• Home
  • »
  • News
  • »
  • entertainment
  • »
  • Pregnant Prathap Narayan: ಕನ್ನಡದ ನಟ ಪ್ರತಾಪ್ ನಾರಾಯಣ್ ಪ್ರೆಗ್ನೆಂಟ್; ಇದು ಸುಳ್ಳಲ್ಲ!

Pregnant Prathap Narayan: ಕನ್ನಡದ ನಟ ಪ್ರತಾಪ್ ನಾರಾಯಣ್ ಪ್ರೆಗ್ನೆಂಟ್; ಇದು ಸುಳ್ಳಲ್ಲ!

ಕನ್ನಡದ ನಾಯಕ ನಟ ಪ್ರತಾಪ್ ನಾರಾಯಣ್ ಹೊಸ ಲುಕ್

ಕನ್ನಡದ ನಾಯಕ ನಟ ಪ್ರತಾಪ್ ನಾರಾಯಣ್ ಹೊಸ ಲುಕ್

I am Pregnant ಸಿನಿಮಾ ಒಂದು ವಿಶೇಷವಾದ ಸಿನಿಮಾನೇ ಆಗಿದೆ. ಕನ್ನಡದಲ್ಲಿ ಇಂತಹ ಚಿತ್ರ ಬಂದೇ ಇಲ್ಲ. ಕನ್ನಡದ ಮಟ್ಟಿಗೆ ಇದು ಮೊದಲ ಸಿನಿಮಾ ಅಂತಲೇ ಪ್ರತಾಪ್ ನಾರಾಯಣ್ ಖುಷಿ ಹಂಚಿಕೊಂಡಿದ್ದಾರೆ.

  • Share this:

ಕನ್ನಡದಲ್ಲಿ ಒಂದು ಸಿನಿಮಾ (Cinema Ready to Release) ರೆಡಿ ಆಗಿದೆ. ಇದರ ಶೀರ್ಷಿಕೆ ಕೂಡ ಮಜವಾಗಿದೆ. ಚಿತ್ರದ ಕಂಟೆಂಟ್ (Content) ಕೇಳಿದ್ರೆ ಒಮ್ಮೆ ಶಾಕ್ ಆಗುತ್ತದೆ. ಕನ್ನಡದ ಮಟ್ಟಿಗೆ ಇದು ಮೊದಲ ಪ್ರಯತ್ನದ ಸಿನಿಮಾನೇ ಆಗಿದೆ. ಇದರ ಹೀರೋ ಈಗಾಗಲೇ ಹಲವು ಸಿನಿಮಾ ಮಾಡಿದ್ದಾರೆ. ಆದರೂ ಹೀರೋಗಿರಿ ಬಿಟ್ಟು, ನಿಸರ್ಗದ ವಿರುದ್ಧವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗೇನೆ ಈ ಚಿತ್ರದ ಮೂಲಕವೇ ಕನ್ನಡದ ಆ ಯುವ ನಟ I am Pregnant ಅಂತಲೇ ಹೇಳಿ ಶಾಕ್ ಕೊಡ್ತಿದ್ದಾರೆ. ಶಾಕ್ ತೆಗೆದುಕೊಳ್ಳುವ ಈ ಸಿನಿಮಾದ ನಾಯಕ ಬೇರೆ ಯಾರೋ ಅಲ್ಲ. ಕನ್ನಡದ ಪ್ರತಾಪ್ ನಾರಾಯಣ್, ಕನ್ನಡದಲ್ಲಿ ವಿಲನ್ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳಬೇಕು ಅಂತಲೇ ಇಷ್ಟಪಡ್ತಾರೆ.


ಆದರೆ ಒಳ್ಳೆ ವಿಷಯದ ಸಿನಿಮಾ ಬಂದ್ರೆ ಬಿಡೋದಿಲ್ಲ ಒಪ್ಪಿಕೊಳ್ಳುತ್ತಾರೆ. I am Pregnant ಕೂಡ ಒಂದು ವಿಶೇಷ, ವಿಭಿನ್ನ ಸಬ್ಜೆಕ್ಟ್​​ನ ಸಿನಿಮಾನೇ ಆಗಿದೆ. ಈ ಬಗ್ಗೆ ನಮ್ಮೊಟ್ಟಿಗೆ ಸ್ವತಃ ಪ್ರತಾಪ್ ನಾರಾಯಣ್ ಒಂದಷ್ಟು ವಿಷಯ ಹಂಚಿಕೊಡಿದ್ದಾರೆ.

I am Pregnant ಅಂತಿದ್ದಾರೆ ಪ್ರತಾಪ್ ನಾರಾಯಣ್
I am Pregnant ಸಿನಿಮಾ ಒಂದು ವಿಶೇಷವಾದ ಸಿನಿಮಾನೇ ಆಗಿದೆ. ಕನ್ನಡದಲ್ಲಿ ಇಂತಹ ಚಿತ್ರ ಬಂದಿಯೇ ಇಲ್ಲ. ಕನ್ನಡದ ಮಟ್ಟಿಗೆ ಇದು ಮೊದಲ ಸಿನಿಮಾನೇ ಅಂತಲೇ ಪ್ರತಾಪ್ ನಾರಾಯಣ್ ಖುಷಿ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ನಾನೇ ಪ್ರೆಗ್ನೆಂಟ್ ಆಗುತ್ತೇನೆ ಅಂತಲೇ ಶಾಕ್ ಕೊಡ್ತಾರೆ.


Kannada Actor Prathap Narayan Now Reveals abut his new Movie Releases
ಪ್ರತಾಪ್ ನಾರಾಯಣ್ ಮೂರು ಸಿನಿಮಾ ರಿಲೀಸ್​ಗೆ ರೆಡಿ


ಹೌದು, ಈ ಸಿನಿಮಾದ ವಿಶೇಷತೇನೆ ಅದಾಗಿದೆ. ಹೆಣ್ಣು ಮಕ್ಕಳು ಪ್ರೆಗ್ನೆಂಟ್ ಆಗುತ್ತಾರೆ. ಆದರೆ ಗಂಡು ಮಕ್ಕಳು ಹೇಗೆ ಪ್ರೆಗ್ನೆಂಟ್ ಆಗುತ್ತಾರೆ? ಅದು ಹೇಗೆ ಸಾಧ್ಯ? ಈ ಎಲ್ಲ ಪ್ರಶ್ನೆಗೆ ಉತ್ತರ ಸಿನಿಮಾ ಬಂದ್ಮಲೆನೆ ಹೇಳಬಹುದು.


ಐ ಆ್ಯಮ್ ಪ್ರೆಗ್ನೆಂಟ್ ಸಿನಿಮಾದಲ್ಲಿ ಪ್ರತಾಪ್ ನಾರಾಯಣ್ ಪ್ರೆಗ್ನೆಂಟ್ ಮ್ಯಾನ್ ಆಗಿ ಅಭಿನಯಿಸಿದ್ದಾರೆ. ಚಿತ್ರದ ನಿರ್ದೇಶಕ ಸಂಜಯ್ ಈ ಮೂಲಕ ಕನ್ನಡಕ್ಕೆ ಹೊಸ ಕಥೆಯನ್ನೆ ಕಟ್ಟಿಕೊಡುತ್ತಿದ್ದಾರೆ. ಆ ಕಥೆಗೆ ಪ್ರತಾಪ್ ನಾರಾಯಣ್ ಜೀವ ತುಂಬಿದ್ದಾರೆ.


ಇದನ್ನೂ ಓದಿ:Artist Special Movement: ಸ್ಟಾರ್ ಯಾರ್, ದೋಸ್ತ್ ಯಾರ್; ಹೊಂದಿಸಿ ಬರೆಯಿರಿ ಸಿನಿಮಾ ತಂಡದ ಫೋಟೋ ಶೂಟ್


ಐ ಆ್ಯಮ್ ಪ್ರೆಗ್ನೆಂಟ್ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾದ ಎಲ್ಲ ಕೆಲಸವೂ ಕಂಪ್ಲೀಟ್ ಆಗಿದೆ. ಸಿನಿಮಾ ಪ್ರೇಮಿಗಳು ಈ ಚಿತ್ರದಲ್ಲಿ ಹೊಚ್ಚ ಹೊಸ ಕಥೆಯನ್ನೆ ಕಾಣಬಹುದು. ಸಿನಿಮಾ ಎಲ್ಲ ಕೆಲಸವನ್ನೂ ಮುಗಿಸಿಕೊಂಡು ರಿಲೀಸ್​ಗೆ ರೆಡಿ ಆಗಿದೆ. ಆದರೆ ರಿಲೀಸ್ ಡೇಟ್ ಅಷ್ಟೆ ಈಗ ಅನೌನ್ಸ್ ಆಗಬೇಕಿದೆ.


ಪ್ರತಾಪ್ ನಾರಾಯಣ್ ಅಭಿನಯದ ಈ ಚಿತ್ರದಲ್ಲಿ ನಾಯಕಿಯರೂ ಇದ್ದಾರೆ. ಅರ್ಪಿತಾ ಗೌಡ, ಪ್ರಿಯಾಂಕಾ ಸುರೇಶ್ ಅಭಿನಯಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ರಿಲೀಸ್ ಆದ ಚಿತ್ರದ ಟೀಸರ್ ಕೂಡ ವಿಶೇಷವಾಗಿಯೇ ಇದೆ. ಇದರಲ್ಲಿ ಬರೋ ಎಲ್ಲ ಪಾತ್ರಗಳು ಸ್ಲೋ ಮೋಷನ್​ನಲ್ಲಿ ರಿವರ್ಸ್ ಹೋಗುತ್ತವೆ. ಇದುವೇ ಈ ಟೀಸರ್ ವಿಶೇಷವೇ ಆಗಿದೆ.


ಪ್ರತಾಪ್ ನಾರಾಯಣ್ ಮೂರು ಸಿನಿಮಾ ರಿಲೀಸ್​ಗೆ ರೆಡಿ
ಪ್ರತಾಪ್ ನಾರಾಯಣ್ ಅಭಿನಯದ ಮೂರು ಸಿನಿಮಾ ರಿಲೀಸ್​ಗೆ ರೆಡಿ ಇವೆ. ಐ ಆ್ಯಮ್ ಪ್ರೆಗ್ನೆಂಟ್, ಉತ್ತಮರು, ಗುಡುಗು ಈ ಸಿನಿಮಾಗಳು ರೆಡಿ ಆಗಿವೆ. ಇನ್ನೇನು ರಿಲೀಸ್ ಡೇಟ್ ಅಷ್ಟೇ ಅನೌನ್ಸ್ ಆಗೋದು ಬಾಕಿದೆ ಇದೆ.


Kannada Actor Prathap Narayan Now Reveals abut his new Movie Releases
ಖಳನಾಯಕ ಪಾತ್ರವನ್ನೆ ಪ್ರತಾಪ್ ನಾರಾಯಣ್ ಹೆಚ್ಚು ಇಷ್ಟಪಡ್ತಾರೆ


ಈ ಮೂರು ಸಿನಿಮಾಗಳಲ್ಲಿ ಐ ಆ್ಯಮ್ ಪ್ರೆಗ್ನೆಂಟ್ ಸಿನಿಮಾ ಬೇರೆ ರೀತಿಯ ಸಿನಿಮಾನೇ ಆಗಿದೆ. ಇದಕ್ಕೆ ಯು ಪ್ರಮಾಣ ಪತ್ರವನ್ನೆ ಕೊಡಲಾಗಿದೆ ಉತ್ತಮರು ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ಕೊಟ್ಟಿದೆ. ಗುಡುಗು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಬಂದಿದೆ.


ಈ ಮೂರು ಸಿನಿಮಾಗಳ ಮೂಲಕ ಬೇರೆ ಬೇರೆ ರೀತಿಯಲ್ಲಿ ಜನರನ್ನ ರಂಜಿಸೋಕೆ ಪ್ರತಾಪ್ ನಾರಾಯಣ ರೆಡಿ ಆಗಿದ್ದಾರೆ. ಈ ನಡುವೇನೆ ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಸಿನಿಮಾದಲ್ಲಿ "ನಾನಾ" ಹೆಸರಿನ ವಿಲನ್ ಪಾತ್ರವೊಂದನ್ನ ಮಾಡಿದ್ದಾರೆ.


ಪ್ರತಾಪ್ ನಾರಾಯಣ್​ಗೆ ವಿಲನ್ ಪಾತ್ರ ಮಾಡೋಕೆ ಬಲು ಇಷ್ಟ
ನಾಯಕ ನಟ ಪ್ರತಾಪ್ ನಾರಾಯಣ್ ವಿಲನ್ ಪಾತ್ರವನ್ನೆ ಮಾಡೋಕೆ ಇಷ್ಟಪಡ್ತಾರೆ. ಡೆಡ್ಲಿ-02 ಸಿನಿಮಾದಲ್ಲಿ ಅನಿಲ್ ಅನ್ನೋ ನೆಗೆಟಿವ್ ರೋಲ್ ಅಲ್ಲಿಯೇ ಕಾಣಿಸಿಕೊಂಡಿದ್ದರು.


ಆದರೆ ಹೀರೋಯಿಸಂ ಪಾತ್ರಗಳನ್ನ ಮಾಡೋದರಲ್ಲಿ ಇರೋ ಖುಷಿ ಬೇರೆ. ವಿಲನ್ ಪಾತ್ರಗಳನ್ನ ನಿರ್ವಹಿಸೋದ್ರಿಂದ ಅಭಿನಯಿಸೋಕೆ ಹೆಚ್ಚಿನ ಅವಕಾಶಗಳು ಇರುತ್ತವೆ ಅಂತಲೇ ಪ್ರತಾಪ್ ನಾರಾಯಣ್ ಹೇಳಿಕೊಳ್ತಾರೆ.


ಪ್ರತಾಪ್ ನಾರಾಯಣ್ ಮುಂದಿನ ಸಿನಿಮಾಗಳು ಯಾವವು?
ಪ್ರತಾಪ್ ನಾರಾಯಣ್ ಈಗಾಗಲೇ ಎರಡು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ.ಎರಡರ ವಿಷಯವೂ ಬೇರೆ ಇವೆ. ಆ ಲೆಕ್ಕದಲ್ಲಿ ಕಲರ್ ಆಫ್ ಟೊಮೆಟೋ ಸಿನಿಮಾ ವಿಶೇಷವಾಗಿಯೇ ಕಾಣಿಸುತ್ತದೆ.


Kannada Actor Prathap Narayan Now Reveals abut his new Movie Releases
ರಚಿತಾ ರಾಮ್ ನಟನೆಯ ಶಬರಿ ಚಿತ್ರದಲ್ಲಿ ಪ್ರತಾಪ್ ವಿಲನ್


ಕೋಲಾರದಲ್ಲಿರೋ ಟೊಮೆಟೋ ಮಂಡಿಯ ಮಾಫಿಯಾ ಬಗ್ಗೇನೆ ಈ ಸಿನಿಮಾ ಇದೆ. ನವ ನಿರ್ದೇಶಕ ಲೋಕೇಶ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ತಿವೇದಂ ಹೆಸರಿನ ಕನ್ನಡ ಚಿತ್ರವನ್ನೂ ಪ್ರತಾಪ್ ನಾರಾಯಣ್ ಒಪ್ಪಿಕೊಂಡಿದ್ದಾರೆ. ರಚಿತಾ ರಾಮ್ ಅಭಿನಯದ ಶಬರಿ ಸಿನಿಮಾದಲ್ಲಿ ವಿಲನ್ ಪಾತ್ರವನ್ನೆ ಪ್ರತಾಪ್ ನಾರಾಯಣ್ ಮಾಡಿದ್ದಾರೆ.


ಇದನ್ನೂ ಓದಿ: https://kannada.news18.com/photogallery/breaking-news/singer-neha-bhasin-giving-tough-competition-to-urfi-javed-see-these-glamorous-photo-dvp-849209.html


ಇದನ್ನ ಅರುಣ್ ಜಯರಾಮ್ ಡೈರೆಕ್ಟ್ ಮಾಡುತ್ತಿದ್ದಾರೆ. ರಿಲೀಸ್ ಗೆ ಮೂರು ಸಿನಿಮಾ ರೆಡಿ ಇವೆ. ಈಗಾಗಲೇ ಎರಡು ಚಿತ್ರಗಳನ್ನ ಪ್ರತಾಪ್ ನಾರಾಯಣ್ ಒಪ್ಪಿಕೊಂಡಿದ್ದಾರೆ. ರಿಲೀಸ್ ಗೆ ರೆಡಿ ಇರೋ ಮೂರು ಚಿತ್ರಗಳನ್ನ ಜನ ಹೇಗೆಲ್ಲ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲದಲ್ಲೂ ಇದ್ದಾರೆ.

First published: