ಕನ್ನಡದಲ್ಲಿ ಅನೇಕ ಸಿನಿಮಾ ಬರ್ತಿವೆ. ಕಂಟೆಂಟ್ (Content Base Film) ಬೇಸ್ ಸಿನಿಮಾಗಳು ಅಬ್ಬರಿಸುತ್ತಿವೆ. ಹೊಸಬರ ಕಲ್ಪನೆಯಲ್ಲಿ ಹೊಸ ಜಾನರ್ನ ಚಿತ್ರಗಳು ಕನ್ನಡದಲ್ಲಿ ರೆಡಿ ಆಗಿವೆ. ಹಾರರ್ (Horror Cinema) ಚಿತ್ರಗಳ ಸಂಖ್ಯೆನೂ ಹೆಚ್ಚಾಗಿಯೇ ಇದೆ. ಆದರೆ ಇದೇ ಕನ್ನಡದಲ್ಲಿ ಹಾರರ್ ಜಾನರ್ ನಲ್ಲಿಯೇ ಹೊಸದೊಂದು ಜಾನರ್ ಮೇಲೆ ಈಗೊಂದು (New Film) ಸಿನಿಮಾ ಪೂಜೆ ಆಗಿದೆ. ಮೊನ್ನೆಯೆಷ್ಟೆ ಈ ಚಿತ್ರಕ್ಕೆ ಸಿನಿಮಾ ತಂಡ ಕೆಲಸ ಶುರು ಮಾಡಿದೆ. ಈಗಾಗಲೇ ಈ ಚಿತ್ರದ ನಾಯಕನ ಆಯ್ಕೆ ಆಗಿದೆ. ನಾಯಕಿ ಹುಡುಕಾಟ ಮಂದುವರೆದಿದೆ. ನಿರ್ದೇಶಕರು (Director) ತಮಗೆ ಹೊಳೆದ ನಾಟ್ ಅನ್ನ ವಿಸ್ತಾರ ಮಾಡೋಕೆ ಕುಳಿತಿದ್ದಾರೆ. ಈ ಚಿತ್ರದ ಬಗ್ಗೆ ಸ್ವತಃ ನಿರ್ದೇಶಕರೇ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಆ ವಿವರ ಮುಂದೆ ಇದೆ ಓದಿ.
ಸಿನಿಮಾ ಹಾರರ್, ಕಥೆ ಟೈಮ್ ಲೂಪ್-ಇದು ಹೊಸ ಕಥೆ
ಕನ್ನಡದಲ್ಲಿ ಅನೇಕ ಹಾರರ್ ಸಿನಿಮಾ ಬಂದಿವೆ. ಆದರೆ ಟೈಮ್ ಲೂಪ್ ಮೇಲೆ ಹಾರರ್ ಸಿನಿಮಾ ಬಂದಿಲ್ಲ. ಈ ಒಂದು ಪ್ರಯೋಗ ಮಾಡ್ಬೇಕು ಅನ್ನೋದು ಹೊಳೆದದ್ದೇ ತಡ, ಡೈರೆಕ್ಟರ್ ಈ ಒಂದು ಲೈನ್ ಮೇಲೆ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ.
ಹಾರರ್ ಸಿನಿಮಾ ಮಾಡೋದ್ರಲ್ಲಿ ಯುವ ನಿರ್ದೇಕ ಲೋಹಿತ್ ಎಕ್ಸಪರ್ಟ್ ಆಗಿ ಬಿಟ್ಟಿದ್ದಾರೆ. ಮಮ್ಮಿ ಸಿನಿಮಾ ಅದಕ್ಕೆ ಒಂದು ಉತ್ತಮ ಉದಾಹರಣೆನೆ ಆಗಿದೆ. ತಮ್ಮ ಈ ಅನುಭವದ ಆಧಾರದ ಮೇಲೆನೆ ಲೋಹಿತ್, ಹಾರರ್ ಕಂಟೆಂಟ್ ಇಟ್ಟುಕೊಂಡು ಟೈಮ್ ಲೂಪ್ ಕಥೆಯನ್ನ ಹೇಳೋಕೆ ಮುಂದಾಗಿದ್ದಾರೆ.
ಮೊನ್ನೆ ಸೋಮವಾರ ಚಿತ್ರಕ್ಕೆ ಸಿಂಪಲ್ ಆಗಿಯೇ ಪೂಜೆ
ಲೋಹಿತ್ ತಮ್ಮ ಈ ಚಿತ್ರದ ಪೂಜೆ ಕೂಡ ಮಾಡಿದ್ದಾರೆ. ನಾಯಕನ ಆಯ್ಕೆಯನ್ನ ಕೂಡ ಮಾಡಿಕೊಂಡಿದ್ದಾರೆ. ನಾಯಕಿಯ ಆಯ್ಕೆ ಮಾತ್ರ ಇನ್ನೂ ಮಾಡಿಲ್ಲ. ಸ್ಕ್ರಿಪ್ಟ್ ಕೂಡ ಬರೆಯುತ್ತಿದ್ದಾರೆ.
ಟೈಮ್ ಲೂಪ್ ಮೇಲೆ ಸಿನಿಮಾ ಮಾಡೋಕೆ ಮುಂದಾಗಿರೋ ನಿರ್ದೇಶಕ ಲೋಹಿತ್, ಇನ್ನೂ ಟೈಟಲ್ ಕೂಡ ಫೈನಲ್ ಮಾಡಿಲ್ಲ. ಆದರೆ ತಮಗೆ ಇಷ್ಟವಾದ ನಾಯಕನನ್ನ ಯಾರೂ ಅನ್ನೋದನ್ನ ಹೇಳಿದ್ದಾರೆ.
ಕನ್ನಡದ ಮೊದಲ Horror ಟೈಮ್ ಲೂಪ್ ಚಿತ್ರಕ್ಕೆ ಪ್ರಜ್ವಲ್ ಹೀರೋ
ಹಾರರ್ ಟೈಮ್ ಲೂಪ್ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ನಾಯಕರಾಗಿಯೇ ಆಯ್ಕೆ ಆಗಿದ್ದಾರೆ. ಪ್ರಜ್ವಲ್ ಚಿತ್ರದ ಜೀವನದ ಒಟ್ಟು 36 ಚಿತ್ರಗಳಲ್ಲಿ ಈ ರೀತಿಯ ಸಿನಿಮಾ ಮಾಡಿಯೇ ಇಲ್ಲ. ಆದರೆ ಪ್ವಜಲ್ ಈಗ ತಮ್ಮ 37ನೇ ಸಿನಿಮಾ ಆಗಿಯೇ ಈ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಪ್ರಜ್ವಲ್ ಒಪ್ಪಿಕೊಂಡ ಈ ಸಿನಿಮಾದ ಮುಂಚೆ ಲೋಹಿತ್ ಮತ್ತು ಪ್ರಜ್ವಲ್ ಈಗಾಗಲೇ ಒಂದು ಸಿನಿಮಾ ಮಾಡಿದ್ದಾರೆ. ಆ ಚಿತ್ರದ ಹೆಸರು ಮಾಫಿಯಾ ಅಂತಲೇ ಹೇಳಬಹುದು. ಈ ಚಿತ್ರದ ಮೂಲಕ ಲೋಹಿತ್ ಹಾಗೂ ಪ್ರಜ್ವಲ್ ಜೊತೆಯಾಗಿದ್ದರು. ಈಗ ಮತ್ತೊಂದು ಸಿನಿಮಾ ಮಾಡೋಕೆ ಹೊರಟ್ಟಿದ್ದಾರೆ.
ಪ್ರಜ್ವಲ್ ಸಿನಿಮಾ ಆದ್ಮೇಲೆ ಪ್ರಿಯಾಂಕಾ ಸಿನಿಮಾ
ಪ್ರಜ್ವಲ್ ಅಭಿನಯದ ಮಾಫಿಯಾ ಹಾಗೂ ಈಗ ಅನೌನ್ಸ್ ಆಗಿರೋ ಟೈಮ್ ಲೂಪ್ ಸಿನಿಮಾಗಳಿವೆ. ಇವೆರೆಡು ಆದ್ಮೇಲೆನೆ ಪ್ರಿಯಾಂಕಾ ಜೊತೆಗೆ ಡೈರೆಕ್ಟರ್ ಲೋಹಿತ್ ಇನ್ನೂ ಒಂದು ಸಿನಿಮಾ ಮಾಡುವ ಪ್ಲಾನ್ ಅಲ್ಲಿಯೇ ಇದ್ದಾರೆ.
ಇದನ್ನೂ ಓದಿ: Matte Mayamruga: ಮತ್ತೆ ಮಾಯಾಮೃಗದ ಶಾಸ್ತ್ರಿಗಳು ಈ ವಾರ ಸಿಕ್ತಾರಾ? ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ಯಾಕೆ?
ಪ್ರಿಯಾಂಕಾ ಉಪೇಂದ್ರ ನಿರ್ಮಾಣದ ಈ ಚಿತ್ರದ ಕೆಲಸವನ್ನ ಈಗೇನೂ ಲೋಹಿತ್ ಕೈಗೆತ್ತಿಕೊಂಡಿಲ್ಲ. ಆದರೆ ಒಪ್ಪಿಕೊಂಡ ಪ್ರೋಜೆಕ್ಟ್ ಮುಗಿದ ಮೇಲೆನೆ ಪ್ರಿಯಾಂಕಾ ಅವರ ಸಿನಿಮಾವನ್ನ ಲೋಹಿತ್ ಮಾಡಲಿದ್ದಾರೆ.
ಹೀಗೆ ತಮ್ಮ ಸಿನಿಮಾಗಳ ಮಾಹಿತಿ ಕೊಟ್ಟ ಡೈರೆಕ್ಟರ್ ಲೋಹಿತ್ ಸದ್ಯ ಟೈಮ್ ಲೂಪ್ ಹಾರರ್ ಕಥೆ ಬರೆಯೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಮಾಫಿಯಾ ಸಿನಿಮಾದ ಚಿತ್ರೀಕರಣದ ನಂತರದ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ