Praveen Tej: ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿಯ ಪ್ರವೀಣ ತೇಜ್ ಈಗೇನ್ಮಾಡ್ತಿದ್ದಾರೆ?

ಪುನಿತ್ ರಾಜಕುಮಾರ್ ಅವರ ಪಿಆರ್​ಕೆ ಸಂಸ್ಥೆಯಿಂದಲೂ ಒಳ್ಳೆ ಸಿನಿಮಾ ಬರುತ್ತಿವೆ. ಈ ಸಂಸ್ಥೆಯ ಒಂದು ಪ್ರಾಜೆಕ್ಟನ್ನ ಪ್ರವೀಣ್ ತೇಜ್ ಒಪ್ಪಿಕೊಂಡಿದ್ದಾರೆ. ಸೈನ್ಸ್ ಫಿಕ್ಷನ್ ಕಥೆಯುಳ್ಳ ಸಿನಿಮಾ ಇದಾಗಿದೆ.

ಪ್ರವೀಣ್ ತೇಜ್ ಹೊಸ ಲುಕ್

ಪ್ರವೀಣ್ ತೇಜ್ ಹೊಸ ಲುಕ್

  • Share this:
ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರ ಖ್ಯಾತಿಯ ನಟ ಪ್ರವೀಣ್ ತೇಜ್ (Actor Praveen Tej) ಸದ್ಯ ಏನ್ ಮಾಡುತ್ತಿದ್ದಾರೆ. ಇವರ ಚಿತ್ರ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗಿದೆ. ಯಾವ ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ದಿನನಿತ್ಯದ ವರ್ಕೌಟ್ ಪ್ಲಾನ್ (Workout Plan) ಹೇಗಿರುತ್ತದೆ. ಯಾವ ಸಿನಿಮಾಗಳು (Cinema Ready to Release) ರಿಲೀಸ್​ ಗೆ ರೆಡಿ ಇವೆ.  ಅವರ ಪ್ರೀತಿ-ಪ್ರೇಮದ ಕಥೆ ಹೇಳಿದ ಮುಂದಿನ ನಿಲ್ದಾಣ ಚಿತ್ರವೂ ವಿಶೇಷವಾಗಿಯೇ ಇತ್ತು. ಈಗ ಪ್ರವೀಣ್ ಇನ್ನೂ ಒಂದಿಷ್ಟು ಸಿನಿಮಾ ಒಪ್ಪಿಕೊಂಡಿದ್ದಾರೆ.ಈ ಕುರಿತು ಪ್ರವೀಣ್ ತೇಜ್ ನಮ್ಮ ಜೊತೆಗೆ ಒಂದಿಷ್ಟು ವಿಷಯಗಳನ್ನ ಶೇರ್ ಮಾಡಿಕೊಂಡಿದ್ದಾರೆ. 

ಕನ್ನಡದ ನಟ ಪ್ರವೀಣ್ ತೇಜ್ ಎಲ್ಲ ನಟರಿಗಿಂತಲೂ ಕೊಂಚ ಡಿಫರೆಂಟ್.ತಾವಾಯಿತು ತಮ್ಮ ಕೆಲಸ ಆಯಿತು. ಮಾತುಗಳು ಕಡಿಮೇನೆ. ಆದರೆ ಅಭಿನಯಿಸಿರೋ ಪಾತ್ರಗಳು ಗಮನಕ್ಕೆ ಬರುತ್ತವೆ. ಹೃದಯಕ್ಕೂ ಟಚ್ ಆಗುತ್ತವೆ. ಅಂತಹ ಸಿನಿಮಾಗಳಲ್ಲಿ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಅತಿ ಹೆಚ್ಚು ಗಮನ ಸೆಳೆಯಿತು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರವನ್ನ ಡೈರೆಕ್ಟ್ ಮಾಡಿದ ಡೈರೆಕ್ಟರ್ ಸುನಿ ಈ ಚಿತ್ರವನ್ನೂ ನಿರ್ದೇಶನ ಮಾಡಿದ್ದರು.

ಪ್ರವೀಣ್ ತೇಜ್ ಕೂಡ ಹೊಂದಿಸಿ ಬರೆಯಿರಿ ಅಂತವ್ರೆ ನೋಡಿ
ಪ್ರವೀಣ್ ತೇಜ್ ಒಪ್ಪಿಕೊಂಡ ಸಿನಿಮಾಗಳಲ್ಲಿ ಹೊಂದಿಸಿ ಬರೆಯಿರಿ ಸಿನಿಮಾ ಕೂಡ ಇದೆ. ಈ ಚಿತ್ರದಲ್ಲಿ ಐಶಾನಿ ಶೆಟ್ಟಿ ಕೂಡ ಇದ್ದಾರೆ. ಇವರ ಈ ಸಿನಿಮಾ ಬಹುತೇಕ ಕಂಪ್ಲೀಟ್ ಆಗಿದೆ. ಚಿತ್ರದ ಪ್ರಚಾರದ ಕೆಲಸ ಆರಂಭಗೊಂಡಿದೆ. ಇದೇ ವರ್ಷ ಅಕ್ಟೋಬರ್ ಇಲ್ಲವೇ ನವೆಂಬರ್ ನಲ್ಲಿಯೇ ಈ ಸಿನಿಮಾ ರಿಲೀಸ್ ಆಗೋದಿದೆ.

ಪವರ್ ಸ್ಟಾರ್ ಪುನಿತ್ ಪಿಆರ್​ಕೆ ಸಂಸ್ಥೆಯಲ್ಲಿ ಪ್ರವೀಣ್ ಸಿನಿಮಾ
ಪುನೀತ್ ರಾಜಕುಮಾರ್ ಅವರ ಪಿಆರ್​ಕೆ ಸಂಸ್ಥೆಯಿಂದಲೂ ಒಳ್ಳೆ ಸಿನಿಮಾ ಬರುತ್ತಿವೆ. ಈ ಸಂಸ್ಥೆಯ ಒಂದು ಪ್ರಾಜೆಕ್ಟನ್ನ ಪ್ರವೀಣ್ ತೇಜ್ ಒಪ್ಪಿಕೊಂಡಿದ್ದಾರೆ. ಸೈನ್ಸ್ ಫಿಕ್ಷನ್ ಕಥೆಯುಳ್ಳ ಸಿನಿಮಾನೇ ಇದಾಗಿದ್ದು, ಈ ಸಂಸ್ಥೆಯ ಬಗ್ಗೆ ಹೆಮ್ಮೆಯಿಂದಲೇ ಪ್ರವೀಣ್ ಈ ವಿಷಯವನ್ನ ಇಲ್ಲಿ ಹೇಳಿಕೊಂಡಿದ್ದಾರೆ.

Praveen Tej Now Working for PRK Production Film
ಪ್ರವೀಣ್ ತೇಜ್ ಸಖತ್ ಫೋಸ್


ಇದನ್ನೂ ಓದಿ: Coffee Nadu Chandu: ಕಾಫಿ ನಾಡು ಚಂದು ಇನ್​​ಸ್ಟಾಗ್ರಾಂ ಅಕೌಂಟ್ ಹ್ಯಾಕ್!

ಡೈರೆಕ್ಟರ್ ಎಂ.ಡಿ.ಶ್ರೀಧರ್ ಚಿತ್ರ ಒಪ್ಪಿಕೊಂಡ ಪ್ರವೀಣ್ ತೇಜ್
ಡೈರೆಕ್ಟರ್ ಎಂ.ಡಿ.ಶ್ರೀಧರ್ ಚಿತ್ರವೊಂದನ್ನ ಕೂಡ ಪ್ರವೀಣ್ ತೇಜ್ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಾಮಿಡಿನೆ ಜಾಸ್ತಿ ಇದೆ. ಆದರೆ ಇದರಲ್ಲಿ ರೋಮ್ಯಾನ್ಸ್ ಕೂಡ ಇದೆ. ಅದಕ್ಕೇನೆ ಇದನ್ನ ರೋಮ್ಯಾಂಟಿಕ್ ಕಾಮಿಡಿ ಡ್ರಾಮಾ ಇರೋ ಸಿನಿಮಾ ಅಂತಲೂ ಕರೆಯಬಹುದು.
ಪ್ರವೀಣ್ ತೇಜ್ ಹಲವು ಕಥೆಗಳನ್ನೂ ಕೇಳ್ತಾಯಿದ್ದಾರೆ. ಅವುಗಳಲ್ಲಿ ಲವ್ ಸ್ಟೋರಿ ಒಂದಷ್ಟಿದ್ದರೇ, ಥ್ರಿಲ್ಲರ್ ಕಥೆಗಳೂ ಇರುತ್ತವೆ. ಹಂಗೇ ಬರೋ ಕಥೆಗಳೆಲ್ಲವನ್ನೂ ಪ್ರವೀಣ್ ತೇಜ್ ಕೇಳುತ್ತಿದ್ದಾರೆ. ಇಷ್ಟ ಆಗೋ, ಜನ ಮೆಚ್ಚೋ ಪ್ರಾಜೆಕ್ಟ್​ಗಳನ್ನೆ ಪ್ರವೀಣ್ ತೇಜ್ ಸದ್ಯಕ್ಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Ramesh Aravind: ರಮೇಶ್ ಅರವಿಂದ್ ಪ್ರೀತಿಯಿಂದ ಬರೆದ್ರು ಪುಸ್ತಕ! ನಿಮಗೂ ಸ್ಪೂರ್ತಿ ಹುಟ್ಟಲಿ ಎಂದ ನಟ

ಪ್ರವೀಣ್ ಪ್ರತಿ ದಿನ ಎಷ್ಟು ಗಂಟೆ ವರ್ಕೌಟ್ ಮಾಡ್ತಾರೆ ಗೊತ್ತೇ 
ಕಲಾವಿದರು ಅಂದ್ಮೇಲೆ ಒಂದಷ್ಟು ತಯಾರಿ ಸದಾ ಇರಲೇಬೇಕಾಗುತ್ತದೆ. ವರ್ಕೌಟ್ ಮತ್ತು ಡಯೆಟ್ ಅಂತಲೂ ನೋಡಿಕೊಳ್ಳಬೇಕಾಗುತ್ತದೆ.ಅದಕ್ಕಾಗಿಯೇ ಬೆಳಗ್ಗೆ 5.30 ರ ಹೊತ್ತಿಗೆ ವರ್ಕೌಟ್ ಮಾಡೋ ಮೂಲಕ ದಿನವನ್ನ ಪ್ರವೀಣ್ ಆರಂಭಿಸುತ್ತಾರೆ. ಜಿಮ್ ಟ್ರೈನರ್ ಶ್ರೀನಿವಾಸ್ ಗೌಡರ ಪ್ಲಾನ್​ ನಂತೇನೆ ಡಯೆಟ್ ಮಾಡಿ ದೇಹವನ್ನೂ ದಂಡಿಸುತ್ತಾರೆ. ಚಂದಗೆ ಸುಂದರವಾಗಿಯೇ ತೆರೆ ಮೇಲೂ ಕಾಣಿಸುತ್ತಾರೆ. ಒಟ್ಟಾರೆ, ಕನ್ನಡದ ಈ ನಾಯಕ ನಟ ಒಳ್ಳೆ, ಒಳ್ಳೆ ಪಾತ್ರಗಳ ಮೂಲಕ ಜನರನ್ನ ರಂಜಿಸುತ್ತಿದ್ದಾರೆ.
First published: