Puneeth Rajkumar: ನನಸಾಗಲಿದೆ ಅಪ್ಪು ಕಂಡ ಕನಸು! ಶಕ್ತಿಧಾಮದಲ್ಲಿ ಶೀಘ್ರದಲ್ಲಿಯೇ ಶುರುವಾಗಲಿದೆ ಶಾಲೆ

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಕೇವಲ ತೆರೆಯ ಮೇಲೆ ಮಾತ್ರ ನಟನಾಗದೆ, ತೆರೆಯ ಹಿಂದೆಯೂ ನಿಜವಾದ ಹೀರೋ (Hero) ಆಗಿ ಜನಮಾನಸದಲ್ಲಿ ಇಂದಿಗೂ ಎಂದಿಗೂ ಅಚ್ಚಳಿಯದಂತೆ ಉಳಿದಿದ್ದಾರೆ. ಅವರ ಕನಸಿನ ಶಕ್ತಿಧಾಮದ ಶಾಲೆ ಶಿಘ್ರದಲ್ಲಿಯೇ ನನಸಾಗಲಿದೆ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

  • Share this:
ಸರಳ ಮತ್ತು ಸಜ್ಜನಿಕೆಗೆ ಹೆಸರಾದ ಅಭಿಮಾನಿಗಳ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಕೇವಲ ತೆರೆಯ ಮೇಲೆ ಮಾತ್ರ ನಟನಾಗದೆ, ತೆರೆಯ ಹಿಂದೆಯೂ ನಿಜವಾದ ಹೀರೋ (Hero) ಆಗಿ ಜನಮಾನಸದಲ್ಲಿ ಇಂದಿಗೂ ಎಂದಿಗೂ ಅಚ್ಚಳಿಯದಂತೆ ಉಳಿದಿದ್ದಾರೆ ಎಂದರೆ ತಪ್ಪಾಗಲಾರದು. ಒಂದು ಕೈಯಿಂದ ಮಾಡಿದ ಸಹಾಯ ತನ್ನ ಇನ್ನೊಂದು ಕೈಗೂ ಗೊತ್ತಾಗದ ರೀತಿಯಲ್ಲಿ ಅನೇಕರಿಗೆ ಸಹಾಯ ಮಾಡಿದ್ದು ನಾವೆಲ್ಲರೂ ಮಾಧ್ಯಮದಲ್ಲಿ ಅವರ ಅಗಲಿಕೆಯ ನಂತರ ನೋಡಿದ್ದೇವೆ. ಬದುಕಿನಲ್ಲಿ ಒಮ್ಮೆಯಾದರೂ ಪುನೀತ್​ ಅವರನ್ನು ಭೇಟಿ ಮಾಡಿದವರು ಅವರನ್ನು ಇವತ್ತಿಗೂ ನೆನಪಿಸಿಕೊಳ್ಳುವುದು ಅವರ ಸರಳತೆ ಮತ್ತು ಸಭ್ಯತೆಯಿಂದ ಕೂಡಿರುವ ಅವರ ವ್ಯಕ್ತಿತ್ವವನ್ನು. ತಾನೊಬ್ಬ ದೊಡ್ಡ ನಟನ ಮಗ ಎಂಬುದನ್ನು ಎಂದಿಗೂ, ಯಾರ ಬಳಿಯೂ ತೋರಿಸಿಕೊಳ್ಳದೆ ಜೀವಿಸಿದವರು ಪುನೀತ್ ರಾಜ್‌ ಕುಮಾರ್‌ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಇಂತಹ ನಾಯಕನ ಕನಸಾಗಿದ್ದ (Dream) ಶಕ್ತಿಧಾಮ (Shakthidhama )ಶಾಲೆ ಇನ್ನೇನು ಶೀಘ್ರದಲ್ಲಿ ನನಸಾಗಲಿದೆ.

ಶಕ್ತಿಧಾಮದ ಅಪ್ಪು ಕನಸು ಶೀಘ್ರದಲ್ಲಿಯೇ ನನಸು:

ಪುನೀತ್ ಅವರು ಬದುಕಿದ್ದಾಗ ಅದೆಷ್ಟೋ ಬಡ ಮಕ್ಕಳಿಗೆ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಬೆಂಬಲವಾಗಿ ನಿಂತು ಸಹಾಯ ಮಾಡಲೆಂದು ಶಕ್ತಿಧಾಮ ಎಂಬ ಕೇಂದ್ರವನ್ನು ಅವರ ಕುಟುಂಬದಿಂದ ಪ್ರಾರಂಭಿಸಿದ್ದರು. ಇಂತಹ ಶಕ್ತಿಧಾಮ ಮಹಿಳಾ ಪುನರ್‌ವಸತಿ ಮತ್ತು ಅಭಿವೃದ್ಧಿ ಕೇಂದ್ರದಲ್ಲಿಗ ಶಕ್ತಿಧಾಮದ ಮಕ್ಕಳಿಗೆ ಮೀಸಲಾದ ಶಾಲೆಯೊಂದನ್ನು ನಿರ್ಮಿಸುವ ಕನಸನ್ನು ದಿವಂಗತ ನಟ ಪುನೀತ್ ರಾಜ್ ಕುಮಾರ್ ಕಂಡಿದ್ದರು. ಆದರೆ ಈಗ ಆ ಕನಸು ಶೀಘ್ರದಲ್ಲಿಯೇ ನನಸಾಗಲಿದೆ ಅಂತೆ.

ಹೌದು, ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಶಕ್ತಿಧಾಮ ಕೇಂದ್ರದಲ್ಲಿ ಶುರುವಾಗಲಿರುವ ಶಾಲೆಯ ಮೂಲಸೌಕರ್ಯಕ್ಕೆ ಆರ್ಥಿಕ ನೆರವು ನೀಡುವ ಭರವಸೆಯನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಾಜ್ಯ ಬಜೆಟ್‌ನಲ್ಲಿ ಇತ್ತೀಚೆಗೆ ಘೋಷಿಸಿದ್ದಾರೆ.

ಇದನ್ನೂ ಓದಿ: James: ಹೊಸ `ಟ್ರೇಡ್ ಮಾರ್ಕ್’ ಕ್ರಿಯೇಟ್ ಮಾಡಿದ `ಜೇಮ್ಸ್’! ಕಿಂಗ್ ಇಸ್ ಆಲ್ವೇಸ್ ಎ ಕಿಂಗ್ ಮಾಮ!

ಸರ್ಕಾರದ ನಿರ್ಧಾರಕ್ಕೆ ಶಿವಣ್ಣ ಸಂತಸ:

ಮೈಸೂರಿನಲ್ಲಿದ್ದಾಗಲೆಲ್ಲ ಶಕ್ತಿಧಾಮಕ್ಕೆ ಭೇಟಿ ನೀಡುವ ನಟ ಶಿವರಾಜ್ ಕುಮಾರ್ ಅವರು “ಶಕ್ತಿಧಾಮದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಸರ್ಕಾರ ಮುಂದೆ ಬಂದಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಈಗಾಗಲೇ ಶಕ್ತಿಧಾಮದಲ್ಲಿ ಜಮೀನು ಲಭ್ಯವಿದ್ದು, ಇದನ್ನು ನನ್ನ ತಾಯಿ ಪಾರ್ವತಮ್ಮ ಅವರು ಖರೀದಿಸಿದ್ದರು. ಸರ್ಕಾರದ ಈ ನಿರ್ಧಾರವು ನಮಗೆ ಇನ್ನಷ್ಟು ಇಂತಹ ಉತ್ತಮ ಕೆಲಸವನ್ನು ಮಾಡಲು ನಮಗೆ ಉತ್ತೇಜನ ನೀಡುತ್ತದೆ” ಎಂದು ಹೇಳಿದ್ದರು.

1997ರಲ್ಲಿಯೇ ಪ್ರಾರಂಭವಾಗಿತ್ತು ಶಕ್ತಿಧಾಮ:

ಶಕ್ತಿಧಾಮ ಮಹಿಳಾ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವು 1997ರಲ್ಲಿ ದಿವಂಗತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಬೆಂಬಲ ನೀಡಲು ಮತ್ತು ಹಿಂದುಳಿದ ವರ್ಗದ ಹುಡುಗಿಯರಿಗೆ ಶಿಕ್ಷಣ ನೀಡಲು ಮಾಡಿದಂತಹ ಕೇಂದ್ರವಾಗಿತ್ತು. ಇಲ್ಲಿಯವರೆಗೆ 4,000 ಕ್ಕೂ ಹೆಚ್ಚು ಮಹಿಳೆಯರಿಗೆ ಈ ಕೇಂದ್ರದಲ್ಲಿ ಪುನರ್ವಸತಿ ನೀಡಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಧನರಾದ ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಕೊಟ್ಯಧಿಪತಿ ಕಾರ್ಯಕ್ರಮದಲ್ಲಿ ಬರುವ ತಮ್ಮ ಗಳಿಕೆಯನ್ನು ಇಲ್ಲೊಂದು ಶಾಲೆಯನ್ನು ನಿರ್ಮಿಸಲು ದಾನ ಮಾಡಿದ್ದರು.

ಇದನ್ನೂ ಓದಿ: James: ಬೆಳ್ಳಿ ಪರದೆ ಮೇಲೆ `ಜೇಮ್ಸ್​’ ಅಬ್ಬರಿಸೋಕು ಮುನ್ನ ಮತ್ತೊಂದು ಸರ್​ಪ್ರೈಸ್​! ಫ್ಯಾನ್ಸ್​ ಫುಲ್​ ದಿಲ್​ ಖುಷ್​

ಹೊರಗಿನವರಿಗೂ ಬಂದು ವಿದ್ಯಾಭ್ಯಾಸ ಮಾಡಲು ಅವಕಾಶ:

ಶಕ್ತಿಧಾಮ ಕೇಂದ್ರದ ಖಜಾಂಚಿ ಆಗಿರುವ ಎಂ.ಎನ್ ಸುಮನಾ ಅವರು, ’ಮೈಸೂರಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಸುಮಾರು 150 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ಸ್ವಂತ ಕ್ಯಾಂಪಸ್‌ನಲ್ಲಿ ಶಾಲೆಯನ್ನು ಹೊಂದುವುದು ಅವರಿಗೆ ತುಂಬಾನೇ ಸಹಾಯವಾಗುತ್ತದೆ ಮತ್ತು ಹೊರಗಿನ ವಿದ್ಯಾರ್ಥಿಗಳು ಸಹ ಈ ಶಾಲೆಯಲ್ಲಿ ಬಂದು ಪ್ರವೇಶವನ್ನು ಪಡೆದು ವಿದ್ಯಾಭ್ಯಾಸ ಮಾಡಬಹುದು .

ಮುಂದಿನ ಶೈಕ್ಷಣಿಕ ವರ್ಷದಿಂದ, ಸುಮಾರು ಎಂಟು ತಿಂಗಳಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವವರೆಗೆ ನಾವು ಅಸ್ತಿತ್ವದಲ್ಲಿರುವ ಕಟ್ಟಡದಲ್ಲಿ 1 ರಿಂದ 8ನೇ ತರಗತಿಗಳನ್ನು ಶುರು ಮಾಡುತ್ತೇವೆ. ಶಕ್ತಿಧಾಮದ ಶಾಲೆಗಾಗಿ ಪುನೀತ್ ಅವರು ತುಂಬಾನೇ ಒಳ್ಳೆಯ ಕೆಲಸವನ್ನು ಮಾಡಿದ್ದರು. ಅವರು ನಮ್ಮನ್ನು ಬಿಟ್ಟು ಹೋದದ್ದು ತುಂಬಾ ದುಃಖಕರವಾಗಿದೆ" ಎಂದು ಹೇಳಿದರು.
Published by:shrikrishna bhat
First published: