ಸ್ಯಾಂಡಲ್‌ವುಡ್ ನಾಯಕ ನಟ ನವೀಶ್ ಶಂಕರ್ (Naveen Shankar Special Interview) ಹೊಸ ಸಿನಿಮಾ ಒಪ್ಪಿದ್ದಾರಾ ? ಗುಲ್ಟು ಡೈರೆಕ್ಟರ್ ಜನಾರ್ಧನ್ ಚಿಕ್ಕಣ್ಣ ಜೊತೆಗೆ ನವೀನ್ ಮತ್ತೊಂದು ಸಿನಿಮಾ ಮಾಡ್ತಿದ್ದಾರಾ ? ಹೊಯ್ಸಳ (Kannada Actor Naveen Shankar) ಆದ್ಮೇಲೆ ನವೀನ್ ಮತ್ಯಾವ ಚಿತ್ರ ಒಪ್ಪಿದ್ದಾರೆ. ವಿಲನ್ ಬಲಿ ಮೂಲಕ ಕನ್ನಡಿಗರ ಹೃದಯ ಕದ್ದ ನವೀನ್ ಈಗ ಏನ್ ಮಾಡುತ್ತಿದ್ದಾರೆ. ಕ್ಷೇತ್ರಪತಿ ಸಿನಿಮಾ ಎಲ್ಲಿಗೆ ಬಂತು? ಇವರ ಜನ್ಮ ದಿನಕ್ಕೆ ಏನ್ (Naveen Shankar Interview) ಸ್ಪೆಷಲ್? ಈ ಎಲ್ಲ ವಿಷಯಕ್ಕೆ ಸಂಬಂಧಿಸಿದಂತೆ ನವೀನ್ ನ್ಯೂಸ್-18 ಕನ್ನಡ ಜೊತೆಗೆ ಒಂದಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ನವೀನ್ (Naveen Shankar Updates) ಮಾತಿನ ವಿವರ
ಇಲ್ಲಿದೆ ಓದಿ.
ಹೊಯ್ಸಳ ಖಳನಾಯಕ ಬಲಿ ಹೊಸ ಸಿನಿಮಾ ಅಪ್‌ಡೇಟ್ಸ್
ಹೊಯ್ಸಳ ಚಿತ್ರದ ಖಳನಾಯಕ ನಟ ಬಲಿ ಪಾತ್ರಧಾರಿ ನವೀನ್ ಈಗ ಏನ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಜೊತೆಗೆ ಹೊಯ್ಸಳ ಸಿನಿಮಾದಲ್ಲಿ ಅಬ್ಬರಿಸಿದ್ದ ನವೀನ್ ಶಂಕರ್, ಇದೀಗ ಒಪ್ಪಿರೋ ಸಿನಿಮಾಗಳು ಯಾವವು? ಗುಳ್ಟು ಡೈರೆಕ್ಟರ್ ಜನಾರ್ಧನ್ ಚಿಕ್ಕಣ್ಣ ಜೊತೆಗೆ ಮತ್ತೊಂದು ಚಿತ್ರ ಮಾಡ್ತಿದ್ದಾರಾ?
ಇದೇ 25 ನವೀನ್ ಶಂಕರ್ ಜನ್ಮ ದಿನ ಏನ್ ಸ್ಪೆಷಲ್ ಗೊತ್ತೆ?
ಹೀಗೆ ಕೇಳಿದ ಪ್ರಶ್ನಗೆ ನವೀನ್ ಉತ್ತರ ಕೊಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರದ ಒಂದಷ್ಟು ವಿಶೇಷ ವಿಚಾರವನ್ನೂ ರಿವೀಲ್ ಮಾಡಿದ್ದಾರೆ. ತಮ್ಮ ಜನ್ಮ ದಿನಕ್ಕೆ ಏನೆಲ್ಲ ಸ್ಪೆಷಲ್ ಇರುತ್ತದೆ ಅನ್ನುವ ಮ್ಯಾಟರ್ ಅನ್ನು ಕೂಡ ಹೇಳಿಕೊಂಡಿದ್ದಾರೆ.
ಹೌದು, ನಾನು ಸದ್ಯಕ್ಕೆ ಇನ್ನೂ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ ನನ್ನ ಜನ್ಮ ದಿನ ಇದೇ 25 ರಂದು ನನ್ನ ಅಭಿನಯದ ಕ್ಷೇತ್ರಪತಿ ಸಿನಿಮಾದ ಗ್ಲಿಮ್ಸ್ ಅನ್ನ ರಿವೀಲ್ ಮಾಡ್ತಾ ಇದ್ದೇವೆ ಅಂತ ನವೀನ್ ಶಂಕರ್ ಅಧಿಕೃತವ ಮಾಹಿತಿ ಕೊಡ್ತಾರೆ.
ನವೀನ್ ಕ್ಷೇತ್ರಪತಿ ಚಿತ್ರದ ಹೊಸ ಅಪ್‌ಡೇಟ್ಸ್ ಏನು?
ಕ್ಷೇತ್ರಪತಿ ಸಿನಿಮಾ ಉತ್ತರ ಕರ್ನಾಟಕದ ಭಾಗದ ಕಥೆಯನ್ನ ಹೊಂದಿದೆ. ಶ್ರೀಕಾಂತ್ ಕಟಗಿ ಈ ಚಿತ್ರದ ಮೂಲಕ ನಿರ್ದೇಕರಾಗಿದ್ದಾರೆ.
ಆದರೆ ಸದ್ಯ ಒಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಇದೆ. ಗುಳ್ಟು ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಜೊತೆಗೆ ನವೀನ್ ಶಂಕರ್ ಸಿನಿಮಾ ಮಾಡ್ತಿದ್ದಾರೆ ಅನ್ನೋದೇ ಈ ಸುದ್ದಿ ಆಗಿದೆ.
ಗುಳ್ಟು ಹೀರೋ ನವೀನ್ ಈಗ ಏನ್ ಮಾಡ್ತಿದ್ದಾರೆ ?
ಈ ಬಗ್ಗೆ ಕೂಡ ನವೀನ್ ಶಂಕರ್ ಮಾತನಾಡಿದ್ದಾರೆ. ಸದ್ಯಕ್ಕೆ ನಾನು ಬ್ರೇಕ್ ತೆಗೆದುಕೊಂಡಿದ್ದೇನೆ. ಕ್ಷೇತ್ರಪತಿ ಸಿನಿಮಾದ ಗ್ಲಿಮ್ಸ್ ಶೀಘ್ರದಲ್ಲಿಯೇ ಹೊರ ಬೀಳಲಿದೆ. ಆದರೆ ಗುಳ್ಟು ಡೈರೆಕ್ಟರ್ ಜನಾರ್ಧನ್ ಚಿಕ್ಕಣ್ಣ ಅವರ ಜೊತೆಗೆ ಸಿನಿಮಾ ಮಾಡೋ ವಿಷಯ ಇನ್ನೂ ಏನೂ ಫೈನಲ್ ಆಗಿಲ್ಲ.
ಗುಳ್ಟು ಆದ್ಮೇಲೆ ಯಾವುದೇ ಸಿನಿಮಾ ಮಾಡಿಲ್ಲ. ಆದರೆ ಒಟ್ಟಿಗೆ ಒಂದು ಚಿತ್ರ ಮಾಡಬೇಕು ಅನ್ನುವ ಯೋಚನೆ ಇದೆ. ಆ ಹಿನ್ನೆಲೆಯಲ್ಲಿ ಮಾತನಾಡಿದ್ದೇವೆ. ಅಷ್ಟು ಬಿಟ್ರೇ, ಏನಂದ್ರೆ ಏನೂ ಇನ್ನೂ ಫೈನಲ್ ಆಗಿಲ್ಲ.
ಹೊಯ್ಸಳ ಚಿತ್ರದ ಬಲಿ ವಿಶೇಷ ಮಾತು-ಕತೆ
ಚಿತ್ರದ ಕಥೆಯಾಗಲಿ, ಸಿನಿಮಾ ನಿರ್ಮಾಣ ಸಂಸ್ಥೆಯಾಗಲಿ ಯಾವುದೂ ಏನೂ ಫೈನಲ್ ಆಗಿಲ್ಲ. ಆ ಕುರಿತು ಏನು ಮಾತುಕಥೆ ಕೂಡ ಆಗಿಲ್ಲ ಎಂದು ನವೀನ್ ಶಂಕರ್ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: Kichcha Sudeepa: ಕಿಚ್ಚ ಸುದೀಪ್ ಬರೆದ ಆ ಪತ್ರದಲ್ಲಿ ಏನಿದೆ, ಸಡನ್ ಆಗಿ ಬರೆಯಲು ಕಾರಣ ಏನು?
ಇಷ್ಟು ಬಿಟ್ರೆ, ನವೀನ್ ಶಂಕರ್ ಸದ್ಯಕ್ಕೆ ಕ್ಷೇತ್ರಪತಿ ಸಿನಿಮಾದ ರಿಲೀಸ್ ಎದುರು ನೋಡುತ್ತಿದ್ದಾರೆ. ಜೂನ್ ತಿಂಗಳಲ್ಲಿಯೆ ಈ ಸಿನಿಮಾ ರಿಲೀಸ್ ಪ್ಲಾನ್ ಕೂಡ ಆಗಿದೆ. ಇನ್ನುಳಿದಂತೆ ನವೀನ್ ಶಂಕರ್ ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ರಿಲ್ಯಾಕ್ಸ್ ಆಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ