• Home
  • »
  • News
  • »
  • entertainment
  • »
  • Pramod Panju: ಉಡಾಳ್ ಬಾಬು ಹೊಸ ಸ್ಟೋರಿ, ಬಾಂಡ್ ರವಿಯಾಗಿ ಮಿಂಚತವ್ರೆ ನೋಡಿ!

Pramod Panju: ಉಡಾಳ್ ಬಾಬು ಹೊಸ ಸ್ಟೋರಿ, ಬಾಂಡ್ ರವಿಯಾಗಿ ಮಿಂಚತವ್ರೆ ನೋಡಿ!

ಪ್ರಮೋದ್ ಪಂಜು ಜೈಲಿನಲ್ಲಿರೋದು ಯಾಕ್ ಗೊತ್ತೇ?

ಪ್ರಮೋದ್ ಪಂಜು ಜೈಲಿನಲ್ಲಿರೋದು ಯಾಕ್ ಗೊತ್ತೇ?

ಬಾಂಡ್ ರವಿ ಖ್ಯಾತಿಯ ನಟ ಪ್ರಮೋದ್ ಪಂಜುಗೆ ಬಾಂಡ್ ರವಿ ವಿಶೇಷ ಚಿತ್ರವೇ ಆಗಿದೆ. ಈ ಚಿತ್ರದ ಮೂಲಕ ಪ್ರಮೋದ್, ಕನ್ನಡ ಇಂಡಸ್ಟ್ರಿಗೆ ಹೊಸ ರೀತಿಯಲ್ಲಿಯೇ ಎಂಟ್ರಿ ಕೊಡುತ್ತಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್​ ನಲ್ಲಿ ಉಡಾಳ್ (Pramod Panju) ಬಾಬು ಪಾತ್ರದ ಖ್ಯಾತಿ ಮೂಲಕ ಸಖತ್ ಸದ್ದು ಮಾಡಿರೋ ನಟ ಪ್ರಮೋದ್ ಪಂಜು ಈಗ ಏನ್ ಮಾಡಿದ್ದಾರೆ ಗೊತ್ತೇ? ಹೌದು, ಪ್ರಮೋದ್ ಪಂಜು (Jail) ಜೈಲಿಗೆ ಹೋಗಿ ಬಿಟ್ಟಿದ್ದಾರೆ ನೋಡಿ. ಇಲ್ಲಿ ಏನೆಲ್ಲ ಮಾಡುತ್ತಿದ್ದಾರೆ ಅನ್ನೋದೇ ವಿಶೇಷ. ಜೈಲಿನಲ್ಲಿರೋ ಕೈದಿಗಳಿಗೆ ಸ್ಪೂರ್ತಿ (Inspiration) ತುಂಬಿದ ಮಾತುಗಳನ್ನು ಇಲ್ಲಿ ಉಡಾಳ್ ಬಾಬು ಹೇಳುತ್ತಿದ್ದಾರೆ. ಹಾಗಂತ ಇದನ್ನ ಮಾತಿನಲ್ಲಿ ಹೇಳುತ್ತಿಲ್ಲ. ಹಾಡಿನ (Song) ರೂಪದಲ್ಲಿಯೇ ಪ್ರಮೋದ್ ಪಂಜು ಹೇಳುತ್ತಿದ್ದಾರೆ. ಅಂದ್ಹಾಗೆ ಪ್ರಮೋದ್ ಪಂಜು ಹೀಗೆ ಮಾಡಲು ಕಾರಣ ಏನೂ ಗೊತ್ತೇ? ಹೌದು, ಪ್ರಮೋದ್ ಪಂಜು ಈಗ ಒಂದು ಸಿನಿಮಾ ಒಪ್ಪಿದ್ದಾರೆ.  ಅದರ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಇದರ ಬಗೆಗಿನ ಇನ್ನಷ್ಟು ಡಿಟೈಲ್ಸ್ ಮುಂದೆ ಇದೆ ಓದಿ.


ಪ್ರಮೋದ್ ಪಂಜು ಜೈಲಿನಲ್ಲಿರೋದು ಯಾಕ್ ಗೊತ್ತೇ?


ಪ್ರಮೋದ್ ಪಂಜು ಜೈಲಿಗೆ ಹೋಗಿದ್ದಾರೆ. ಅಲ್ಲಿಯೇ ಕುಣಿದು ಕುಪ್ಪಳಿಸಿದ್ದಾರೆ. ಸಹ ಕೈದಿಗಳ ಜೊತೆಗೆ ಡ್ಯಾನ್ಸ್ ಮಾಡೋ ಮೂಲಕ ಸಖತ್ ಧೂಲ್ ಎಬ್ಬಿಸಿದ್ದಾರೆ.
ಹೌದು, ಪ್ರಮೋದ್ ಪಂಜು ಜೈಲಿನಲ್ಲಿ ಒಂದ್ ಒಳ್ಳೆ ಕೆಲಸ ಕೂಡ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಬರೆದುಕೊಟ್ಟ ಹಾಡಿಗೆ ಪ್ರಮೋದ್ ಇಲ್ಲಿ ಮಸ್ತ್ ಜೋಶ್ ಫುಲ್​ ಆಗಿಯೇ ಕುಣಿದು ಖುಷಿ ಪಟ್ಟಿದ್ದಾರೆ.


Kannada Actor Pramod Panju New Movie New Song Released
ಪ್ರಮೋದ್ ಪಂಜು ಜೈಲಿಗೆ ಹೋದ ರಹಸ್ಯ ಏನು?


ಪ್ರಮೋದ್ ಪಂಜು ಜೈಲಿಗೆ ಹೋದ ರಹಸ್ಯ ಏನು?
ಪ್ರಮೋದ್ ಪಂಜು ಈಗೊಂದು ಮಾಸ್ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಬಾಂಡ್ ರವಿ ಅಂತಲೇ ಹೆಸರಿಟ್ಟಿದ್ದಾರೆ. ಇದೇ ಚಿತ್ರದಲ್ಲಿ ಬಾಂಡ್ ರವಿಯಾಗಿಯೇ ಪ್ರಮೋದ್ ಪಂಜು ಈಗ ಮಿಂಚುತ್ತಿದ್ದಾರೆ.




ಪ್ರಮೋದ್ ಪಂಜು ಈ ಮೂಲಕ ಪಕ್ಕಾ ಮಾಸ್ ಹೀರೋ ಆಗಿಯೆ ಎಂಟ್ರಿ ಕೊಡ್ತಿದ್ದಾರೆ. ಆ ಕತೆಯಲ್ಲಿ ಜೈಲು ವಾಸದ ದೃಶ್ಯವು ಇದೆ. ಆ ಹಿನ್ನೆಲೆಯಲ್ಲಿಯೇ ಬಾಂಡ್ ರವಿ ಜೈಲಿನಲ್ಲೂ ಇರುತ್ತಾರೆ. ಅಲ್ಲಿ ತಮ್ಮದೇ ರೀತಿಯಲ್ಲಿ ಇರೋ ಬಾಂಡ್ ರವಿ, ಜೋಶ್ ಫುಲ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ.


ಬಾಂಡ್ ರವಿ ಜೋಶ್ ಫುಲ್ ಹಾಡಿನ ಹಿಂದೆ ಇವರಿದ್ದಾರೆ!
ಬಾಂಡ್ ರವಿ ಸಿನಿಮಾ ತಂಡ ಈಗೊಂದು ಹಾಡನ್ನ ರಿಲೀಸ್ ಮಾಡಿದೆ. "ಮಜಾ ಮಜಾ ಮಾಡು ಬಾ" ಅಂತಲೇ ಶುರು ಆಗೋ ಈ ಹಾಡಿಗೆ ವಿಜಯ್ ಪ್ರಸಾದ್ ಅದ್ಭುತ ಕಂಠದ ಸ್ಪರ್ಶ ಇದೆ. ಮನೊ ಮೂರ್ತಿ ಸಂಗೀತ ಕೊಟ್ಟಿರೋ ಈ ಗೀತೆಯನ್ನ ವಿ.ನಾಗೇಂದ್ ಪ್ರಸಾದ್ ಬರೆದಿದ್ದಾರೆ.


Kannada Actor Pramod Panju New Movie New Song Released
ಬಾಂಡ್ ರವಿ ಜೋಶ್ ಫುಲ್ ಹಾಡಿನ ಹಿಂದೆ ಇವರಿದ್ದಾರೆ!


ಉಡಾಳ್ ಬಾಬುಗೆ ಬಾಂಡ್ ರವಿ ವಿಶೇಷ ಸಿನಿಮಾ
ಬಾಂಡ್ ರವಿ ಖ್ಯಾತಿಯ ನಟ ಪ್ರಮೋದ್ ಪಂಜುಗೆ ಬಾಂಡ್ ರವಿ ವಿಶೇಷ ಚಿತ್ರವೇ ಆಗಿದೆ. ಈ ಚಿತ್ರದ ಮೂಲಕ ಪ್ರಮೋದ್, ಕನ್ನಡ ಇಂಡಸ್ಟ್ರೀಗೆ ಹೊಸ ರೀತಿಯಲ್ಲಿಯೇ ಎಂಟ್ರಿ ಕೊಡುತ್ತಿದ್ದಾರೆ.


ಈ ಚಿತ್ರದಲ್ಲಿ ಪ್ರಮೋದ್ ಪಂಜು, ಮಾಸ್ ಹೀರೋ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಭಾರೀ ಸೌಂಡ್ ಮಾಡಿತ್ತು. ಅದೇ ರೀತಿ ಈಗ ಪ್ರಮೋದ್ ಪಂಜು ಹಾಡಿನ ಮೂಲಕ ಹವಾ ಮಾಡುತ್ತಿದ್ದಾರೆ.


ಬಾಂಡ್ ರವಿ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ?
ನವ ನಿರ್ದೇಶಕ ಪ್ರಜ್ವಲ್ ಎಸ್.ಪಿ. ಈ ಮೂಲಕ ಡೈರೆಕ್ಟರ್ ಕೂಡ ಆಗಿದ್ದಾರೆ. ಬಹುತೇಕ ಎಲ್ಲ ಕೆಲಸವನ್ನ ಮುಗಿಸಿಕೊಂಡಿರೋ ಈ ಸಿನಿಮಾ ತಂಡ, ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಅನೌನ್ಸ್ ಮಾಡಲಿದೆ.


ಇದನ್ನೂ ಓದಿ: Ragini Dwivedi: ಕ್ರಿಕೆಟ್ ದಿಗ್ಗಜನ ಜೊತೆ ರಾಗಿಣಿ ದ್ವಿವೇದಿ!


ಇನ್ನುಳಿದಂತೆ ಈ ಚಿತ್ರದಲ್ಲಿ ಕಾಜಲ್ ಕುಂದರ್, ಶೋಭರಾಜ್, ರವಿ ಕಾಳೆ, ಧರ್ಮ, ಮಿಮಿಕ್ರಿ ಗೋಪಿ, ವಿಜಯ್ ಚೆಂಡೂರ್ ಹೀಗೆ ಹತ್ತು ಹಲವು ಕಲಾವಿದರು ಈ ಬಾಂಡ್ ರವಿ ಸಿನಿಮಾದಲ್ಲಿದ್ದಾರೆ.

First published: