• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Pramod Panju: ಸಲಾರ್ ಸೀಕ್ರೆಟ್ ಬಿಚ್ಚಿಟ್ಟ ಕನ್ನಡದ ನಟ! ನ್ಯೂಸ್ 18 ಕನ್ನಡ ಡಿಜಿಟಲ್‌ ಜೊತೆ ಸ್ಪೆಷಲ್ ಟಾಕ್

Pramod Panju: ಸಲಾರ್ ಸೀಕ್ರೆಟ್ ಬಿಚ್ಚಿಟ್ಟ ಕನ್ನಡದ ನಟ! ನ್ಯೂಸ್ 18 ಕನ್ನಡ ಡಿಜಿಟಲ್‌ ಜೊತೆ ಸ್ಪೆಷಲ್ ಟಾಕ್

ಸಲಾರ್ ಸೀಕ್ರೆಟ್ ರಿವೀಲ್ ಮಾಡಿದ ಪ್ರಮೋದ್ ಪಂಜು

ಸಲಾರ್ ಸೀಕ್ರೆಟ್ ರಿವೀಲ್ ಮಾಡಿದ ಪ್ರಮೋದ್ ಪಂಜು

ಟಾಲಿವುಡ್‌ನ ಸಲಾರ್ ಸಿನಿಮಾ ಸೀಕ್ರೆಟ್ ಬಿಚ್ಚಿಟ್ಟ ಪ್ರಮೋದ್ ಪಂಜು. ತಮ್ಮ ಪಾತ್ರದ ರಿಯಲ್ ಮ್ಯಾಟರ್ ಹೇಳಿಕೊಂಡ ಪ್ರಿಮಿಯರ್ ಪದ್ಮಿನಿ ಕಲಾವಿದ. ಪ್ರಮೋದ್ ಪಂಜು ಜೊತೆಗೆ ಸ್ಪೆಷಲ್ ಸಂದರ್ಶನ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಟಾಲಿವುಡ್‌ನಲ್ಲಿ ಸಲಾರ್ ಸಿನಿಮಾದ ಹವಾ (Pramod Panju New Movie) ಜೋರಾಗಿದೆ. ಈ ಚಿತ್ರದ ಮೂಲಕ ಕನ್ನಡದ ನಟರು ಮತ್ತು ನಿರ್ದೇಶಕರು ಮತ್ತೊಂದು ಲೆವಲ್‌ಗೆ ಹೋಗೋದು ಗ್ಯಾರಂಟಿ. ಈ ಒಂದು ಮಾತು ಅಧಿಕೃತವಾಗಿಯೇ (Pramod Reveal Salaar Secrets) ಇದೆ. ಇದನ್ನ ಅಷ್ಟೇ ವಿಶ್ವಾದಲ್ಲಿಯೇ ಕನ್ನಡದ ಒಬ್ಬ ನಾಯಕ ನಟರು ಹೇಳಿಕೊಂಡಿದ್ದಾರೆ. ಆ ನಾಯಕ ಯಾರೂ ಅನ್ನೋ ಪ್ರಶ್ನೆಗೆ ಪ್ರಮೋದ್ ಪಂಜು (Pramod Panju New Film Sectes) ಅಂತಲೇ ಹೇಳಬೇಕು. ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗಿನ ಸ್ಪೆಷಲ್ ಸಂದರ್ಶನದಲ್ಲಿ ಸಲಾರ ಸಿನಿಮಾದ ಸಾಕಷ್ಟು ವಿಷಯಗಳನ್ನ (Kannada Actor Pramod Panju) ಹಂಚಿಕೊಂಡಿದ್ದಾರೆ. ಮಾತಿನ ಒಟ್ಟು ಚಿತ್ರಣ ಇಲ್ಲಿದೆ ಓದಿ.


ಸಲಾರ್ ಚಿತ್ರದಿಂದ ನನ್ನ ಲಕ್ ಚೇಂಜ್-ಪ್ರಮೋದ್ ಪಂಜು


ಕನ್ನಡ ಚಿತ್ರರಂಗದ ಯುವ ನಾಯಕ ನಟ ಪ್ರಮೋದ್ ಪಂಜು ಅದ್ಭುತ ನಟ ಅಂತ ಗೊತ್ತೇ ಇದೆ. ರತ್ನನ್ ಪ್ರಪಂಚ ಚಿತ್ರದ ಉಡಾಳ ಬಾಬು ಪಾತ್ರದ ಮೂಲಕ ಪ್ರಮೋದ್ ಅತಿ ಹೆಚ್ಚು ಪರಿಚಯ ಆದರು. ಬಾಂಡ್ ರವಿ ಸಿನಿಮಾದ ಮೂಲಕ ಪ್ರಮೋದ್ ಮತ್ತೊಂದು ಲೆವಲ್‌ನಲ್ಲಿಯೇ ಕನ್ನಡಿಗರಿಗೆ ಪರಿಚಯ ಆದರು.


Kannada Actor Pramod Panju Reveal Secrets of his Salaar Movie Character
ಪ್ರಮೋದ ಪಂಜು ಬದುಕು ಬದಲಿಸಲಿರೋ ಸಲಾರ್!


ಇದೇ ವಾರ ರಿಲೀಸ್ ಆಗಿರೋ ಇಂಗ್ಲೀಷ್ ಮಂಜ ಸಿನಿಮಾದ ಮೂಲಕವೂ ಪ್ರಮೋದ್ ಪಂಜು ಹೊಸ ಭರವಸೆ ಮೂಡಿಸಿದ್ದಾರೆ. ಕಂಪ್ಲೀಟ್ ಆ್ಯಕ್ಷನ್ ಕಮರ್ಷಿಯಲ್ ಹೀರೋ ರೀತಿಯಲ್ಲಿಯೇ ಈ ಚಿತ್ರದಲ್ಲಿ ಜನರ ಎದುರು ಬಂದಿದ್ದಾರೆ.
ಪ್ರಮೋದ ಪಂಜು ಬದುಕು ಬದಲಿಸಲಿರೋ ಸಲಾರ್!


ಆದರೆ ಪ್ರಮೋದ್ ಪಂಜು ಚಿತ್ರ ಬದುಕಿನಲ್ಲಿ ಇನ್ನೂ ಒಂದು ಸಿನಿಮಾ ಇದೆ. ಆ ಚಿತ್ರದ ಹೆಸರು ಸಲಾರ್ ಸಿನಿಮಾ ಆಗಿದೆ. ಹೌದು, ಸಲಾರ್ ಸಿನಿಮಾ ಟಾಲಿವುಡ್‌ನಲ್ಲಿ ಭಾರೀ ಹವಾ ಕ್ರಿಯೇಟ್ ಮಾಡಿದೆ. ಸಿನಿಮಾದ ಒಂದೊಂದು ವಿಷಯವೂ ದೊಡ್ಡ ಸುದ್ದಿ ಆಗ್ತಾನೇ ಇವೆ.


ಸಿನಿಮಾದ ಒಂದು ಸಣ್ಣ ವಿಚಾರ ಹೊರ ಬಿದ್ದರೇ ಸಾಕು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅಷ್ಟು ಸ್ಪೆಷಲ್ ಆಗಿಯೇ ಇರೋ ಈ ಚಿತ್ರಕ್ಕೆ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಬಹು ಕೋಟಿಯ ಈ ಚಿತ್ರದಲ್ಲಿ ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್ ಅಭಿನಯಿಸಿದ್ದಾರೆ.


ಸಲಾರ್ ಸೀಕ್ರೆಟ್ ರಿವೀಲ್ ಮಾಡಿದ ಪ್ರಮೋದ್ ಪಂಜು


ಚಿತ್ರದ ಇನ್ನೂ ಒಂದು ವಿಚಾರ ಅಂದ್ರೆ, ದೇವರಾಜ್ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದು ಇತ್ತೀಚಿಗೆ ಹೊರ ಬಿದ್ದಿದೆ. ಸ್ವತಃ ದೇವರಾಜ್ ಅವರೇ ಈ ವಿಷಯವನ್ನ ಹಂಚಿಕೊಂಡಿದ್ದಾರೆ. ಅದೇ ರೀತಿ ಇದೀಗ ಪ್ರಮೋದ್ ಪಂಜು ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಸಲಾರ್ ಸಿನಿಮಾದ ತಮ್ಮ ಪಾತ್ರದ ಕುರಿತು ಹೇಳಿಕೊಂಡಿದ್ದಾರೆ.


ಸಲಾರ್ ಸಿನಿಮಾದಲ್ಲಿ ನಾನೂ ಅಭಿನಯಿಸಿದ್ದೇನೆ. ರತ್ನನ್ ಪ್ರಪಂಚ ಚಿತ್ರದ ನನ್ನ ಪಾತ್ರ ನೋಡಿಯೇ ಡೈರೆಕ್ಟರ್ ಪ್ರಶಾಂತ್ ನೀಲ್ ಈ ರೋಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಹತ್ತು ಹಲವು ಪಾತ್ರಗಳು ಇವೆ. ಆದರೆ ಅದರಲ್ಲಿ ನನ್ನ ಪಾತ್ರವೂ ಪ್ರಮುಖ ಪಾತ್ರವೇ ಆಗಿದೆ.


ಸಲಾರ್ ಚಿತ್ರದಲ್ಲಿ ನನ್ನ ಪಾತ್ರಕ್ಕೂ ಮಹತ್ವ-ಪ್ರಮೋದ್


ಚಿತ್ರದಲ್ಲಿ ಬರುವ ನಾಯಕ ನಟ ಪ್ರಭಾಸ್ ಮತ್ತು ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಪಾತ್ರ ಅದ್ಭುತವಾಗಿಯೇ ಬಂದಿವೆ. ಇದೇ ಪಾತ್ರಗಳ ಜೊತೆಗೇನೆ ನನ್ನ ಪಾತ್ರವೂ ಬರುತ್ತದೆ. ಈ ಪಾತ್ರಗಳ ಸಮನಾಗಿಯೇ ಈ ಚಿತ್ರದಲ್ಲಿ ನಾನೂ ಇರುತ್ತೇನೆ ಎಂದು ನಟ ಪ್ರಮೋದ್ ಪಂಜು ಹೇಳಿಕೊಂಡಿದ್ದಾರೆ.


ಸಲಾರ್ ಚಿತ್ರದಲ್ಲಿ ನನ್ನ ಪ್ರತಿಭೆ ಪ್ರದರ್ಶಿಸಲು ನನಗೆ ಹೆಚ್ಚಿನ ಜಾಗ ಸಿಕ್ಕಿದೆ. ಈ ಸಿನಿಮಾ ಬಂದ್ಮೇಲೆ ನನ್ನ ಪ್ರತಿಭೆ ಎಲ್ಲರಿಗೂ ತಿಳಿಯುತ್ತದೆ. ಎಲ್ಲರೂ ಮೆಚ್ಚುವಂತಹ ಪಾತ್ರವನ್ನೆ ನಾನು ಮಾಡಿದ್ದೇನೆ ಎಂದು ನಟ ಪ್ರಮೋದ್ ಪಂಜು ವಿಶ್ವಾಸದಲ್ಲಿಯೇ ವಿವರಿಸಿದ್ದಾರೆ.


Kannada Actor Pramod Panju Reveal Secrets of his Salaar Movie Character
ಸಲಾರ್ ಚಿತ್ರದಲ್ಲಿ ನನ್ನ ಪಾತ್ರಕ್ಕೂ ಮಹತ್ವ-ಪ್ರಮೋದ್


ಪ್ರಮೋದ್ ಪಂಜುಗಾಗಿ ಶೃತಿ ನಾಯ್ಡು ಮತ್ತೊಂದು ಚಿತ್ರ ನಿರ್ಮಾಣ


ಪ್ರಮೋದ್ ಪಂಜು ಅಭಿನಯದಲ್ಲಿ ಇನ್ನೂ ಒಂದು ಸಿನಿಮಾ ಶುರು ಆಗುತ್ತದೆ. ನಿರ್ಮಾಪಕಿ ಶೃತಿ ನಾಯ್ಡು ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ರಮೇಶ್ ಇಂದಿರಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದಾದ್ಮೆಲೆ ಪ್ರೀಮಿಯರ್ ಪದ್ಮಿನಿ-2 ಸಿನಿಮಾ ಕೂಡ ಬರುತ್ತದೆ ಎಂದು ಪ್ರಮೋದ್ ಇನ್ನಷ್ಟು ಮಾಹಿತಿ ಕೊಟ್ಟಿದ್ದಾರೆ.


ಇದನ್ನೂ ಓದಿ: Shivaji Surathkal-2: ಪಂಚೆ ಉಟ್ಟು ಬಂದ ನಟ! ಸಿನಿಮಾ ಸಕ್ಸಸ್ ಖುಷಿಯಲ್ಲಿ ರಮೇಶ್ ಅರವಿಂದ್


ಕೊರೊನಾ ಲಾಕ್ ಡೌನ್ ಟೈಮ್‌ನಲ್ಲಿ ಪ್ರಮೋದ್ ಪಂಜು ಒಂದ್ ಒಳ್ಳೆ ಕಥೆ ಮಾಡಿಕೊಂಡಿದ್ದಾರೆ. ಆ ಕಥೆಯನ್ನ ತಾವೇ ನಿರ್ದೇಶನ ಮಾಡಬೇಕು ಅನ್ನುವ ಆಸೆ ಕೂಡ ಇದೆ. ಆ ಚಿತ್ರವೂ ಶುರು ಆಗುತ್ತದೆ ಅಂತಲೂ ಪ್ರಮೋದ್ ತಿಳಿಸಿದ್ದಾರೆ. ಒಟ್ಟಾರೆ ಪ್ರಮೋದ್ ತಮ್ಮ ಚಿತ್ರ ಜೀವನದಲ್ಲಿ ಈ ವರ್ಷ ಒಳ್ಳೆ ಸಿನಿಮಾಗಳನ್ನ ಕೊಡುವ ನಿಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

top videos
  First published: