• Home
  • »
  • News
  • »
  • entertainment
  • »
  • Puneeth Smile: ನಗುವಿನ ಒಡೆಯನಿಗೆ ನಗುವಿನ ಬೆಲೆ ಗೊತ್ತಿತ್ತು, ಆ ಒಂದು ಮಾತು ಸ್ವತಃ ಅಪ್ಪು ಹೇಳಿದ್ದರು! ಆ ವೀಡಿಯೋ ಈಗ ವೈರಲ್

Puneeth Smile: ನಗುವಿನ ಒಡೆಯನಿಗೆ ನಗುವಿನ ಬೆಲೆ ಗೊತ್ತಿತ್ತು, ಆ ಒಂದು ಮಾತು ಸ್ವತಃ ಅಪ್ಪು ಹೇಳಿದ್ದರು! ಆ ವೀಡಿಯೋ ಈಗ ವೈರಲ್

ಪುನೀತ್ ನಗುವಿನ ಮಾಲೀಕ-ಫ್ಯಾನ್ಸ್​ ಗೆ ಅದುವೇ ಆಸ್ತಿ

ಪುನೀತ್ ನಗುವಿನ ಮಾಲೀಕ-ಫ್ಯಾನ್ಸ್​ ಗೆ ಅದುವೇ ಆಸ್ತಿ

ಪವರ್ ಸ್ಟಾರ್ ಪುನೀತ್ ಎಂದು ಸುಮ್ನೆ ನಕ್ಕವರೇ ಅಲ್ಲ, ಯಾರನ್ನೋ ಇಂಪ್ರೆಸ್ ಮಾಡೋಕೆ ನಕ್ಕದ್ದು ಇಲ್ಲ. ಅಪ್ಪು ಅಂದ್ರೆ ಅದು ಸ್ಮೈಲಿಂಗ್ ಅಪ್ಪು ಅಂದ್ರೂ ತಪ್ಪಿಲ್ಲ. ಮಗು ನಗುವಿನೊಂದಿಗೆ ಅಪ್ಪು ಎಲ್ಲರನ್ನ ವೆಲ್ ಕಮ್ ಮಾಡುತ್ತಿದ್ದರು.

  • News18 Kannada
  • Last Updated :
  • Bangalore [Bangalore], India
  • Share this:

ಪವರ್ ಸ್ಟಾರ್ ಪುನೀತ್ (Puneeth Rajkumar) ರಾಜಕುಮಾರ್ ಇಡೀ ಕನ್ನಡ ನಾಡಿನ ಸೂಪರ್ ಸ್ಟಾರ್. ಸ್ಟಾರ್ ಗಿರಿ ಈ ನಟನಿಗೆ ಎಂದೂ ತಲೆಗೆ ಹತ್ತಲೇ ಇಲ್ಲ ಬಿಡಿ. ತುಂಬಾ (Simple Man) ಸರಳವಾಗಿಯೇ ಅಪ್ಪು ಬದುಕಿದ್ದರು. ಇವರ ಈ ಒಂದು ಸರಳತೆಗೆ ಇಡೀ ಕನ್ನಡ ನಾಡೇ ಸೋತು ಹೋಗಿತ್ತು. ಆದರೆ ಇವರ ಒಂದೇ ಒಂದು (Smile) ಸ್ಮೈಲ್​ಗೆ ಎಲ್ಲರೂ ಕಳೆದು ಹೋಗುತ್ತಿದ್ದರು. ಸ್ಮೈಲ್ ಅಂದ್ರೆ ಅದು ಅಂತಿಂತ ನಗು ಅಲ್ಲ. ಅಲ್ಲಿ ಮುಗ್ಧತೆ ಕಾಣುತ್ತಿತ್ತು. ನಿಶ್ಕಲ್ಮಷ ನಗುವೇ ಆದಾಗಿರುತ್ತಿತ್ತು. ತಮ್ಮ ಈ ಒಂದು ನಗುವಿನ ಬಗ್ಗೆ ಅಪ್ಪುಗೂ ಗೊತ್ತಿತ್ತು. ಅದನ್ನ ಹೇಳಿಕೊಳ್ಳದೇ ಇರೋ ಅಪ್ಪು ಆ ಒಂದು (Interview) ಸಂದರ್ಶನದಲ್ಲಿ ತಮ್ಮ ನಗುವಿನ ಅಸಲಿ ಫ್ಯಾನ್ಸ್ ಬಗ್ಗೆ ಹೇಳಿಕೊಂಡಿದ್ದರು.  ಈಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಅಪ್ಪು ನಗು ಮಗುವಿನ ನಗು-ಎಲ್ಲರಿಗೂ ಬಲು ಇಷ್ಟ
ಪವರ್ ಸ್ಟಾರ್ ಪುನೀತ್ ಎಂದು ಸುಮ್ನೆ ನಕ್ಕವರೇ ಅಲ್ಲ, ಯಾರನ್ನೋ ಇಂಪ್ರೆಸ್ ಮಾಡೋಕೆ ನಕ್ಕದ್ದು ಇಲ್ಲ. ಅಪ್ಪು ಅಂದ್ರೆ ಅದು ಸ್ಮೈಲಿಂಗ್ ಅಪ್ಪು ಅಂದ್ರೂ ತಪ್ಪಿಲ್ಲ. ಮಗು ನಗುವಿನೊಂದಿಗೆ ಅಪ್ಪು ಎಲ್ಲರನ್ನ ವೆಲ್ ಕಮ್ ಮಾಡುತ್ತಿದ್ದರು.


ಅಪ್ಪು ಹತ್ತು ಹಲವು ಕ್ವಾಲಿಟಿಯಲ್ಲಿ ನಗು ಪ್ರಮುಖವೇ ಆಗಿದೆ. ಪುನೀತ್ ಒಂದೇ ಒಂದು ಸ್ಮೈಲ್​ ಗೂ ಕಾದರಿದ್ದಾರೆ. ಮನಸಾರೆ ನಕ್ಕ ಅದೆಷ್ಟೋ ಸಮಯವನ್ನ ಇನ್ನೆಷ್ಟೋ ಜನ ಕಂಡು ಪುಳಕಿತರಾಗಿದ್ದಾರೆ. ಅಪ್ಪು ನಗುವಿನಗೆ ಕೋಟಿ ಬೆಲೆನೆ ಇತ್ತು ಅಂತಲೂ ಬಣ್ಣಿಸಬಹುದು ಬಿಡಿ.


Kannada Actor Puneeth Rajkumar Knows Power Of his Smile
ಅಪ್ಪು ಸ್ಮೈಲ್ ಹುಡುಕುತ್ತಿರೋ ಅಪ್ಪು ಫ್ಯಾನ್ಸ್


ಪುನೀತ್ ನಗುವಿನ ಮಾಲೀಕ-ಫ್ಯಾನ್ಸ್​ ಗೆ ಅದುವೇ ಆಸ್ತಿ
ಪುನೀತ್ ಮನೆಗೆ ಯಾರೇ ಹೋದ್ರು ಸರಿಯೇ. ಅಲ್ಲಿ ಒಂದು ಹೂ ನಗುವಿನ ಸ್ವಾಗತ ಇರುತ್ತಿತ್ತು. ಅಪ್ಪು ಮನೆಯಲ್ಲಿದ್ದರೇ. ಅಲ್ಲೊಂದು ಆಪ್ತ ವಾತಾವರಣವೇ ಇರುತ್ತಿತ್ತು. ಅಪ್ಪು ಅಷ್ಟೊಂದು ಸರಳವಾಗಿಯೇ ಇದ್ದು, ಎಲ್ಲರಿಗೂ ಒಂದ್ ಒಳ್ಳೆ ಭಾವನೆ ಮೂಡಿಸುತ್ತಿದ್ದರು.



ಇದನ್ನೂ ಓದಿ: BBK Season 09: ಎಲ್ಲೆಲ್ಲೂ ಅಪ್ಪು ಆರಾಧನೆ, ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ!


ಅಪ್ಪು ಇದ್ದದ್ದೇ ಹಾಗೆ ಅಲ್ವೇ? ಪುನೀತ್ ಒಂದೊಮ್ಮೆ ಹೀಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದರು. ಈ ಸಂದರ್ಶನದ ತುಣುಕಿನ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.


ಅಭಿಮಾನಿಗಳು ನನ್ನ ನಗುವನ್ನ ಹೆಚ್ಚು ಇಷ್ಟಪಡ್ತಾರೆ-ಅಪ್ಪು
ಈ ವೀಡಿಯೋದಲ್ಲಿ ಅಪ್ಪು, ತಮ್ಮ ನಗುವಿನ ಗುಟ್ಟನ್ನ ಬಿಟ್ಟುಕೊಟ್ಟಿದ್ದರು. ತಮ್ಮ ಈ ನಗುವನ್ನ ಅಭಿಮಾನಿಗಳು ಅತಿ ಇಷ್ಟಪಡ್ತಾರೆ ಎಂದು ಹೇಳಿಕೊಂಡಿದ್ದರು. ಇದೇ ವೀಡಿಯೋ ಈಗ ಅತಿ ಹೆಚ್ಚು ಗಮನ ಕೂಡ ಸೆಳೆಯುತ್ತಿದೆ.


Kannada Actor Puneeth Rajkumar Knows Power Of his Smile
ಅಪ್ಪು ಸ್ಮೈಲ್ ಹುಡುಕುತ್ತಿರೋ ಅಪ್ಪು ಫ್ಯಾನ್ಸ್


ಹೌದು, ಪುನೀತ್ ನಗುವನ್ನ ಈಗಲೂ ಅನೇಕರು ಮಿಸ್ ಮಾಡಿಕೊಳ್ತಾರೆ. ಅವರ ನಗುವನ್ನ ಫೋಟೋದಲ್ಲೋ, ಸಿನಿಮಾದ ವೀಡಿಯೋದಲ್ಲೋ, ಸಂದರ್ಶನ ವೀಡಿಯೋದಲ್ಲೋ ಕಾಣಬಹುದು. ಆದರೆ ಅವರ ನಿಜವಾದ ನಗು ಈಗ ಮಿಸ್ ಆಗಿದೆ.


ಅಪ್ಪು ಸ್ಮೈಲ್ ಹುಡುಕುತ್ತಿರೋ ಅಪ್ಪು ಫ್ಯಾನ್ಸ್
ಅಪ್ಪು ಇಲ್ಲದ ಈ ಒಂದು ವರ್ಷದಲ್ಲಿ ಅವರ ಅಭಿಮಾನಿಗಳು ಸಾಕಷ್ಟು ನೋವು ಪಟ್ಟುಕೊಂಡಿದ್ದಾರೆ. ಆದರೂ ಅಪ್ಪು ಹಾದಿಯಲ್ಲಿಯೇ ನಡೆಯೋಕೆ ಮುಂದಾಗಿದ್ದಾರೆ. ಅವರು ಮಾಡಿರೋ ಕೆಲಸಗಳನ್ನ ನೆನೆದು ಅವರನ್ನ ತಮ್ಮ ಮನದಲ್ಲಿ ಜೀವಂತವಾಗಿಟ್ಟುಕೊಂಡಿದ್ದಾರೆ.


ಇದನ್ನೂ ಓದಿ:Puneeth Rajkumar: ಪುನೀತ್ ಪಕ್ಕದ ಮನೆ ಹುಡುಗನ ರೀತಿನೇ ಆಪ್ತರಾಗ್ತಿದ್ದರು-ಗಾಯಕಿ ಶಮಿತಾ ಮಲ್ನಾಡ್ 


ಅಪ್ಪು ಅಪಾರ ಸಂಖ್ಯೆಯ ಅಭಿಮಾನಿಗಳು ಈಗಲೂ ಪುನೀತ್​ ರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಪ್ಪು ಸಮಾಧಿ ಬಳಿಗೆ ಬಂದು ತಮ್ಮದೇ ರೀತಿಯಲ್ಲಿ ನಮನ ಸಲ್ಲಿಸಿ ಹೋಗ್ತಿದ್ದಾರೆ. ಎಲ್ಲರಲ್ಲೂ ಅಪ್ಪು ಕಾಣುತ್ತಲೇ ಅವರ ಸ್ಮೈಲ್​ ಅನ್ನ ಹುಡುಕುತ್ತಿದ್ದಾರೆ.

First published: