ಸ್ಯಾಂಡಲ್ವುಡ್ಗೆ ಸ್ಟಾರ್ಗಳ (Sandalwood) ಮಕ್ಕಳು ಕನ್ನಡ ಚಿತ್ರರಂಗಕ್ಕೆ ಕಾಲಿಡೋದು ಹೊಸದೇನೂ ಅಲ್ಲ. ಸಾಮಾನ್ಯವಾಗಿ ಗಂಡು ಮಕ್ಕಳೇ ಹೆಚ್ಚು ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಆದರೆ ಕೆಲವೇ ಕೆಲವ್ರು ತಮ್ಮ ಹೆಣ್ಣು ಮಕ್ಕಳನ್ನ ಕೂಡ ಕನ್ನಡ ಸಿನಿಮಾ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ಹಿರಿಯ ನಟ ಜೈ ಜಗದೀಶ್ ಮೂವರು ಮಕ್ಕಳು ಏಕಕಾಲದಲ್ಲಿಯೇ ಸಿನಿ ಕ್ಷೇತ್ರಕ್ಕೆ ಕಾಲಿಟ್ಟರು. ಅದಾದ ಬಳಿಕ ಮಾಲಾಶ್ರೀ ಮಗಳು ರಾಧನಾ ರಾಮ್ (Radhana Ram) ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಈಗ ನೆನಪಿರಲಿ ಪ್ರೇಮ್ ಪುತ್ರಿ ಅಮೃತ (Amrutha Prem) ಪ್ರೇಮ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಡಾಲಿ (Daali Dhananjaya) ಧನಂಜಯ್ ತಮ್ಮ ನಿರ್ಮಾಣದ ಮೂಲಕವೇ ಪ್ರೇಮ್ ಮಗಳನ್ನ ಪರಿಚಯಿಸುತ್ತಿದ್ದಾರೆ. ಇದರ ಸುತ್ತ ಇನ್ನಷ್ಟು ಮಾಹಿತಿ ಇಲ್ಲಿದೆ.
ಅಂದು ಮಗ ಇಂದು ಮಗಳು-ಲವ್ಲಿ ಸ್ಟಾರ್ ಮಕ್ಕಳು ಬೆಳ್ಳಿ ತೆರೆಗೆ
ಕನ್ನಡದ ಲವ್ಲಿ ಸ್ಟಾರ್ ಪ್ರೇಮ್ ಒಳ್ಳೆ ಕಥೆಯನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಸುಮ್ನೆ ಎಲ್ಲ ಕಥೆಗಳನ್ನ ಒಪ್ಪಿಕೊಳ್ಳೋದೇ ಇಲ್ಲ. ಅದೇ ರೀತಿ ಇಲ್ಲಿವರೆಗೂ ಒಪ್ಪಿರೋ ಸಿನಿಮಾಗಳೆಲ್ಲ ಸೂಪರ್ ಕಥೆಯ ಚಿತ್ರಗಳೇ ಆಗಿವೆ.
ಲವ್ಲಿ ಸ್ಟಾರ್ ಪ್ರೇಮ್ ಮಕ್ಕಳು ಈಗ ಇಂಡಸ್ಟ್ರೀಗೆ ಕಾಲಿಟ್ಟಾಗಿದೆ. ಹೌದು, ಪ್ರೇಮ್ ಮಗ ಏಕಾಂತ್ ಇತ್ತೀಚಿಗೆ ಬಂದ ಗುರು ಶಿಷ್ಯರು ಮೂಲಕ ಬೆಳ್ಳಿ ತೆರೆಗೆ ಬಂದಿದ್ದಾರೆ. ಅದ್ಭುತವಾಗಿಯೇ ಬೆಳ್ಳಿ ತೆರೆ ಮೇಲೆ ಅಭಿನಯಿಸಿದ್ದಾರೆ. ಜೊತೆಗೆ ಎಲ್ಲರ ಗಮನ ಕೂಡ ಸೆಳೆದಿದ್ದಾರೆ.
"ಟಗರು ಪಲ್ಯ" ಚಿತ್ರಕ್ಕೆ ಅಮೃತಾ ಪ್ರೇಮ್ ನಾಯಕ ನಟಿ!
ಟಗರು ಪಲ್ಯ ಚಿತ್ರಕ್ಕೆ ಮೊನ್ನೆಯಷ್ಟೆ ನಾಯಕ ಇವರೇ ಅಂತ ಟೀಮ್ ಹೇಳಿತ್ತು. ನಟ ನಾಗಭೂಷಣ ಈ ಮೂಲಕ ಹೀರೋ ಅನ್ನೋದು ಕೂಡ ಈಗ ಗೊತ್ತಾಗಿದೆ. ಆದರೆ ನಾಯಕಿ ಯಾರು ಅನ್ನೋದು ಮಾತ್ರ ರಿವೀಲ್ ಆಗಿರಲಿಲ್ಲ. ಈಗ ಆ ಹೆಸರು ಕೂಡ ರಿವೀಲ್ ಆಗಿದೆ.
'ಟಗರು ಪಲ್ಯ' ಚಿತ್ರದ ಮೂಲಕ ನಾಯಕಿಯಾಗಿ ನೆನಪಿರಲಿ ಪ್ರೇಮ್ ಮಗಳು ಆಯ್ಕೆ ಆಗಿದ್ದಾರೆ. ಇದಕ್ಕಾಗಿಯೇ ಪ್ರೇಮ್ ಮಗಳು ಅಮೃತಾ ಪ್ರೇಮ್ ಎಲ್ಲ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾಭ್ಯಾಸದಲ್ಲೂ ಮುಂದಿರೋ ಅಮೃತಾ ಪ್ರೇಮ್, ಚಿತ್ರಕ್ಕಾಗಿಯೇ ಬೇಕಾಗುವ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.
ಅಣ್ಣ ಪ್ರೇಮ್ ಮಗಳನ್ನ ಕನ್ನಡಕ್ಕೆ ಪರಿಚಿಸ್ತಿರೋ ಖುಷಿ-ಧನಂಜಯ್
ಡಾಲಿ ಧನಂಜಯ್ ತಮ್ಮ ನಿರ್ಮಾಣದ "ಟಗರು ಪಲ್ಯ" ಚಿತ್ರದ ಮೂಲಕವೇ ಪ್ರೇಮ್ ಮಗಳು ಅಮೃತಾರನ್ನ ಪರಿಚಯ ಮಾಡುತ್ತಿದ್ದಾರೆ. ನಮ್ಮ ಪ್ರೀತಿಯ ನೆನಪಿರಲಿ ಪ್ರೇಮ್ ಅಣ್ಣನ ಮಗಳು ಅಮೃತಾ ಪ್ರೇಮ್ ರನ್ನ, ಇಂಡಸ್ಟ್ರೀಗೆ ಕನ್ನಡದ ಮಣ್ಣಿನ ಸೊಗಡಿನ ಮಗಳಾಗಿ, ನಮ್ಮ ಸಂಸ್ಥೆಯ ಮೂರನೇ ಕಾಣಿಕೆ ಟಗರು ಪಲ್ಯ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇನೆ.
ಅಮೃತಾ ಪ್ರೇಮ್ ಕನ್ನಡದ ಮನೆ ಮಗಳಾಗಿ ಬೆಳಗಲಿ, ಬೆಳೆಯಲಿ, ನಿಮ್ಮ ಪ್ರೀತಿ ಇರಲಿ, ಹರಸಿ, ಹಾರೈಸಿ ಎಂದು ಡಾಲಿ ಧನಂಜಯ್ ಹೇಳಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಇಷ್ಟೆಲ್ಲ ಬರೆದು ಅಮೃತಾ ಪ್ರೇಮ್ ಫೋಟೋ ಕೂಡ ಧನಂಜಯ್ ಹಂಚಿಕೊಂಡಿದ್ದಾರೆ.
ಲವ್ಲಿ ಸ್ಟಾರ್ ನೆನಪಿರಲಿ ಮಗಳು ಅಮೃತಾ ಬಗ್ಗೆ ಏನಂತಾರೆ?
ಲವ್ಲಿ ಸ್ಟಾರ್ ಪ್ರೇಮ್ ಮಕ್ಕಳು ತುಂಬಾ ಜಾಣರಿದ್ದಾರೆ. ಓದಿನಲ್ಲೂ ಮುಂದೆ ಇದ್ದಾರೆ. ಗುರು ಶಿಷ್ಯರು ಚಿತ್ರದ ಮೂಲಕ ಪುತ್ರ ಏಕಾಂತ್ ಕನ್ನಡಕ್ಕೆ ಪರಿಚಯ ಆಗಿದ್ದಾರೆ. ಮಗಳು ಅಮೃತಾ ಪ್ರೇಮ್, ಟಗರು ಪಲ್ಯ ಚಿತ್ರದ ಮೂಲಕ ನಾಯಕಿ ಆಗಿದ್ದಾರೆ. ಮಗಳ ಬಗ್ಗೆ ಪ್ರೇಮ್ ತಮ್ಮ ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
"ನನ್ನ ಮಗುವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ನಿಮ್ಮ ಆಶೀರ್ವಾದ, ಪ್ರೀತಿ, ಪ್ರೋತ್ಸಾಹ, ಅಭಿಮಾನವಿರಲಿ, ಸದಾ ನೆನಪಿರಲಿ"-ಪ್ರೇಮ್
ಟಗರು ಪಲ್ಯ ಚಿತ್ರವನ್ನ ನವ ನಿರ್ದೇಶಕ ಉಮೇಶ್ ಕೆ. ಕೃಪಾ ಮಾಡುತ್ತಿದ್ದಾರೆ. ಈ ಮೂಲಕ ಡೈರೆಕ್ಟರ್ ಕೂಡ ಆಗುತ್ತಿದ್ದಾರೆ. ಕಥೆ ಚೆನ್ನಾಗಿರೋದ್ರಿಂದಲೇ ಮಗಳನ್ನ ಪರಿಚಯಿಸೋಕೆ ಪ್ರೇಮ್ ಗ್ರೀನ್ ಸಿಗ್ನಲ್ ತೋರಿದ್ದಾರೆ.
ಇದನ್ನೂ ಓದಿ: Megha Shetty: ಮತ್ತೆ ಜೊತೆ ಜೊತೆಯಾಗಿ ಕಾಣಿಸಿಕೊಂಡ ಅನಿರುದ್ಧ್-ಅನು ಸಿರಿಮನೆ!
ಸ್ವತಃ ಅಮೃತಾ ಪ್ರೇಮ್ ಕೂಡ ಈ ಕಥೆಯನ್ನ ಒಪ್ಪಿಕೊಂಡೆ ಚಿತ್ರ ಮಾಡುತ್ತಿದ್ದಾರೆ. ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ಕನ್ನಡಕ್ಕೆ ಮತ್ತೊಬ್ಬ ಸ್ಟಾರ್ ನಟನ ಮಗಳು ಕನ್ನಡ ಇಂಡಸ್ಟ್ರೀಗೆ ಕಾಲಿಟ್ಟಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ