ಕನ್ನಡದ ಯುವ ನಾಯಕ ನಟ ಪ್ರಮೋದ್ (Pramod Panju) ಪಂಜು ಈ ವಾರ ವಾಪಸ್ ಬರ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ರತ್ನನ್ ಪ್ರಪಂಚ ಸಿನಿಮಾದಲ್ಲಿ ಪ್ರಮೋದ್ ಪಂಜು ಎಲ್ಲರ ಗಮನ ಸೆಳೆದರು. ಉಡಾಳ್ ಬಾಬು ಪಾತ್ರದ ಮೂಲಕ ಎಲ್ಲರ ದಿಲ್ ಕದ್ದರು. ಅದಕ್ಕೂ ಮೊದಲು ಪ್ರಿಮಿಯರ್ ಪದ್ಮಿನಿ ಚಿತ್ರದಲ್ಲಿ ಪ್ರಮೋದ್ ಪಂಜು ಒಳ್ಳೆ ಅಭಿಪ್ರಾಯವನ್ನ ಪಡೆದಿದ್ದರು. ಅದೇ ಪ್ರಮೋದ್ ಪಂಜು ಮಾಸ್ (Mass Look) ಲುಕ್ನಲ್ಲಿ ಖಡಕ್ ಡೈಲಾಗ್ ಇರೋ (Bond Ravi) ಬಾಂಡ್ ರವಿ ಚಿತ್ರದ ಮೂಲಕ ಬರ್ತಿದ್ದಾರೆ. ಪ್ರಮೋದ್ ಪಂಜು ಈ ಚಿತ್ರದಲ್ಲಿ ಭಾರೀ ಪಾತ್ರವನ್ನೆ ಮಾಡಿದ್ದಾರೆ. ಚಿತ್ರದ ಟ್ರೈಲರ್ ಅಂತೂ ಇಡೀ ಬಾಂಡ್ (Bond Ravi) ರವಿಯ ಖದರ್ ತೋರಿಸುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಉಡಾಳ್ ಬಾಬು "ಬಾಂಡ್ ರವಿ" ಆಗಿ ಬಂದ ದಾರಿ ಬಿಡಿ!
ಕನ್ನಡದಲ್ಲಿ ಮತ್ತೊಂದು ಬಾಂಡ್ ಸಿನಿಮಾ ಬರ್ತಿದೆ. ಆದರೆ ಇದು ಆ ರೀತಿಯ ಬಾಂಡ್ ಸಿನಿಮಾ ಅಲ್ಲ. ಇಲ್ಲಿರೋ ಬಾಂಡ್ ಬೇರೆನೆ ಇದ್ದಾನೆ. ಈ ಬಾಂಡ್ ಗೆ ಒಂದು ಹೆಸರಿದೆ. ರವಿ ಅನ್ನೋದು ಈ ಬಾಂಡ್ನ ನೇಮ್. ಈ ಬಾಂಡ್ ಅಂತಿಂತ ಬಾಂಡ್ ಅಲ್ಲ. ಬುದ್ದಿವಂತ ಬಾಂಡ್.
ಬಾಂಡ್ ರವಿ ಸಿನಿಮಾದಲ್ಲಿ ಪ್ರಮೋದ್ ಪಂಜು ಅಭಿನಯದ ಖದರ್ ಆಗಿಯೇ ಇದೆ. ಸಿನಿಮಾದ ಟ್ರೈಲರ್ ಆದ ಒಂದು ಖದರ್ ತೋರಿದೆ. ಸಿನಿಮಾ ಬಾಂಡ್ ರವಿ ಇನ್ನು ಒಂದು ಮುಖವನ್ನೂ ತೋರುತ್ತದೆ. ಸಿನಿಮಾದಲ್ಲಿ ಪ್ರಮೋದ್ ಪಂಜು ಸೂಪರ್ ಪಾತ್ರವನ್ನೇ ಮಾಡಿದ್ದಾರೆ.
ಚಾಣಾಕ್ಷ್ಯ ಬಾಂಡ್ ರವಿಯ ಅಟ್ಟಹಾಸ ಸೂಪರ್
ಬಾಂಡ್ ರವಿ ಖದರ್ ಆಗಿಯೇ ಬಂದಿದೆ. ಇದರ ಝಲಕ್ ಈಗಾಗಲೇ ಟ್ರೈಲರ್ನಲ್ಲಿ ಸಿಕ್ಕಿದೆ. ಸಿನಿಮಾ ನಾಯಕ ಪ್ರಮೋದ್ ಪಂಜು ಚಿತ್ರದಲ್ಲಿ ಸಖತ್ ಪವರ್ ಫುಲ್ ಡೈಲಾಗ್ ಅನ್ನೇ ಮಾಸ್ ಖದರ್ ಇರೋ ಈ ಚಿತ್ರದಲ್ಲಿ ಪ್ರಮೋದ್ ನಿಮ್ಮನ್ನ ಬೇರೆ ರೀತಿಯೇ ಅಪ್ರೋಚ್ ಮಾಡುತ್ತಾರೆ.
ಹೌದು, ಬಾಂಡ್ ರವಿಯ ಅಟ್ಟಹಾಸ ಜೈನಿಲ್ಲಿಯೇ ಇರುತ್ತದೆ. ಜೈಲಿನಲ್ಲಿಯೇ ಏನೇ ಬೇಕಿದ್ದರೂ ಅದು ಬಾಂಡ್ ರವಿ ಮೂಲಕವೇ ಆಗಬೇಕು. ಅಂತಹ ಕಾಂಟ್ಯಾಕ್ಟ್ ಇಟ್ಟುಕೊಂಡಿರೋ ಬಾಂಡ್ ರವಿ ರೌಡಿನಾ? ಕ್ರಿಮಿನಲ್ಲಾ? ಪೊಲೀಸರೆಲ್ಲ ಯಾಕ್ ಈ ಬಾಂಡ್ ರವಿಗೆ ಭಯ ಪಡ್ತಾರೆ? ಈ ಎಲ್ಲ ಪ್ರಶ್ನೆಗಳೂ ಈಗಲೇ ಕುತೂಹಲ ಮೂಡಿಸಿವೆ.
ಬಾಂಡ್ ರವಿ ಬಗ್ಗೆ ಪ್ರಮೋದ್ ಪಂಜುಗೆ ಭಾರೀ ಭರವಸೆ!
ಬಾಂಡ್ ರವಿ ಸಿನಿಮಾ ಪ್ರಮೋದ್ ಪಂಜು ಚಿತ್ರ ಜೀವನದ ವಿಶೇಷ ಸಿನಿಮಾನೇ ಆಗಿದೆ. ಈ ಚಿತ್ರದ ಮೂಲಕ ಮಾಸ್ ಅಪೀಲ್ ನಲ್ಲಿಯೇ ಪ್ರಮೋದ್ ಪಂಜು ಬರ್ತಿದ್ದಾರೆ. ಈ ಚಿತ್ರ ಅದ್ಭುತವಾಗಿಯೇ ಬಂದಿದೆ. ಇದು ಜನರ ದಿಲ್ ಕದಿಯುತ್ತದೆ ಅನ್ನೋ ನಂಬಿಕೆ ಬಲವಾಗಿಯೇ ಇದೆ.
ಬಾಂಡ್ ರವಿ ಚಿತ್ರವನ್ನ ಪ್ರಜ್ವಲ್ ಎಸ್.ಪಿ.ಡೈರೆಕ್ಟ್ ಮಾಡಿದ್ದಾರೆ. ಮೊದಲ ಪ್ರಯತ್ನಯದಲ್ಲಿಯೇ ಒಂದ್ ಒಳ್ಳೆ ಚಿತ್ರವನ್ನೆ ಕೊಟ್ಟಿದ್ದಾರೆ ಅನ್ನೋ ಭರವಸೆಯನ್ನೂ ಇದು ಮೂಡಿಸಿದೆ. ಸಿನಿಮಾದಲ್ಲಿ ಏನೋ ಇದೆ ಅಂತಲೇ ಹೇಳಬಹುದು.
ಕನ್ನಡಕ್ಕೆ ಮತ್ತೊಬ್ಬ 6 ಅಡಿ ಹೀರೋ ಬರ್ತವ್ರೆ
ಕನ್ನಡದಲ್ಲಿ ಈಗಾಗಲೇ 6 ಅಡಿ ಹೀರೋಗಳಿದ್ದಾರೆ. ಆ ಸಾಲಿಗೆ ಪ್ರಮೋದ್ ಪಂಜು ಕೂಡ ಸೇರಲಿದ್ದಾರೆ. ಗಟ್ಟಿ ಧ್ವನಿ, ಒಳ್ಳೆ ಅಭಿನಯ, ಗುಡ್ ಲುಕ್ಕಿಂಗ್ ಫೇಸ್, ಎಲ್ಲವೂ ಇರೋ ಪ್ರಮೋದ್ ಪಂಜು ಈಗಾಗಲೇ ಅಭಿನಯದ ತಮ್ಮ ಪ್ರತಿಭೆಯನ್ನ ತೋರಿ ಆಗಿದೆ.
ಸೀರಿಯಲ್ ಲೋಕದಿಂದ ಬಂದ ಪ್ರಮೋದ್ ಪಂಜು, ಗೀತಾ ಬ್ಯಾಂಗಲ್ಸ್ ಸ್ಟೋರ್ ಚಿತ್ರದಲ್ಲಿ ಹೀರೋ ಆಗಿಯೆ ಮಿಂಚಿದರು. ಪ್ರಿಮಿಯರ್ ಪದ್ಮಿನಿ ಚಿತ್ರದಲ್ಲೂ ಹೆಸರು ಮಾಡಿದರು. ರತ್ನನ್ ಪ್ರಪಂಚ ಕನ್ನಡ ನಾಡಿನ ಜನತೆಗೆ ಪ್ರಮೋದ್ ಪಂಜು ಪರಿಚಯ ಆದರು.
ಬಾಂಡ್ ರವಿ ಚಿತ್ರದಲ್ಲಿ ಸಖತ್ ಲವ್ ಟ್ರ್ಯಾಕ್
ಬಾಂಡ್ ರವಿ ಚಿತ್ರದ ಮೂಲಕ ಪ್ರಮೋದ್ ಪಂಜು ಕಮರ್ಷಿಯಲ್ ಹೀರೋ ಆಗಿದ್ದಾರೆ. ಕಮರ್ಷಿಯಲ್ ಮತ್ತು ಮಾಸ್ ಚಿತ್ರದ ಪ್ರೇಕ್ಷಕರಿಗೆ ಇಷ್ಟ ಆಗೋ ರೀತಿಯಲ್ಲಿಯೇ ಪ್ರಮೋದ್ ಪಂಜು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಂತಹ ಈ ಚಿತ್ರದಲ್ಲಿ ಲವ್ ಟ್ರ್ಯಾಕ್ ಕೂಡ ಇದೆ.
ಇದನ್ನೂ ಓದಿ: Sapthami Gowda: ಗರ್ಭಿಣಿ ಪೋಸ್, ಕೈಯಲ್ಲಿ ಒಣ ಬನ್ ಪೀಸ್! ಕಾಂತಾರ ಲಾಸ್ಟ್ ಡೇ ಶೂಟಿಂಗ್ ನೆನಪಿಸಿಕೊಂಡ ಸಪ್ತಮಿಗೌಡ
ನಟಿ ಕಾಜಲ್ ಕುಂದರ್ ಈ ಚಿತ್ರದಲ್ಲಿ ಪ್ರಮೋದ್ ಪಂಜುಗೆ ಸಾಥ್ ಕೊಟ್ಟಿದ್ದಾರೆ. ಇವರ ಲವ್ ಟ್ರ್ಯಾಕ್ ಇಲ್ಲಿ ಗಮನ ಸೆಳೆಯುತ್ತಿದೆ. ಇವರ ಪ್ರೀತಿಯ ಪಯಣಕ್ಕೆ ಮನೋ ಮೂರ್ತಿಗಳ ಸಂಗೀತ ಪೂರಕ ಅನಿಸುತ್ತಿದೆ. ಸೋನು ನಿಗಮ್ ಹಾಡಿರೋ ಒಂದು ಹಾಡು ಈ ಜೋಡಿಯ ಪ್ರೀತಿಯ ಆಳವನ್ನ ಕಟ್ಟಿಕೊಟ್ಟಿದೆ. ಜನರನ್ನೂ ಸೆಳೆಯುತ್ತಲೇ ಇದೆ.
ಡಿಸೆಂಬರ್-09 ಕ್ಕೆ ಬಾಂಡ್ ರವಿ ಸಿನಿಮಾ ರಿಲೀಸ್
ಬಾಂಡ್ ರವಿ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಡಿಸೆಂಬರ್-09 ರಂದು ರಾಜ್ಯದೆಲ್ಲೆಡೆ ಕನ್ನಡದ ಬಾಂಡ್ ರವಿ ಚಿತ್ರ ರಿಲೀಸ್ ಆಗುತ್ತಿದೆ. ಕೆ.ಎಸ್.ಚಂದ್ರಶೇಖರ್ ಅವರ ಕ್ಯಾಮೆರಾವರ್ಕ್ ಗಮನ ಸೆಳೆದಿದೆ. ಇನ್ನೇನು ಸಿನಿಮಾ ನೋಡಿದ ಜನ ಏನ್ ಹೇಳ್ತಾರೆ ಅನ್ನೋದೇ ಈಗೀನ ಕುತೂಹಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ