• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Prajwal Devaraj: ಕನ್ನಡ ಬಿಟ್ಟು ಟಾಲಿವುಡ್‌ಗೆ ಹಾರಿದರೇ ಪ್ರಜ್ವಲ್ ದೇವರಾಜ್? ಹೊಸ ಸಿನಿಮಾ ಅಪ್ಡೇಟ್ ಇಲ್ಲಿದೆ

Prajwal Devaraj: ಕನ್ನಡ ಬಿಟ್ಟು ಟಾಲಿವುಡ್‌ಗೆ ಹಾರಿದರೇ ಪ್ರಜ್ವಲ್ ದೇವರಾಜ್? ಹೊಸ ಸಿನಿಮಾ ಅಪ್ಡೇಟ್ ಇಲ್ಲಿದೆ

ಕನ್ನಡದ ಪ್ರಜ್ವಲ್ ದೇವರಾಜ್ ಟಾಲಿವುಡ್‌ಗೆ ಹೊರಟ್ರೇ?

ಕನ್ನಡದ ಪ್ರಜ್ವಲ್ ದೇವರಾಜ್ ಟಾಲಿವುಡ್‌ಗೆ ಹೊರಟ್ರೇ?

ಸ್ಯಾಂಡಲ್‌ವುಡ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕನ್ನಡ ಬಿಟ್ಟು ತೆಲುಗು ಇಂಡಸ್ಟ್ರಿಗೆ ಹೊರಟರೇ? ತೆಲುಗು ಚಿತ್ರ ಒಪ್ಪಿರೋದು ನಿಜವೆ? ಈ ಎಲ್ಲ ಪ್ರಶ್ನೆಯ ಉತ್ತರ ಇಲ್ಲಿದೆ ಓದಿ.

  • Share this:
  • published by :

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj First Telugu Movie) ಕನ್ನಡ ಸಿನಿಮಾ ಬಿಟ್ಟು ತೆಲುಗು ಇಂಡಸ್ಟ್ರೀಗೆ ಕಾಲಿಟ್ಟರೇ? ಈ ಒಂದು ಪ್ರಶ್ನೆ ಈಗ ಪ್ರಜ್ವಲ್ ಅಭಿಮಾನಿಗಳ ಮನಸ್ಸಿನಲ್ಲಿ (Prajwal Telugu Movie Updates) ಮೂಡಿದೆ. ಈ ಒಂದು ಪ್ರಶ್ನೆಗೆ ಕಾರಣವೂ ಇದೆ. ಆ ಕಾರಣದ ಹೆಸರು ಪ್ರಜ್ವಲ್ ಹೊಸ ಸಿನಿಮಾ ಆಗಿದೆ. ಟಾಲಿವುಡ್‌ನಿಂದ ಬಂದ ಆಫರ್ ಅನ್ನ ಪ್ರಜ್ವಲ್ (Prajwal First Telugu Movie) ದೇವರಾಜ್ ಒಪ್ಪಿಕೊಂಡಿದ್ದಾರೆ. ಟಾಲಿವುಡ್‌ನ ಯುವ ನಿರ್ದೇಶಕರಿಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡದಲ್ಲಿ ಸಿನಿಮಾ ಇರೋವಾಗ್ಲೇ, ಈ ಚಿತ್ರವನ್ನ ಪ್ರಜ್ವಲ್ ಒಪ್ಪಿರೋದು ಯಾಕೆ? ಅದ್ಯಾವ (Telugu NRI Cinema Updates) ಸಿನಿಮಾ? ಯಾರು ಡೈರೆಕ್ಟರ್? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.


ಟಾಲಿವುಡ್ ಆಫರ್ ಒಪ್ಪಿದ ಪ್ರಜ್ವಲ್ ದೇವರಾಜ್!


ಪ್ರಜ್ವಲ್ ದೇವರಾಜ್ ಸದ್ಯ ವೀರಂ ಸಿನಿಮಾ ಮೂಲಕ ಹೊಸ ಕ್ರೇಜ್ ಹುಟ್ಟಿಸಿದ್ದಾರೆ. ವೀರಂ ಚಿತ್ರದ ಹೊಸ ಲುಕ್ ಮೂಲಕವೂ ಪ್ರಜ್ವಲ್ ಹೆಚ್ಚು ಗಮನ ಸೆಳೆದಿದ್ದಾರೆ. ಇದೇ ಏಪ್ರಿಲ್-೦೭ ರಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಕೂಡ ಆಗುತ್ತಿದೆ.


Kannada Actor Prajwal Devaraj First Telugu Movie NRI Latest News
ಟಾಲಿವುಡ್ ಆಫರ್ ಒಪ್ಪಿದ ಪ್ರಜ್ವಲ್ ದೇವರಾಜ್!


ಈ ಚಿತ್ರದ ಕ್ರೇಜ್ ಇರೋವಾಗ್ಲೇ, ಯುವ ನಿರ್ದೇಶಕ ಲೋಹಿತ್ ನಿರ್ದೇಶನದ ಮಾಫಿಯ ಚಿತ್ರದ ಕೆಲಸವನ್ನೂ ಪ್ರಜ್ವಲ್ ಇತ್ತೀಚಿಗೆ ಮುಗಿಸಿಕೊಟ್ಟಿದ್ದಾರೆ. ಇತ್ತೀಚಿಗೆ ಸಿನಿಮಾದ ಶೂಟಿಂಗ್ ಕೆಲಸ ಮುಗಿತು ಅಂತ ಲೋಹಿತ್ ಹೇಳಿಕೊಂಡಿದ್ದಾರೆ.
ಕನ್ನಡದ ಪ್ರಜ್ವಲ್ ದೇವರಾಜ್ ಟಾಲಿವುಡ್‌ಗೆ ಹೊರಟ್ರೇ?


ಇದರ ಬೆನ್ನಲ್ಲಿಯೇ ಪ್ರಜ್ವಲ್ ದೇವರಾಜ್, ಇನ್ನೂಒಂದು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಅದುವೇ ತತ್ಸಮ ತದ್ಭವ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಮೇಘನಾರಾಜ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಪ್ರಜ್ವಲ್ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರವನ್ನ ನಿರ್ವಹಿಸಿದ್ದಾರೆ.


ಆದರೆ ಕನ್ನಡದಲ್ಲಿ ಇಷ್ಟೊಂದು ಸಿನಿಮಾ ಇವೆ.ಆದರೂ ತೆಲುಗು ಚಿತ್ರರಂಗದಿಂದ ಬಂದ ಆಫರ್ ಅನ್ನ ಪ್ರಜ್ವಲ್ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಮೂಲಕ ಕನ್ನಡದ ಹೀರೋ ಪ್ರಜ್ವಲ್ ದೇವರಾಜ್ ಟಾಲಿವುಡ್‌ಗೂ ಈಗ ಕಾಲಿಡುತ್ತಿದ್ದಾರೆ.


ಪ್ರಜ್ವಲ್ ಮೊದಲ ಟಾಲಿವುಡ್‌ ಚಿತ್ರದ ಟೈಟಲ್ ಏನು ಗೊತ್ತೇ?


ಹೌದು, ಈ ಒಂದು ಸುದ್ದಿ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಟಾಲಿವುಡ್‌ನ ಈ ಚಿತ್ರಕ್ಕೆ ವಿಶೇಷ ಟೈಟಲ್ ಕೂಡ ಇಡಲಾಗಿದೆ. ಹಾಗೆ ಸಿನಿಮಾಕ್ಕೆ ಇಟ್ಟ ಹೆಸರು NRI ಅಂತ ಇದೆ. ಈ NRI ಚಿತ್ರದ ಮೂಲಕ ಕನ್ನಡದ ಪ್ರಜ್ವಲ್, ಟಾಲಿವುಡ್‌ಗೆ ಹೊರಟು ನಿಂತಿದ್ದಾರೆ.


Kannada Actor Prajwal Devaraj First Telugu Movie NRI Latest News
ಪ್ರಜ್ವಲ್ ಮೊದಲ ಟಾಲಿವುಡ್‌ ಚಿತ್ರದ ಟೈಟಲ್ ಏನು ಗೊತ್ತೇ?


ಟಾಲಿವುಡ್‌ನ NRI ಚಿತ್ರವನ್ನ ವೇಣು ನಿರ್ದೇಶನ ಮಾಡುತ್ತಿದ್ದಾರೆ. ಹೆಸರಾಂತ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ ವೇಣು ಈ ಚಿತ್ರದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ. ಚಿತ್ರದ ಕಥೆಯನ್ನ ಕೂಡ ಇವರೇ ಬರೆದಿದ್ದಾರೆ.


ಇನ್ಸಪೆಕ್ಟರ್ ವಿಕ್ರಂ ಚಿತ್ರ ನೋಡಿ ಇಂಪ್ರೆಸ್ ಆದ ಟಾಲಿವುಡ್ ಪ್ರೋಡ್ಯೂಸರ್


NRI ಸಿನಿಮಾ ಕಥೆ ಕೇಳಿಯೇ ಇಂಪ್ರೆಸ್ ಆದ ಕನ್ನಡದ ನಾಯಕ ನಟ ಪ್ರಜ್ವಲ್ ದೇವರಾಜ್, ಸಿನಿಮಾ ಒಪ್ಪಿ ಆಗಿದೆ. ಇನ್ನೇನು ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಈ ಸಿನಿಮಾ ಶುರು ಆಗುತ್ತಿದೆ. ಹಾಗೇನೆ ಇನ್ಸಪೆಕ್ಟರ್ ವಿಕ್ರಮ್ ಚಿತ್ರದ ಪ್ರಜ್ವಲ್ ದೇವರಾಜ್ ಪಾತ್ರವನ್ನ ವೀಕ್ಷಿಸಿದ ನಿರ್ಮಾಪಕರು, ಪ್ರಜ್ವಲ್ ದೇವರಾಜ್ ಅವರನ್ನ ತಮ್ಮ ಚಿತ್ರ ಮಾಡಲು ಆಫರ್ ಕೊಟ್ಟಿದ್ದಾರೆ ಅನ್ನುವ ಸುದ್ದಿ ಕೂಡ ಇದೆ.


ಇದನ್ನೂ ಓದಿ: Yogi Movie: ಮತ್ತೆ ಬಂದರು ಹೆಡ್ ಬುಷ್ ಡೈರೆಕ್ಟರ್; ಈ ಸಲ ಡಾಲಿ ಅಲ್ಲ ಲೂಸ್ ಮಾದ ಹೀರೋ


ಒಟ್ಟಾರೆ, ಕನ್ನಡದ ನಾಯಕ ನಟರು ಟಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ದುನಿಯಾ ವಿಜಯ್, ರಿಯಲ್ ಸ್ಟಾರ್ ಉಪೇಂದ್ರ ಇವರೆಲ್ಲ ತೆಲುಗು ಚಿತ್ರ ಮಾಡಿದ್ದಾರೆ. ಇದೀಗ ಪ್ರಜ್ವಲ್ ದೇವರಾಜ್ ಸರದಿ ಬಂದಿದೆ. ಇನ್ನುಳಿದಂತೆ ಪ್ರಜ್ವಲ್ ದೇವರಾಜ್ ಅಲ್ಲಿ ಹೇಗೆಲ್ಲ ಕಮಾಲ್ ಮಾಡ್ತಾರೆ ಅನ್ನೊ ಕುತೂಹಲವೂ ಈಗಲೇ ಮೂಡಿದೆ.

First published: