Pruthvi Ambaar: 'ದೂರದರ್ಶನ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ ಪೃಥ್ವಿ ಅಂಬರ್..!

ನಟ ಪೃಥ್ವಿ ಅಂಬರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದು, ಸದ್ಯದಲ್ಲೇ ಮತ್ತೊಂದು ಹೊಸ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಚಿತ್ರದ ಹೆಸರು ದೂರದರ್ಶನ ಎಂದು ಹೇಳಲಾಗಿದ್ದು, ಇದು 1986ರ ಕಾಲಘಟ್ಟದಲ್ಲಿನ ಕಥೆಯನ್ನು ಹೊಂದಿರಲಿದೆಯಂತೆ.

ಪ್ರಥ್ವಿ ಅಂಬರ್

ಪ್ರಥ್ವಿ ಅಂಬರ್

  • Share this:
ನಟ ಪೃಥ್ವಿ ಅಂಬರ್ (Pruthvi Ambaar) ದಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ತುಳುನಾಡ ಕಲಾವಿದ. ತುಳು ಸಿನಿಮಾಗಳಲ್ಲಿ ಜನಪ್ರಿಯ ನಾಯಕ ನಟನಾಗಿರುವ ಅವರು ದಿಯಾದಂತಹ ಒಂದೊಳ್ಳೆಯ ಸಿನಿಮಾದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದರು. ಇದೀಗ ಮತ್ತೊಮ್ಮೆ ಪೃಥ್ವಿ ಕನ್ನಡ ಸಿನಿಮಾ (Movie) ರಂಗದ ಅಂಬರದಲ್ಲಿ ಮಿಂಚುವ ತಯಾರಿ ನಡೆಸುತ್ತಿದ್ದಾರೆ. ಹೌದು, ಪೃಥ್ವಿ ದಿಯಾ ಸಿನಿಮಾದ ನಂತರ ಸಾಲು ಸಾಲು ಕನ್ನಡ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಆದರೆ ಇತರ ಹಲವು ಸಿನಿಮಾಗಳಂತೆ, ಲಾಕ್‍ಡೌನ್ (Lockdown) ಕಾರಣದಿಂದ ಪೃಥ್ವಿ ಅಂಬರ್ ಅವರು ಅಭಿನಯಸುತ್ತಿದ್ದ ಕೆಲವು ಚಿತ್ರಗಳ ಕೆಲಸ ಕೂಡ ಹಿಂದುಳಿತ್ತು. ಆದರೆ ಮತ್ತೆ ಅವರು ಸದ್ಯದಲ್ಲೇ ಮತ್ತೊಂದು ಹೊಸ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಹೆಸರು ದೂರದರ್ಶನ (Dooradarshana) ಎಂದು ಹೇಳಲಾಗಿದೆ. ಈ ಸಿನಿಮಾಕ್ಕೆ, ಟ್ರಂಕ್ ಸಿನಿಮಾದ ತಾಂತ್ರಿಕ ತಂಡ ಮತ್ತು ಕೆಲವೊಂದು ತುಳು ಚಿತ್ರಗಳ ಭಾಗವಾಗಿದ್ದ ಸುಕೇಶ್ ಶೆಟ್ಟಿ ಅವರ ಸಹಯೋಗದಲ್ಲಿ ಸಿದ್ಧಗೊಳ್ಳುತ್ತಿದೆ.

1986ರ ಕಥಾಹಂದರದ ದೂದರ್ಶನ:

ಈ ಸಿನಿಮಾ 1986ರ ಕಾಲ ಘಟ್ಟದಲ್ಲಿ ನಡೆಯುವ ಘಟನೆಗಳ ಕಥಾ ಹಂದರವನ್ನು ಹೊಂದಿದ್ದು, ಪ್ರೇಕ್ಷಕರನ್ನು ಆ ಕಾಲ ಘಟ್ಟಕ್ಕೆ ಕರೆದೊಯುತ್ತದೆ ಎನ್ನಲಾಗುತ್ತಿದೆ. ದೂರದರ್ಶನ ಸಿನಿಮಾದಲ್ಲಿ ಪೃಥ್ವಿ ಅಂಬರ್‌ಗೆ ನಾಯಕಿಯಾಗಿ ಹೊಸ ಹುಡುಗಿ ಪವಿತ್ರ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಉಗ್ರಂ ಮಂಜು, ಹರಿಣಿ, ವೀರನ್ ಕಾರ್ತಿಕ್ ಮತ್ತು ಸೂರಜ್ ಮತ್ತಿತರ ತಾರಾಗಣವಿದೆ. ದೂರದರ್ಶನ ಚಿತ್ರ ತಂಡ ಈಗಾಗಲೇ ಸಂಭಾಷಣೆಯ ಭಾಗದ ಚಿತ್ರೀಕರಣವನ್ನು ಮುಗಿಸಿದ್ದು, ಇದೀಗ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ.

ಕನ್ನಡ ಸಿನಿಮಾ ರಂಗದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ವಾಸುಕಿ ವೈಭವ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದು, ಅರುಣ್ ಸುರೇಶ್ ಈ ಚಿತ್ರದ ಸಿನಿಮಾಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಪೃಥ್ವಿ ಅಂಬರ್​: ಹಿಂದಿ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾದ ದಿಯಾ ಖ್ಯಾತಿಯ ನಟ..!

ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಪೃಥ್ವಿ :

ದಿಯಾ ಸಿನಿಮಾದ ಅಭಿನಯಕ್ಕಾಗಿ ಪೃಥ್ವಿ ಅಂಬರ್ ಅವರಿಗೆ ಚೊಚ್ಚಲ ಸಿನಿಮಾದ ಅತ್ಯುತ್ತಮ ನಟ ಎಂದು ಸೈಮಾ ಪ್ರಶಸ್ತಿ ಕೂಡ ಲಭಿಸಿತ್ತು. ದಿಯಾ ಚಿತ್ರ ಕಥೆ , ಮೇಕಿಂಗ್ ಮತ್ತು ಕಲಾವಿದರ ನಟನೆಯ ಕಾರಣದಿಂದ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು ಎಂಬುವುದು ಇದೀಗ ಹಳೆಯ ಸಂಗತಿ. ಈಗ ದಿಯಾ ಸಿನಿಮಾದ ಹಿಂದಿ ಅವೃತ್ತಿ ಕೂಡ ಸಿದ್ಧವಾಗುತ್ತಿದ್ದು, ಪೃಥ್ವಿ ಅಂಬರ್ ಅವರನ್ನು ಕೂಡ ಅದರಲ್ಲಿ ಕಾಣಬಹುದು. ಹಿಂದಿಯಲ್ಲಿ ದಿಯಾ ಸಿನಿಮಾದ ಹೆಸರನ್ನು ಡಿಯರ್ ದಿಯಾ ಎಂದು ಬದಲಾಯಿಸಲಾಗಿದೆ. ಪೃಥ್ವಿ ಅಂಬರ್ ಸಿನಿಮಾದ ಮೊದಲ ಲುಕ್‍ನ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಸದ್ಯ ಕನ್ನಡದ ಬಹುಬೇಡಿಕೆಯ ನಟ ಪೃಥ್ವಿ :

ಅವರು ಅಬ ಜಬ ಡಬ , ಶುಗರ್‌ಲೆಸ್‌ , ಲೈಫ್ ಇಸ್ ಬ್ಯೂಟಿಫುಲ್ ಮತ್ತು ಬೈರಾಗಿ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ವಿಜಯ್ ಮಿಲ್ಟನ್ ಅವರು ನಿರ್ದೇಶಿಸುತ್ತಿರುವ ಒಂದು ತಮಿಳು ಸಿನಿಮಾದಲ್ಲೂ ಪೃಥ್ವಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ನಟನೆಗೂ ಜೈ...ಹಾಡೋಕೂ ಸೈ ಅಂತಿದ್ದಾರೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್..!

ತುಳು ಚಿತ್ರದ ಮೂಲಕ ಸಿನಿರಂಗ ಪ್ರವೇಶ:

ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಪೃಥ್ವಿ ಅಂಬರ್, ಬರ್ಕೆ ಎಂಬ ತುಳು ಸಿನಿಮಾದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದ್ದರು. ಅವರ ಎರಡನೇ ತುಳು ಚಿತ್ರ ಪಿಲಿಬೈಲ್ ಯಮುನಕ್ಕ ಬ್ಲಾಕ್‍ಬಸ್ಟರ್ ಪ್ರದರ್ಶನ ಕಂಡಿತ್ತು. ಆ ಬಳಿಕ ಅವರು ಪಮ್ಮಣ್ಣೆ ದಿ ಗ್ರೇಟ್, ಗೋಲ್ ಮಾಲ್, 2 ಎಕ್ರೆ, ಇಂಗ್ಲೀಷ್, ಆಟಿಡೊಂಜಿ ದಿನ, ಕುದುಕನ ಮದಿಮೆ ಮತ್ತಿತರ ತುಳು ಸಿನಿಮಾಗಳಲ್ಲಿ ನಟಿಸಿ, ಆ ಭಾಷೆಯ ಚಿತ್ರ ಪ್ರೇಮಿಗಳನ್ನು ಮನರಂಜಸಿದ್ದಾರೆ. ಪೃಥ್ವಿ ಅಂಬರ್ ನಟ ಮಾತ್ರ ಅಲ್ಲ, ಬರಹಗಾರ ಕೂಡ. ಅವರು ತಮ್ಮ ಚಿತ್ರ ಒಂದಕ್ಕೆ ಚಿತ್ರಕಥೆಯನ್ನು ಕೂಡ ಬರೆದಿದ್ದಾರೆ. ಕನ್ನಡದ ಜನಪ್ರಿಯ ಜೊತೆಜೊತೆಯಲಿ ಧಾರವಾಹಿಯಲ್ಲಿ ಅವರು ‘ನೀಲ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Published by:shrikrishna bhat
First published: