ಕನ್ನಡದ ಹ್ಯಾಂಡ್ಸಮ್ ಹೀರೋ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅಷ್ಟು ಬೇಗ ಎಲ್ಲ ಕಥೆಯನ್ನ ಒಪ್ಪಿಕೊಳ್ಳೋದಿಲ್ಲ. ಕಥೆಯಲ್ಲಿ ಏನೋ ವಿಷಯ ಇದ್ರೆ ಮಾತ್ರ ಅಂತಹ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾರೆ. ಪ್ರೇಮಂ ಪೂಜ್ಯಂ (Premam Poojyam) ಚಿತ್ರವೂ ವಿಶೇಷ ಕಥೆಯನ್ನ ಹೊಂದಿತ್ತು. ಪ್ರೇಮ್ (Prem New Movie) ಈ ಚಿತ್ರಕ್ಕೆ ಸಾಕಷ್ಟು ಶ್ರಮಪಟ್ಟಿದ್ದರು. ಇದರಿಂದ ಸಿನಿಮಾ ಜನರ ಮನಸು ಕದ್ದಿತ್ತು. ಈ ಚಿತ್ರ ಆದ್ಮೇಲೆ ಪ್ರೇಮ್ ಮತ್ಯಾವ ಚಿತ್ರ ಮಾಡುತ್ತಾರೆ ಅನ್ನೋ ಕುತೂಹಲ ಕೂಡ ಇತ್ತು. ಆ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ತಮ್ಮನ್ನ ಹುಡುಕಿ ಬಂದ ಪಾತ್ರವನ್ನ ಬೇರೆ ಯಾರಿಗೂ ಬಿಡಲೇ ಬಾರದು ಅಂತಲೇ ಆ ಪಾತ್ರ ಒಪ್ಪಿಕೊಂಡಿದ್ದಾರೆ.
ವಿಶೇಷವೆಂದ್ರೆ, ಈ ಚಿತ್ರ ಪುತ್ರಿ (Amrutha Prem Birthday) ಅಮೃತಾ ಪ್ರೇಮ್ ಜನ್ಮ ದಿನದಂದೇ ಸೆಟ್ಟೇರಿದೆ. ಇದರ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಮಗಳ ಜನ್ಮದಿನದಂದು ನೆನಪಿರಲಿ ಪ್ರೇಮ್ ಹೊಸ ಸಿನಿಮಾ
ನೆನಪಿರಲಿ ಪ್ರೇಮ್ ಅವರ ಚಿತ್ರ ಜೀವನದಲ್ಲಿ ಪ್ರೇಮಂ ಪೂಜ್ಯಂ ಚಿತ್ರ ವಿಶೇಷವಾಗಿದೆ. ಚಿತ್ರ ಜೀವನದ ಪಟ್ಟಿಯಲ್ಲಿ ಇದು 25ನೇ ಚಿತ್ರ ಆಗಿತ್ತು. ಇದಕ್ಕಾಗಿ ಪ್ರೇಮ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ವಿಶೇಷವಾಗಿ ಇಡೀ ಚಿತ್ರದಲ್ಲಿ ಕಾಣಿಸಿಕೊಂಡು ಸಿನಿಪ್ರೇಮಿಗಳಿಗೆ ಹೊಸ ಅನುಭವ ಕಟ್ಟಿಕೊಟ್ಟಿದ್ದರು.
ಪ್ರೇಮಂ ಪೂಜ್ಯಂ ಚಿತ್ರ ಆದ್ಮೇಲೆ ಪ್ರೇಮ್ ಹಲವು ಕಥೆಗಳನ್ನ ಕೇಳಿದ್ದರು. ಕೇಳಿದ್ಮೇಲೆ ಎಲ್ಲವನ್ನೂ ಹಾಗೆ ಪ್ರೇಮ್ ಒಪ್ಪಿಕೊಳ್ಳೋದಿಲ್ಲ ಬಿಡಿ. ಹಾಗಿರೋವಾಗ ಪ್ರೇಮ್ ಈಗ ಒಂದು ಚಿತ್ರದ ಪಾತ್ರವನ್ನ ತುಂಬಾ ಇಷ್ಟಪಟ್ಟಿದ್ದಾರೆ. ಆ ಪಾತ್ರವನ್ನ ತಾವೇ ಮಾಡಬೇಕು ಅಂತಲೇ ರೆಡಿ ಆಗಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಮೆಚ್ಚಿದ ಆ ಪಾತ್ರ ಯಾವುದು?
ತಮ್ಮನ್ನು ಹುಡುಕಿಕೊಂಡು ಬಂದ ಆ ಒಂದು ಪಾತ್ರ ಪ್ರೇಮ್ ಅವರಿಗೆ ತುಂಬಾ ಇಷ್ಟವಾಗಿದೆ. ಇದನ್ನ ಬಿಡಲೇ ಬಾರದು ಅಂತಲೇ ಪ್ರೇಮ್ ಈಗ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಪ್ರೇಮ್ ಒಪ್ಪಿದ ಪಾತ್ರ ಹೇಗಿದೆ? ಏನ್ ಆ ಪಾತ್ರದ ವಿಶೇಷ. ಇದನ್ನ ಸ್ವತಃ ಪ್ರೇಮ್ ಕೂಡ ಬಿಟ್ಟುಕೊಟ್ಟಿಲ್ಲ. ಆದರೆ ನೆನಪಿರಲಿ ಪ್ರೇಮ್ ಪಾತ್ರಕ್ಕೆ ಈ ಚಿತ್ರದಲ್ಲಿ ಮಹತ್ವದ ಪಾತ್ರ ಇದೆ. ಈ ಮಹತ್ವದ ಪಾತ್ರವನ್ನ ನಿರ್ವಹಿಸೋಕೆ ಸಜ್ಜಾಗಿದ್ದಾರೆ.
ಮಗಳ ಜನ್ಮದಿನದಂದು ಸೆಟ್ಟೇರಿತು ಪ್ರೇಮ್ ಚಿತ್ರ!
ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಈಗ ಹೀರೋಯಿನ್ ಆಗಿದ್ದಾರೆ. ಮೊದಲ ಚಿತ್ರದ ಚಿತ್ರೀಕರಣದ ಹಂತದಲ್ಲಿಯೇ ಅಭಿನಯದಲ್ಲಿ ಭೇಷ್ ಎನಿಸಿಕೊಂಡಿದ್ದಾರೆ. ಇದೇ ಅಮೃತಾಗೆ ಸಿನಿಮಾ ತಂಡ ವಿಶೇಷ ಪೋಸ್ಟರ್ ಮಾಡೋ ಮೂಲಕ ಜನ್ಮ ದಿನದ ಶುಭಾಷಯ ತಿಳಿಸಿದೆ.
ಇದೇ ದಿನವೇ ನೆನಪಿರಲಿ ಪ್ರೇಮ್ ಅಭಿನಯದ ಹೊಸ ಚಿತ್ರದ ಮುಹೂರ್ತ ಆಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನ ಹಾಸ್ಯ ನಟ ತಬಲಾ ನಾಣಿ ಮತ್ತು ಕೆ.ಆರ್.ಎಸ್.ಪ್ರೋಡಕ್ಷನ್ ಜಂಟಿಯಾಗಿ ನಿರ್ಮಿಸುತ್ತಿದೆ. ತಮ್ಮ ಈ ಸ್ನೇಹಿತರಿಗೂ ನೆನಪಿರಲಿ ಪ್ರೇಮ್ ಮನಸಾರೆ ಶುಭ ಹಾರೈಸಿದ್ದಾರೆ.
ಹೊಸಬರ ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅಭಿನಯ
ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಈ ಚಿತ್ರದಲ್ಲಿ ಹೊಸಬರು ಪರಿಚಯ ಆಗುತ್ತಿದ್ದಾರೆ. ನಾಯಕನಾಗಿ ಸಂಜಯ್ ನಾಯಕಿಯಾಗಿ ಜೀವಿತ ವಸಿಷ್ಠ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಚಿತ್ರದಲ್ಲಿ ಅಭಿನಯಿಸೋ ಮೂಲಕ ನೆನಪಿರಲಿ ಪ್ರೇಮ್ ಹೊಸಬರಿಗೆ ಸಾಥ್ ಕೊಡುತ್ತಿದ್ದಾರೆ. ಹೊಸಬರು ಮತ್ತು ಹಳಬರು ಸೇರಿ ಮಾಡ್ತಿರೋ ಈ ಚಿತ್ರವನ್ನ ಅಥರ್ವ ಆರ್ಯ ನಿರ್ದೇಶನದ ಮಾಡುತ್ತಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಚಿತ್ರಕ್ಕೆ ಅಥರ್ವ ಆರ್ಯ ಡೈರೆಕ್ಷನ್
ಅಥರ್ವ ಆರ್ಯ ಹೊಸ ನಿರ್ದೇಶಕರೇನು ಅಲ್ಲ. ಈ ಹಿಂದೆ ಗುಬ್ಬಚ್ಚಿ, ಜೂಟಾಟದಂತಹ ಸಿನಿಮಾ ನಿರ್ದೇಶನದ ಮಾಡಿದ್ದಾರೆ. ಈಗ ಈ ಮೂರನೇ ಸಿನಿಮಾ ಮೂಲಕ ಮತ್ತೊಮ್ಮೆ ಡೈರೆಕ್ಷನ್ ಮಾಡೋಕೆ ಮುಂದಾಗಿದ್ದಾರೆ.
ಕನ್ನಡದ ಹಾಸ್ಯ ನಟ ತಬಲಾ ನಾಣಿ ಈ ಮೂಲಕ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಮಾನ ಮನಸ್ಕರೆಲ್ಲ ಸೇರಿಯೇ ಈ ಚಿತ್ರಕ್ಕೆ ಕೈಹಾಕಿದ್ದಾರೆ. ನಿರ್ಮಾಣದ ಜೊತೆಗೆ ಈ ಚಿತ್ರದಲ್ಲಿ ತಬಲಾ ನಾಣಿ ತಂದೆ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.
ಚಿತ್ರದ ನಿರ್ದೇಶಕ ಅಥರ್ವ ಆರ್ಯ ಜೊತೆಗೂಡಿ ಚಿತ್ರಕ್ಕೆ ಸಂಭಾಷಣೆಯನ್ನ ಕೂಡ ತಬಲಾ ನಾಣಿ ಬರೆದಿದ್ದಾರೆ. ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಸಿನಿಮಾ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು, ಹೆಚ್ಚು ಕಡಿಮೆ 45 ರಿಂದ 60 ದಿನಗಳವರೆಗೂ ಚಿತ್ರೀಕರಣ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಇದನ್ನೂ ಓದಿ: Actress Neha Gowda: ಇವರು ನಿಜವಾಗ್ಲೂ 'ಗೊಂಬೆ'ಯೇ! ನೇಹಾ ಗೌಡ ಹೊಸ ಫೋಟೋ ಶೂಟ್
ಚಿತ್ರಕ್ಕೆ ನಾಗಾರ್ಜುನ್ ಆರ್.ಡಿ. ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಆಕಾಶ್ ಪರ್ವ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮಿತ್ರ, ಗಿರೀಶ್ ಜತ್ತಿ, ಬಾಲ ರಾಜ್ವಾಡಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ