ ಸಿನಿಮಾ ಶೂಟಿಂಗ್ ಶುರು ಆಗುತ್ತದೆ. ಹೀಗಂತ ಚಿತ್ರದ ನಿರ್ದೇಶಕ ಅವಿರಾಮ್ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.
First published: