Pruthvi Ambaar: ಕನ್ನಡಿಗರ ದಿಲ್ ಕದ್ದ ದಿಯಾ ಮರಾಠಿಯಲ್ಲೂ ಬಹುತೇಕ ಪೂರ್ಣ: ನಾಯಕ ನಟ ಪೃಥ್ವಿ ಅಂಬರ್ ಏನ್ ಹೇಳ್ತಾರೆ?

ನಾನು ಅಭಿನಯಿಸಿರೋ ಮರಾಠಿ ಭಾಷೆಯ ದಿಯಾ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ದೂರದರ್ಶನ,ಲೈಫ್ ಇಸ್ ಬ್ಯೂಟಿಫುಲ್ ರಿಲೀಸ್​ಗೆ ರೆಡಿ ಇವೆ. -ಪೃಥ್ವಿ ಅಂಬರ್,ದಿಯಾ ಚಿತ್ರದ ನಾಯಕ ನಟ

ದಿಯಾ ನಾಯಕ ನಟ ಪೃಥ್ವಿ ಅಂಬರ್

ದಿಯಾ ನಾಯಕ ನಟ ಪೃಥ್ವಿ ಅಂಬರ್

  • Share this:
ಕನ್ನಡ ಚಿತ್ರರಂಗದಲ್ಲಿ ದಿಯಾ (Dia Cinema )ಸಿನಿಮಾ ವಿಶೇಷ. ದಿಯಾ ಚಿತ್ರವನ್ನ ಜನ ಮೆಚ್ಚಿದರು. ಓಟಿಟಿಯಲ್ಲಿ ಈ ಸಿನಿಮಾ ಸಾಕಷ್ಟು ಓಡ್ತು. ಮತ್ತೆ ಮತ್ತೆ ಜನರ ಹೃದಯ ಗೆದ್ದಿತ್ತು. ಚಿತ್ರದಲ್ಲಿ ಅಭಿನಯಿಸಿದ ಕಲಾವಿದರಿಗೂ ಒಳ್ಳೆ ಹೆಸರು ತಂದು ಕೊಡ್ತು. ಇದೇ ದಿಯಾ(Kannada Dia)ಸಿನಿಮಾ ಈಗಾಗಲೆ ಮರಾಠಿ (Marathi Film) ಭಾಷೆಯಲ್ಲೂ ನಿರ್ಮಾಣ ಆಗುತ್ತಿದೆ. ಕನ್ನಡದ ದಿಯಾ ಸಿನಿಮಾದ ನಿರ್ದೇಶಕ ಕೆ.ಎಸ್.ಅಶೋಕ್ (Director K.S.Ashok) ಅವರೇ ಈ ಮರಾಠಿ ಸಿನಿಮಾವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಇನ್ನೇನು ಮರಾಠಿ ದಿಯಾ ಚಿತ್ರದ ಕೆಲಸವೂ ಕಂಪ್ಲೀಟ್ ಆಗಿಬಿಡುತ್ತದೆ. ಇದೇ ಸಮಯದಲ್ಲಿಯೇ ಚಿತ್ರದ ನಾಯಕರಲ್ಲಿ ಒಬ್ಬರಾದ ಪೃಥ್ವಿ ಅಂಬರ್ ನಮ್ಮ ಜೊತೆಗೆ ಮಾತನಾಡಿದ್ದಾರೆ. ತಮ್ಮ ಇತರ ಚಿತ್ರಗಳ ಮಾಹಿತಿಯನ್ನೂ ಕೊಟ್ಟಿದ್ದಾರೆ.

ದಿಯಾ ಕನ್ನಡದ ವಿಶೇಷ ಸಿನಿಮಾ. ಈ ಸಿನಿಮಾಕ್ಕೆ ಫ್ಯಾನ್ಸ್ ಕೂಡ ಇದ್ದಾರೆ. ಚಿತ್ರದಲ್ಲಿ ಬರೋ ಪಾತ್ರಗಳನ್ನೂ ಜನ ಈಗಲೂ ಇಷ್ಟಡುತ್ತಾರೆ. ಪಕ್ಕದ ಮರಾಠಿ ಇಂಡಸ್ಟ್ರೀ ಕೂಡ ಈ ಚಿತ್ರವನ್ನ ಈಗಾಗಲೇ ರಿಮೇಕ್ ಮಾಡುತ್ತಿದೆ. ನಿರ್ದೇಶಕ ಅಶೋಕ್ ಅವರೇ ಈ ಚಿತ್ರವನ್ನ ಅಲ್ಲೂ ಡೈರೆಕ್ಟ್ ಮಾಡುತ್ತಿದ್ದಾರೆ. ದಿಯಾ ತಂಡವೂ ಹೆಚ್ಚು ಕಡಿಮೆ ಅಲ್ಲಿ ಕೆಲಸ ಮಾಡುತ್ತಿದೆ ಅಂದ್ರೆ ತಪ್ಪಿಲ್ಲ. ಕನ್ನಡದ ದಿಯಾ ಚಿತ್ರದಲ್ಲಿ ಅಭಿನಯಿಸಿದ್ದ ನಟ ಪೃಥ್ವಿ ಅಂಬರ್ ಇಲ್ಲೂ ಅಭಿನಯಿಸಿದ್ದಾರೆ. ಮರಾಠಿಯಲ್ಲೂ ಕನ್ನಡದಲ್ಲಿದ್ದ ಅದೇ ಪಾತ್ರವನ್ನೆ ಪ್ಲೇ ಮಾಡುತ್ತಿದ್ದಾರೆ.

ಕನ್ನಡದ ದಿಯಾ ಮರಾಠಿಯಲ್ಲಿ ನಿರ್ಮಾಣ ಈಗ ಬಹುತೇಕ ಪೂರ್ಣ
ಕನ್ನಡದ ದಿಯಾ ಮರಾಠಿಯಲ್ಲಿ ನಿರ್ಮಾಣ ಆಗುತ್ತಿದೆ. ಹೆಚ್ಚು ಕಡಿಮೆ ಕಳೆದ 6 ತಿಂಗಳ ಹಿಂದೆ ಆರಂಭಗೊಂಡ ಮರಾಠಿ ದಿಯಾ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಮೂರು ನಾಲ್ಕು ದಿನದ ಕೆಲಸ ಬಾಕಿ ಇದೆ. ಇದರ ಹೊರತಾಗಿ ಈ ಚಿತ್ರದ ನಾಯಕ ಪೃಥ್ವಿ ಅಂಬರ್ ಇನ್ನೂ ಒಂದಷ್ಟು ಪ್ರೋಜೆಕ್ಟ್​ ಗಳಲ್ಲೂ ಬ್ಯುಸಿಯಿದ್ದಾರೆ.

Pruthvi Ambaar Reveals About his First Marathi Film
ಕನ್ನಡ ದಿಯಾ ಸಿನಿಮಾ ಹೀರೋ ಪೃಥ್ವಿ ಅಂಬರ್


ಅಬ್ಬ ಜಬ್ಬ ದಬ್ಬ ಕಾಮಿಡಿ ಚಿತ್ರದಲ್ಲಿ ಪೃಥ್ವಿ ಅಂಬರ್ ಅಭಿನಯ
ಕನ್ನಡದ ಆರ್​ಜೆ ಮಯೂರ್ ರಾಘವೇಂದ್ರ ಅಬ್ಬ ಜಬ್ಬ ದಬ್ಬ ಸಿನಿಮಾ ಡೈರೆಕ್ಟ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಅಭಿನಯಿಸುತ್ತಿದ್ದಾರೆ. ಅದರೆ, ಇದು ದಿಯಾ ಸಿನಿಮಾದ ಟ್ರ್ಯಾಜಿಡಿ ಮತ್ತೊಂದು ಲವ್ ಸಿನಿಮಾ ಅಲ್ಲವೇ ಅಲ್ಲ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಆಗಿದ್ದು, ಪೃಥ್ವಿ ಅಂಬರ್ ಇಲ್ಲಿ ಹೊಸ ಕಿಕ್ ಕೊಡಲಿದ್ದಾರೆ.
ಪೃಥ್ವಿ ಅಂಬರ್ ಅಭಿನಯದ ಇನ್ನೂ ಒಂದು ಸಿನಿಮಾ ಇದೆ. ಇದು ಲವ್ಲಿ ಸಿನಿಮಾ ಅಂತಲೇ ಹೇಳಬಹುದು. ಭುವನಂ ಗಗನಂ ಅನ್ನೋ ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಅಭಿನಯಿಸುತ್ತಿದ್ದಾರೆ. ಆದರೆ ಇವರ ಪಾತ್ರದ ಚಿತ್ರೀಕರಣ ಇನ್ನಷ್ಟೇ ಶುರು ಆಗಬೇಕಿದೆ.ಚಿತ್ರದ ಇನ್ನೂ ಒಬ್ಬ ನಟ ಪ್ರಮೋದ್ ಪಾತ್ರದ ಚಿತ್ರೀಕರಣ ಸದ್ಯ ನಡೀತಾ ಇದೆ.

ಪೃಥ್ವಿ ಅಂಬರ್ ಅಭಿನಯದ ಎರಡು ಸಿನಿಮಾ ರೆಡಿ ಟು ರಿಲೀಸ್
ಪೃಥ್ವಿ ಅಂಬರ್ ನಟಸಿರೋ ಇನ್ನೂ ಎರಡು ಸಿನಿಮಾಗಳಿವೆ. ಅವುಗಳಲ್ಲಿ ದೂರದರ್ಶನ ಒಂದು.ಇದು ಈಗ ಎಲ್ಲ ಕೆಲಸವನ್ನ ಮುಗಿಸಿಕೊಂಡು ರಿಲೀಸ್ ಹಂತಕ್ಕೆ ಬಂದಿದೆ. ಲೈಫ್ ಇಸ್ ಬ್ಯೂಟಿಫುಲ್ ಅನ್ನೋ ಚಿತ್ರವೂ ರೆಡಿ ಆಗಿದೆ. ಇನ್ನೇನು ರಿಲೀಸ್ ಆಗಬೇಕು ಅಷ್ಟೆ.

Pruthvi Ambaar Reveals About his First Marathi Film
ಕನ್ನಡದ ಯುವ ನಾಯಕ ನಟ ಪೃಥ್ವಿ ಅಂಬರ್


ತಮಿಳು ಚಿತ್ರದಲ್ಲಿ ಅಭಿನಯಿಸಿದ್ದಾರೆ ಪೃಥ್ವಿ ಅಂಬರ್
ಕನ್ನಡದ ಈ ನಟನಿಗೆ ತಿಮಿಳು ಚಿತ್ರದಲ್ಲಿ ಅಭಿನಯಿಸೋ ಚಾನ್ಸ್ ಸಿಕ್ಕಿದೆ. ಡೈರೆಕ್ಟರ್ ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಅಭಿನಯಿಸಿದ್ದಾರೆ. ಕನ್ನಡದ ನಟ ಧನಂಜಯ್ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಕನ್ನಡಿಗರಿಬ್ಬರು ಇರೋ ಚಿತ್ರಕ್ಕೆ ವಿಜಯ್ ಆಂಥೋನಿ ಲೀಡ್​ನಲ್ಲಿಯೇ ಇದ್ದಾರೆ.ಉಳಿದಂತೆ ಕನ್ನಡದ ನಟ ಪೃಥ್ವಿ ಅಂಬರ್ ಸದ್ಯಕ್ಕೆ ತಮ್ಮ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
First published: