ಸ್ಯಾಂಡಲ್‌ವುಡ್‌ಗೆ ತಮಿಳಿನ (Loose Mada Yogi New Movie) ಹೆಸರಾಂತ ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ ಬರ್ತಿದ್ದಾರೆ. ಲೂಸ್ ಮಾದ ಯೋಗಿ ಅಭಿನಯದ ರೋಜಿ ಚಿತ್ರಕ್ಕಾಗಿ ಈ ಮೂಲಕ ಇದೀಗ ಸ್ಯಾಂಡಿ ಮಾಸ್ಟರ್ (Rosy Latest Updates) ಕನ್ನಡಕ್ಕೂ ಕಾಲಿಡುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಸ್ಯಾಂಡಿ ಮಾಸ್ಟರ್ ಈಗಾಗಲೇ ತಮಿಳಿನ ಸೂಪರ್ ಸ್ಟಾರ್‌ಗಳಿಗೂ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ. ಇದೀಗ ಡ್ಯಾನ್ಸ್ ಗೊತ್ತಿರೋ ಲೂಸ್ (Kannada Actor Loose Mada Yogi) ಮಾದ ಯೋಗಿಗೆ ಡ್ಯಾನ್ಸ್ ಹೇಳಿಕೊಡಲು ಬರ್ತಿದ್ದಾರೆ. ಈ ಬಗ್ಗೆ Exclusive ಆಗಿ ಚಿತ್ರದ ಡೈರೆಕ್ಟರ್ ಶೂನ್ಯ ನ್ಯೂಸ್-18 ಕನ್ನಡ ಜೊತೆಗೆ (Yogi New Movie Rosy) ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಅನ್ನೋ ಡಿಟೈಲ್ಸ್ ಇಲ್ಲಿದೆ ಓದಿ.
ಲೂಸ್ ಮಾದ ಯೋಗಿ 50 ನೇ ಚಿತ್ರದ ಇಂಟ್ರಸ್ಟಿಂಗ್ ಮ್ಯಾಟರ್
ಲೂಸ್ ಮಾದ ಯೋಗಿ ಸಿನಿಮಾ ಜೀವನದಲ್ಲಿ ಇದೀಗ 49 ಸಿನಿಮಾಗಳಾಗಿವೆ. ಮೊನ್ನೆ ಮುಹೂರ್ತ ಮುಗಿಸಿಕೊಂಡ ಚಿತ್ರದ ಹೆಸರು ರೋಜಿ, ಇದು ಯೋಗಿ ಬದುಕಿನ 50 ನೇ ಸಿನಿಮಾ ಆಗಿದೆ. ರೋಜಿ ಅನ್ನುವ ವಿಶೇಷ ಟೈಟಲ್ ಮೂಲಕವೇ ಗಮನ ಸೆಳೆಯುತ್ತಲೇ ಇದೆ.
ಆದರೆ ಆರಂಭದಲ್ಲಿಯೇ ಟೈಟಲ್ ವಿವಾದ ಕೂಡ ಎದುರಿಸಿದೆ. ಈ ಒಂದು ವಿವಾದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಧ್ಯೆ ಪ್ರವೇಶ ಆಗಿದೆ. ರೋಜಿ ಟೈಟಲ್ ನೀವೇ ಇಟ್ಟುಕೊಂಡು ಸಿನಿಮಾ ಮಾಡಿ ಅಂತಲೂ ಹೇಳಿದ್ದಾರೆ.
ರೋಜಿ ಟೈಟಲ್ ಕೊನೆಗೆ ಯಾರಿಗೆ ಸಿಕ್ಕಿದೆ ಗೊತ್ತೆ?
ಅಲ್ಲಿಗೆ ರೋಜಿ ಟೈಟಲ್ ಇದೀಗ ಲೂಸ್ ಮಾದ ಯೋಗಿ ಚಿತ್ರಕ್ಕೆ ಉಳಿದಿದೆ ಅನ್ನೋದು ಡೈರೆಕ್ಟರ್ ಶೂನ್ಯ ಅವರ ಮಾತಿನ ಒಟ್ಟು ತಾತ್ಪರ್ಯ ಆಗಿದೆ. ಇದರ ಹೊರತಾಗಿ ಲೂಸ್ ಮಾದ ಯೋಗಿ ಚಿತ್ರಕ್ಕೆ ಇನ್ನೂ ಒಂದು ಹೊಸ ಸೇರ್ಪಡೆ ಆಗಿದೆ.
ತಮಿಳಿನ ಖ್ಯಾತ ನೃತ್ಯ ನಿರ್ದೇಶಕ ಸ್ಯಾಂಡಿ ಮಾಸ್ಟರ್ ಕನ್ನಡಕ್ಕೆ ಬರ್ತಿದ್ದಾರೆ. ಲೂಸ್ ಮಾದ ಯೋಗಿ ಅಭಿನಯದ ರೋಜಿ ಚಿತ್ರಕ್ಕೆ ಬರ್ತಿದ್ದಾರೆ. ಇನ್ನೇನು ಇಂದು (20.04.2023) ರಾತ್ರಿ ಬೆಂಗಳೂರಿಗೂ ಬಂದಿಳಿಯಲಿದ್ದಾರೆ.
ಲೂಸ ಮಾದ ಯೋಗಿ 50 ನೇ ಚಿತ್ರಕ್ಕೆ ಸ್ಯಾಂಡಿ ಮಾಸ್ಟರ್
ಸಿನಿಮಾದ ಹಾಡಿನ ಕುರಿತು ಚರ್ಚಿಸಲು ಸ್ಯಾಂಡಿ ಮಾಸ್ಟರ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಚಿತ್ರದ ಪ್ರಮುಖ ಹಾಡುಗಳನ್ನ ಸ್ಯಾಂಡಿ ಮಾಸ್ಟರ್ ನಿರ್ದೇಶನ ಮಾಡಲಿದ್ದಾರೆ. ಆ ಲೆಕ್ಕದಲ್ಲಿ ಎರಡು ಹಾಡುಗಳಿಗೆ ಸ್ಯಾಂಡಿ ಮಾಸ್ಟರ್ ನೃತ್ಯ ನಿರ್ದೇಶನ ಇರಲಿದೆ.
ಲೂಸ್ ಮಾದ ಯೋಗಿ ಅವರ ಈ 50 ನೇ ಚಿತ್ರಕ್ಕೆ ಶೂನ್ಯ ಒಬ್ಬ ಡೈರೆಕ್ಟರ್ ಆಗಿ ಅಷ್ಟೇ ಅಲ್ಲದೇ, ಒಬ್ಬ ಅಭಿಮಾನಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ನಾಯಕ ಯೋಗಿ ಸಿನಿಮಾ ನೋಡುತ್ತಲೇ ಬಂದ ಶೂನ್ಯ, ಅವರ ನೃತ್ಯಕ್ಕೂ ಫಿದಾ ಆಗಿದ್ದಾರೆ.
ರೋಜಿ ಚಿತ್ರಕ್ಕೆ ತಮಿಳು ಸ್ಯಾಂಡಿ ಮಾಸ್ಟರ್ ಕೋರಿಯೋಗ್ರಾಫಿ
ಹಾಗಾಗಿಯೇ ತಮ್ಮ ನಿರ್ದೇಶನದ ರೋಜಿ ಚಿತ್ರದಲ್ಲಿ ಒಳ್ಳೆ ಹಾಡುಗಳನ್ನ ಮಾಡಿಸಬೇಕು ಅನ್ನೋ ಕನಸು ಕೂಡ ಇದೆ. ಈ ಹಿನ್ನೆಲೆಯಲ್ಲಿ ತಮಿಳು ನೃತ್ಯ ನಿರ್ದೇಶಕ ಸ್ಯಾಂಡಿ ಮಾಸ್ಟರ್ ಅನ್ನ ಈಗ ಕನ್ನಡಕ್ಕೆ ಕರೆದುಕೊಂಡು ಬಂದಿದ್ದಾರೆ.
ಸಿನಿಮಾದ ಶೂಟಿಂಗ್ ಮೇ ತಿಂಗಳಲ್ಲಿ ಶುರು ಆಗುತ್ತಿದ್ದು, ಸದ್ಯ ಇತರ ತಯಾರಿಯನ್ನ ಸಿನಿಮಾ ಮಾಡಿಕೊಳ್ಳುತ್ತಿದೆ. ಟೈಟಲ್ ವಿವಾದ ಕೂಡ ಒಂದು ಹಂತಕ್ಕೆ ಮುಗಿದಿದೆ.
ಇದನ್ನೂ ಓದಿ: Suri New Movie: ಡೈರೆಕ್ಟರ್ ಸೂರಿ ಹೊಸ ಸಿನಿಮಾ; ಜಯಣ್ಣ ಜೊತೆಗೆ ಮುಂದಿನ ಪ್ರಾಜೆಕ್ಟ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇದೀಗ ಅರ್ಜುನ್ ಜನ್ಯ ಅವರ ಚಿತ್ರಕ್ಕೆ ರೋಸಿ-45 ಅಂತ ಟೈಟಲ್ ಕೊಟ್ಟಿದೆ. ಲೂಸ್ ಮಾದ ಯೋಗಿ ಚಿತ್ರಕ್ಕೆ ರೋಜಿ ಅಂತಲೇ ಟೈಟಲ್ ಸಿಕ್ಕಿದೆ ಎಂದು ಡೈರೆಕ್ಟರ್ ಶೂನ್ಯ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ