Raajakumara Show: ಶಿವರಾತ್ರಿ ದಿನ ರಾಜಕುಮಾರ ಸ್ಪೆಷಲ್ ಶೋ

ಶಿವರಾತ್ರಿ ದಿನ 12.30ಕ್ಕೆ ರಾಜಕುಮಾರ ಪ್ರದರ್ಶನ

ಶಿವರಾತ್ರಿ ದಿನ 12.30ಕ್ಕೆ ರಾಜಕುಮಾರ ಪ್ರದರ್ಶನ

ಬೆಂಗಳೂರಿನ ಪೀಣ್ಯ ಏರಿಯಾದಲ್ಲಿರೋ ಭಾರತಿ ಥಿಯೇಟರ್​​ನಲ್ಲಿ ರಾಜಕುಮಾರ ಚಿತ್ರದ ವಿಶೇಷ ಪ್ರದರ್ಶನ ಆಯೋಜನೆ ಆಗಿದೆ. ಫೆಬ್ರವರಿ-19 ರ ರಾತ್ರಿ 12.30ಕ್ಕೆ ರಾಜಕುಮಾರ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ (Puneeth Movie) ಅಭಿನಯದ ರಾಜಕುಮಾರ ಸಿನಿಮಾ ಜನಮಾನಸದಲ್ಲಿ ಇನ್ನೂ ಇದೆ. ಕನ್ನಡದ ಕಣ್ಮಣಿ ಡಾಕ್ಟರ್​ ರಾಜ್​ಕುಮಾರ್​ ಅವರ ಹೆಸರಿನೊಂದಿಗೆ ಬಂದಿದ್ದ ಈ ಚಿತ್ರಕ್ಕೆ ಒಳ್ಳೆ ಹೆಸರು (Raajakumara  Special Show) ಕೂಡ ಬಂತು. ಈ ಚಿತ್ರದ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರಿಗೆ ಒಂದು ದೊಡ್ಡ ಜವಾಬ್ದಾರಿ ಕೂಡ ಇತ್ತು. ರಾಜಕುಮಾರ ಅನ್ನುವ ಶೀರ್ಷಿಕೆ ಇಟ್ಟುಕೊಂಡು ಸುಮ್ನೆ ಏನೋ ಹೇಳಿದ್ರೆ ಆಗುತ್ತದೆಯೇ? ಇಲ್ಲ ಬಿಡಿ ಜನ ಒಪ್ಪಿಕೊಳ್ಳೋದಿಲ್ಲ. ಈ ಒಂದು ಸತ್ಯ ಗೊತ್ತಿದ್ದ ಡೈರೆಕ್ಟರ್ ಸಂತೋಷ್ ಆನಂದ್​ ​ರಾಮ್​ (Santhosh Ananddram) ಜವಾಬ್ದಾರಿಯುತವಾಗಿಯೇ ಚಿತ್ರ ಮಾಡಿದ್ದರು. ಕಸ್ತೂರಿ ನಿವಾಸ ಚಿತ್ರ ಆಡಿಸಿ ನೋಡು (Bombe Helutaithe Song) ಹಾಡಿನಿಂದಲೇ ಸ್ಪೂರ್ತಿ ಪಡೆದು ಈ ಚಿತ್ರದಲ್ಲಿ ಒಂದು ಹಾಡು ಬರೆದರು.


ಬೊಂಬೆ ಹೇಳುತೈತೆ ಈಗಲೂ ಮತ್ತೆ ಮತ್ತೆ ಹೇಳುತೈತೆ


ಆ ಒಂದು ಗೀತೆ ಇಡೀ ರಾಜಕುಮಾರ ಚಿತ್ರಕ್ಕೆ ಒಂದು ಶಕ್ತಿ ಆಯಿತು. ಕನ್ನಡ ನಾಡಿನ ಜನರನ್ನ ಈ ಒಂದು ಹಾಡು ಸೆಳೆದು ಬಿಟ್ಟಿತು. ನಿಜ, ಈ ಚಿತ್ರದ ಬೊಂಬೆ ಹೇಳುತೈತೆ ಗೀತೆ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಎಲ್ಲರ ಹೃದಯವನ್ನ ಸ್ಪರ್ಶಿಸಿತು. ವಿ. ಹರಿಕೃಷ್ಣ ಅವರ ಸಂಗೀತದಲ್ಲಿ ಈ ಹಾಡು ಮೂಡಿ ಬಂದಿತ್ತು.


Kannada Actor Puneeth Rajkumar Movie Rajkumara Film Re-Release
ರಾಜಕುಮಾರ ಚಿತ್ರ ಬಂದು ಈಗ 6 ವರ್ಷ ಪೂರ್ಣ


ರಾಜಕುಮಾರ ಚಿತ್ರದಲ್ಲಿ ಬೊಂಬೆ ಹೇಳುತೈತೆ ಹಾಡು ಪ್ರಮುಖ ಜಾಗದಲ್ಲಿಯೇ ಇತ್ತು. ಸಿನಿಮಾ ಕಥೆಯಂತೂ ಅದ್ಭುತವಾಗಿಯೇ ಬಂದಿತ್ತು. ಸಿನಿಮಾ ಮಾಡೋ ಸಮಯದಲ್ಲಿಯೇ ರಾಜಕುಮಾರ ಚಿತ್ರದ ಕಥೆಯನ್ನ ನವರಸನಾಯಕ ಜಗ್ಗೇಶ್ ಕೇಳಿದ್ದರು.




ಚಿತ್ರದ ಕಥೆ ಕೇಳಿ ಕಳೆದು ಹೋಗಿದ್ದರು ನವರಸ ನಾಯಕ!
ಈ ಕಥೆಯನ್ನ ಕೇಳಿಯೇ ನನಗೂ ಈ ರೀತಿ ಕಥೆ ಮಾಡಿಕೊಡು ಅಂತಲೂ ಸಂತೋಷ್ ಆನಂದ್ ರಾಮ್​ ಅವರಿಗೆ ಹೇಳಿದ್ದರು. ಆಗಲೇ ಈ ಸಿನಿಮಾ ಹಿಟ್ ಆಗುತ್ತದೆ ಅಂತ ನವರಸ ನಾಯಕ ಜಗ್ಗೇಶ್ ಹೇಳಿದ್ದರು.


ಅದರಂತೆ ಸಿನಿಮಾ ಸೂಪರ್ ಹಿಟ್ ಆಯಿತು. ಜನರು ರಾಜಕುಮಾರ ಚಿತ್ರವನ್ನ ಬಹುವಾಗಿಯೇ ಮೆಚ್ಚಿಕೊಂಡರು. ಕನ್ನಡ ನಾಡಿನ ಜನತೆಗೆ ಈ ರಾಜಕುಮಾರ ತುಂಬಾನೆ ಹಿಡಿಸಿತು.


ರಾಜಕುಮಾರ ಚಿತ್ರ ಬಂದು ಈಗ 6 ವರ್ಷ ಪೂರ್ಣ
2017 ಮಾರ್ಚ್​-24 ರಂದು ಚಿತ್ರ ರಿಲೀಸ್ ಆಗಿತ್ತು. ಆ ಲೆಕ್ಕದಲ್ಲಿ ಕನ್ನಡದ ಈ ಚಿತ್ರದ ತೆರೆ ಕಂಡು ಈಗ 6 ವರ್ಷಗಳು ಕಳೆದಿವೆ. ಆದರೆ ಈ ಚಿತ್ರದ ಬೇಡಿಕೆ ಕಡಿಮೆ ಆಗಿಲ್ಲ.


ರಾಜಕುಮಾರ ಚಿತ್ರದ ಮೂಲಕ ಗುರು-ಹಿರಿಯರನ್ನ ಗೌರವಿಸಬೇಕು, ಅವರನ್ನ ಹೇಗೆಲ್ಲ ನೋಡಿಕೊಳ್ಳಬೇಕು ಅನ್ನೋದನ್ನ ಹೇಳಿ ಹೋದ ದೊಡ್ಮನೆ ಪವರ್ ಸ್ಟಾರ್, ಈಗ ನಮ್ಮೊಟ್ಟಿಗೆ ಇಲ್ಲ ಅನ್ನುವ ನೋವು ಅಭಿಮಾನಿಗಳಲ್ಲಿ ಇದ್ದೇ ಇದೆ. ಆದರೂ ಪುನೀತ್ ನೆನಪಿಸಿಕೊಳ್ಳದೇ ಇರೋ ದಿನಗಳೂ ಇಲ್ಲವೇ ಇಲ್ಲ.


ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್
ಅಭಿಮಾನಿ ದೇವರುಗಳ ಮನದಲ್ಲಿ ಪುನೀತ್ ಇನ್ನೂ ಜೀವಂತವಾಗಿಯೇ ಇದ್ದಾರೆ. ಅದೇ ರೀತಿ ಈ ವರ್ಷದ ಶಿವರಾತ್ರಿಯ ದಿನ ಪುನೀತ್ ಅವರನ್ನ ನೆನಪಿಸಿಕೊಳ್ಳುವ ಇನ್ನೂ ಒಂದು ಕೆಲಸ ಬೆಂಗಳೂರಿನಲ್ಲಿ ಆಗುತ್ತಿದೆ.


ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ರಾಜಕುಮಾರ ಚಿತ್ರವನ್ನ ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಶಿವರಾತ್ರಿಯ ಜಾಗರಣೆಯ ಅಂಗವಾಗಿ ಇಲ್ಲಿವರೆಗೂ ಹಾಸ್ಯ ಕಾರ್ಯಕ್ರಮಗಳೇ ಆಯೋಜನೆ ಆಗುತ್ತಿದ್ದವು.


Kannada Actor Puneeth Rajkumar Movie Rajkumara Film Re-Release
ಚಿತ್ರದ ಕಥೆ ಕೇಳಿ ಕಳೆದು ಹೋಗಿದ್ದರು ನವರಸ ನಾಯಕ!


ಶಿವರಾತ್ರಿ ದಿನ 12.30ಕ್ಕೆ ರಾಜಕುಮಾರ ಪ್ರದರ್ಶನ
ಆದರೆ ಬೆಂಗಳೂರಿನ ಪೀಣ್ಯ ಏರಿಯಾದಲ್ಲಿರೋ ಭಾರತಿ ಥಿಯೇಟರ್​​ನಲ್ಲಿ ರಾಜಕುಮಾರ ಚಿತ್ರದ ವಿಶೇಷ ಪ್ರದರ್ಶನ ಆಯೋಜನೆ ಆಗಿದೆ ಫೆಬ್ರವರಿ-19 ರ ರಾತ್ರಿ 12.30ಕ್ಕೆ ರಾಜಕುಮಾರ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ.


ಇದನ್ನೂ ಓದಿ: Shivanna New Movie Updates: ಗೀತಾ ಪಿಕ್ಚರ್ಸ್ ಬಿಗ್ ಅನೌನ್ಸ್​ಮೆಂಟ್-ಏನಂತಾರೆ ಮಫ್ತಿ ಡೈರೆಕ್ಟರ್ ನರ್ತನ್?


ಚಿತ್ರದ ವಿಶೇಷ ಪ್ರದರ್ಶನದ ಸುದ್ದಿ ಭಾರೀ ವೈರಲ್ ಆಗಿದೆ. ಪವರ್​ ಸ್ಟಾರ್ ಪುನೀತ್ ಅವರ ಅಭಿಮಾನಿಗಳು ಈ ಸುದ್ದಿಯಿಂದ ತುಂಬಾ ಖುಷಿ ಆಗಿರೋದಂತೂ ಸತ್ಯ. ಇನ್ನುಳಿದಂತೆ ಕನ್ನಡಿಗರ ರಾಜಕುಮಾರ ಎಂದೆಂದೂ ಜೀವಂತ.

First published: