Pramod Panju: ರತ್ನನ್​ ಪ್ರಪಂಚ ಉಡಾಳ ಬಾಬು ರಾವ್ ಜೊತೆ ಶೃತಿ ನಾಯ್ಡು ಮತ್ತೊಂದು ಸಿನಿಮಾ

ಪ್ರಿಮಿಯರ್ ಪದ್ಮಿನಿ ಚಿತ್ರದಲ್ಲಿ ಡ್ರೈವರ್, ರತ್ನನ್ ಪ್ರಪಂಚದಲ್ಲಿ ಉಡಾಳ ಬಾಬು ರಾವ್,ಇದೇ ಪ್ರಮೋದ್​ಗಾಗಿಯೇ ಪ್ರಿಮಿಯರ್ ಪದ್ಮಿನಿ ಚಿತ್ರದ ನಿರ್ಮಾಪಕಿ ಶೃತಿ ನಾಯ್ಡು ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಒಂದು ಚಿತ್ರಕ್ಕೆ ಪ್ರಮೋದ್ ಹೀರೋ.

ಉಡಾಳ ಬಾಬು ರಾವ್ ಖ್ಯಾತಿಯ ನಟ ಪ್ರಮೋದ್ ಪಂಜು

ಉಡಾಳ ಬಾಬು ರಾವ್ ಖ್ಯಾತಿಯ ನಟ ಪ್ರಮೋದ್ ಪಂಜು

  • Share this:
ಸ್ಯಾಂಡಲ್​ವುಡ್​ ಪ್ರಿಮಿಯರ್ ಪದ್ಮಿನಿ ಚಿತ್ರ ಸಿನಿಮಾ (Cinema) ತಂಡ ಈಗ ಮತ್ತೊಂದು ಸಿನಿಮಾ ಮಾಡೋಕೆ ಮುಂದಾಗಿದೆ. ಈ ಹಿಂದಿನ ಪ್ರಿಮಿಯರ್ ಪದ್ಮಿನಿ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅವರಿಗೆ ಡ್ರೈವರ್ (Driver) ಆಗಿದ್ದ ಅದೇ ಪ್ರಮೋದ್ ಪಂಜು (Pramod Panju) ಈ ಹೊಸ ಚಿತ್ರದ ಹೀರೋ. ಪ್ರಮೋದ್ ಒಪ್ಪಿಕೊಂಡ ಈ ಲೀಡ್ ರೋಲ್ ವಿಶೇಷವಾಗಿಯೇ ಇರುತ್ತದೆ. ಇನ್ನೂ ಒಂದು ವಿಶೇಷವೆಂದ್ರೆ, ಪ್ರಿಮಿಯರ್ ಪದ್ಮಿನಿ ಚಿತ್ರದ ನಿರ್ಮಾಪಕಿ ಶೃತಿ ನಾಯ್ಡು ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಚಿತ್ರ ಅನೌನ್ಸ್ ಆಗುತ್ತಿದೆ. ಅಲ್ಲಿವರೆಗೂ ಈ ಚಿತ್ರದ ನಾಯಕ ಪ್ರಮೋದ್ ತಮ್ಮ ಇತರ ಚಿತ್ರಗಳ ಕಮಿಟ್​ಮೆಂಟ್ಸ್ ಮುಗಿಸಿಕೊಡೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಈ ಮಾಹಿತಿಗಳನ್ನ ಸ್ವತಃ ಪ್ರಮೋದ್ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾ ಜರ್ನಿಯಲ್ಲಿ ಏನೆಲ್ಲ ಆಗಿದೆ ಅಂತಲೂ ಮುಕ್ತವಾಗಿಯೇ ಮಾತನಾಡಿದ್ದಾರೆ.

ಪ್ರಿಮಿಯರ್ ಪದ್ಮಿನಿ ಚಿತ್ರದ ಡ್ರೈವರ್ ಪಾತ್ರಧಾರಿ ನಟ ಪ್ರಮೋದ್ ನಿಜಕ್ಕೂ ಈ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಎಲ್ಲರ ಹೃದಯ ಗೆದ್ದು ಬಿಟ್ಟರು. ಇಡೀ ಸಿನಿಮಾದ ಒಂದು ಓಟ ಆಗಿದ್ದರೇ, ಪ್ರಮೋದ್ ಪಾತ್ರದ ಜೀವಂತಿಕೇನೆ ಬೇರೆ ಇತ್ತು. ಇದನ್ನ ಕಂಡ ಪ್ರೇಕ್ಷಕರು ಸಿನಿಮಾದ ಜೊತೆಗೆ ಪ್ರಮೋದ್ ಪಾತ್ರವನ್ನೂ ಹೊಗಳಿದರು.

ಪ್ರಿಮಿಯರ್ ಪದ್ಮಿನಿ ಪಾತ್ರವನ್ನ ಜನ ಮೆಚ್ಚಿದರು. ಒಳ್ಳೆ ಟಾಕ್ ಕೂಡ ಬಂತು. ಆದರೆ ದೊಡ್ಡ ಸಿನಿಮಾಗಳ ಆಫರ್ ಬರಬಹುದು ಅನ್ನೋ ನಿರೀಕ್ಷೆ ಸುಳ್ಳಾಗಿದ್ದಂತು ಅಷ್ಟೇ ಸತ್ಯ. ಹೀಗಿರೋವಾಗಲೇ ರತ್ನನಪ್ರಪಂಚ ಸಿನಿಮಾದ ಆಫರ್ ಬಂತು. ಪ್ರಿಮಿಯರ್ ಪದ್ಮಿನಿ ಸಿನಿಮಾ ನೋಡಿದ ರೋಹಿತ್ ಪದ್ಕಿ ನನಗಾಗಿಯೇ ಉತ್ತರ ಕರ್ನಾಟಕದಕಡೆ ಪಾತ್ರ ಬರೆದರು.

ರತ್ನನ್​ ಪ್ರಪಂಚ ಚಿತ್ರದ ಉತ್ತರ ಕರ್ನಾಟಕ ಭಾಗದ ಪಾತ್ರವನ್ನ ಜನ ಮೆಚ್ಚಿದ್ದಾರೆ. ಇದರಿಂದ ಪ್ರಮೋದ್ ಅಂದುಕೊಂಡಂತೆ ಸಿನಿಮಾಗಳು ಹುಡುಕಿಕೊಂಡು ಬಂದಿವೆ. ಆ ಸಿನಿಮಾಗಳ ಕೆಲಸದಲ್ಲಿ ಪ್ರಮೋದ್ ಸದ್ಯ ಬ್ಯುಸಿ ಆಗಿದ್ದು, ಭುವನಂ ಗಗನಂ ಸಿನಿಮಾದ ಚಿತ್ರೀಕರಣದಲ್ಲಿಯೇ ಈಗ ತೊಡಗಿಕೊಂಡಿದ್ದಾರೆ.

ಭುವನಂ ಗಗನಂ ಒಂದ್ ಒಳ್ಳೆ ಲವ್ ಸ್ಟೋರಿ ಸಿನಿಮಾ
ಭುವನಂ ಗಗನಂ ಒಂದು ಒಳ್ಳೆ ಸಿನಿಮಾ. ಇದು ತುಂಬಾ ಒಳ್ಳೆ ಕತೆ ಇರೋ ಚಿತ್ರವೇ ಆಗಿದೆ. ಇಲ್ಲಿವರೆಗಿನ ಸಿನಿಮಾಗಳಲ್ಲಿ ರಗಢ್ ಪಾತ್ರಗಳನ್ನೆ ಮಾಡಿದ್ದೇನೆ. ಈ ಸಿನಿಮಾದಲ್ಲಿ ಲವ್ಲಿ ಪಾತ್ರವನ್ನೆ ಮಾಡುತ್ತಿದ್ದೇನೆ ಅಂತಲೇ ಪ್ರಮೋದ್ ಹೇಳುತ್ತಾರೆ.

ಇದನ್ನೂ ಓದಿ: Actor Vivek Simha: ಉತ್ಸಾಹದ ಚಿಲುಮೆ ಪ್ರೀಮಿಯರ್ ಪದ್ಮಿನಿ ಹುಡುಗ-ವಿವೇಕ್ ಸಿಂಹನ SPOOKY ಕಾಲೇಜ್ ಎಲ್ಲಿಗೆ ಬಂದಿದೆ ಗೊತ್ತೇ?

ಪ್ರಮೋದ್ ಸಿನಿಮಾ ಲೈಫ್​ ನಲ್ಲಿ ಬಂದ ಗೀತಾ ಬ್ಯಾಂಗಲ್ಸ್ ಸ್ಟೋರ್ ವಿಶೇಷ ಸಿನಿಮಾ. ಇದು ಪ್ರಮೋದ್ ಗೆ ಒಳ್ಳೆ ಹೆಸರು ತಂದುಕೊಡ್ತು. ಆದರೆ ದೊಡ್ಡ ಸಿನಿಮಾಗಳೇನೂ ಬರಲಿಲ್ಲ. ಆಗಲೇ ಮತ್ತೆ ಸೀರಿಯಲ್​ ಗೆ ಹೋದೆ, ಶೃತಿ ನಾಯ್ಡು ಮೂರು ವರ್ಷದ ಪಕ್ಕಾ ಪ್ಲಾನ್ ಬಳಿಕ, ಪ್ರಿಮಿಯರ್ ಪದ್ಮಿನಿ ಸಿನಿಮಾ ಮಾಡಿದರು.

Actor Pramod Panju New Project with Producer Shruthi Naidu
ಪ್ರಮೋದ್ ಪಂಜು ಹೊಸ ಸಿನಿಮಾ


ಅಲ್ಲಿಂದ ಜರ್ನಿ ಚೇಂಜ್ ಆಯಿತು. ರತ್ನನ್​ ಪ್ರಪಂಚ ಸಿನಿಮಾ ಅವಕಾಶ ಬಂತು. ಇದರಲ್ಲಿಯ ಪಾತ್ರಗಳಿಂದ ಇನ್ನೂ ಒಂದಷ್ಟು ಸಿನಿಮಾ ಬಂದಿವೆ. ಅದರಲ್ಲಿಯೇ ಬ್ಯುಸಿ ಇದ್ದೇನೆ ಅನ್ನೋದನ್ನ ಹೇಳೋಕೆ ಮರೆಯಲಿಲ್ಲ ಪ್ರಮೋದ್.

ಇದನ್ನೂ ಓದಿ: Golden Star Ganesh: ಗೋಲ್ಡನ್ ಗಣಿ ಸಿಕ್ಸರ್ ಬಾರಿಸಲು ರೆಡಿ! ಪ್ರೀತಂ ಗುಬ್ಬಿ ಜೊತೆ ಹೊಸ ಪಯಣ

ಪ್ರಮೋದ್ ಅಭಿನಯದ ಸಿನಿಮಾಗಳಲ್ಲಿ ಯಾವುದು ಮೊದಲು ರಿಲೀಸ್
ಪ್ರಮೋದ್ ಒಪ್ಪಿಕೊಂಡ ಸಿನಿಮಾಗಳಲ್ಲಿ ಇಂಗ್ಲೀಷ್ ಮಂಜ್ಯಾ ಇದೆ. ಅಲಂಕಾರ ವಿದ್ಯಾರ್ಥಿ ಚಿತ್ರವೂ ಇದೆ. ಬಾಂಡ್ ರವಿ ಸಿನಿಮಾ ವಿಶೇಷವಾಗಿಯೇ ಇದೆ. ಇವುಗಳಲ್ಲಿ ಇಂಗ್ಲೀಷ್ ಮಂಜ್ಯಾ ರೆಡಿ ಆಗಿದೆ. ಅಲಂಕಾರ ವಿದ್ಯಾರ್ಥಿ ಚಿತ್ರದ ಕೆಲಸ ಇನ್ನೂ 10 ದಿನ ಇದೆ.

Actor Pramod Panju New Project with Producer Shruthi Naidu
ಪ್ರಮೋದ್ ಪಂಜು ಅಭಿನಯದ ಬಾಂಡ್ ರವಿ


ಇದಕ್ಕಾಗಿ ದೇಹದ ತೂಕ ಇಳಿಸಬೇಕಿದೆ. ಬಾಂಡ್​ ರವಿ ಸಿನಿಮಾ ಸೂಪರ್ ಆಗಿಯೇ ಬಂದಿದೆ. ಶೀಘ್ರದಲ್ಲಿಯೇ ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತದೆ. ಇದೇ ಮೊದಲು ರಿಲೀಸ್ ಆಗಲಿ ಅನ್ನೋದೇ ಪ್ರಮೋದ್ ಆಸೆ ಆಗಿದ್ದು, ರವಿ ಬಾಂಡ್ ಚೆನ್ನಾಗಿ ಬಂದಿದೆ ಅಂತ ತುಂಬಾ ಖುಷಿಯಲ್ಲಿಯೇ ಹೇಳಿಕೊಂಡಿದ್ದಾರೆ.
First published: