ಸ್ಯಾಂಡಲ್‌ವುಡ್‌ನಲ್ಲಿ ಕಾಂತಾರ ಚಿತ್ರ (Kannada Actor Pramod Shetty) ಮಾಡಿರೋ ಮೋಡಿ ಸಣ್ಣದಲ್ಲ ಬಿಡಿ. ಇಡೀ ಸಿನಿಮಾರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕಾಂತಾರ ಸಿನಿಮಾ, ತುಳನಾಡಿನ ದೈವದ ಶಕ್ತಿ ಮತ್ತು ನಂಬಿಕೆಯನ್ನ ಕೂಡ (Panjurli Kola Special Video) ಪಸರಿಸಿದೆ. ಅದೇ ದೈವದ ಬಗ್ಗೆ ಈ ಮೂಲಕ ಎಲ್ಲೆಡೆ ನಂಬಿಕೆ ಕೂಡ ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಕಂಡ ಪಂಜುರ್ಲಿ ದೈವ ಆರಾಧನೆಯ ಕೋಲ ಕೂಡ (Pramod Shetty Video) ಬಹುತೇಕ ಕಡೆ ನಡೆಯುತ್ತಿವೆ. ಆದರೆ ತುಳುನಾಡಿನಲ್ಲಿ ಇದು ಒಂದು ಅತಿ ದೊಡ್ಡ ನಂಬಿಕೆ ಆಗಿದೆ. ದೈವಾರಾಧನೆಯ ಹಾದಿಯೂ ಆಗಿದೆ. ಹಾಗೇನೆ ಕಾಂತಾರ ಚಿತ್ರದಲ್ಲಿ ನಟಿಸಿದ್ದ ಪ್ರಮೋದ್ ಶೆಟ್ರ ಮನೆಯಲ್ಲೂ ಈಗ ವಿಶೇಷವಾಗಿ ಪಂಜುರ್ಲಿ ದೈವದ ಆರಾಧನೆ ಮಾಡಲಾಗಿದೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ.
ಪಂಜುರ್ಲಿ ಕೋಲದ ಬಗ್ಗೆ ಪ್ರಮೋದ್ ಶೆಟ್ಟಿ ಹೇಳಿದ್ದೇನು ?
ಕನ್ನಡದ ನಟ ಪ್ರಮೋದ್ ಶೆಟ್ರು ಇದೀಗ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ಪಂಜುರ್ಲಿ ದೈವದ ಕೋಲ ಅನ್ನು ಮಾಡಿದ್ದಾರೆ. ಈ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೂ ಪ್ರಮೋದ್ ಶೆಟ್ಟಿ ಒಂದಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ.
ಪ್ರಮೋದ್ ಶೆಟ್ರು ತಮ್ಮ ಆರಾಧ್ಯ ದೈವ ಪಂಜುರ್ಲಿ ದೈವ ಕೋಲ ಮಾಡಿಸಿದ್ದಾರೆ. ಕುಂದಾಪುರದ ಕಿರಾಡಿಯಲ್ಲಿ ಪಂಜುರ್ಲಿ ದೈವದ ಕೋಲ ನಡೆದಿದೆ. ವಿಶೇಷವಾಗಿ ಪ್ರಮೋದ್ ಶೆಟ್ಟಿ ತಮ್ಮ ಮನೆಯಲ್ಲಿಯೇ ಈ ಒಂದು ಪಂಜುರ್ಲಿ ದೈವದ ಆರಾಧನೆ ಮಾಡಿದ್ದಾರೆ.
ಪಂಜುರ್ಲಿ ದೈವ ಕೋಲದಲ್ಲಿ ಆ ವಿಶೇಷ ವ್ಯಕ್ತಿ ಭಾಗಿ
ಪಂಜುರ್ಲಿ ದೈವದ ಆರಾಧನೆಯ ಸಮಯದಲ್ಲಿ ವಿಶೇಷ ವ್ಯಕ್ತಿ ಕೂಡ ಇದ್ದರು. ಅವರು ಬೇರೆ ಯಾರೋ ಅಲ್ಲ. ಪ್ರಮೋದ್ ಶೆಟ್ಟಿ ಸ್ನೇಹಿತ ಮತ್ತು ಕಾಂತಾರ ಚಿತ್ರದ ಡೈರೆಕ್ಟರ್ ರಿಷಬ್ ಶೆಟ್ರು. ರಿಷಬ್ ಶೆಟ್ರು ಮತ್ತು ಪ್ರಮೋದ್ ಶೆಟ್ರು ಜೊತೆಗೆ ತುಂಬಾ ಸಿನಿಮಾ ಮಾಡಿದ್ದಾರೆ.
ಇವರ ಆತ್ಮೀಯತೆ ಮನೆಯ ಕಾರ್ಯಕ್ರಮದಲ್ಲೂ ಇರುತ್ತದೆ. ಹಾಗಾಗಿಯೇ ರಿಷಬ್ ಶೆಟ್ರು ಈ ಒಂದು ಪಂಜುರ್ಲಿ ದೈವ ಕೋಲದಲ್ಲಿ ಭಾಗಿ ಆಗಿದ್ದರು.
ಪಂಜುರ್ಲಿ ದೈವ ಕೋಲದ ಬಗ್ಗೆ ಪ್ರಮೋದ್ ಹೇಳಿದ್ದೇನು?
ಇದೇನೋ ಸರಿ, ಆದರೆ ಪಂಜುರ್ಲಿ ದೈವ ಕೋಲ ಮಾಡಿಸಲಿಕ್ಕೆ ಏನಾದ್ರೂ ಕಾರಣ ಇದಿಯೇ ? ಈ ಒಂದು ಪ್ರಶ್ನೆಗೆ ಪ್ರಮೋದ್ ಶೆಟ್ರು ಉತ್ತರ ಕೊಟ್ಟಿದ್ದಾರೆ. ಸ್ಪೆಷಲ್ ಅಂತ ಏನೂ ಇಲ್ಲ. ಕುಂದಾಪುರದ ಕೆರಾಡಿಯ ನಮ್ಮ ಮನೆಯಲ್ಲಿಯೇ ಈ ಒಂದು ಕಾರ್ಯಕ್ರಮ ಮಾಡಿದ್ದೇವೆ ಅಂತಲೇ ಹೇಳಿದ್ದಾರೆ.
ಪಂಜುರ್ಲಿ ದೈವದ ಶಕ್ತಿ ಏನು ? ನಂಬಿಕೆಗಳು ಏನು ? ಆಚಾರ ಏನು ? ಆಚರಣೆ ಏನು ? ಈ ಎಲ್ಲ ಪ್ರಶ್ನೆಗೆ ಉತ್ತರವನ್ನ ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ರು ಕೊಟ್ಟಿದ್ದಾರೆ.
ಪ್ರಮೋದ್ ಶೆಟ್ಟಿ ಮನೆಯಲ್ಲಿ ಪಂಜುರ್ಲಿ ಕೋಲ
ಇನ್ನು ಪ್ರಮೋದ್ ಶೆಟ್ರು ತಮ್ಮ ಮನೆಯ ಆರಾಧ್ಯ ದೈವ ಪಂಜುರ್ಲಿ ಕೋಲ ಮಾಡಿಸಿದ್ದು, ಈ ಮೂಲಕ ತಮ್ಮ ದೈವದ ಆರಾಧನೆಯನ್ನ ಈಗ ಮಾಡಿದ್ದಾರೆ. ಮನೆ ದೇವ್ರು ಇಲ್ಲವೇ ಮನೆ ದೈವವನ್ನ ಆರಾಧಿಸೋಕೆ ಸಾಮಾನ್ಯವಾಗಿ ಏನೂ ಕಾರಣ ಇರೋದಿಲ್ಲ ಅಂತಲೂ ಹೇಳಬಹುದು.
ಇದನ್ನೂ ಓದಿ: JK Video: ಜೆಕೆ ಪಾರ್ಟಿ ವಿಡಿಯೋದಲ್ಲಿ ಅಪರ್ಣಾ ಸಮಂತಾ!
ಅದೇ ರೀತಿನೇ ಈಗ ಪ್ರಮೋದ್ ಶೆಟ್ರು ತಮ್ಮ ಮನೆಯಲ್ಲಿ ಪಂಜುರ್ಲಿ ದೈವದ ಆರಾಧನೆ ಮಾಡಿದ್ದಾರೆ. ಮನೆ ಮಂದಿಯಲ್ಲ ರಾತ್ರಿ ಇಡೀ ಪಂಜುರ್ಲಿ ದೈವ ಕೋಲದಲ್ಲಿ ಭಾಗಿಯಾಗಿ ಖುಷಿಪಟ್ಟಿದ್ದಾರೆ. ಮನೆ ಮಂದಿಯ ಈ ಕಾರ್ಯಕ್ರಮದ ವಿಶೇಷ ವಿಡಿಯೋ ಎಲ್ಲೆಡೆ ಗಮನ ಸೆಳೆಯುತ್ತಲೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ