• Home
  • »
  • News
  • »
  • entertainment
  • »
  • Kantara Abbara: ಕಾಂತಾರ ಗುಂಗಿನಲ್ಲಿ ಸಿನಿಫ್ಯಾನ್ಸ್! ಪ್ರಜ್ವಲ್ ಅಭಿನಯದ ಅಬ್ಬರ ರಿಲೀಸ್​ಗೆ ಪಕ್ಕಾ ಪ್ಲಾನ್

Kantara Abbara: ಕಾಂತಾರ ಗುಂಗಿನಲ್ಲಿ ಸಿನಿಫ್ಯಾನ್ಸ್! ಪ್ರಜ್ವಲ್ ಅಭಿನಯದ ಅಬ್ಬರ ರಿಲೀಸ್​ಗೆ ಪಕ್ಕಾ ಪ್ಲಾನ್

ಕಾಂತಾರ ಕ್ರೇಜ್-ಪ್ರಜ್ವಲ್ ಅಬ್ಬರ-ಏನ್ ಇದರ ರಹಸ್ಯ

ಕಾಂತಾರ ಕ್ರೇಜ್-ಪ್ರಜ್ವಲ್ ಅಬ್ಬರ-ಏನ್ ಇದರ ರಹಸ್ಯ

ಅಬ್ಬರ ಸಿನಿಮಾ ರಿಲೀಸ್ ಮಾಡೋಕೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದೇವೆ. ಸದ್ಯಕ್ಕೆ ಕಾಂತಾರ ಸಿನಿಮಾ ಕ್ರೇಜ್ ಮುಗಿಯೋ ಹಾಗೆ ಕಾಣೋದಿಲ್ಲ. ಇದನ್ನ ಗಮನದಲ್ಲಿ ಇಟ್ಟುಕೊಂಡೇ ನಮ್ಮ ಚಿತ್ರವನ್ನ ನವೆಂಬರ್​-18 ರಂದು ರಿಲೀಸ್ ಮಾಡ್ತಾ ಇದ್ದೇವೆ" ಅಂತಲೇ ಡೈರೆಕ್ಟರ್ ರಾಮನಾರಾಯಣ ನ್ಯೂಸ್-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಕಾಂತಾರ (Kantra Abbara) ಅಬ್ಬರ ಹೆಚ್ಚಿದೆ. ಪಕ್ಕದ ತಮಿಳು ನಾಡು ಮತ್ತು ಆಂಧ್ರದಲ್ಲೂ ಕಾಂತಾರ ಖದರ್ ಇದೆ. ದೂರದ ಬಾಲಿವುಡ್​ ನಲ್ಲೂ (Bollywood) ಕಾಂತಾರ ಕಮಾಲ್ ಮಾಡುತ್ತಿದೆ. ನಿರೀಕ್ಷೆ ಮಾಡದೇನೆ ಬಂದ ಈ ಯಶಸಸ್ಸಿನಿಂದ ಎಲ್ಲರೂ ಫುಲ್ ಖುಷ್ ಆಗಿದ್ದಾರೆ. ನಿರ್ಮಾಪಕರಿಂದ ಹಿಡಿದು ನಿರ್ದೇಶಕರೂ ಹಾಗೂ ಇಡೀ ಟೀಮ್ ಫುಲ್ ಖುಷಿಯಲ್ಲಿಯೇ ಇದೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಹೆಮ್ಮೆನೂ ಇದೆ. ಸಣ್ಣ ಭಯವೂ ಇದೆ. ಈ ಭಯ ಬೇರೆ ಸಿನಿಮಾ ನಿರ್ಮಾಪಕರದ್ದು ಅನ್ನೋದೇ ಸತ್ಯ. ಕಾಂತಾರ ಕ್ರೇಜ್ ಈಗಲೇ ಇಳಿಯದೆ ಇದ್ರೇ, ತಮ್ಮ ಚಿತ್ರಗಳನ್ನ ರಿಲೀಸ್ ಮಾಡೋದೇ ಕಷ್ಟ ಅನ್ನೋ ಅರ್ಥದಲ್ಲಿಯೇ ಈಗ ರಿಯಾಕ್ಟ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಸಿನಿಮಾ ರಿಲೀಸ್ ಪ್ಲಾನ್ ಆಗಿದೆ.


ಈ ಬಗ್ಗೆ ಚಿತ್ರದ ಡೈರೆಕ್ಟರ್ ರಾಮನಾರಾಯಣ್ ನ್ಯೂಸ್-18 ಕನ್ನಡಕ್ಕೆ  ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ.


ಕಾಂತಾರ ಕ್ರೇಜ್-ಪ್ರಜ್ವಲ್ ಅಬ್ಬರ-ಏನ್ ಇದರ ರಹಸ್ಯ


ಕಾಂತಾರ ಸಿನಿಮಾ ಹಿಟ್ ಆಗಿದೆ. ಇದರ ಯಶಸ್ಸಿನ ಅಲೆ ನುಗ್ಗಿ ನುಗ್ಗಿ ಮುನ್ನುಗ್ಗುತ್ತಿದೆ. ಇದನ್ನ ಈಗಲೇ ತಡೆಯೋಕೆ ಆಗೋದೇ ಇಲ್ಲ. ಕನ್ನಡ ನಾಡಿನ ಜನ ಕಾಂತಾರ ಅಲೆಯಿಂದ ಹೊರ ಬಂದೇ ಇಲ್ಲ. ಎಲ್ಲರ ಮನದಲ್ಲೂ ಕಾಂತಾರದ ಕನವರಿಕೆ ಇದೆ.


Kannada Actor Prajwal Devaraj Film Abbara Now Ready to Release
ಪ್ರಜ್ವಲ್ ಅಬ್ಬರ ನವೆಂಬರ್-18 ರಂದು ರಿಲೀಸ್


ಕಾಂತಾರ ಸಿನಿಮಾ ಕ್ರೇಜ್ ಹೀಗೆ ಮುಂದುವರೆದ್ರೆ, ಇತರ ಸಿನಿಮಾಗಳಿಗೆ ಗ್ಯಾರಂಟಿ ಏಟು ಬೀಳುತ್ತದೆ. ಇದು ಮೇಲ್ನೋಟಕ್ಕೇನೆ ಎಲ್ಲರೂ ಹೇಳಬಹುದು. ಈ ಬಗ್ಗೆ ಯಾರನ್ನೇ ಕೇಳಿದ್ರು ಅಷ್ಟೇನೆ, ಕಾಂತಾರ ಸಿನಿಮಾವನ್ನೇ ನಾವು ನೋಡಿ ಬಿಡ್ತೀವಿ ಅಂತಾರೆ.


ಕನ್ನಡದ ಹೊಸ ಸಿನಿಮಾ ಹಾಗೂ ಕಾಂತಾರ ಹ್ಯಾಂಗೋವರ್
ಇಷ್ಟೊಂದು ಆವರಿಸಿಕೊಂಡ ಕಾಂತಾರ ಸಿನಿಮಾದ ಹ್ಯಾಂಗೋವರ್​ನಿಂದ ಜನರು ಹೊರಗೆ ಬರಬೇಕು. ಬಂದ್ಮೇಲೆ ಸಿನಿಮಾ ರಿಲೀಸ್ ಮಾಡಬೇಕು ಅನ್ನೋದನ್ನೆ ಕೆಲ ನಿರ್ಮಾಪಕರು ಈಗ ಪ್ಲಾನ್ ಹಾಕಿದ್ದಾರೆ.


ಇದನ್ನೂ ಓದಿ: PICS: Pushpa ಸ್ಟಾರ್​ ನಟ ಅಲ್ಲು ಅರ್ಜುನ್​​ ಮಡದಿ ತೊಟ್ಟ ಈ ಸೀರೆ ಬೆಲೆ ಊಹೆ ಮಾಡಿ! 


ಹೌದು, ಅಬ್ಬರ ಸಿನಿಮಾದ ನಿರ್ದೇಶಕ ರಾಮ್​ ನಾರಾಯಣ್ ಈ ಒಂದು ಸತ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ತಮ್ಮ ನಿರ್ದೇಶನದ ಅಬ್ಬರ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಯನ್ನ ಕೊಟ್ಟಿದ್ದಾರೆ.


"ಅಬ್ಬರ ಸಿನಿಮಾ ರಿಲೀಸ್ ಮಾಡೋಕೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದೇವೆ. ಸದ್ಯಕ್ಕೆ ಕಾಂತಾರ ಸಿನಿಮಾ ಕ್ರೇಜ್ ಮುಗಿಯೋ ಹಾಗೆ ಕಾಣೋದಿಲ್ಲ. ಇದನ್ನ ಗಮನದಲ್ಲಿ ಇಟ್ಟುಕೊಂಡೇ ನಮ್ಮ ಚಿತ್ರವನ್ನ ನವೆಂಬರ್​-18 ರಂದು ರಿಲೀಸ್ ಮಾಡ್ತಾಯಿದ್ದೇವೆ" ಅಂತಲೇ ಡೈರೆಕ್ಟರ್ ರಾಮನಾರಾಯಣ ನ್ಯೂಸ್-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.


ನವೆಂಬರ್-18 ರಂದು ಪ್ರಜ್ವಲ್ ಅಬ್ಬರ ರಿಲೀಸ್
ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಸಿನಿಮಾ ಚೆನ್ನಾಗಿಯೇ ಬಂದಿದೆ. ಮೂರು ಶೇಡ್​ ನಲ್ಲಿಯೇ ಪ್ರಜ್ವಲ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೂರಲ್ಲೂ ಪ್ರಜ್ವಲ್ ದೇವರಾಜ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ.


ಪ್ರಜ್ವಲ್ ದೇವರಾಜ್ ಗೆ ಈ ಚಿತ್ರದಲ್ಲಿ ರಾಜಶ್ರೀ ಪೊನ್ನಪ್ಪ, ಲೇಖಾ ಚಂದ್ರ, ನಿಮಿಕಾ ರತ್ನಾಕರ್ ಜೋಡಿಯಾಗಿದ್ದಾರೆ. ಮೂವರು ಹೀರೋಯಿನ್​ಗಳ ಈ ಚಿತ್ರದ ಹಾಡುಗಳೂ ಸೂಪರ್ ಆಗಿಯೇ ಬಂದಿವೆ ಎಂದು ಡೈರೆಕ್ಟರ್ ರಾಮ​ನಾರಾಯಣ್ ಇನ್ನಷ್ಟು ಮಾಹಿತಿ ಕೊಡ್ತಾರೆ.


Kannada Actor Prajwal Devaraj Film Abbara Now Ready to Release
ಅಬ್ಬರ ಚಿತ್ರಕ್ಕೆ ರವಿ ಬಸ್ರೂರ ಅದ್ಭುತ ಸಂಗೀತ


ಅಬ್ಬರ ಚಿತ್ರಕ್ಕೆ ರವಿ ಬಸ್ರೂರ ಅದ್ಭುತ ಸಂಗೀತ
ಕೆಜಿಎಫ್ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ ಮಾಸ್ ಸಂಗೀತಕ್ಕೆ ಹೆಸರುವಾಸಿ ಆಗಿದ್ದಾರೆ. ಆದರೆ ಅಬ್ಬರ ಚಿತ್ರದಲ್ಲಿ ರವಿ ಬಸ್ರೂರ ಸುಮಧುರ ಸಂಗೀತವನ್ನೆ ಕೊಟ್ಟಿದ್ದಾರೆ.


ಇಲ್ಲಿವರೆಗೂ ರವಿ ಬಸ್ರೂರು ಮಾಸ್ ಸಂಗೀತದ ಹಾಡುಗಳನ್ನ ಕೇಳಿದ್ದ ಪ್ರೇಕ್ಷಕರಿಗೆ ಅಬ್ಬರ ಬೇರೆ ಫೀಲ್ ಕೊಡಲಿದೆ ಎಂದು ಡೈರೆಕ್ಟರ್ ರಾಮನಾರಾಯಣ್ ಹೇಳುತ್ತಾರೆ.
ಅಬ್ಬರ ಚಿತ್ರಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ಕೂಡ ಇದೆ. ಇದನ್ನೂ ಕೂಡ ರವಿ ಬಸ್ರೂರು ಅದ್ಭುತವಾಗಿಯೇ ಕೊಟ್ಟಿದ್ದಾರೆ. ಇದು ಕೂಡ ಚಿತ್ರಕ್ಕೆ ದೊಡ್ಡ ಭರವಸೆ ಅನ್ನೋ ಅರ್ಥದಲ್ಲಿಯೇ ರಾಮ್​ನಾರಾಯಣ್ ಹೇಳಿಕೊಳ್ಳುತ್ತಾರೆ.


ಅಬ್ಬರದಲ್ಲಿ ಪಿರಿಯೋಡಿಕಲ್ ಎಪಿಸೋಡ್ ಕೂಡ ಇದೆ. ಇದು ಹಿನ್ನೆಲೆಯಲ್ಲಿ ಆಗಾಗ ಬರ್ತಾನೇ ಇರುತ್ತದೆ. ಇದು ನಾಯಕ ನಟ ಪ್ರಜ್ವಲ್ ದೇವರಾಜ್​ ಅವರಿಗೆ ಕನೆಕ್ಟ್ ಕೂಡ ಆಗುತ್ತದೆ.


ಇದನ್ನೂ ಓದಿ: Gandhadagudi Review: ನಮ್ಮ ನಾಡಿನ ಅನ್ಯ ಲೋಕಕ್ಕೆ ಅಪ್ಪು ಪಯಣ! ವನ್ಯ ಸಂಪತ್ತಿನ ಸಂಪೂರ್ಣ ಚಿತ್ರಣ


ಇಂತಹ ಚಿತ್ರ ಚೆನ್ನಾಗಿಯೇ ಬಂದಿದೆ. ಜನ ಇದನ್ನ ತೆಗೆದುಕೊಳ್ಳತಾರೆ ಎಂಬ ಭರವಸೆ ಇದೆ. ಈ ಹಿನ್ನೆಲೆಯಲ್ಲಿ ಕಾಂತಾರ ಅಬ್ಬರ ಕಳೆದ ಮೇಲೆ ಅಬ್ಬರ ರಿಲೀಸ್ ಪ್ಲಾನ್ ಮಾಡಿದ್ದೇವೆ ಅಂತಲೂ ರಾಮನಾರಾಯಣ ತಿಳಿಸಿದ್ದಾರೆ.


ಕಾಂತಾರದ ಅಬ್ಬರ ಕಡಿಮೆ ಆಗೋದನ್ನ ಲೆಕ್ಕಿಸದೇ ನವೆಂಬರ-04 ರಂದು ಬನಾರಸ್ ಸಿನಿಮಾ ರಿಲೀಸ್ ಆಗುತ್ತಿದೆ. ನವೆಂಬರ್-11 ರಂದು ದಿಲ್​ಪಸಂದ್ ಕೂಡ ರಿಲೀಸ್ ಆಗುತ್ತಿದೆ. ಇವೆಲ್ಲ ಆದ್ಮೇಲೆ ಅಬ್ಬರ ಸಿನಿಮಾ ರಿಲೀಸ್ ಆಗುತ್ತಿದೆ.

First published: