Nikhil Kumaraswamy: ಕರ್ಮ ಯಾರನ್ನೂ ಬಿಡಲ್ಲ: ನಿಖಿಲ್ ಎಲ್ಲಿದ್ದಿಯಪ್ಪ ಟ್ರೋಲ್ಸ್ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ: ನಿಖಿಲ್ ಕುಮಾರಸ್ವಾಮಿ

ಅಂದು ನನ್ನನ್ನು ಟ್ರೋಲ್ ಮಾಡಿ ಒಂದಿಷ್ಟು ಜನ ಮಜಾ ತೆಗೆದುಕೊಂಡ್ರು. ಆದರೆ, ಆ ಜಾಗದಲ್ಲಿ ನಾನು ಇದ್ದಿದ್ದರೆ ಆರೀತಿ ಮಾಡಬೇಡಿ ಅಂತ ಹೇಳುತ್ತಿದ್ದೆ. ಸಣ್ಣ ತನ ತೋರಿಸಬೇಡಿ ಎಂದು ಹೇಳುತ್ತಿದ್ದೆ. ಒಬ್ಬರನ್ನು ನೋಡಿ ಯಾವತ್ತು ನಗಬಾರದು - ನಿಖಿಲ್ ಕುಮಾರಸ್ವಾಮಿ.

ನಿಖಿಲ್ ಕುಮಾರ್.

ನಿಖಿಲ್ ಕುಮಾರ್.

  • Share this:
    ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರ ಹೊಸ 'ರೈಡರ್' ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗಷ್ಟೆ ಅನಾವರಣಗೊಂಡಿತ್ತು. ಲಾಕ್​ಡೌನ್​ಗೂ ಮೊದಲೇ ರೈಡರ್ ಚಿತ್ರದ ಮುಹೂರ್ತ ನೆರವೇರಿತ್ತು. ಆದರೆ, ಟೈಟಲ್ ಬಿಡುಗಡೆಗೊಂಡಿರಲಿಲ್ಲ. ಚಿತ್ರದ ಟೈಟಲ್ ಏನು ಎಂಬ ಅಭಿಮಾನಿಗಳ ಪ್ರಶ್ನೆಗೆ ಮೊನ್ನೆಯಷ್ಟೆ ನಿಖಿಲ್ ರೈಡರ್ ಎಂದು ಉತ್ತರಿಸಿದ್ದರು. ಇದರ ಜೊತೆ ಆ್ಯಂಕರ್ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ನಿಖಿಲ್ ಅನೇಕ ವಿಚಾರಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆದ ನಿಖಿಲ್ ಎಲ್ಲಿದ್ದಿಯಪ್ಪ ಟ್ರೋಲ್ ಬಗ್ಗೆಯೂ ಹೇಳಿಕೊಂಡಿದ್ದಾರೆ.

    "ನಾವು ಕಲಿಯುಗದಲ್ಲಿ ಇದ್ದೇವೆ, ಕರ್ಮ ಸುತ್ತಿಕೊಂಡು ಬರುತ್ತೆ, ಯಾರನ್ನೂ ಬಿಡಲ್ಲ" ಇದು ನಿಖಿಲ್ ಕುಮಾರ್ ಸ್ವಾಮಿ ತಮ್ಮ ಟ್ರೋಲ್ ಬಗ್ಗೆ ಹೇಳಿದ ಮಾತು. ಹೌದು, ಆ್ಯಂಕರ್ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ನಿಖಿಲ್ ತಮ್ಮನ್ನ ಟ್ರೋಲ್ ಮಾಡಿದವರ ಬಗ್ಗೆ ಖಡಕ್ ಮಾತುಗಳಿಂದ ತಿರುಗೇಟು ಕೊಟ್ಟಿದ್ದಾರೆ.

    ಬೆಂಗಳೂರು ಬಾಯ್ ವರ್ಸಸ್ ರೈಡರ್! ಜೂ. ಚೆಲುವರಾಯಸ್ವಾಮಿ ವರ್ಸಸ್ ಜೂ. ಕುಮಾರಸ್ವಾಮಿ!

    "ಅಂದು ನನ್ನನ್ನು ಟ್ರೋಲ್ ಮಾಡಿ ಒಂದಿಷ್ಟು ಜನ ಮಜಾ ತೆಗೆದುಕೊಂಡ್ರು. ಆದರೆ, ಆ ಜಾಗದಲ್ಲಿ ನಾನು ಇದ್ದಿದ್ದರೆ ಆರೀತಿ ಮಾಡಬೇಡಿ ಅಂತ ಹೇಳುತ್ತಿದ್ದೆ. ಸಣ್ಣ ತನ ತೋರಿಸಬೇಡಿ ಎಂದು ಹೇಳುತ್ತಿದ್ದೆ. ಒಬ್ಬರನ್ನು ನೋಡಿ ಯಾವತ್ತು ನಗಬಾರದು."

    "ಆಗ ನಾನಿನ್ನು ಮುಗ್ದ, ಇಂಡಸ್ಟ್ರಿ ಬಗ್ಗೆ ಏನೂ ತಿಳಿದಿರಲಿಲ್ಲ. ಒಬ್ಬ ತಂದೆ ತನ್ನ ಮಗನನ್ನು ಸ್ಟೇಜ್​ನಲ್ಲಿ ಯಾವರೀತಿ ಪರಿಚಯುಸಿತ್ತಾರೋ ಅದೇರೀತಿ ನನ್ನ ತಂದೆ ಕೂಡ ಮಾಡಿದರಷ್ಟೆ. ಆದರೆ ಅದನ್ನ ಅಷ್ಟರ ಮಟ್ಟಿಗೆ ಟ್ರೋಲ್ ಮಾಡಿ, ಒಬ್ಬರನ್ನು ಹೀಯಾಳಿಸುವುದು ಒಳ್ಳೆಯದಲ್ಲಿ" ಎಂಬುದು ನಿಖಿಲ್ ಅವರ ಅಭಿಪ್ರಾಯ.

    "ನಾನು ನಿಖಿಲ್ ಎಲ್ಲಿದ್ದಿಯಪ್ಪ ಟ್ರೋಲ್ ಬಗ್ಗೆ ಒಂದು ಪೋಸ್ಟ್ ಕೂಡ ನೋಡಿರಲಿಲ್ಲ. ಯಾಕೆಂದರೆ ನನ್ನ ಗುರಿ ಬೇರೇಯೆ ಆಗಿತ್ತು. ಇಂತಹ ವಿಚಾರದ ಬಗ್ಗೆ ತೆಲೆಕೆಡಿಸಿಕೊಂಡಿರಲಿಲ್ಲ. ಯಾರನ್ನು ಹೀಯಾಳಿಸಬೇಡಿ, ಯಾರನ್ನೂ ಕೀಳುಮಟ್ಟದಲ್ಲಿ ನೋಡಬೇಡಿ" ಎಂದು ಹೇಳಿದ್ದಾರೆ.

    ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಪೂರ್ಣ ವಿದ್ಯಾರ್ಥಿ ವೇತನ; ನಟ ಸೋನು ಸೂದ್ ಘೋಷಣೆ

    ಇನ್ನೂ ತಮ್ಮ ಪತ್ನಿ ರೇವತಿಯ ಬಗ್ಗೆಯೂ ನಿಖಿಲ್ ಮಾತನಾಡಿದ್ದು, "ನನ್ನ ಪತ್ನಿ ನನಗೆ ಹೊಸಬರು ಎಂದು ಅನ್ನಿಸುತ್ತಿಲ್ಲ. ನಾವಿಬ್ಬರಿಗೂ ಸುಮಾರು ವರ್ಷಗಳ ಪರಿಚಯವಿದೆ ಎನ್ನಿಸುತ್ತದೆ. ನನ್ನ ಪತ್ನಿ ನನಗಿಂತಲೂ ನೂರು ಪಾಲು ಮಾನವೀಯತೆ ಉಳ್ಳವರು. ಅವರ ಮನಸ್ಸು ಮಗುತರ. ಅವರನ್ನು ಪತ್ನಿಯಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೇನೆ" ಎಂದಿದ್ದಾರೆ.



    ಸದ್ಯ ನಿಖಿಲ್ ರೈಡರ್ ಸಿನಿಮಾನದಲ್ಲಿ ಬ್ಯುಸಿಯಾಗಿದ್ದಾರೆ. ಇದೊಂದು ಸ್ಪೋರ್ಟ್ ಡ್ರಾಮಾ ಕಥೆಯುಳ್ಳ ಚಿತ್ರವಾಗಿದೆ. ತೆಲುಗಿನ ವಿಜಯ್ ಕುಮಾರ್ ಕೊಂಡ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನ ‘ಒಕ್ಕಾ ಲೈಲಾ ಕೋಸಂ’ ಮತ್ತು ‘ಗುಂಡೆ ಜಾರಿ ಗಲ್ಲಂಥೈಂಡಾ’ ಸಿನಿಮಾಗಳನ್ನು ನಿರ್ದೇಶಿಸಿದ ಖ್ಯಾತಿ ಅವರದ್ದು. ನಿಖಿಲ್ ಭರ್ಜರಿಯಾಗಿ ಓಡುತ್ತಿರುವ ಫಸ್ಟ್ಲುಕ್ ಮೋಷನ್ ಪೋಸ್ಟರ್ ವೈರಲ್ ಆಗಿದೆ.
    Published by:Vinay Bhat
    First published: