• Home
  • »
  • News
  • »
  • entertainment
  • »
  • Puneeth Rajkumar: ಪುನೀತ್ ಪಕ್ಕದ ಮನೆ ಹುಡುಗನ ರೀತಿನೇ ಆಪ್ತರಾಗ್ತಿದ್ದರು-ಗಾಯಕಿ ಶಮಿತಾ ಮಲ್ನಾಡ್

Puneeth Rajkumar: ಪುನೀತ್ ಪಕ್ಕದ ಮನೆ ಹುಡುಗನ ರೀತಿನೇ ಆಪ್ತರಾಗ್ತಿದ್ದರು-ಗಾಯಕಿ ಶಮಿತಾ ಮಲ್ನಾಡ್

ಪಕ್ಕದ ಮನೆ ಹುಡುಗನ ರೀತಿ ಅಪ್ಪು ಎಲ್ಲರಿಗೂ ಆಪ್ತ

ಪಕ್ಕದ ಮನೆ ಹುಡುಗನ ರೀತಿ ಅಪ್ಪು ಎಲ್ಲರಿಗೂ ಆಪ್ತ

ಪುನೀತ್ ರಾಜಕುಮಾರ್ ನಮಗೆ ಪಕ್ಕದ ಮನೆಯ ಹುಡುಗನ ರೀತಿಯಲ್ಲೂ ಕಂಡು ಬರುತ್ತಿದ್ದರು. ನಮ್ಮವರೇ ಈ ಅಪ್ಪು ಅನ್ನೋ ಭಾವನೆ ಎಂತಹ ವ್ಯಕ್ತಿಗಳಿಗೂ ಬಂದು ಬಿಡುತ್ತಿತ್ತು ಎಂದು ಗಾಯಕಿ ಶಮಿತಾ ಅಪ್ಪು ಬಗ್ಗೆ ತಮ್ಮ ಮನದಾಳದ ಮಾತುಗಳನ್ನ ಆಡ್ತಾರೆ.

  • News18 Kannada
  • Last Updated :
  • Bangalore [Bangalore], India
  • Share this:

 ಪವರ್ ಸ್ಟಾರ್ ಪುನೀತ್ (Puneeth Rajkumar) ರಾಜಕುಮಾರ್ ಸದಾ ಎಲ್ಲರ ಹೃದಯದಲ್ಲಿದ್ದಾರೆ. ಇವರನ್ನ ಎಷ್ಟು ಬಾರಿ ನೆನಪಿಸಿಕೊಂಡ್ರೂನು ಕಡಿಮೇನೆ. ಇಂತಹ ಗಾಯಕ-ನಾಯಕನನ್ನ (Singer-Actor) ಎಲ್ಲರೂ ಎಲ್ಲ ಟೈಮ್​ ಕೂಡ ನೆನಪಿಸಿಕೊಳ್ಳುತ್ತಾರೆ. ಕಳೆದ 11 ತಿಂಗಳ ಹಿಂದೆ ಶಮಿತಾ ಮಲ್ನಾಡ್ ಮತ್ತು ಬರಗೂರು (Baraguru Ramachandrappa) ರಾಮಚಂದ್ರಪ್ಪ ಸೇರಿ ಒಂದು ಹಾಡು ಮಾಡಿದ್ದರು. ಆ ಹಾಡು ತುಂಬಾ ಅದ್ಭುತವಾಗಿಯೇ ಇತ್ತು. ಅಪ್ಪು ಇಲ್ಲದ ಈ ಒಂದು ವರ್ಷದಲ್ಲಿ ಎಲ್ಲರಿಗೂ ಒಂದು ಬೇಸರ ಇದ್ದೇ ಇದೆ. ಆದರೂ ಅಪ್ಪು ಎಲ್ಲೂ ಹೋಗಿಲ್ಲ. ಇಲ್ಲಿಯೇ ಇದ್ದಾರೆ ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆ ನೆನಪಿಗೇನೆ ಗಾಯಕಿ ಶಮಿತಾ (Shamitha Malnad) ಮಲ್ನಾಡ್ ಅವರು ತಮ್ಮ ಈ ಅಪ್ಪು ಮುತ್ತಿನ ಚಿಪ್ಪು ಹಾಡನ್ನ ಮತ್ತೆ ಹಂಚಿಕೊಂಡಿದ್ದಾರೆ.

ಅಪ್ಪು ಬಗ್ಗೆ ನ್ಯೂಸ್-18 ಕನ್ನಡದ ಡಿಜಿಟಲ್​ ಜೊತೆಗೆ ಒಂದಷ್ಟು ವಿಷಯಗಳನ್ನೂ ಶೇರ್ ಮಾಡಿದ್ದಾರೆ.


ಕನ್ನಡದ ಗಾಯಕಿ ಶಮಿತಾ ಮಲ್ನಾಡ್ ಕಂಡ ಪವರ್ ಸ್ಟಾರ್
ಸೂಪರ್ ಸ್ಟಾರ್ ಪುನೀತ್ ರಾಜಕುಮಾರ್ ಒಬ್ಬ ಸರಳ ಮನುಷ್ಯ. ಡಾಕ್ಟರ್ ರಾಜಕುಮಾರ್ ಅವರ ಹಾಗೇನೆ ನಡೆದುಕೊಂಡು ಬಂದರು. ತಂದೆಯ ಅಷ್ಟೂ ಮೌಲ್ಯಗಳನ್ನ ಜೀವನದಲ್ಲಿ ಅಳವಡಿಸಿಕೊಂಡವರು ಪವರ್ ಸ್ಟಾರ್ ಅಪ್ಪು , ಇವರ ಬಗ್ಗೆ ಇಲ್ಲಿ ಹೇಳ್ತಾ ಹೋದ್ರೆ ಸಾಕಷ್ಟಿದೆ.


ಇದನ್ನೂ ಓದಿ: Puneeth Rajkumar: ಅಣ್ಣಾವ್ರಿಗೆ ಸಿಹಿ ಅಂದ್ರೆ ಇಷ್ಟ! ಮಾವನಿಗಾಗಿ ಸ್ವೀಟ್ಸ್ ಮಾಡ್ತಿದ್ರು ಅಶ್ವಿನಿ ಪುನೀತ್​ ರಾಜ್​​​ಕುಮಾರ್


ಅಪ್ಪು ಅಗಲಿ ಇಂದಿಗೆ ಒಂದು ವರ್ಷವೇ ಕಳೆದು ಹೋಗಿದೆ. ಕಳೆದ ವರ್ಷ ಇದೇ ಸಮಯದಲ್ಲಿಯೇ ಅಪ್ಪು ಅಗಲಿದ್ದರು. ಆಗ ಬರಗೂರು ರಾಮಚಂದ್ರಪ್ಪ ಅವರು ಅಪ್ಪುಗೆ ನಮನ ಸಲ್ಲಿಸಬೇಕು ಅಂತಲೇ ಒಂದು ಹಾಡು ಬರೆದುಕೊಟ್ಟಿದ್ದರು. ಅದನ್ನ ನಮ್ಮ ನಿರ್ಮಾಣ ಸಂಸ್ಥೆಯಿಂದಲೇ ಹೊರ ತಂದಿದ್ದೇವೆ.


Kannada Actor Puneeth Rajkumar Just So Simple Man-Says Singer Shamitha Malnad
ಅಪ್ಪು ಇಲ್ಲದ ಈ ದಿನ ಮತ್ತೆ ಆ ಹಾಡಿನ ನಮನ


ಅಪ್ಪು ಇಲ್ಲದ ಈ ದಿನ ಮತ್ತೆ ಆ ಹಾಡಿನ ನಮನ
ಹೌದು, ಕಳೆದ ವರ್ಷ ಮಾಡಿದ್ದ ಅಪ್ಪು ಮುತ್ತಿನ ಚಿಪ್ಪು ಹಾಡನ್ನ ಈಗ ಗಾಯಕಿ ಶಮಿತಾ ಈಗ ಎಲ್ಲರೊಟ್ಟಿಗೆ ಶೇರ್ ಮಾಡಿದ್ದಾರೆ. ಎಲ್ಲ ಕಾಲಕ್ಕೂ ಸಲ್ಲುವ ಈ ಒಂದು ಗೀತೆ ಮೂಲಕ ಶಮಿತಾ ಅಪ್ಪುಗೆ ಮತ್ತೊಮ್ಮೆ ಗೀತ ನಮನ ಸಲ್ಲಿಸಿದ್ದಾರೆ.




ಪುನೀತ್ ನಿಜಕ್ಕೂ ಒಬ್ಬ ಸರಳ ವ್ಯಕ್ತಿತ್ವದ ಸೂಪರ್ ಸ್ಟಾರ್ ಅನ್ನೋದು ಎಲ್ಲರಿಗೂ ತಿಳಿದಿರೋ ವಿಷಯವೇ ಆಗಿದೆ. ಆದರೆ ಹತ್ತಿರದಿಂದ ನೋಡಿದಾಗಲೂ ಅದು ಸತ್ಯ ಅಂತ ಸಾರಿ, ಸಾರಿ ಹೇಳಬಹುದು. ಅಂತಹ ವ್ಯಕ್ತಿತ್ವದ ಅಪ್ಪು ತುಂಬಾ ವಿಶೇಷವಾಗಿಯೇ ಇದ್ದರು.


ಪಕ್ಕದ ಮನೆ ಹುಡುಗನ ರೀತಿ ಅಪ್ಪು ಎಲ್ಲರಿಗೂ ಆಪ್ತ
ಅಪ್ಪು ನಿಜಕ್ಕೂ ತುಂಬಾ ಸರಳ ಅಂತ ಹೇಳಲಿಕ್ಕೆ ಸಾಕಷ್ಟು ಕಾರಣಗಳು ಇವೆ. ಪುನೀತ್ ಎಂದೂ ಸೂಪರ್ ಸ್ಟಾರ್ ರೀತಿ ಬದುಕಿದವರೇ ಅಲ್ಲ. ಸರಳವಾಗಿಯೇ ಇದ್ದವರು. ಒಂದೊಮ್ಮೆ ಯಾರನ್ನೆ ಮಾತನಾಡಿಸಿದ್ರು ಸರಿಯೇ, ಆ ಕ್ಷಣಕ್ಕೆ ಆತ್ಮೀಯತೆ ಬೆಳೆಸಿಕೊಂಡು ಬಿಡುತ್ತಿದ್ದರು.


Kannada Actor Puneeth Rajkumar Just So Simple Man-Says Singer Shamitha Malnad
ಕನ್ನಡದ ಗಾಯಕಿ ಶಮಿತಾ ಮಲ್ನಾಡ್ ಕಂಡ ಪವರ್ ಸ್ಟಾರ್


ಅಂತಹ ಪುನೀತ್ ರಾಜಕುಮಾರ್ ನಮಗೆ ಪಕ್ಕದ ಮನೆಯ ಹುಡುಗನ ರೀತಿಯಲ್ಲೂ ಕಂಡು ಬರುತ್ತಿದ್ದರು. ನಮ್ಮವರೇ ಈ ಅಪ್ಪು ಅನ್ನೋ ಭಾವನೆ ಎಂತಹ ವ್ಯಕ್ತಿಗಳಿಗೂ ಬಂದು ಬಿಡುತ್ತಿತ್ತು ಎಂದು ಗಾಯಕಿ ಶಮಿತಾ ಅಪ್ಪು ಬಗ್ಗೆ ತಮ್ಮ ಮನದಾಳದ ಮಾತುಗಳನ್ನ ಆಡ್ತಾರೆ.


ಅಪ್ಪು ಸಮಾಧಿ ಬಳಿ ಶಮಿತಾ ಮಲ್ನಾಡ್ ಗಾನ ನಮನ
ಪುನೀತ್ ರಾಜಕುಮಾರ್ ಒಂದು ವರ್ಷದ ಪುಣ್ಯ ಸ್ಮರಣೆ ಅಂಗವಾಗಿಯೇ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನೂರಾರು ಗಾಯಕರು ಪುನೀತ್ ರಾಜಕುಮಾರ್ ಅವರಿಗೆ ಗಾನ ನಮನ ಸಲ್ಲಿಸುತ್ತಿದ್ದಾರೆ.


ಪುನೀತ್ ರಾಜಕುಮಾರ್ ಮತ್ತು ಡಾಕ್ಟರ್ ರಾಜಕುಮಾರ್ ಅವರ ಹಾಡುಗಳನ್ನ ಇಲ್ಲಿ ಹಾಡುತ್ತಿದ್ದಾರೆ. ಸಂಜೆ ಹೊತ್ತಿಗೆ ಇವರ ಕಾರ್ಯಕ್ರಮವೂ ಇರುತ್ತದೆ. ಅಲ್ಲಿ ಮಧುರವಾದ ಗಾಯನದ ಮೂಲಕ ಶಮಿತಾ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: Puneeth Rajkumar: 'ಗಂಧದ ಗುಡಿ'ಯಲ್ಲಿ ಡ್ಯಾನ್ಸಿಂಗ್ ಕಪ್ಪೆ ಕಂಡು ಅಪ್ಪು ಸಖತ್ ಡೈಲಾಗ್​! ಜನ ಫುಲ್ ಖುಷ್


ಹೀಗೆ ಅಪ್ಪು ಬಗ್ಗೆ ತಮ್ಮದೇ ರೀತಿಯಲ್ಲಿ ನಮನ ಸಲ್ಲಿಸ್ತಿರೋ ಶಮಿತಾ ಮಲ್ಡಾನ್ ತಮ್ಮ ಅಪ್ಪು ಬಗ್ಗೆ ಎಷ್ಟು ಹೇಳಿದರೂ ಕಡಿಮೇನೆ ಅಂತಲೇ ಹೇಳುತ್ತಾರೆ. ಅಪ್ಪು ವಿ ಮಿಸ್ ಯು ಅನ್ನೋದನ್ನ ತಮ್ಮ ಅಪ್ಪು ಮುತ್ತಿನ ಚಿಪ್ಪು ಹಾಡಿನಲ್ಲಿ ಹೇಳಿಯಾಗಿದೆ. ಈಗ ಮತ್ತೊಮ್ಮೆ ಅಪ್ಪು ವಿ ಮಿಸ್ ಯು ಅಂತಲೂ ಶಮಿತಾ ಮಲ್ಡಾನ್ ಹೇಳ್ತಾರೆ.

First published: